ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಷ್ಯನ ಗೆಲುವನ್ನು ನಿಸ್ವಾರ್ಥವಾಗಿ ಸಂಭ್ರಮಿಸುವವನು 'ಗುರು'

By ರವಿಶಂಕರ್ ಗುರೂಜಿ
|
Google Oneindia Kannada News

ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆ. ಮಹಾನ್ ಶಿಕ್ಷಕರಾಗಿದ್ದ, ಮಾಜಿ ರಾಷ್ಟ್ರಪತಿ ದಿ.ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಪ್ರತಿವರ್ಷ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ತನ್ನಿಮಿತ್ತ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರಾದ ಶ್ರೀ ರವಿಶಂಕರ್ ಗುರೂಜಿ ಅವರ ಈ ಲೇಖನ.
****

ಗುರುಗಳು ಅಥವಾ ಶಿಕ್ಷಕರು, ತಮ್ಮ ಶಿಷ್ಯರೇ ಗೆಲ್ಲಬೇಕೆಂದು ಬಯಸುತ್ತಾರೆ. ಒಳ್ಳೆಯ ಶಿಷ್ಯರು ತಮ್ಮ ಗುರುಗಳೇ ಗೆಲ್ಲಬೇಕೆಂದು ಬಯಸುತ್ತಾರೆ. ಭಾರತದಲ್ಲಿ ಈ ರೀತಿಯಾಗಿ, ಅತಿ ವಿಚಿತ್ರವಾದ, ಅನುಪಮವಾದ ಗುರು-ಶಿಷ್ಯ ಸಂಬಂಧವಿದೆ.

ಕಲಿಕೆಯ ಹಸಿವನ್ನು ನೀಗಿಸಲು ಅರಿವೆಂಬ ತುತ್ತು ತಿನ್ನಿಸುವ ಶಿಕ್ಷಕಕಲಿಕೆಯ ಹಸಿವನ್ನು ನೀಗಿಸಲು ಅರಿವೆಂಬ ತುತ್ತು ತಿನ್ನಿಸುವ ಶಿಕ್ಷಕ

ತನ್ನ ಸಣ್ಣ ಮನಸ್ಸು ಗೆದ್ದರೆ ಕೇವಲ ದುಃಖವೇ ಇರುತ್ತದೆ, ಆದರೆ ಗುರುಗಳು ಗೆದ್ದರೆ, ಅದು ದೊಡ್ಡ ಮನಸ್ಸಿನ ಗೆಲುವು ಮತ್ತು ಇದರಿಂದ ಎಲ್ಲರಿಗೂ ಸಂತೋಷ ಮತ್ತು ಒಳಿತೇ ಆಗುತ್ತದೆ ಎಂದು ಶಿಷ್ಯರಿಗೆ ತಿಳಿದಿದೆ. ಆದ್ದರಿಂದ ಶಿಷ್ಯರು ದೊಡ್ಡ ಮನಸ್ಸಿಗೆ ಅಥವಾ ಗುರುವಿಗೇ ಸದಾ ಜಯವಾಗಲಿ ಎಂದು ಬಯಸುತ್ತಾರೆ. ಇದು ಆರೋಗ್ಯಕರವಾದ ವಿಚಾರ, ಏಕೆಂದರೆ ಗುರುವಿಗಿಂತಲೂ ತನಗೇ ಹೆಚ್ಚು ತಿಳಿದಿದೆಯ ಎಂದು ಶಿಷ್ಯರು ಭಾವಿಸಿಬಿಟ್ಟರೆ, ಶಿಷ್ಯರ ಬೆಳವಣಿಗೆ ಅಲ್ಲಿಗೇ ನಿಂತುಹೋಗುತ್ತದೆ. ಕಲಿಕೆ ಅಲ್ಲಿಗೇ ನಿಂತುಹೋಗುತ್ತದೆ ಮತ್ತು ಅಹಂಕಾರವು ಜ್ಞಾನವನ್ನು ಕೊಲ್ಲುತ್ತದೆ.

ಒಳ್ಳೆಯ ಶಿಕ್ಷಕರಲ್ಲಿ ಇರಬೇಕಾದ ಮತ್ತೊಂದು ಗುಣವೆಂದರೆ ಅವರಲ್ಲಿ ಬಹಳ ಸಹನೆಯಿರಬೇಕು. ಶಿಷ್ಯರು ಕಲಿಯುವುದರಲ್ಲಿ ಹಿಂದಿದ್ದರೂ, ಗುರುಗಳ ಸಹನೆಯಿಂದಾಗಿ ಮುಂದೇಳುತ್ತಾರೆ. ಹೆತ್ತವರಿಗೆ ಮನೆಯಲ್ಲಿ ಒಬ್ಬ ಅಥವಾ ಇಬ್ಬರು ಮಕ್ಕಳಿರುತ್ತಾರೆ, ಆದರೆ ಶಿಕ್ಷಕರಿಗೆ ಒಂದು ಕಕ್ಷೆಯಲ್ಲಿ ಅನೇಕ ಮಕ್ಕಳಿರುತ್ತಾರೆ. ಈ ಪರಿಸ್ಥಿತಿ ಅತಿ ಸವಾಲುಮಯ ಮತ್ತು ಒತ್ತಡಮಯ. ಈ ಪರಿಸ್ಥಿತಿಯನ್ನು ಎದುರಿಸಲು ಶಿಕ್ಷಕರು ಕೇಂದ್ರಿಕೃತರಾಗಿರಬೇಕು.

ನೀವೊಂದು ಉದಾಹರಣೆಯಾಗಿ

ನೀವೊಂದು ಉದಾಹರಣೆಯಾಗಿ

ಮಕ್ಕಳು ನಿಮ್ಮನ್ನು ತೀವ್ರವಾಗಿ ಗಮನಿಸುವುದರಿಂದ ನೀವೊಂದು ಉದಾಹರಣೆಯಾಗಬೇಕು. ಹೆತ್ತವರಿಂದ ಅವರು ಅರ್ಧ ಮೌಲ್ಯಗಳನ್ನು ಮಾತ್ರ ಕಲಿಯುತ್ತಾರೆ ಮತ್ತು ಉಳಿದ್ದನ್ನು ನಿಮ್ಮಿಂದ ಕಲಿಯುತ್ತಾರೆ. ನೀವು ಹೇಳುವುದನ್ನು ಮತ್ತು ಮಾಡುವುದೆಲ್ಲವನ್ನೂ ಗಮನಿಸುತ್ತಿರುತ್ತಾರೆ. ನೀವು ಯಾವಾಗ ಶಾಂತವಾಗಿ, ಸ್ಥಿರವಾಗಿರುತ್ತೀರಿ ಮತ್ತು ನಿಮಗೆ ಯಾವಾಗ ಕೋಪ ಬಂದಿದೆ, ಯಾವಾಗ ಒತ್ತಡದಲ್ಲಿರುವಿರಿ ಎಂದು ಗಮನಿಸುತ್ತಾರೆ.

ಮಾರ್ಗದರ್ಶನ ನಿಮ್ಮ ಹೊಣೆ

ಮಾರ್ಗದರ್ಶನ ನಿಮ್ಮ ಹೊಣೆ

ಶಿಷ್ಯರು ಯಾವ ಹಂತದಿಂದ ಬರುತ್ತಿದ್ದಾರೆಯೆಂದು ತಿಳಿದು, ಹೆಜ್ಜೆಹೆಜ್ಜೆಯಾಗಿ ಅವರಿಗೆ ಮಾರ್ಗದರ್ಶನ ನೀಡಬೇಕು. ಉದಾಹರಣೆಗೆ, ಕೃಷ್ಣ ಅತ್ಯುತ್ತಮ ಗುರು. ಹೆಜ್ಜೆ ಹೆಜ್ಜೆಯಾಗಿ ಅರ್ಜುನನ್ನು ಅಂತಿಮ ಗುರಿಗೆ ತಲುಪಿಸಿದ. ಅರ್ಜುನ ಆರಂಭದಲ್ಲಿ ಬಹಳ ಗೊಂದಲದಲ್ಲಿದ್ದ. ಶಿಷ್ಯರ ಪರಿಕಲ್ಪನೆ ಗಳೆಲ್ಲವೂ ಮುರಿಯಲಾರಂಭಿಸುವುದರಿಂದ ಶಿಷ್ಯರು ಬಹಳ ಗೊಂದಲದಲ್ಲಿರುತ್ತಾರೆ. ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ ಎಂದು ಮೊದಲು ಶಿಷ್ಯರು ಕಲಿಯುತ್ತಾರೆ. ನಂತರ ಹೆತ್ತವರು ಗ್ರಹಗಳ ಚಲನೆಯ ಬಗ್ಗೆ ತಿಳಿಸಿ ಹೇಳುತ್ತಾರೆ. ಆಗ ಅವರ ಪರಿಕಲ್ಪನೆ ಮುರಿಯುತ್ತದೆ. ಒಳ್ಳೆಯ ಶಿಕ್ಷಕರಿಗೆ ಇದು ತಿಳಿದಿರುತ್ತದೆ ಮತ್ತು ಶಿಷ್ಯರ ಗೊಂದಲದಿಂದ ಮೇಲೆಳೆಯುತ್ತಾರೆ. ಅವಶ್ಯಕವಾದಾಗ ಗುರುಗಳು ಗೊಂದಲವನ್ನು ಸೃಷ್ಟಿಸುತ್ತಾರೆ.

ಸುಂದರ ಸಮಾಜವೆಂಬ ತೋಟದ ಮಾಲಿಕರೇ ಶಿಕ್ಷಕರುಸುಂದರ ಸಮಾಜವೆಂಬ ತೋಟದ ಮಾಲಿಕರೇ ಶಿಕ್ಷಕರು

ಪ್ರೇಮಮಯಿಯಾಗಿ

ಪ್ರೇಮಮಯಿಯಾಗಿ

ಪ್ರೇಮಮಯಿಗಳಾಗಿರಿ ಮತ್ತದೇ ಸಮಯದಲ್ಲಿ ಶಿಸ್ತನ್ನೂ ಪಾಲಿಸಿ. ಅತಿ ಪ್ರೇಮಮಯಿಗಳಾದ ಶಿಕ್ಷಕರಿರುತ್ತಾರೆ ಮತ್ತು ಅತಿ ಶಿಸ್ತಿನ ಶಿಕ್ಷಕರಿರುತ್ತಾರೆ. ನವಿರಾದ ಸಮತೋಲನವಿರಬೇಕು- ದೃಢತೆಯಿಂದ ಕೂಡಿದ ಪ್ರೇಮ ಅವಶ್ಯಕ. ಕೆಲವು ಮಕ್ಕಳಲ್ಲಿ ದಂಗೆಯೇಳುವ ಪ್ರವೃತ್ತಿಯಿರುತ್ತದೆ. ಅಂತಹ ಮಕ್ಕಳಿಗೆ ದೈಹಿಕ ಸಾಮೀಪ್ಯತೆೆ ಅವಶ್ಯಕ ಮತ್ತು ಅವರ ಬೆನ್ನನ್ನು ಹೆಚ್ಚು ತಟ್ಟಬೇಕು, ಹೆಚ್ಚು ಪ್ರೋತ್ಸಾಹಿಸಬೇಕು. ಅವರು ಪ್ರೀತಿಸಲ್ಪಟ್ಟಿದ್ದಾರೆ ಮತ್ತು ನೀವು ಅವರ ಬಗ್ಗೆ ಅಕ್ಕರೆ ತೋರಿಸುತ್ತೀರಿ ಎಂದು ಅವರಿಗೆ ಮನದಟ್ಟಾಗಬೇಕು. ಅತಿಯಾಗಿ ನಾಚುವ , ಹೆದರುವ ಮಕ್ಕಳಿಗೆ ಸ್ವಲ್ಪ ದೃಢತೆ ತೋರಿಸಿ, ಅವರು ಧೈರ್ಯವಾಗಿ ಎದ್ದು ನಿಂತು ಮಾತನಾಡುವಂತೆ ಮಾಡಬೇಕು.

ಆದರೆ ಇದಕ್ಕೆ ತದ್ವಿರುದ್ಧವಾಗಿ ಮಾಡಲಾಗುತ್ತದೆ. ದಂಗೆಯೇಳುವ ಮಕ್ಕಳ ಬಗ್ಗೆ ದೃಢರಾಗಿರುತ್ತಾರೆ ಮತ್ತು ನಾಚಿಕೊಳ್ಳುವ ಮಕ್ಕಳ ಬಗ್ಗೆ ಸಲಿಗೆ ತೋರಿಸುತ್ತಾರೆ. ಹಾಗೆ ಮಾಡಿದರೆ ಅವರ ಸ್ವಭಾವಗಳಲ್ಲಿ ಪರಿವರ್ತನೆಯಾಗುವುದೇ ಇಲ್ಲ. ಕಠಿಣ ವಾಗಿರಬೇಕು ಮತ್ತು ಸಿಹಿಯಾಗಿಯೂ ಇರಬೇಕು. ಇಲ್ಲವಾದರೆ ಮಕ್ಕಳನ್ನು ನೀವೆಲ್ಲಿಗೆ ಕೊಂಡೊಯ್ಯಲು ಬಯಸುತ್ತೀರೊ ಅಲ್ಲಿಗೆ ಅವರನ್ನು ಕರೆದೊಯ್ಯಲು ಸಾಧ್ಯವಿಲ್ಲ.

'ನಾನು ಮುಖ್ಯಮಂತ್ರಿಯಾಗಲು ಶಿಕ್ಷಕರೇ ಕಾರಣ''ನಾನು ಮುಖ್ಯಮಂತ್ರಿಯಾಗಲು ಶಿಕ್ಷಕರೇ ಕಾರಣ'

ಶಿಕ್ಷಣ ನೀಡುವುದು ಒಂದು ಸಮಗ್ರ ಪ್ರಕ್ರಿಯೆ

ಶಿಕ್ಷಣ ನೀಡುವುದು ಒಂದು ಸಮಗ್ರ ಪ್ರಕ್ರಿಯೆ

ಮಕ್ಕಳಿಗೆ ಶಿಕ್ಷಣ ನೀಡುವುದು ಒಂದು ಸಮಗ್ರವಾದ ಪ್ರಕ್ರಿಯೆಯಾಗಿರಬೇಕು, ಅವರ ತಲೆಯ ತುಂಬಾ ಕೇವಲ ಮಾಹಿತಿಯನ್ನು ತುಂಬುವುದಲ್ಲ. ಕಕ್ಷೆಗೆ ಬಂದು ಕೆಲವು ಪಾಠ ಗಳನ್ನು ಕಲಿಯುವಂತಹ ಶಿಕ್ಷಣ ಒಂದು ಮಗುವಿನ ನಿಜವಾದ ಅವಶ್ಯಕತೆಯಲ್ಲ. ದೇಹ ಮತ್ತು ಮನಸ್ಸು ಒಂದರೊಂದಿಗೆ ಮತ್ತೊಂದು ಸಂಬಂಧ ಪಟ್ಟಿರುವುದರಿಂದ, ಅವೆರಡರ ಬೆಳವಣಿಗೆಯೂ ಅವಶ್ಯಕ. ಮಾನವೀಯ ಮೌಲ್ಯಗಳಾದಂತಹ ಸ್ವಕೀಯ ಭಾವನೆ, ಹಂಚಿಕೊಳ್ಳುವುದು, ಪ್ರೇಮ, ಆದರ, ಅಹಿಂಸೆಯನ್ನು ಮನಸ್ಸು ಮತ್ತು ದೇಹದ ಸಲುವಾಗಿ ಬೆಳೆಸಬೇಕು. ಈ ತತ್ವಗಳ ಆಧಾರದ ಮೇಲೆ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು.

English summary
In India, 5th September is celebrated as Teachers' Day as a mark of tribute to the contribution made by teachers to the society. It is the Birth date of great teacher and EX president Sarvepalli Radhakrishnan. Here is an article on teachers day by founder of Art of Living Sri Ravishankar Guruji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X