ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ಷಾ ಬಂಧನವೆಂದರೆ ಸೋದರತೆಯ ಮಹಾ ಮೆರವಣಿಗೆ!

By Nayana
|
Google Oneindia Kannada News

ಅಣ್ಣ-ತಂಗಿಯರ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿ 'ಅಣ್ಣ ತಂಗಿಯ ಅನುಬಂಧ ಇದು ಜನುಮ ಜನುಮಗಳ ಅನುಬಂಧ' ಎಂದು ಸೋದರಿಯರು ತಮ್ಮ ಸೋದರರನ್ನು ಬಾಂಧವ್ಯದ ಮೂಲಕ ಕಟ್ಟಿ ಹಾಕುವ ಸುದಿನ ಸಮೀಪಿಸುತ್ತಿದೆ.

ಆಗಸ್ಟ್ 26ರಂದು ರಕ್ಷಾ ಬಂಧನವನ್ನು ಆಚರಿಸಲಾಗುತ್ತಿದೆ. ತನ್ನ ಸೋದರನ ಶ್ರೇಯಸ್ಸು, ನೆಮ್ಮದಿಯನ್ನು ಬಯಸಿ ಅವನಿಗೆ ಒಳ್ಳೆಯ ಭವಿಷ್ಯ ಕರುಣಿಸಲಿ, ಆತನ ಬಾಳು ಸದಾ ಶಾಂತಿ, ನೆಮ್ಮದಿಯಿಂದ ಕೂಡಿರಲಿ ಎಂದು ಹರಸುತ್ತಾ ಸೋದರಿ ರಾಖಿ ಕಟ್ಟುವ ಮೂಲಕ ಅಭಯವನ್ನು ಪಡೆಯುವ ಈ ಆಚರಣೆಗೆ ಭಾರತೀಯ ಸಂಪ್ರದಾಯದಲ್ಲಿ ತನ್ನದೇ ಆದ ಮಹತ್ವವಿದೆ.

ಭ್ರಾತೃತ್ವದ ದ್ಯೋತಕ ರಾಖಿ ಹಬ್ಬ: ಪುರಾಣ, ಐತಿಹಾಸಿಕ ಮಹತ್ವಭ್ರಾತೃತ್ವದ ದ್ಯೋತಕ ರಾಖಿ ಹಬ್ಬ: ಪುರಾಣ, ಐತಿಹಾಸಿಕ ಮಹತ್ವ

ಅಣ್ಣ ತಂಗಿಯರ ನಡುವೆ ಕಟ್ಟುವ ಈ ರಾಖಿ ಪ್ರೀತಿಯ ದ್ಯೋತಕವಾಗಿದೆ. ಕೇವಲ ಒಡ ಹುಟ್ಟಿದವರೊಡನೆ ಮಾತ್ರವಲ್ಲದೇ ಎಲ್ಲಾ ಸಹೋದರ ಸಹೋದರಿಯರು ಈ ಹಬ್ಬವನ್ನು ಆಚರಿಸುತ್ತಾರೆ.

ಈ ಮೂಲಕ ಸಹೋದರತ್ವದ ಸಂಬಂಧವನ್ನು ಗಟ್ಟಿಗೊಳಿಸುತ್ತಾರೆ. ರಾಖಿ ಪೌರ್ಣಮಿಯಂದು ಸೋದರಿಯರು ರಕ್ಷೆಯನ್ನು ಸೋದರನ ಕೈಗೆ ಕಟ್ಟುವ ಮೂಲಕ ಅವರ ಆಶೀರ್ವಾದವನ್ನು ಪಡೆಯುತ್ತಾರೆ.

ರಾಖಿ ಕಟ್ಟಿದಾಕ್ಷಣ ಸೋದರಿಗೆ ಏನನ್ನಾದರೂ ಕೊಡಬೇಕು ಎನ್ನುವ ಕಟ್ಟುಪಾಡುಗಳೇನು ಇಲ್ಲ, ಆದರೂ ಸೋದರಿಗೆ ಪ್ರೀತಿಯಿಂದ ಏನನ್ನಾದರೂ ಕೊಡಲೇಬೇಕೆಂಬ ಹಂಬಲದೊಂದಿಗೆ ಉಡುಗೊರೆ ನೋಡುತ್ತಾರೆ.

ರಕ್ಷಾ ಬಂಧನ: ಇದು ಮಧುರವಾದ ಭಾವಾನುಬಂಧರಕ್ಷಾ ಬಂಧನ: ಇದು ಮಧುರವಾದ ಭಾವಾನುಬಂಧ

ಹೀಗೆ ಅಣ್ಣಂದಿರಲ್ಲಿ ವಿಶೇಷ ಪ್ರೀತಿ, ಕಾಳಜಿ, ನಂಬಿಕೆಯನ್ನು ಮೂಡಿಸುತ್ತಾರೆ. ಸಾಮಾನ್ಯ ನೂಲಿನ ಮೂಲಕ ಸಂಬಂಧಗಳ ನಡುವೆ ಒಳ್ಳಯ ಭಾನೆಯನ್ನು ಹುಟ್ಟಿಸುತ್ತಾರೆ. ಅಣ್ಣನಿಂದಲೇ ತಂಗಿಯ ರಕ್ಷಣೆ ಎಂಬ ಭಾವನೆ ಅಣ್ಣ ತಂಗಿಯರ ನಡುವೆ ಗಟ್ಟಿಯಾಗುತ್ತದೆ.

ಸಹೋದರತ್ವದ ಭಾವನೆಯನ್ನು ಬೆಸೆಯುವ ರಾಖಿ ಹಬ್ಬವು ಪ್ರತೀ ವರ್ಷ ಅದರ ಮಹತ್ವವನ್ನು ಹೆಚ್ಚಿಸಿಕೊಳ್ಳುತ್ತಲೇ ಇರುವುದು ಸನಾತನ ಧರ್ಮಕ್ಕೆ ಹೆಮ್ಮೆಯ ಸಂಗತಿ. ಇವತ್ತಿನ ದಿನಗಳಲ್ಲಿ ರಾಖಿ ಹಬ್ಬವು ಆಚರಿಸುವ ವಿಧಿ ವಿಧಾನಗಳನ್ನು ಕಳೆದುಕೊಂಡಿದೆ.

ಹೊಸ ಹೊಸ ವಿನ್ಯಾಸದ ಮಾಡರ್ನ್ ರಾಖಿ ಮಾರುಕಟ್ಟೆಗೆ ಕಾಲಿಟ್ಟಿದೆ. ಆಧುನಿಕ ರಾಖಿಗಳತ್ತ ಆಕರ್ಷಿತರಾಗದೇ ಸಂಪ್ರಾದಾಯಿಕ ಶೈಲಿಯ ರಾಖಿಯನ್ನು ಹೆಚ್ಚು ಬಳಸೋಣ. ರಕ್ಷೆ ಎಲ್ಲರಿಗೂ ಶುಭವನ್ನು ತರಲಿ...

 ವಿವಿಧ ಬಗೆಯ ರಾಖಿಗಳು

ವಿವಿಧ ಬಗೆಯ ರಾಖಿಗಳು

ಕಾಲಕ್ಕೆ ತಕ್ಕಂತೆ ರಾಖಿಯ ವಿನ್ಯಾಸಗಳೂ ಬದಲಾಗುತ್ತಿರುತ್ತದೆ. ರೇಷ್ಮೆ ದಾರದಲ್ಲಿ ತಯಾರಿಸಿದ ರಾಖಿಗಳಿ ಸಿಂಪಲ್‌ ಆಗಿರುತ್ತದೆ. ಕೈಗೆಟುಕುವ ದರದಲ್ಲಿ ಲಭ್ಯವಿದೆ. ಜತೆಗೆ ಮಾಡರ್ನ್ ಮತ್ತು ಸಾಂಪ್ರದಾಯಿಕ ಕತೆಗಳ ಮಿಶ್ರಣವೆಂಬಂತೆ ಬ್ರೇಸ್ಲೈಟ್ ರಾಖಿಗಳು ಆಗಮಿಸಿವೆ.ಕ್ರಿಸ್ಟಲ್ ಬ್ರೇಸ್ಲೈಟ್ ರಾಖಿ, ಹಿತ್ತಾಳೆ, ಬೆಳ್ಳಿ, ಚಿನ್ನದ ಲೇಪನವುಳ್ಳ ಹಲವು ಬ್ರೇಸ್‌ಲೈಟ್ ಗಳು ರಾಯಲ್ ಲುಕ್ ನೀಡುತ್ತಿವೆ.

ಇದಲ್ಲದೆ ಸ್ಪಂಜಿನಲ್ಲಿ ತಯಾರಾದ ರಾಖೀ, ಕಸೂತಿ, ಮಣಿ ಜೋಡಣೆ,ಥರ್ಮಾಕೋಲ್ ನಿಂದ ತಯಾರಾದ ರಾಖಿಗಳು, ಹೀಗೆ ಬಗೆ ಬಗೆಯ ರಾಖಿಗಳು ಆಕರ್ಷಿಣೀಯವಾಗಿವೆ. ಪಶ್ಚಮಿ ಬಂಗಾಳ ಮತ್ತಿತರೆ ಕಡೆಗಳಿಂದ ನಗರಕ್ಕೆ ಆಗಮಿಸಿದೆ. ಎರಡು ರೂ ರಾಖಿಯಿಂದ ಹಿಡಿದು ಲಕ್ಷಾಂತರ ರೂ ಬೆಳೆ ಬಾಳುವ ರಾಖಿಯೂ ಮಾರುಕಟ್ಟೆಯಲ್ಲಿ ಲಭ್ಯವಿದೆ.

 ಮಾರುಕಟ್ಟೆಯಲ್ಲಿವೆ ವಾಸ್ತು ರಾಖಿಗಳು

ಮಾರುಕಟ್ಟೆಯಲ್ಲಿವೆ ವಾಸ್ತು ರಾಖಿಗಳು

ಚೈನೀಸ್ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೆಚ್ಚು ಪ್ರಾಮೂಖ್ಯತೆ ಉಳ್ಳ ಶುಯಿ ರಾಖಿಯೂ ಬಂದಿದೆ. ವಿಶೇಷವಾಗಿ ಪೆಂಗ್ ಶುಯಿ, ಚಿಹ್ನೆಯುಳ್ಳ ರಾಖಿಗಳು ಅಣ್ಣ-ತಮ್ಮಂದಿನ್ನು ಬೆಸೆಯಲು ನೆರವಾಗುತ್ತದೆ.ಲಾಫಿಂಗ್ ಬುದ್ಧ ರಾಖಿಗಳು, ಗಣೇಶ, ಓಂ, ಸ್ವಸ್ತಿಕ್ ರಾಖಿಗಳು ಪ್ರಮುಖ ಆಕರ್ಷಣೆಯಾಗಿದೆ.

 ರಾಖಿಯ ಮಹತ್ವವೇನು?

ರಾಖಿಯ ಮಹತ್ವವೇನು?

ಶ್ರಾವಣ ಮಾಸದ ಹುಣ್ಣಿಮೆಯ ಉಪಾಕರ್ಮದಂದೇ ರಕ್ಷಾ ಬಂಧನ, ಕೂಡ ಆಚರಿಸಲಾಗುವುದು, ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತದಲ್ಲಿದ್ದ ರಾಖಿ ಹಬ್ಬ ಇತ್ತೀಚಿನ ವರ್ಷಗಳಲ್ಲಿ ದೇಶಾದ್ಯಂತ ಆಚರಿಸುವಂತಾಗಿದೆ. ಪ್ರತಿಯೊಬ್ಬ ಸೋದರಿಯೂ ಸಮಾಜದ ದುಷ್ಟ ಶಕ್ತಿಗಳಿಂದ ತನ್ನನ್ನು ರಕ್ಷಿಸಲೆಂದೇ ಸೋದರನ ಮುಂಗೈಗೆ ರಾಖಿ ಕಟ್ಟುತ್ತಾಳೆ ದಿನ ಬೆಳಗಿನ ಜಾವ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ಸೋದರಿಯರು ಸೋದರರ ಹಣೆಗೆ ತಿಲಕವಿಟ್ಟು, ರಾಖಿ ಕಟ್ಟಿ ಆರತಿ ಮಾಡಿ, ಆಶೀರ್ವಾದವನ್ನು ಪಡೆಯುತ್ತಾರೆ.

 ರಕ್ಷಾ ಬಂಧನದ ಪೌರಾಣಿಕ ಹಿನ್ನೆಲೆ

ರಕ್ಷಾ ಬಂಧನದ ಪೌರಾಣಿಕ ಹಿನ್ನೆಲೆ

ಹಿಂದುಗಳು ಆಚರಿಸುವ ಪ್ರತಿಯೊಂದು ಹಬ್ಬದ ಹಿಂದೆ ಕಥೆಗಳಿರುತ್ತದೆ. ಹಾಗೇ ಪುರಾತನ ರಾಖಿ ಹಬ್ಬದ ಹಿಂದೆಯೂ ಒಂದು ಕಥಯಿದೆ. ಹಿಂದೆ ಬಲಿ ರಾಜನು ವಿಷ್ಣುವನ್ನು ತನ್ನ ಅರಮನೆಗೆ ಕರೆಯುತ್ತಾನೆ. ಬಲಿ ಚಕ್ರವರ್ತಿಯ ಅರಮನೆಯಲ್ಲಿ ಉಳಿಯುವಂತೆ ವಿಷ್ಣುವಿನಲ್ಲಿ ಕೇಳಿಕೊಂಡಾಗ, ವಿಷ್ಣು ಅದಕ್ಕೆ ಒಪ್ಪಿಕೊಳ್ಳುತ್ತಾನೆ. ದರೆ ವಿಷ್ಣುವಿನ ಮಡದಿ ಲಕ್ಷ್ಮೀ ದೇವಿಗೆ ಇದು ಇಷ್ಟವಾಗುವುದಿಲ್ಲ.

ವಿಷ್ಣುವನ್ನು ಹಿಂಬಾಲಿಸುತ್ತಾ ಹೊರಟ ಲಕ್ಷ್ಮೀ ಬಲಿ ಚಕ್ರವರ್ತಿಯ ಮುಂದೆ ಬಂದು ನಿಲ್ಲುತ್ತಾಳೆ. ಬಲಿ ಚಕ್ರವರ್ತಿಯನ್ನು ಭಕ್ತಿಯಿಂದ ಕಂಡು ನೂಲಿನ ದಾರವನ್ನು ಬಲಿಯ ಕೈಗೆ ಕಟ್ಟಿ ಅಣ್ಣನೆಂದು ಕರೆಯುತ್ತಾಳೆ. ಇದೇ ಖುಷಿಗೆ ಬಲಿ ಚಕ್ರವರ್ತಿಯು ಲಕ್ಷ್ಮೀಯಲ್ಲಿ ಏನೂ ಬೇಕಾದರೂ ಕೇಳು ಎಂದು ಹೇಳುತ್ತಾನೆ. ಆಗ ಲಕ್ಷ್ಮೀ, ವಿಷ್ಣು ವೈಕುಂಠಕ್ಕೆ ಮರಳಬೇಕೆಂದು ಕೇಳಿಕೊಳ್ಳುತ್ತಾಳೆ.
ಅದಕ್ಕೊಪ್ಪಿದ ಬಲಿ ವಿಷ್ಣುವನ್ನು ವೈಕುಂಠಕ್ಕೆ ಕಳುಹಿಸುತ್ತಾನೆ. ಅಂದಿನಿಂದ ರಾಖಿ ಹಬ್ಬದ ಆರಂಭವಾಯಿತು ಎನ್ನುವ ನಂಬಿಕೆ ಸನಾತನ ಧರ್ಮದಲ್ಲಿದೆ.

 ರಕ್ಷಾ ಬಂಧನ ರಕ್ಷಣೆಯ ಗಂಟು

ರಕ್ಷಾ ಬಂಧನ ರಕ್ಷಣೆಯ ಗಂಟು

ರಕ್ಷಾ ಬಂಧನಕ್ಕೆ 'ರಕ್ಷಣೆಯ ಗಂಟು' ಎಂಬ ಅರ್ಥವು ಇದೆ. ಶಾಸ್ತ್ರಬದ್ಧವಾಗಿ ಆಚರಿಸುವ ಈ ರಾಖಿಯು ಯಾವುದೇ ರೀತಿಯ ಸುಖದತ್ತ, ಭೋಗದ ಜೀವನದತ್ತ ಆಕರ್ಷಿತನಾಗದಂತೆ ಸೂಚಿಸುತ್ತದೆ, ಮಾತ್ರವಲ್ಲದೇ, ತಂಗಿಯಂದಿರು ರಕ್ಷೆಯನ್ನು ಕಟ್ಟಿ ಅಣ್ಣಂದಿರಿಂದ ರಕ್ಷಣೆಯನ್ನು ಬಯಸುತ್ತಾರೆ. ಕೆಟ್ಟ ಶಕ್ತಿಗಳಿಂದ ಕಾಪಾಡಿಕೊಳ್ಳಲು ಹೆಣ್ಣು ಮಕ್ಕಳು ರಕ್ಷೆಯನ್ನು ತನ್ನ ಸೋದರನ ಕೈಗೆ ಕಟ್ಟುತ್ತಾರೆ.

English summary
Tradition and culture of Hindu religion was always based on humanity and values. Raksha Bandhan confirms eternal love and commitment between brother and sister
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X