ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತಿಯ ಆಯುರ್‌-ಐಶ್ವರ್ಯ ವೃದ್ಧಿಗೆ ವಟ ಸಾವಿತ್ರಿ ವ್ರತ: ಹಿನ್ನೆಲೆ ಏನು?

By Nayana
|
Google Oneindia Kannada News

Recommended Video

ವಟ ಸಾವಿತ್ರಿ ವ್ರತದ ಇತಿಹಾಸ ಹಾಗು ಅದರ ಹಿನ್ನೆಲೆ | Oneindia Kannada

ತನಗೆ ಹಾಗೂ ಪತಿಗೆ ಆರೋಗ್ಯ, ದೀರ್ಘಾಯುಷ್ಯ ಲಭಿಸಲಿ, ಧನಧಾನ್ಯ ಹಾಗೂ ಮಕ್ಕಳು ಬಂಧು ಬಳಗದಿಂದ ತನ್ನ ಪ್ರಪಂಚ ಸವಿಸ್ತಾರ ಹಾಗೂ ಸಂಪನ್ನವಾಗಲಿ ಎಂದು ಪ್ರಾರ್ಥಿಸುವುದೇ ವಟ ಸಾವಿತ್ರಿ ವ್ರತ. ಹಾಗಾದರೆ ಈ ವಟ ಸಾವಿತ್ರಿ ವ್ರತ ಯಾಕೆ, ಮಾಡಬೇಕು ಅದರ ಹಿನ್ನೆಲೆ ಏನು ಎನ್ನುವುದನ್ನು ನಾವು ನೋಡೋಣ.

ಜ್ಯೇಷ್ಠ ಮಾಸದ ಹುಣ್ಣಿಮೆಯ ದಿನದಂದು ಸ್ತ್ರೀಯರು ತಮ್ಮೆಲ್ಲ ಮನೋಕಾಮನೆಗಳನ್ನು, ದೀರ್ಘ ಸೌಮಾಂಗ್ಯ ಪ್ರಾಪ್ತಿಗಾಗಿ ಈ ವೃತವನ್ನು ಮಾಡಬೇಕು. ಎಲ್ಲ ಪವಿತ್ರ ವೃಕ್ಷಗಳ ತುಲನೆಯಲ್ಲಿ ವಟವೃಕ್ಷದ ಆಯುಷ್ಯವು ಹೆಚ್ಚಿನದ್ದಾಗಿದ್ದು ಅದರ ವಿಸ್ತಾರವೂ ಹೆಚ್ಚಿರುತ್ತದೆ.

ಪತಿಯ ಆಯುಷ್ಯ ವೃದ್ಧಿಗೆ ವಟ ಸಾವಿತ್ರಿ ವ್ರತ: ಆಚರಣೆ ಏಕೆ? ಹೇಗೆ?ಪತಿಯ ಆಯುಷ್ಯ ವೃದ್ಧಿಗೆ ವಟ ಸಾವಿತ್ರಿ ವ್ರತ: ಆಚರಣೆ ಏಕೆ? ಹೇಗೆ?

ಸ್ತ್ರೀಯರು ಇಂತಹ ವಟವೃಕ್ಷದ ಪೂಜೆಯನ್ನು ಮಾಡಿ ನನಗೆ ಹಾಗೂ ನನ್ನ ಪತಿಗೆ ಆರೋಗ್ಯ ಸಂಪನ್ನ ದೀರ್ಘಾಯುಷ್ಯ ಲಭಿಸಲಿ, ಪತಿಯ ಆಯುಷ್ಯ ವೃದ್ಧಿಯಾಗಲಿ ಎಂದು ಜ್ಯೇಷ್ಠ ಹುಣ್ಣಿಮೆ ದಿನ ಪ್ರಾರ್ಥನೆಯನ್ನು ಮಾಡುತ್ತಾರೆ.

ವ್ರತದ ದಿನ ಬೆಳಗ್ಗೆ ನಸುಕಿನಲ್ಲೇ ತಲೆಸ್ನಾನ ಮಾಡಿ ವ್ರತವನ್ನು ಆರಂಭಿಸುತ್ತಾರೆ. ಮನೆಯ ಗೋಡೆಯ ಮೇಲೆ ಯಮ, ಸಾವಿತ್ರಿ, ಸತ್ಯವಾನ, ಆಲದ ಮರಗಳನ್ನು ಗಂಧದಲ್ಲಿ ಬರೆಯುತ್ತಾರೆ. ನಂತರ ನೆಲದ ಮೇಲೆ ಅಕ್ಕಿಯನ್ನು ಹರವುತ್ತಾರೆ. ಸಾವಿತ್ರಿ ಮತ್ತು ಸತ್ಯವಾನನ ಬೊಂಬೆ ಅಥವಾ ಮೂರ್ತಿಯನ್ನು ಬಟ್ಟಲಿನಲ್ಲಿಟ್ಟು ಪೂಜಿಸುತ್ತಾರೆ. ಗಂಧದ ಬಟ್ಟಲಾದರೆ ಶ್ರೇಷ್ಠ. ಜೊತೆಗೆ ಆಲದ ಎಲೆಗಳನ್ನು ಇಟ್ಟು ಮಂತ್ರ ಹೇಳುತ್ತಾ ಪೂಜಿಸುತ್ತಾರೆ.

ವಟ ಸಾವಿತ್ರಿ ವ್ರತ ಹಿನ್ನೆಲೆ

ವಟ ಸಾವಿತ್ರಿ ವ್ರತ ಹಿನ್ನೆಲೆ

ಸಾವಿತ್ರಿಯು ಸತ್ಯವಾನನ ಪ್ರಾಣಹರಣದ ನಂತರ ಯಮಧರ್ಮನೊಂದಿಗೆ ಮೂರು ದಿನಗಳ ವರೆಗೆ ಶಾಸ್ತ್ರ ಚರ್ಚೆ ಮಾಡಿದಳು. ಆಗ ಪ್ರಸನ್ನನಾದ ಯಮಧರ್ಮನು ಸತ್ಯವಾನನನ್ನು ಪುನಃ ಜೀವಂತಗೊಳಿಸಿದನು. ಈ ಚರ್ಚೆಯು ವಟ ವೃಕ್ಷದ (ಆಲದಮರ) ಕೆಳಗೆ ಆದುದರಿಂದ ವಟವೃಕ್ಷಕ್ಕೆ ಸಾವಿತ್ರಿಯ ಹೆಸರನ್ನು ಜೋಡಿಸಲಾಯಿತು. ಸಾವಿತ್ರಿಯಂತೆಯೇ ತಮ್ಮ ಪತಿಯ ಆಯುಷ್ಯವು ಹೆಚ್ಚಾಗಲಿ ಎಂದು ಸ್ತ್ರೀಯರು ಈ ವ್ರತವನ್ನು ಆರಂಭಿಸಿದರು.ಸಾವಿತ್ರಿಯೊಂದಿಗೆ ಬ್ರಹ್ಮನು ಈ ವ್ರತದ ಮುಖ್ಯ ದೇವತೆಯಾಗಿದ್ದಾನೆ.

ವಟ ವೃಕ್ಷ ಶಿವರೂಪಿ

ವಟ ವೃಕ್ಷ ಶಿವರೂಪಿ

ವಟವೃಕ್ಷವು ಶಿವರೂಪಿಯಾಗಿದೆ. ಶಿವರೂಪಿ ವಟವೃಕ್ಷದ ಪೂಜೆ ಮಾಡುವುದು, ಅಂದರೆ ವಟವೃಕ್ಷದ ಮಾಧ್ಯಮದಿಂದ ಒಂದು ರೀತಿಯಲ್ಲಿ ಶಿವರೂಪಿ ಪತಿಯನ್ನೇ ಸ್ಮರಿಸಿ, ಅವನ ಆಯುಷ್ಯವನ್ನು ಹೆಚ್ಚಿಸಿ ಅವನಿಂದ ಆಯುಷ್ಯದಲ್ಲಿ ಬರುವ ಪ್ರತಿಯೊಂದು ಕರ್ಮಕ್ಕೆ ಜೊತೆ ಸಿಗಲೆಂದು ಈಶ್ವರನನ್ನು ಪೂಜಿಸುವುದಾಗಿದೆ. ಕರ್ಮಕ್ಕೆ ಶಿವನ ಜೊತೆಯಿದ್ದಲ್ಲಿ, ಶಕ್ತಿ ಮತ್ತು ಶಿವ ಇವರ ಸಂಯುಕ್ತ ಕ್ರಿಯೆಯಿಂದ ವ್ಯವಹಾರದಲ್ಲಿನ ಕರ್ಮವು ಸಾಧನೆಯಾಗಿ ಅದರಿಂದ ಜೀವಕ್ಕೆ ಲಾಭವಾಗುತ್ತದೆ.

ವಟವೃಕ್ಷದ ಮೇಲಿನ ಬಿರುಕಿನಲ್ಲಿ ಇರುವ ಸುಪ್ತ ಲಹರಿಗಳು ಶಿವತತ್ತ್ವವನ್ನು ಆಕರ್ಷಿಸಿ ವಾಯುಮಂಡಲದಲ್ಲಿ ಪ್ರಕ್ಷೇಪಿಸುತ್ತವೆ. ವಟವೃಕ್ಷಕ್ಕೆ ಹತ್ತಿಯ ದಾರದಿಂದ ಸುತ್ತುವಾಗ ಜೀವದ ಭಾವಕ್ಕೆ ಅನುಗುಣವಾಗಿ ಮರದಲ್ಲಿನ ಶಿವತತ್ತ್ವಕ್ಕೆ ಸಂಬಂಧಿತ ಲಹರಿಗಳು ಕಾರ್ಯ ನಿರತವಾಗಿ ಆಕಾರ ಪಡೆಯುತ್ತವೆ. ಜೀವಕ್ಕೆ ಹತ್ತಿಯ ದಾರದಲ್ಲಿನ ಪೃಥ್ವಿ ಮತ್ತು ಜಲ ತತ್ತ್ವಗಳ ಸಂಯೋಗದಿಂದ ಈ ಲಹರಿಗಳನ್ನು ಗ್ರಹಿಸಲು ಸುಲಭವಾಗುತ್ತವೆ.

ವಟ ವೃಕ್ಷ ಯುಗಾಂತ್ಯದ ಸಂಗಾತಿ:

ವಟ ವೃಕ್ಷ ಯುಗಾಂತ್ಯದ ಸಂಗಾತಿ:

ಪ್ರಳಯವಾದರೂ ವಟವೃಕ್ಷವು ಇದ್ದೇ ಇರುತ್ತದೆ. ಅದು ಯುಗಾಂತ್ಯದ ಸಂಗಾತಿಯಾಗಿದೆ. ಬಾಲ ಮುಕುಂದನು ಪ್ರಳಯಕಾಲದಲ್ಲಿ ವಟದ ಎಲೆಯ ಮೇಲೆ ಮಲಗಿದ್ದನು.ಪ್ರಯಾಗದ ಅಕ್ಷಯ ವಟದ ಕೆಳಗೆ ರಾಮ, ಲಕ್ಷ್ಮಣ ಮತ್ತು ಸೀತೆಯರು ವಿಶ್ರಮಿಸಿದ್ದರು. ವಟವೃಕ್ಷವು ಬ್ರಹ್ಮ, ಶ್ರೀವಿಷ್ಣು, ಮಹೇಶ, ನೃಸಿಂಹ, ನೀಲ ಮತ್ತು ಮಾಧವರ ನಿವಾಸಸ್ಥಾನವಾಗಿದೆ.ವಟ, ಅಶ್ವತ್ಥ, ಅತ್ತಿ ಮತ್ತು ಶಮಿ (ಬನ್ನಿ) ಇವು ಪವಿತ್ರ ಮತ್ತು ಯಜ್ಞ ವೃಕ್ಷಗಳಾಗಿವೆ ಎಂದು ಹೇಳಲಾಗಿದೆ. ಇವೆಲ್ಲ ವೃಕ್ಷಗಳಲ್ಲಿ ವಟವೃಕ್ಷದ ಆಯುಷ್ಯವು ಅತ್ಯಧಿಕವಾಗಿದ್ದು ಕೊಂಬೆಗಳಿಂದ ನೆಲದ ವರೆಗೆ ಬರುವ ಬೇರುಗಳಿಂದ ಇದು ತುಂಬಾ ವಿಸ್ತಾರವಾಗುತ್ತದೆ.ಅದಕ್ಕೆ ಬೋಧಿವೃಕ್ಷವನ್ನು ಪೂಜಿಸಿ ಅಖಂಡ ಸೌಭಾಗ್ಯವತಿಯಾಗಲು ಆಶೀವಾ೯ದ ಬೇಡುತ್ತಾರೆ

ವಟ ಸಾವಿತ್ರಿ ವ್ರತ ಯಾವಾಗ

ವಟ ಸಾವಿತ್ರಿ ವ್ರತ ಯಾವಾಗ

ಪತಿಯ ಆಯಸ್ಸು ವೃದ್ಧಿಗಾಗಿ ವಟ ಸಾವಿತ್ರಿ ವ್ರತವನ್ನು ಆಚರಿಸಲಾಗುತ್ತದೆ. ಈ ವ್ರತ ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಹೆಚ್ಚು ಮಹತ್ವ ಗಳಿಸಿದೆ. ತನ್ನ ಪತಿ ಸತ್ಯವಾನ್ ನನ್ನು ಉಳಿಸಿಕೊಳ್ಳಲು ಯಮನನ್ನು ಮೆಚ್ಚಿಸಿದ ಸಾವಿತ್ರಿಯ ನೆನಪಿಗಾಗಿ ಈ ದಿನವನ್ನು ವಟ ಸಾವಿತ್ರಿ ವ್ರತವನ್ನಾಗಿ ಆಚರಿಸಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಪ್ರತಿವರ್ಷ ಜ್ಯೇಷ್ಠ ಮಾಸದ ಶುದ್ಧ ಹುಣ್ಣಿಮೆಯಂದು ವಟ ಪೂರ್ಣಿಮಾ ಅಥವಾ ವಟ ಸಾವಿತ್ರಿ ವ್ರತ ಆಚರಿಸಲಾಗುತ್ತದೆ. ಈ ವರ್ಷ ಜೂನ್ 27, ಬುಧವಾರದಂದು ಈ ವ್ರತವನ್ನು ಆಚರಿಸಲಾಗುತ್ತಿದ್ದು,

English summary
In Hindu tradition Savithri vritha is a praise of god by every woman for goodness of their husband. This ritual has ancient history of practice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X