ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಷಯವೆಂದರೆ ಕ್ಷಯವಿಲ್ಲದ್ದು, ಕಡಿಮೆ ಇಲ್ಲದ್ದು

ಅಕ್ಷಯವೆಂದರೆ ಕ್ಷಯವಿಲ್ಲದ್ದು, ಕಡಿಮೆ ಇಲ್ಲದ್ದು, ಕ್ಷೀಣವಾಗದ್ದು, ಕೊನೆಯಿಲ್ಲದ್ದು, ನ್ಯೂನವಿಲ್ಲದ್ದು. ಇದು ಸಮದ್ಧಿಯ ಸಂಕೇತ, ಶುಭಾರಂಭದ ದ್ಯೋತಕ, ನಿರಂತತೆಯ ಪ್ರತೀಕ.

By ಗುರುರಾಜ ಪೋಶೆಟ್ಟಿಹಳ್ಳಿ
|
Google Oneindia Kannada News

ಅಕ್ಷಯವೆಂದರೆ ಕ್ಷಯವಿಲ್ಲದ್ದು, ಕಡಿಮೆ ಇಲ್ಲದ್ದು, ಕ್ಷೀಣವಾಗದ್ದು, ಕೊನೆಯಿಲ್ಲದ್ದು, ನ್ಯೂನವಿಲ್ಲದ್ದು. ಇದು ಸಮದ್ಧಿಯ ಸಂಕೇತ, ಶುಭಾರಂಭದ ದ್ಯೋತಕ, ನಿರಂತತೆಯ ಪ್ರತೀಕ.ಧರ್ಮವು ಕರ್ತವ್ಯ, ಆಧ್ಯಾತ್ಮಿಕತೆಯನ್ನು ಅರ್ಥವು ಸಂಪತ್ತನ್ನು, ಕಾಮವು ಭೌತಿಕ ಸಂತೋಷ.

ಆಕಾಂಕ್ಷೆಗಳನ್ನು ಸಂಕೇತಿಸಿದರೆ ಮೋಕ್ಷ ಈ ಭವಬಂಧನದಿಂದ ಮುಕ್ತವಾಗಿ ಏಕತ್ವದಲ್ಲಿ ಲೀನವಾಗುವುದರ ಸಂಕೇತವಾಗಿದೆ. ಈ ನಾಲ್ಕು ಪುರುಷಾರ್ಥಗಳ ಪೈಕಿ ಯಾವುದಾದರೊಂದರ ಆರಂಭ ಮಾಡುವುದಿದ್ದರೂ ಅದಕ್ಕೆ ಎಲ್ಲ ರೀತಿಯಿಂದಲೂ ಅನುಕೂಲಕರವಾದ ಶುಭ ದಿನವೇ ಈ ಅಕ್ಷಯ ತೃತೀಯ.[ಅಕ್ಷಯ ತದಿಗೆ ಚಿನ್ನದ ಬೆಲೆ ಕೆಳಕ್ಕೆ, ಆಭರಣ ಮಾರಾಟ ಮೇಲಕ್ಕೆ]

ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶ್ರೀ ಪೇಜಾವರ ಮಠದ ಪರಂಪರೆಯಲ್ಲಿ ಏಳನೆಯ ಯತಿಗಳಾದ ಶ್ರೀ ವಿಜಯಧ್ವಜ ತೀರ್ಥರು ಶ್ರೀ ಮದ್ಭಾಗವತಕ್ಕೆ ಪದರತ್ನಾವಲೀ ಎಂಬ ಸಮಗ್ರ ಟಿಪ್ಪಣಿಯನ್ನು ಬರೆದ eನಿ ಶ್ರೇಷ್ಠರು. ಅವರು ಆರಾಧನೆಯೂ ದ.ಕ., ಕೇರಳ ಗಡಿಯ ಮಂಜೇಶ್ವರ ಸಮೀಪದ ಕಣ್ವತೀರ್ಥದಲ್ಲಿ ಅಕ್ಷಯ ತದಿಗೆಯಂದು ವಿಜಂಭಣೆಯಿಂದ ನಡೆಯಲಿದೆ.ಜಗನ್ನಾಥ ಪುರಿಯ ದೇವರ ರಥಕಟ್ಟಲು ಆರಂಭಿಸುವ ದಿನವೂ ಇದಾಗಿದೆ. ಇಂದೇ ಆದಿ ಶಂಕರಾಚಾರ್ಯರು ಕನಕಧಾರಾ ಸ್ತೋತ್ರ ರಚಿಸಿದರು ಎಂದು ನಂಬಿಕೆಯಿದೆ.

Significance of Akshaya Tritiya stories related to auspicious day

ಅಕ್ಷಯ ತೃತೀಯ; ಪುರಾಣದ ನಂಟು
ವೈಶಾಖ ಮಾಸಕ್ಕೆ ಸೂರ್ಯ ಅಭಿಮಾನಿ ದೇವತೆ. ಸೂರ್ಯನು ಬೆಳಕು ಮತ್ತು ಶಕ್ತಿಯ ಉಗಮ ಸ್ಥಾನ. ಸೂರ್ಯ ಜಗದ ಕಣ್ಣು. ಸೂರ್ಯ ಜಗವನ್ನು ಬೆಳಗುವವನು. ಅವನ ಆಂತರ್ಯದಲ್ಲಿರುವುದೇ ಪ್ರಬಲವಾದ ಅಗ್ನಿಯ ಮೊದಲ ಮಗನೇ ಹಿರಣ್ಯ (ಬಂಗಾರ). ಸೂರ್ಯ-ಅಗ್ನಿ-ಬಂಗಾರದ ಸಂಬಂಧ ಹೀಗಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನೇ ವೈಶ್ವಾನರಾಗ್ನಿಯ ರೂಪದಲ್ಲಿ ನಾನು ಎಲ್ಲರ ಹೃದಯದಲ್ಲಿರುತ್ತೇನೆ ಎಂದು ವಿಸ್ತರಿಸಿ ಅರ್ಥೈಸುವುದಾದರೆ ನಾವು ಬಂಗಾರವನ್ನು ಧರಿಸಿಕೊಂಡಾಗ ನಮ್ಮ ಹೃದಯವಾಸಿಯಾದ ಅಗ್ನಿಯನ್ನು ಅವನ ಮಗ ಹಿರಣ್ಯ (ಬಂಗಾರ)ನಿಂದಲೇ ಅಲಂಕರಿಸದಂತಾಗುವುದು.[ಅಕ್ಷಯ ತೃತೀಯ: ಚಿನ್ನ ಖರೀದಿ ಭರಾಟೆ ಬಲು ಜೋರು]

ವಿಷ್ಣು ಅಲಂಕಾರ ಪ್ರಿಯ. ಆತನಿಗೆ ಪ್ರಿಯವಾದ ಹೇಮ (ಚಿನ್ನ) ರಜತಾದಿ ಒಡವೆಗಳನ್ನು ಖರೀದಿಸಿ ಅರ್ಪಿಸಿ ಕೃತಾರ್ಥರಾಗುವರು ಭಾರತೀಯ ಆಸ್ತಿಕರು. ವಿಷ್ಣು ಸಹಸ್ರನಾಮದಲ್ಲಿ ಹೇಳಿದಂತೆ ವಿಷ್ಣು ಸುವರ್ಣ ವರ್ಣದವನು. ಮಾತ್ರವಲ್ಲ, ಅಷ್ಟೈಶ್ವರ್ಯಗಳ ಅಧಿಪತಿ ಕುಬೇರ. ಈ ಒಂದು ದಿನ ಸ್ವತಃ ಐಶ್ವರ್ಯ ದೇವತೆ ಲಕ್ಷ್ಮಿಯನ್ನು ಪೂಜಿಸುತ್ತಾನೆ ಎಂದು ಲಕ್ಷ್ಮೀತಂತ್ರದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ದೈವಭಕ್ತರಿಗೆ ಇದೊಂದೇ ದಿನ ಕುಬೇರ ಲಕ್ಷ್ಮೀ ಪೂಜೆ ಮಾಡಲು ಅವಕಾಶ. ವಿಶೇಷವಾಗಿ ತುಪ್ಪದ ದೀಪ ಹಚ್ಚಿ ಪೂಜಿಸಲಾಗುತ್ತದೆ.

English summary
Akshaya Tritiya a very auspicious day in India. Akshaya tritiya is related with many stories. This year Akshaya Tritiya celebrated on April 28,29, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X