ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಮೇ 1 ಕಾರ್ಮಿಕರ ದಿನ: ಆಚರಣೆ ಹೇಗೆ ಬಂತು?

By ಜಗದೀಶ ವಡ್ಡಿನ ಬಾಡ
|
Google Oneindia Kannada News

ಕಾರವಾರ, ಮೇ 1 : ಕಾರ್ಮಿಕ ಪ್ರಭುತ್ವದ ಶುಭಯುಗದ ಉದಯದ ಕುರುಹಾಗಿ 1889 ಮೇ 1 ರಂದು ಉತ್ಸವಾಚರಣೆ ಮಾಡಬೇಕೆಂದು ರಾಬರ್ಟ ಓವೆನ್ ಸೂಚಿಸಿದ್ದ. 1889ರಲ್ಲಿ ಪ್ಯಾರಿಸಿನಲ್ಲಿ ಸಮಾವೇಶಗೊಂಡಿದ್ದ ಸಮಾಜವಾದಿ ಅಂತರರಾಷ್ಟ್ರೀಯ ಪ್ರಥಮ ಅಧಿವೇಶನದಲ್ಲಿ ಮೇ 1 ನೇ ದಿನಾಂಕವನ್ನು ರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಆಚರಿಸಬೇಕೆಂದು ನಿರ್ಧರಿಸಲಾಯಿತು.

ಕಾರ್ಮಿಕ ದಿನಾಚರಣೆಯ ಔಚಿತ್ಯ ಹಾಗೂ ಸಂದೇಶಕಾರ್ಮಿಕ ದಿನಾಚರಣೆಯ ಔಚಿತ್ಯ ಹಾಗೂ ಸಂದೇಶ

ಭಾರತದಲ್ಲಿ ಮೇ ದಿನವೇ ಕಾರ್ಮಿಕರ ದಿನ. 20 ನೇ ಶತಮಾನದ ಎರಡನೆಯ ದಶಕದ ದ್ವಿತೀಯಾರ್ಧದಲ್ಲಿ ಕಾರ್ಮಿಕ ಸಂಘ ಚಳುವಳಿಯ ಪ್ರಭಾವ ಹೆಚ್ಚಿಸಿದಾಗಿನಿಂದ ಇದರ ಆಚರಣೆ ಆರಂಭವಾಯಿತು. ಮೇ ದಿನಾಚರಣೆಯಲ್ಲಿ ಭಾಗವಹಿಸಿದ ಮೊಟ್ಟಮೊದಲಿನ ಭಾರತೀಯ ಕಾರ್ಮಿಕರು ಇಂಗ್ಲೆಂಡಿನಲ್ಲಿದ್ದ ಭಾರತೀಯ ನಾವಿಕರು. ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂದು ಘೋಷಣೆಯನ್ನೊಳಗೊಂಡ ಪ್ರದರ್ಶನ ಚಿತ್ರಗಳನ್ನು ಹಿಡಿದು ಮೆರವಣಿಗೆಯಲ್ಲಿ ಅವರು ಹೈಡ್ ಪಾರ್ಕಿನ ಮೇ ದಿನದ ಉತ್ಸವ ಸಭೆಗೆ ಹೋದರು (1925). ಭಾರತದಲ್ಲಿ 1927 ರಿಂದೀಚೆಗೆ ಪ್ರತಿವರ್ಷವೂ ಕಾರ್ಮಿಕರು ಈ ದಿನವನ್ನಾಚರಿಸುತ್ತಿದ್ದಾರೆ.

 ಎರಡನೇಯ ಮಹಾಯುದ್ಧದ ನಂತರ ಆಚರಣೆ

ಎರಡನೇಯ ಮಹಾಯುದ್ಧದ ನಂತರ ಆಚರಣೆ

ಭಾರತದಲ್ಲಿ ಈ ಉತ್ಸವದಲ್ಲಿ ಭಾಗವಹಿಸುವವರು ಕಾರ್ಮಿಕ ಸಂಘಗಳು, ಸಮಾಜವಾದಿಗಳು ಮತ್ತು ಕೆಲವು ಬುದ್ಧಿ ಜೀವಿಗಳು ಮಾತ್ರ. 1927 ರಲ್ಲಿ ಮುಂಬಯಿಯಲ್ಲಿ ನಡೆದ ಉತ್ಸವದಲ್ಲಿ ಅನೇಕ ಕಾರ್ಮಿಕ ಮುಖಂಡರು ಭಾಗವಹಿಸಿದ್ದರು. ಅದೇ ವರ್ಷ ಕಲ್ಕತ್ತದಲ್ಲಿ ಬಂಗಾಳ ಪ್ರದೇಶ ಕಾರ್ಮಿಕ ಸಂಘ ಕಾಂಗ್ರೆಸ್ ಮೇ ದಿನವನ್ನಾಚರಿಸಿದಾಗ ಪೋಲಿಸರು ಅನೇಕ ನಿರ್ಬಂಧಕಾಜ್ಞೆಗಳನ್ನು ವಿಧಿಸಿದರೆಂದು ತಿಳಿದು ಬರುತ್ತದೆ. 1928 ರಿಂದ 1934 ರವರೆಗೆ ಆ ಉತ್ಸವಾಚರಣೆಯ ದಿನದಂದು ಕಾರ್ಮಿಕರ ಅನೇಕ ಮುಷ್ಕರಗಳು ನಡೆದವು. ಎರಡನೇಯ ಮಹಾಯುದ್ಧದ ನಂತರ ಆ ದಿನವನ್ನು ಹೆಚ್ಚು ವ್ಯಾಪಕವಾಗಿ, ಆಚರಿಸಲು ಪ್ರಾರಂಭವಾಯಿತು.

ಕಾರ್ಮಿಕರು, ಕಾರ್ಮಿಕ ಸಂಘಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸತೊಡಗಿದವು. 1969ರಲ್ಲಿ ಭಾರತ ರಾಷ್ಟ್ರೀಯ ಕಾರ್ಮಿಕ ಸಂಘಗಳ ಕಾಂಗ್ರೆಸ್ ಒಂದನ್ನು ಬಿಟ್ಟು ಉಳಿದೆಲ್ಲ ಕಾರ್ಮಿಕ ಸಂಘಗಳು ಒಟ್ಟಾಗಿ. ತಮ್ಮ ಹಕ್ಕುಗಳನ್ನು ಸಾಧಿಸಲು ಭಾರಿ ಮೆರವಣಿಗೆಯಲ್ಲಿ ಪಾರ್ಲಿಮೆಂಟ್ ಭವನದ ಬಳಿಗೆ ಮೆರವಣಿಗೆಯಲ್ಲಿ ಹೋಗಿ ಪ್ರದರ್ಶನ ನಡೆಸಿದವು.

 ಕಾರ್ಮಿಕ ಸಂಘಗಳ ಕಲಾಪಗಳು

ಕಾರ್ಮಿಕ ಸಂಘಗಳ ಕಲಾಪಗಳು

ಚಳುವಳಿ :ಕಾರ್ಮಿಕರಿಗೆ ತಕ್ಕ ಕೂಲಿಯನ್ನು ದೊರಕಿಸಿಕೊಡುವುದು. ಕಾರ್ಮಿಕರು ಉತ್ತಮ ರೀತಿಯಲ್ಲಿ ಕೆಲಸಮಾಡಲು ಬೇಕಾದ ಉತ್ತಮ ವಾತಾವರಣವನ್ನು ಉದ್ಯೋಗದಾತರು ಕಲ್ಪಿಸಿಕೊಡುವಂತೆ ಮಾಡುವುದು.

ಭ್ರಾತೃತ್ವ ಕಲಾಪಗಳು : ತಮ್ಮ ಸದಸ್ಯರಿಂದ ಕೂಡಿಸಿ ನಿಧಿಯನ್ನು ಕಾರ್ಮಿಕ ಸಂಘಗಳು ಕಾರ್ಮಿಕರ ಸಹಾಯಾರ್ಥ ಉಪಯೋಗಿಸುತ್ತವೆ. ಕಾರ್ಮಿಕರು ಬೇನೆ ಬಿದ್ದಾಗ ಮತ್ತು ಆಕಸ್ಮಿಕಕ್ಕೆ ಒಳಗಾದಾಗ ಧನಸಹಾಯ ನೀಡಲಾಗುತ್ತದೆ.ರಾಜಕೀಯ ಚಟುವಟಿಕೆಗಳು : ಅನೇಕ ಕಾರ್ಮಿಕ ಸಂಘಗಳು ಇಂದು ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿವೆ. ರಾಷ್ಟ್ರದ ಆಡಳಿತದ ಮೇಲೆ ಪ್ರಭಾವ ಬೀರಬೇಕೆಂದು ಸಾಧ್ಯವಾದರೆ ಅದನ್ನು ವಶಪಡಿಸಿಕೊಳ್ಳಬೇಕೆಂದು ಇವು ಬಯಸುತ್ತವೆ. ಭಾರತದಲ್ಲಿ ಕಾರ್ಮಿಕ ಸಂಘಗಳ ಇಂಥ ಕಲಾಪಗಳು ತುಂಬ ಮಹತ್ವದ್ದವು.ಪ್ರಚಾರ ಮತ್ತು ಶೈಕ್ಷಣಿಕ ಕಲಾಪಗಳು : ಸ್ವದೇಶಾಭಿಮಾನ ಹೆಚ್ಚಿಸಲು ಮತ್ತು ಅಂತರಾಷ್ಟ್ರೀಯ ದೃಷ್ಟಿ ಬೆಳೆಸಲು ಪ್ರಚಾರ ಕಾರ್ಯಕ್ರಮಗಳನ್ನು ಸಂಘಟಿಸುವುದು, ಉದ್ಯೋಗ ದಕ್ಷತೆಯನ್ನು ಹೆಚ್ಚಿಸಲು ಶಿಕ್ಷಣ ನೀಡುವುದು.
ಕಾರ್ಮಿಕರಿಗಾಗಿ ವಿಮಾ ಯೋಜನೆ : ಮುಪ್ಪು, ಕಾಯಿಲೆ, ವಿಕಲಾಂಗ ಮುಂತಾದ ಸಂದರ್ಭಗಳಲ್ಲಿ ಕಾರ್ಮಿಕರಿಗೆ ಸಹಾಯ ನೀಡಲು ಯೋಜನೆಗಳನ್ನು ಜಾರಿಗೆ ತರುವಂತೆ ಮಾಡುವುದು.ಮಹಿಳಾ ಕಾರ್ಮಿಕರ ಕಲ್ಯಾಣ ಸಾಧನೆ : ಕಾರ್ಮಿಕ ಸಂಘಗಳ ವಿವಿಧ ಮಟ್ಟಗಳಲ್ಲಿ ರಕ್ಷಣೆ ಮತ್ತು ಭದ್ರತೆ, ಸ್ತ್ರೀ ಕಾರ್ಮಿಕರ ಸಮಸ್ಯೆಗಳನ್ನು ಮತ್ತು ಅವಶ್ಯಕತೆಗಳನ್ನು ಅರಿಯಲು ಸ್ತ್ರೀ ಕಾರ್ಮಿಕರೊಂದಿಗೆ ಸಮಾಲೋಚನೆ.ಉತ್ಪಾದನಾ ಕಲಾಪಗಳು : ಸಮಾಜವಾದಿ ಸಮಾಜದಲ್ಲಿ ಉತ್ಪಾದನೆಯೊಂದೇ ಅಂತಿಮ ಗುರಿಯಲ್ಲ. ಜನರ ವಾಸ್ತವಿಕ ಮತ್ತು ಸಾಂಸ್ಕೃತಿಕ ಮಟ್ಟಗಳನ್ನು ಹೆಚ್ಚಿಸುವುದು ಅಗತ್ಯ.ಹಣಕಾಸು : ಸದಸ್ಯರ ಚಂದಾ, ಕ್ರೀಡೆಗಳನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಂಪಾದನೆ.
ಜನೋಪಯೋಗಿ ಕಲಾಪಗಳು: ಕಾರ್ಮಿಕ ಸಂಘಗಳು ಇಂದು ಸಾಮಾನ್ಯ ಜನರ ಉಪಯೋಗಕ್ಕಾಗಿ ಅನೇಕ ಉದ್ಯಮಗಳನ್ನು ಸಂಘಟಿಸುತ್ತಿವೆ.ಕಾರ್ಮಿಕ ಕಾಯಿದೆ ಕಾನೂನುಗಳು : ಇತರರ ಅಧೀನದಲ್ಲಿ ಎಂದರೆ ತಮ್ಮ ನೇಮಕವಾದ, ಉದ್ಯೋಗದಾತರ, ಧಣಿಗಳ ಅಥವಾ ಯಜಮಾನರ ಕೈಕೆಳಗೆ, ದುಡಿಯುವ ಜನರ ಕೆಲಸಕ್ಕೆ ಸಂಬಂಧಿಸಿದಂತೆ ರಚಿತವಾದ ಎಲ್ಲ ಕಾನೂನುಗಳ ಅಥವ ಕೈಗಾರಿಕಾ ನ್ಯಾಯ ಎಂದು ಕರೆಯುವುದುಂಟು. ಕಾರ್ಮಿಕ ಕಾನೂನುಗಳು ನಿಷ್ಪಕ್ಷದೃಷ್ಟಿ, ನೀತಿಪಾಲನೆ, ಅಂತರಾಷ್ಟ್ರೀಯ ಏಕರೂಪತೆ, ಜನತೆಯ ಆರ್ಥಿಕ, ಆಡಳಿತ ಇವು ಕಾರ್ಮಿಕ ಕಾನೂನುಗಳಿಗೆ ಆಧಾರಭೂತವಾದ ತತ್ವಗಳು.

1881ರಲ್ಲಿ ಜಾರಿಗೆ ಬಂದ ಭಾರತೀಯ ಕಾರ್ಖಾನೆಗಳ ಕಾಯಿದೆ ಅತ್ಯಂತ ಪ್ರಾಚೀನವಾದದ್ದು. 1948ರಲ್ಲಿ ಜಾರಿಗೆ ಬಂದ ಕಾರ್ಖಾನೆಗಳ ಕಾಯಿದೆ ಅತ್ಯಂತ ವ್ಯಾಪಕವಾಗಿದೆ. ಕಾರ್ಖಾನೆಗಳಲ್ಲಿ ಕೆಲಸ ಮಾಡುವವರ ಆರೋಗ್ಯ, ಸುರಕ್ಷಣೆ, ಕಲ್ಯಾಣ, ವಯಸ್ಕರ ಕೆಲಸದ ಅವಧಿ, ಕಿರಿಯರ ನೇಮಕ ಕೂಲಿಸಹಿತ ರಜಾ ನೀಡಿಕೆ ಮುಂತಾದ ನಾನಾ ವಿಚಾರಗಳನ್ನು ಕುರಿತು ನಿಬಂಧನೆಗಳಿವೆ.

 ಕಾಯಿದೆಗಳು ಏನು ಹೇಳುತ್ತವೆ?

ಕಾಯಿದೆಗಳು ಏನು ಹೇಳುತ್ತವೆ?

ಕಾರ್ಮಿಕರ ಪರಿಹಾರ ಕಾಯಿದೆ : 1923 ರಲ್ಲಿ ಕಾರ್ಮಿಕನಿಗೆ ತೊಂದರೆಯಾಗದಂತೆ ನೆಮ್ಮದಿ ಭಂಗವಾಗದಂತೆ, ಅವನ ಆರೋಗ್ಯ ಕೆಡದಂತೆ ನೋಡಿಕೊಳ್ಳುವುದು ಕಾರ್ಖಾನೆಯ ಕಾಯಿದೆ ಮತ್ತು ಅಂಥ ಇತರ ಕಾಯಿದೆಗಳ ಉದ್ದೇಶ.

ಕೂಲಿ ಪಾವತಿ ಕಾಯಿದೆ : 1936 ರಲ್ಲಿ ಕಾರ್ಖಾನೆಗಳ ಅಥವಾ ರೈಲ್ವೆಗಳ ಉದ್ಯೋಗಿಗಳಿಗೆ ಕೂಲಿ ಪಾವತಿ ಮಾಡಬೇಕಾದ ಸಮಯ ಮತ್ತು ವಿಧಾನಗಳನ್ನು ನಿಬಂಧಿಸುವುದು ಇದರ ಉದ್ದೇಶ.

ಕನಿಷ್ಠ ಕೂಲಿ ಕಾಯಿದೆ : 1948 ರಲ್ಲಿ ವಿವಿಧ ಉದ್ಯೋಗಗಳಲ್ಲಿ ಪಾವತಿ ಮಾಡಬೇಕಾದ ಕನಿಷ್ಠ ಕೂಲಿಯನ್ನು ನಿಗದಿ ಮಾಡಲು ಈ ಕಾಯಿದೆಯಿಂದ ರಾಜ್ಯ ಸರ್ಕಾರಗಳಿಗೆ ಅಧಿಕಾರ ದತ್ತವಾಗಿದೆ.ಉದ್ಯೋಗಿಗಳ ರಾಜ್ಯ ವಿಮಾ ಕಾಯಿದೆ : 1948 ರಲ್ಲಿ ಉದ್ಯೋಗಿಗಳ ಕಾಯಿಲೆ, ಪ್ರಸ್ತೂತಿ, ಅಂಗಹಾನಿ, ಅವಲಂಭಿಗಳು, ವೈದ್ಯಕೀಯ ಪರೀಕ್ಷಣ ಮುಂತಾದವಕ್ಕಾಗಿ ಸೌಲಭ್ಯ ನೀಡುವುದು.ಉದ್ಯೋಗಿಗಳ ಭವಿಷ್ಯ ನಿಧಿಗಳ ಕಾಯಿದೆ : 1947ರಲ್ಲಿ ನೇಮಕವಾದವರಿಗೆ ಉದ್ಯೋಗಿಗಳಿಗೂ ನಡುವೆ ವಿವಾದ ಉದ್ಭವಿಸುವಂತೆ ತಡೆಯುವುದು. ಒಂದು ವೇಳೆ ಉದ್ಭವಿಸಿದರೆ ಇದನ್ನು ಇತ್ಯರ್ಥಪಡಿಸುವುದು. ಈ ಕಾಯಿದೆಯ ಉದ್ದೇಶ.
 ಕಾರ್ಮಿಕ ಸಂಘಗಳ ಕೆಲವು ನ್ಯೂನತೆಗಳು

ಕಾರ್ಮಿಕ ಸಂಘಗಳ ಕೆಲವು ನ್ಯೂನತೆಗಳು

1. ಹೊರಗಿನವರ ಪ್ರಭಾವ
2. ರಾಜಕೀಯ ಸಂಘಟನೆ
3.ಕಾರ್ಮಿಕ ಸಂಘಗಳಲ್ಲಿ ಸಂಖ್ಯಾ ಬಾಹುಳ್ಳ ಮತ್ತು ಸ್ಪರ್ಧೆ
4.ಕಲ್ಯಾಣ ಕಾರ್ಯಕ್ರಮಗಳ ಕೊರತೆ
5. ಸಾಮೂಹಿಕ ಚೌಕನಿಯ ದೌರ್ಬಲ್ಯ
6.ಹಣದ ಅಭಾವ
7.ಸದಸ್ಯತ್ವದ ಅವ್ಯವಸ್ಥೆ
8. ಸಡಿಲವಾದ ಸಂಘಟನೆ
9. ಔದ್ಯೋಗಿಕ ಸಂಬಂಧಗಳ ವಿಷಯದಲ್ಲಿ ಸರ್ಕಾರದ ಮೇಲೆ ಹೆಚ್ಚಾಗಿ ಅವಲಂಬನೆ

 ಲಾಲ್ ಬಹದ್ದೂರ್ ಶಾಸ್ತ್ರೀ

ಲಾಲ್ ಬಹದ್ದೂರ್ ಶಾಸ್ತ್ರೀ

ಈ ತೊಡಕುಗಳಿಗೆ ಮುಖ್ಯ ಕಾರಣಗಳೆಂದರೆ ಕಾರ್ಮಿಕರ ಅಜ್ಞಾನ ಮತ್ತು ದಾರಿದ್ರ್ಯ, ಭಾರತದ ಕಾರ್ಮಿಕ ಸಂಘಗಳ ಅಧಿಕ ಸಂಖ್ಯಾತರು ಅನಕ್ಷರಸ್ಥರು, ಬಡವರು ಜೀವವನ್ನು ಮುಡಿಪಾಗಿಟ್ಟು ರಾಷ್ಟ್ರದ ಗಡಿ ರಕ್ಷಣೆ ಮಾಡುವ ಯೋದನ ಮತ್ತು ನಮ್ಮ ದೇಶದ ಬೆನ್ನೆಲುಬಾಗಿ ಅನ್ನದಾತನ ಗೌರವ ಪ್ರತಿಷ್ಠೆಗಳನ್ನು "ಜೈ ಜವಾನ, ಜೈ ಕಿಸನ್" ಘೋಷಣೆಯ ಮೂಲಕ ಅವರಲ್ಲಿ ಆತ್ಮ ಗೌರವವನ್ನು ಹೆಚ್ಚಿಸಿದ ಮಹಾನ್ ಚೇತನ್ ಲಾಲ್ ಬಹಾದ್ದೂರ್ ಶಾಸ್ತ್ರೀ. ಆದರೆ ಈಗ ನಮ್ಮ ದೇಶ ಔದ್ಯಮೀಕರಣ ಆಗಿದ್ದರಿಂದ ಕಾರ್ಮಿಕರಲ್ಲಿ ಗೌರವ ಪ್ರತಿಷ್ಠೆಗಳನ್ನು ಹಾಗೂ ಆತ್ಮ ಗೌರವವನ್ನು ಹೆಚ್ಚಿಸುವುದು ನಮ್ಮ ಆದ್ಯ ಕರ್ತವ್ಯ ಆದ್ದರಿಂದ "ಜೈ ಜವಾನ, ಜೈ ಕಿಸಾನ್, ಜೈ ಮಜದೂರ" ಎಂದರೆ ತಪ್ಪಿಲ್ಲ.

English summary
Robert Owen suggested that the celebration be held on May 1, 1889. Socialist International First Conference, which was convened in Paris in 1889,was determined to celebrate the National Labor Day on May 1st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X