ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬ್ಬಾ, ವೆಜ್ - ನಾನ್ ವೆಜ್, ರಮ್ಜಾನ್ ಗೆ ಎಷ್ಟೆಲ್ಲ ವಿಶೇಷ ಖಾದ್ಯ!

|
Google Oneindia Kannada News

ಮಂಗಳೂರು, ಜೂನ್ 14: ಕರಾವಳಿಗೆ ಮಳೆಯ ಮಾರುತಗಳು ಪ್ರವೇಶಿಸುತ್ತಿದ್ದಂತೆ ಮುಸ್ಲಿಮರಲ್ಲಿ ರಮ್ಜಾನ್ ಆಚರಣೆಯ ಸಂಭ್ರಮ. ಕರಾವಳಿಯಲ್ಲಿ ಮುಂಗಾರಿನ ಅಬ್ಬರ ಹೆಚ್ಚುತ್ತಿದ್ದಂತೆ ಮುಸ್ಲಿಮರ ರಮ್ಜಾನ್ ತಿಂಗಳ ಕಠಿಣ ವ್ರತ ಆರಂಭವಾಗುತ್ತದೆ. ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ರಮ್ಜಾನ್ ಸಡಗರವೇ ಬೇರೆ.

ಮುಸ್ಲಿಮರ ಪವಿತ್ರ ಮಾಸ ರಂಜಾನ್. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಕಟ್ಟುನಿಟ್ಟಿನ ಉಪವಾಸ ಮಾಡುತ್ತಾರೆ. ಜತೆಗೆ ನಮಾಜ್, ಆ ನಂತರ ವಿಶೇಷ ತಿನಿಸುಗಳ ಸೇವನೆ- ಇದು ಕರಾವಳಿಯ ರಮ್ಜಾನ್ ತಿಂಗಳ ಆಚರಣೆಯ ವಿಶೇಷ. ರಮ್ಜಾನ್ ದಿನಗಣನೆ ಆರಂಭವಾಗುತ್ತಿದ್ದಂತೆ ಕರಾವಳಿಯಲ್ಲಿ ಇಫ್ತಾರ್ ಕೂಟಗಳ ಸಡಗರ ಕಾಣಲು ಆರಂಭವಾಗುತ್ತದೆ.

ನೋಡಬನ್ನಿ ಭಟ್ಕಳದ ರಂಜಾನ್ ಪೇಟೆಯ ಸಡಗರವನೋಡಬನ್ನಿ ಭಟ್ಕಳದ ರಂಜಾನ್ ಪೇಟೆಯ ಸಡಗರವ

ಈ ಹಿನ್ನೆಲೆಯಲ್ಲಿ ಮಂಗಳೂರು ಸೇರಿದಂತೆ ಕರಾವಳಿಯಾದ್ಯಂತ ವಿಶೇಷ ಇಫ್ತಾರ್ ತಿನಿಸುಗಳ ಘಮಘಮ ಕೈ ಬೀಸಿ ಕರೆಯುತ್ತವೆ. ಈ ವಿಶೇಷ ಇಫ್ತಾರ್ ತಿನಿಸುಗಳು ಎಲ್ಲೆಂದರಲ್ಲಿ ದೊರೆಯುತ್ತವೆ. ಸಾಂಪ್ರದಾಯಿಕ ತಿನಿಸುಗಳು ಜತೆಗೆ ಮುಂಬೈ, ಉತ್ತರ ಭಾರತ, ಹೈದ್ರಾಬಾದ್, ಬಂಗಾಳಿ, ಅರಬ್ ದೇಶದ ಕಲ ವಿಶೇಷ ತಿಂಡಿಗಳೂ ಸೇರ್ಪಡೆಗೊಂಡು ಜನರ ಹೊಟ್ಟೆ ತಣಿಸುತ್ತಿವೆ.

ಪ್ರೀತಿ- ಬಾಂಧವ್ಯದ ರಮ್ಜಾನ್

ಪ್ರೀತಿ- ಬಾಂಧವ್ಯದ ರಮ್ಜಾನ್

ರಮ್ಜಾನ್ ಮಾಸ ಮುಸ್ಲಿಮರಿಗೆ ಅತ್ಯಂತ ಪವಿತ್ರ. ಸ್ನೇಹ, ಸೌಹಾರ್ದ, ಪ್ರೀತಿ, ಬಾಂಧವ್ಯ ವ್ಯಕ್ತಪಡಿಸಲು ಅತ್ಯಂತ ಸೂಕ್ತ ಸಮಯ. ದಿನವೆಲ್ಲ ಕಠಿಣ ಉಪವಾಸ ವ್ರತ ಆಚರಿಸಿ, ಆ ನಂತರ ಸಾಯಂಕಾಲ ಅತ್ಯದ್ಭುತ ತಿನಿಸುಗಳೊಂದಿಗೆ ಉಪವಾಸವನ್ನು ಅಂತ್ಯಗೊಳಿಸುವುದು ಈ ತಿಂಗಳ ವಿಶೇಷ. ರಮ್ಜಾನ್ ತಿಂಗಳಲ್ಲಿ ಕರಾವಳಿಯ ಅದರಲ್ಲೂ ಕೇರಳ ಮೂಲದ ಮುಸ್ಲಿಮರ ಪ್ರತಿ ಮನೆಗಳಲ್ಲಿ ತಯಾರಿಸುವ ರುಚಿಕರ ತಿಂಡಿ- ತಿನಿಸುಗಳು ಒಂದೆಡೆಯಾದರೆ, ಇನ್ನೊಂದೆಡೆ ಮಂಗಳೂರಿನ ಪ್ರತಿಷ್ಠಿತ ಮಾಲ್, ಹೋಟೆಲ್, ಬಂದರು ಪ್ರದೇಶದ ರಸ್ತೆ ಬದಿಗಳಲ್ಲಿ ಹೊಸ ಹೊಸ ರುಚಿಕರ ತಿಂಡಿಗಳ ಪರಿಚಯಿಸಲಾಗುತ್ತಿದೆ.

ಸಂಜೆ 5 ರಿಂದ ರಾತ್ರಿ 10ರ ತನಕ ವಿವಿಧ ಖಾದ್ಯಗಳ ಘಮ

ಸಂಜೆ 5 ರಿಂದ ರಾತ್ರಿ 10ರ ತನಕ ವಿವಿಧ ಖಾದ್ಯಗಳ ಘಮ

ಮಂಗಳೂರು ನಗರದ ಫೋರಂ, ಸಿಟಿ ಸೆಂಟರ್ ಮಾಲ್ ಗಳಲ್ಲಿ ರಮ್ಜಾನ್ ಫುಡ್ ಸ್ಟ್ರೀಟ್ ಹೆಸರಿನಲ್ಲಿ ಮಳಿಗೆಗಳನ್ನು ತೆರೆಯಲಾಗಿದೆ. ಸಂಜೆ ಆಗುತ್ತಿದ್ದಂತೆ ಜನರು ಈ ಮಳಿಗೆಗಳತ್ತ ಬಂದು ರಮ್ಜಾನ್ ಸಂದರ್ಭದಲ್ಲಿ ಮಾತ್ರ ಲಭಿಸುವ ವಿವಿಧ ಭಕ್ಷ್ಯಗಳನ್ನು ಸವಿಯುತ್ತಾರೆ.

ಫೋರಂ ಮಾಲ್ ನಲ್ಲಿ ಟೌನ್ ಟೇಬಲ್ ರೆಸ್ಟೋರೆಂಟ್ , ಸುಲ್ತಾನ್ ಆಫ್ ಸ್ಪೈಸ್, ಫ್ಲೇವರ್ಸ್ ಆಫ್ ಅರೇಬಿಯಾ, ಚಿಕನ್ ಲಾಗುನ್, ಬಿರಿಯಾನಿ ಟೌನ್, ಬಿರಿಯಾನಿ ಟ್ರೀ ಮೊದಲಾದ ಮಳಿಗೆಗಳು ಸಂಜೆ 5 ರಿಂದ ರಾತ್ರಿ 10ರ ತನಕ ವಿವಿಧ ಖಾದ್ಯಗಳಿಂದ ಘಮ ಘಮಿಸಿ, ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ.

ದೇಶದೆಲ್ಲೆಡೆ ತೆರೆದುಕೊಂಡ ಇಫ್ತಾರ್ ಕೂಟದ ಸಂಭ್ರಮದೇಶದೆಲ್ಲೆಡೆ ತೆರೆದುಕೊಂಡ ಇಫ್ತಾರ್ ಕೂಟದ ಸಂಭ್ರಮ

ಹಲೀಮ್, ತಂಗ್ಡಿ ಕಬಾಬ್ ದಂಥ ಅರೇಬಿಯನ್ ಖಾದ್ಯ

ಹಲೀಮ್, ತಂಗ್ಡಿ ಕಬಾಬ್ ದಂಥ ಅರೇಬಿಯನ್ ಖಾದ್ಯ

ಸಿಟಿ ಸೆಂಟರ್ ಮಾಲ್ ನಲ್ಲಿಕಳೆದ ಬಾರಿಯಿಂದ ಇಫ್ತಾರ್ ಫುಡ್ ಸ್ಟಾಲ್ ಆರಂಭಿಸಲಾಗಿದೆ. ಹಲೀಮ್, ತಂಗ್ಡಿ ಕಬಾಬ್, ಐಶ್ ಸರಾಯ, ಬ್ರಾಸಾ ಮೊದಲಾದ ಅರೇಬಿಯನ್ ಖಾದ್ಯಗಳು, ಕೇರಳ, ಭಟ್ಕಳ, ಅರಬ್, ಇರಾನ್ ಸೇರಿದಂತೆ ಮಂಗಳೂರು ಮೂಲದ 40ಕ್ಕೂ ಅಧಿಕ ಭಕ್ಷ್ಯಗಳು ಇಲ್ಲಿ ಲಭ್ಯವಿವೆ. ಸಂಜೆ 5 ರಿಂದ ರಾತ್ರಿ 9 ಗಂಟೆ ತನಕ ಇಲ್ಲಿ ಜನಜಾತ್ರಯೇ ಸೇರುತ್ತದೆ. ಅದೇ ರೀತಿ ಹಳೆ ಬಂದರು ಪ್ರದೇಶದಲ್ಲಿ ಕೇರಳದ ಸಾಂಪ್ರದಾಯಿಕ ಖಾದ್ಯಗಳಿಗೆ ಜನರು ಮುಗಿಬೀಳುತ್ತಾರೆ.

ಖರ್ಜೂರ- ಹಣ್ಣುಗಳಿಗೂ ಭರ್ಜರಿ ಬೇಡಿಕೆ

ಖರ್ಜೂರ- ಹಣ್ಣುಗಳಿಗೂ ಭರ್ಜರಿ ಬೇಡಿಕೆ

ರಮ್ಜಾನ್ ತಿಂಗಳಲ್ಲಿ ಖರ್ಜೂರಕ್ಕೂ ಹೆಚ್ಚಿನ ಬೇಡಿಕೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನಾನಾ ಬಗೆಯ ಖರ್ಜೂರಗಳ ದೊಡ್ಡ ವ್ಯಾಪಾರವೇ ನಡೆಯುತ್ತದೆ. ಮಾಲ್ ಗಳು ಸೇರಿದಂತೆ ಮಂಗಳೂರಿನ ಕೇಂದ್ರ ಮಾರುಕಟ್ಟೆಯಲ್ಲಿ ಖರ್ಜೂರ ವ್ಯಾಪಾರ ಜೋರಾಗಿ ನಡೆಯುತ್ತದೆ. ಅಲ್ಲದೇ ರಮ್ಜಾನ್ ಮಾಸದಲ್ಲಿ ಹಣ್ಣುಗಳ ಸೇವನೆಗೂ ಹೆಚ್ಚು ಪ್ರಾಮುಖ್ಯ ನೀಡುವುದರಿಂದ ಮಂಗಳೂರು ನಗರದ ಕೇಂದ್ರ ಮಾರುಕಟ್ಟೆಯಲ್ಲಿ ಹಣ್ಣುಗಳ ವ್ಯಾಪಾರವೂ ಜೋರು.

English summary
Ramadan month food special in Mangaluru and coastal area of Karnataka. Here is the special article about Ramadan food preparation and rituals of Muslims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X