ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮನವಮಿಯಂದು ಮರ್ಯಾದಾ ಪುರುಷೋತ್ತಮನಿಗೆ ನಮಿಸಿದ ಮೋದಿ

|
Google Oneindia Kannada News

Recommended Video

Lok Sabha Elections 2019: ರಾಮನವಮಿಯಂದು ವಿಶೇಷ ಟ್ವೀಟ್ ಮಾಡಿದ ನರೇಂದ್ರ ಮೋದಿ

ಮರ್ಯಾದಾ ಪುರುಷೋತ್ತಮ ರಾಮನ ಜನ್ಮದಿನವಾದ ಚೈತ್ರ ಮಾಸದ ಶುಕ್ಲಪಕ್ಷದ ನವಮಿ(ಈ ವರ್ಷ ಏ.13)ಯನ್ನು ದೇಶದೆಲ್ಲೆಡೆ ಭಕ್ತಿ ಶ್ರದ್ಧೆಯಿಂದ ಆಚರಿಸಲಾಗುತ್ತಿದೆ.

ತ್ರೇತಾಯುಗದಲ್ಲಿ ಅವತರಿಸಿದ ಸೂರ್ಯ ವಂಶದವನಾದ ರಾಮನದು ವಿಷ್ಣುವಿನ ಏಳನೇ ಅವತಾರ. ರಾಮನ ಕಾಲದಲ್ಲಿ ಆತನ ನೆಲೆ ಅಯೋಧ್ಯೆಯು ಅತ್ಯಂತ ಸುಭಿಕ್ಷೆಯಿಂದ, ಸಮೃದ್ಧಿಯಿಂದ, ನೆಮ್ಮದಿಯಿಂದ, ಸಹಬಾಳ್ವೆಯಿಂದ ಕೂಡಿತ್ತು ಎಂಬ ಕಾರಣಕ್ಕೆಯೇ ಇಂದಿಗೂ ರಾಮರಾಜ್ಯದ ಪರಿಕಲ್ಪನೆಯನ್ನು ನೆಲೆಗೊಳಿಸುವ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ.

ರಾಮನವಮಿ ಕಛೇರಿ ಪಾನಕ ಕೋಸಂಬರಿಗಿಂತ ಸೂಪರ್! ರಾಮನವಮಿ ಕಛೇರಿ ಪಾನಕ ಕೋಸಂಬರಿಗಿಂತ ಸೂಪರ್!

ಬಾಲ್ಯದಿಂದಲೂ ದುಷ್ಟಸಂಹಾರಿಯಾಗಿ, ಶಿಷ್ಟರಕ್ಷಕನಾಗಿ, ಪಿತೃವಾಕ್ಯ ಪಾಲಕನಾಗಿ, ಕೊನೆಗೆ ರಾಜಧರ್ಮ ಮತ್ತು ವ್ಯಕ್ತಿಧರ್ಮದ ನಡುವೆ ಆಯ್ಕೆಯ ಪ್ರಶ್ನೆ ಉದ್ಭವಿಸಿದಾಗ, ರಾಜಧರ್ಮವನ್ನೇ ನೆಚ್ಚಿಕೊಂಡು ಪತ್ನಿಯನ್ನು ಕಾಡಿಗೆಕಳಿಸಿದವನಾಗಿ, ತನ್ ಪತ್ನಿ ಪವಿತ್ರಳು ಎಂಬುದು ಗೊತ್ತಿದ್ದರೂ ವಿಶ್ವಕ್ಕೆ ಅದನ್ನು ಸಾಬೀತುಪಡಿಸುವ ಸಲುವಾಗಿ ಆಕೆಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಿದವನಾಗಿ ರಾಮ ಹಲವು ಕಾರಣಗಳಿಂದ ನೆನಪಿನಲ್ಲಉಳಿದಿದ್ದಾನೆ.

ಅಂಥ ರಾಮನನ್ನು ಚೈತ್ರಮಾಸದ ಶುದ್ಧ ನವಮಿಯಂದು ಪೂಜಿಸಲಾಗುತ್ತದೆ. ಈ ದಿನ ಕೋಸಂಬರಿ, ಪಾನಕಗಳನ್ನು ಮಾಡಿ ರಾಮನಿಗೆ ನೈವೇದ್ಯ ಮಾಡಲಾಗುತ್ತದೆ. ದಾನ ಧರ್ಮ ಮಾಡಲಾಗುತ್ತದೆ.

ರಾಮ-ಸೀತೆ : ಒಂದು ಸಂಸಾರ ಸಾಗರದ ಕತೆ ರಾಮ-ಸೀತೆ : ಒಂದು ಸಂಸಾರ ಸಾಗರದ ಕತೆ

ರಾಮನವಮಿಯ ಶುಭಗಳಿಗೆಯಂದು ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದ್ದಾರೆ.

ನರೇಂದ್ರ ಮೋದಿ

ರಾಮನವಮಿಯ ಶುಭದಿನದಂದು ಎಲ್ಲಾ ದೇಶವಾಸಿಗಳಿಗೆ ಹಾರ್ದಿಕ ಶುಭಕಾಮನೆಗಳು. ಜೈ ಶ್ರೀರಾಮ್ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.

Array

ಸುರೇಶ್ ಪ್ರಭು

ಎಲ್ಲರಿಗೂ ರಾಮನವಮಿಯ ಶುಭಾಶಯಗಳು. ಈ ಆಚರಣೆ ಶ್ರೀರಾಮನ ಬದುಕನ್ನು ನಾವೂ ಅಳವಡಿಸಿಕೊಳ್ಳಲು ಅನುಕೂಲವಾಗಲಿ. ದೇಶ ಮುಂಬರುವ ದಿನಗಳಲ್ಲಿ ರಾಮರಾಜ್ಯವನ್ನು ಕಾಣಲಿ ಎಂದು ನಾನು ಹಾರೈಸುತ್ತೇನೆ- ಸುರೇಶ್ ಪ್ರಭು, ಕೇಂದ್ರ ಸಚಿವ

ಅಶೋಕ್ ಗೆಹ್ಲೋಟ್

ಈ ಪವಿತ್ರ ಮತ್ತು ಸಂಭ್ರಮದ ರಾಮನವಮಿಯಂದು ಎಲ್ಲರಿಗೂ ನನ್ನ ಶುಭಾಶಯಗಳು. ಸರ್ವಶಕ್ತರಾಮ ನಿಮಗೆ ಸಕಲವನ್ನೂ ಕರುಣಿಸಿ, ಹರಸಲಿ. ರಾಮನವಮಿಯಂದು ಆತನ ಧೈರ್ಯ, ಸದ್ಗುಣ ಮತ್ತು ಎಲ್ಲಾ ಸುಗುಣಗಳನ್ನು ನೆನಪಿಸಿಕೊಂಡು, ಸ್ಫೂರ್ತಿ ಪಡೆಯೋಣ- ಅಶೋಕ್ ಗೆಹ್ಲೋಟ್

ಡಾ.ಡೇವಿಡ್ ಫ್ರಾಲಿ

ಭಾರತವು ಮತ್ತೊಮ್ಮೆ ರಾಮರಾಜ್ಯವಾಗಿ, ಧರ್ಮ ಮತ್ತು ಯೋಗವನ್ನು ಜಗತ್ತಿಗೆ ಪಸರಿಸುವಂತಾಗಲಿ. ಅದಕ್ಕಾಗಿ ಧಾರ್ಮಿಕ ಪುನರುತ್ಥಾನವಾಗಬೇಕಿದೆ. ಇದು 2019 ರಲ್ಲಿ ಆಗಬೇಕಾದ ಅತ್ಯಗತ್ಯ ಸಂಗತಿ-ಡಾ.ಡೇವಿಡ್ ಫ್ರಾಲಿ

ಸಿದ್ದರಾಮಯ್ಯ

ಪಾನಕ ಕೋಸಂಬರಿಯ ಜೊತೆಗೆ ಪ್ರೀತಿ ವಿಶ್ವಾಸಗಳು ಮಿಳಿತಗೊಳ್ಳಲಿ. ಈ ಪವಿತ್ರ ಹಬ್ಬವೂ ನಾಡಿನಲ್ಲಿ ಸ್ನೇಹ ಸೌಹಾರ್ದತೆಯನ್ನು ಬೆಳೆಸಲು ಪ್ರೇರಕ ಶಕ್ತಿಯಾಗಲಿ ಎಂದು ಹಾರೈಸುತ್ತೇನೆ. ಸರ್ವರಿಗೂ ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು-ಸಿದ್ದರಾಮಯ್ಯ, ಕರ್ನಾಟಕದ ಮಾಜಿ ಮುಖ್ಯಮಂತ್ರಿ

English summary
Rama Navami is a Hindu festival that celebrates the birthday of lord Rama. Today whole nation is celebrating this auspicious festival. Many leaders including PM Narendra Modi whish nation on this special occasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X