• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಧ್ಯಾತ್ಮಿಕ ಮೌಲ್ಯಗಳಿಂದ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ

By ಗುರುದೇವ್ ಶ್ರೀ ಶ್ರೀ ರವಿಶಂಕರ್
|

ಪ್ರತಿ ವರ್ಷವೂ ವಿಶ್ವ ಪರಿಸರ ದಿನ ಸಮೀಪಿಸುತ್ತಿದ್ದಂತೆಯೆ ವಿಶ್ವದ ಎಲ್ಲೆಡೆಯೂ, ಇನ್ನೂ ಕಠಿಣವಾದ ಹಸಿರು ನಿಯಮಗಳು ಬೇಕು, ಕಾನೂನುಗಳು ಬೇಕು ಎಂಬ ಕೂಗು ಕೇಳಿಬರುತ್ತದೆ. ಕಾನೂನುಗಳು ಮುಖ್ಯವಾದರೂ ಸುಸ್ಥಿರವಾದ ಪರಿಸರಕ್ಕೆ ಇವಷ್ಟೆ ಸಾಕಾಗುವುದಿಲ್ಲ.

ಪರಿಸರವು ನಮ್ಮ ಮೌಲ್ಯಾಧಾರಿತ ವ್ಯವಸ್ಥೆಯ ಒಂದು ಭಾಗವಾದರೆ ಮಾತ್ರ ಪರಿಸರವನ್ನು ನಿಜವಾಗಿಯೂ ಸಂರಕ್ಷಿಸಲು ಸಾಧ್ಯ. ಜಗತ್ತಿನ ಎಲ್ಲಾ ಪ್ರಾಚೀನ ಸಂಸ್ಕೃತಿಗಳೂ ಸದಾ ಪ್ರಕೃತಿಯನ್ನು ಸನ್ಮಾನಿಸಿವೆ- ಗಿಡಗಳನ್ನು, ನದಿಗಳನ್ನು, ಪರ್ವತಗಳನ್ನು ಮತ್ತು ಪ್ರಕೃತಿಯನ್ನು ಸದಾ ಪೂಜಿಸಿವೆ.[ಭೂಮಿಯ ಭವಿಷ್ಯಕ್ಕಾಗಿ ಇರಲಿ ಪರಿಸರದ ಕಾಳಜಿ]

ಕಡಿಯಬೇಕಾದ ಒಂದೊಂದು ಮರದ ಬದಲಿಗೆ ಐದು ಮರಗಳನ್ನು ನೆಡುವುದು ಭಾರತೀಯ ಪದ್ಧತಿಯ ಒಂದು ಭಾಗವಾಗಿತ್ತು. ಎಲ್ಲಾ ಪೂಜಾ ಪದ್ಧತಿಗಳಲ್ಲಿ, ಸಮಾರಂಭಗಳಲ್ಲಿನೀರಿನ ಬಳಕೆಯು ಒಂದು ಅವಿಭಾಜ್ಯವಾದ ಅಂಗವಾಗಿತ್ತು. ನದಿಗಳನ್ನು ತಾಯಿಯಂತೆ ಪೂಜಿಸುತ್ತಿದ್ದರು ಮತ್ತುಭೂಮಿಯನ್ನು ದೇವಿಯೆಂದು ಕರೆದರು. ಇಂದಿನ ಆಧುನಿಕ ಕಾಲದಲ್ಲಿ ಪ್ರಕೃತಿಯನ್ನು ಪವಿತ್ರವಾಗಿ ಪರಿಗಣಿಸುವ ಭಾವನೆಯನ್ನು ಪುನರುಜ್ಜೀವಿಸಬೇಕಾಗಿದೆ.

ನೀರನ್ನು ಉಳಿಸುವ ನವೀನ ರೀತಿಗಳ ಬಗ್ಗೆ ಜನರಿಗೆ ಪ್ರಶಿಕ್ಷಣವನ್ನು ನೀಡಬೇಕಾಗಿದೆ ಮತ್ತು ರಾಸಾಯನಿಕ-ಮುಕ್ತ, ಪ್ರಾಕೃತಿಕ ಕೃಷಿಯನ್ನು ಪ್ರೋತ್ಸಾಹಿಸಬೇಕಾಗಿದೆ.

27 ನದಿಗಳ ಪುನಶ್ಚೇತನದ ಕಾರ್ಯವನ್ನು ಈಗಾಗಲೇ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಮಾಡುತ್ತಿದ್ದು, ಸಮಾಜದ ಎಲ್ಲಾ ಜನರು ಮತ್ತು ಇತರರ ಭಾಗೀದಾರರು ಇದರಲ್ಲಿ ಪಾಲ್ಗೊಂಡಿರುವುದರಿಂದ ಇದು ಸಾಧ್ಯವಾಗಿದೆ.

ಮಾನವನ ದುರಾಸೆಯೇ ಎಲ್ಲಕ್ಕೂ ಕಾರಣ

ಮಾನವನ ದುರಾಸೆಯೇ ಎಲ್ಲಕ್ಕೂ ಕಾರಣ

ವಾಸ್ತವದಲ್ಲಿ ಮಾನವನ ಲೋಭವೆ ಮಾಲಿನ್ಯಕ್ಕೆ ಕಾರಣ. ತಂತ್ರಜ್ಞಾನ ಮತ್ತು ಬೆಳವಣೆಗೆಯ ಅನಿವಾರ್ಯವಾದ ಅಡ್ಡ ಪರಿಣಾಮದಿಂದಾಗಿ ಪರಿಸರದ ನಾಶವಾಗಬೇಕಿಲ್ಲ. ತಂತ್ರಜ್ಞಾನ ಮತ್ತು ವಿಜ್ಞಾನದಿಂದಾಗಿ ಹಾನಿಯಾಗುವುದಿಲ್ಲ, ಅದರಿಂದ ಉತ್ಪಾದಿತವಾಗುವ ತ್ಯಾಜ್ಯ ವಸ್ತುಗಳಿಂದಾಗಿ ಹಾನಿಯಾಗುತ್ತದೆ. ಈ ತ್ಯಾಜ್ಯದ ಮರುಬಳಕೆಯ ವಿಧಾನವನ್ನು ಮತ್ತು ಮಲಿನಗೊಳಿಸದಂತಹ ಪ್ರಕ್ರಿಯೆಗಳಿಗಾಗಿ ಶೋಧಿಸಬೇಕು ಮತ್ತು ಸೌರಶಕ್ತಿಯನ್ನು ಹೆಚ್ಚಾಗಿ ಬಳಸಬೇಕು ಮತ್ತು ಪ್ರಾಕೃತಿಕ ಕೃಷಿಯನ್ನೂ ಹೆಚ್ಚಾಗಿ ಪ್ರೋತ್ಸಾಹಿಸಬೇಕು.

ಅಪರಿಸರ ಮತ್ತು ಮಸ್ಸಿನೊಂದಿಗೆ ಅಂತಿಮ ಸಂಬಂಧ

ಅಪರಿಸರ ಮತ್ತು ಮಸ್ಸಿನೊಂದಿಗೆ ಅಂತಿಮ ಸಂಬಂಧ

ಪ್ರಾಚೀನ ಆಧ್ಯಾತ್ಮಿಕ ಜ್ಞಾನವು, ಪರಿಸರದೊಡನೆ ಉಂಟಾಗುವ ನಮ್ಮ ಸಂಬಂಧವು ಮಾನವ ಅನುಭವದ ಮೊದಲನೆಯ ಹಂತ ಎಂದೇ ಪರಿಗಣಿಸುತ್ತದೆ. ನಮ್ಮ ವಾತಾವರಣ ಶುದ್ಧವಾಗಿ, ಸಕಾರಾತ್ಮಕವಾಗಿದ್ದರೆ, ನಮ್ಮ ಅಸ್ತಿತ್ವದ ಇತರ ಎಲ್ಲಾ ಪದರಗಳ ಮೇಲೂ ಸಕಾರಾತ್ಮಕವಾದ ಪ್ರಭಾವವನ್ನೆ ಉಂಟು ಮಾಡುತ್ತದೆ. ಐತಿಹಾಸಿಕವಾಗಿಯೂ, ಮಾನವನ ಮನಸ್ಸಿನೊಡನೆ ಮತ್ತು ಪರಿಸರದೊಡನೆ ಅಂತಿಮ ಸಂಬಂಧವನ್ನು [ಪರಿಸರ ದಿನದಂದು 'ಯುನೈಟೆಡ್ ವೇ'ನಿಂದ 10,000 ಸಸಿ ನೆಡುವ ಕಾರ್ಯಕ್ರಮಮೂಡಿಸಲಾಗಿತ್ತು.]

ಪರಿಸರ ಮಾಲಿನ್ಯವಾಗುವುದು ಯಾವಾಗ?

ಪರಿಸರ ಮಾಲಿನ್ಯವಾಗುವುದು ಯಾವಾಗ?

ನಮ್ಮೊಡನೆ ಮತ್ತು ಪ್ರಕೃತಿಯೊಡನೆ ನಾವು ಹೊಂದಿರುವ ಸಂಬಂಧದಿಂದ ದೂರ ಸರಿಯಲು ಆರಂಭಿಸಿದಾಗ ಮಾತ್ರ ಪರಿಸರದ ಮಾಲಿನ್ಯವನ್ನು ಉಂಟು ಮಾಡಿ, ಪ್ರಕೃತಿಯನ್ನು ನಾಶಪಡಿಸಲು ಆರಂಭಿಸುತ್ತೇವೆ. ಪ್ರಕೃತಿಯೊಡನೆ ನಾವು ಹೊಂದಿರುವ ಸಂಬಂಧದ ಭಾವನೆಯನ್ನು ಮತ್ತೆ ಪುನರುಜ್ಜೀವಿಸಬೇಕು, ಪಾರಂಪರಿಕ ಪದ್ಧತಿಗಳನ್ನು ಮತ್ತೆ ಜೀವಂತವಾಗಿಸಬೇಕು.[ಉದ್ಯಾನನಗರಿ ಬೆಂಗಳೂರಿನಲ್ಲಿ ವಿಶ್ವ ಪರಿಸರ ದಿನದ ಸಂಭ್ರಮ]

ಮಾನವ ಚೇತನ ಲೋಭದಿಂದ ಮೇಲೇಳಲಿ

ಮಾನವ ಚೇತನ ಲೋಭದಿಂದ ಮೇಲೇಳಲಿ

ಇವೆಲ್ಲದ್ದಕ್ಕಿಂತಲೂ ಮಿಗಿಲಾಗಿ, ನಮ್ಮ ಜಗತ್ತನ್ನು ತೆರೆದ ಮನಸ್ಸಿನಿಂದ, ಒತ್ತಡದಿಂದ ಮುಕ್ತವಾಗಿ ಅನುಭವಿಸಬೇಕು ಮತ್ತು ಈ ಸ್ಥಿತಿಯಿಂದ ನಮ್ಮ ಸುಂದರವಾದ ಭೂಮಿಯ ಸಂರಕ್ಷಣೆಯ ಕ್ರಮಗಳನ್ನು ಕೈಗೊಳ್ಳಬೇಕು. ಹೀಗೆ ನಡೆಯಲು ಮಾನವನ ಚೇತನವು ಲೋಭದಿಂದ ಮೇಲೇಳಬೇಕು, ಶೋಷಣಾ ಪ್ರವೃತ್ತಿಯಿಂದ ಮೇಲೇಳಬೇಕು.[15 ವರ್ಷಗಳ ಹಿಂದೆ ಹಸಿರು ಬೆಂಗಳೂರು ಹೇಗಿತ್ತು?]

ಭೂಮಿಯ ಬಗ್ಗೆ ಬದ್ಧತೆಯ ಭಾವವಿರಲಿ

ಭೂಮಿಯ ಬಗ್ಗೆ ಬದ್ಧತೆಯ ಭಾವವಿರಲಿ

ನಮ್ಮ ಅಂತರಾಳದ ಅನುಭವವಾದ ಆಧ್ಯಾತ್ಮಿಕತೆಯು, ನಮ್ಮೊಡನೆ, ಇತರರೊಡನೆ ಮತ್ತು ನಮ್ಮ ಪರಿಸರದೊಡನೆ ಹೊಂದಬೇಕಾದ ಸಂಬಂಧವನ್ನು ತೋರಿಸುವ ದಾರಿಯಾಗಿದೆ. ಆಧ್ಯಾತ್ಮಿಕತೆಯು ಒಬ್ಬರ ಚೇತನವನ್ನು ಉತ್ಪಾದಿಸುತ್ತದೆ ಮತ್ತು ಪರಿಸರಕ್ಕೆ ಹಾನಿಯನ್ನು ಉಂಟು ಮಾಡುವ ಲೋಭವನ್ನು ತಡೆಯುತ್ತದೆ. ಇಡೀ ಭೂಮಿಯ ಬಗ್ಗೆ ಬದ್ಧತೆಯ ಮತ್ತು ಅಕ್ಕರೆಯ ಭಾವವನ್ನು ಮೂಡಿಸುತ್ತದೆ. ಇಂದಿನ ಶತಮಾನದ ಸವಾಲೆಂದರೆ ಪರಿಸರದಲ್ಲ ಸಾಮರಸ್ಯವನ್ನು ಕಾಯ್ದುಕೊಂಡು, ಅದೇ ಸಮಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬೆಳೆಸುವುದು. ಆಧ್ಯಾತ್ಮಿಕ ಮೌಲ್ಯಗಳಿಂದ ಮಾತ್ರ ಈ ಸಮತೋಲನವನ್ನು ತರಲು ಸಾಧ್ಯ.[ಅಣ್ಣಗಳಿರಾ ಅಕ್ಕಗಳಿರಾ ಇರುವುದೊಂದೇ ಭೂಮಿ]

English summary
People can get concern towards environment by spirituality. Spirituality is the only way to leave greediness. People should protect our environment for the sake of present and future generation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more