ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮ್ಮನ ಬಗ್ಗೆ ಹನ್ನೊಂದರ ಬಾಲಕ ಬರೆದ ಲೇಖನ

By ಎಚ್.ಎಂ. ಜಯಪ್ರಕಾಶ್, ಬಳ್ಳಾರಿ
|
Google Oneindia Kannada News

ಅಮ್ಮನನ್ನು, ಆಕೆ ಮಕ್ಕಳ ಮೇಲೆ ತೋರುವ ಪ್ರೀತಿಯನ್ನು, ಜೀವನದುದ್ದಕ್ಕೂ ಮಾಡಿದ ತ್ಯಾಗವನ್ನು, ಸಾಕು ಸಾಕೆನಿಸುವಷ್ಟು ಸುರಿಯುವ ವಾತ್ಸಲ್ಯವನ್ನು ಕೆಲವೇ ಪದಗಳಲ್ಲಿ ಹಿಡಿದಿರುವುದು ಯಾರಿಂದಲೂ ಸಾಧ್ಯವಿಲ್ಲ. ಒಬ್ಬೊಬ್ಬರ ವರ್ಣನೆಯಲ್ಲಿ ಒಂದೊಂದು ರೀತಿ ಕಾಣುವ ಅಮ್ಮ ಮಾತ್ರ ಒಬ್ಬಳೇ. ಇಂಥ ತಾಯಿಯ ಕುರಿತಾಗಿ ಒನ್ಇಂಡಿಯಾ ಕನ್ನಡ ಓದುಗರೊಬ್ಬರ ಹನ್ನೊಂದು ವರ್ಷದ ಮಗ ಮುದ್ದುಮುದ್ದಾಗಿ ತನ್ನದೇ ಭಾಷೆಯಲ್ಲಿ ತಾಯಿಯ ಕುರಿತು ವರ್ಣಿಸಿದ್ದಾನೆ. ಓದಿಕೊಳ್ಳಿ.

***

ಅಮ್ಮನಿಗೆ ಅಮ್ಮನ ದಿನದ ಶುಭಾಶಯ. ಅಮ್ಮ ಎಂದರೆ ನಮ್ಮ ಹಡೆದವ್ವ. ಒಂಬತ್ತು ತಿಂಗಳು ಹೆತ್ತು ನಮ್ಮನ್ನು ಬೆಳೆಸಿದ್ದಾಳೆ. ಅಮ್ಮನ ಪ್ರೀತಿ ವಿಶ್ವದಲ್ಲೇ ದೊಡ್ಡ ಪ್ರೀತಿ. ನಮ್ಮನ್ನು ಕಷ್ಟಪಟ್ಟು ಬೆಳೆಸಿದವರು. ಅಮ್ಮ ಎಂದರೆ ಎಷ್ಟೆಲ್ಲಾ ಹೇಳಬಹುದು. ಕೆಲ ಪದಗಳಲ್ಲಿ ಹೇಳುವುದು ಬಲು ಕಷ್ಟ. ಪ್ರೀತಿಯ ಅಮ್ಮನನ್ನು ನಾನೂ ಅಷ್ಟೇ ಪ್ರೀತಿಸುತ್ತೇನೆ.

My adorable mother is invaluable, happy Mother's Day

ನಾವು ಮಾಡುವ ಚೇಷ್ಟೆ ತುಂಟತನವನ್ನು ಸಹಿಸಿಕೊಂಡು ನಮ್ಮನ್ನು ಬೆಳೆಸಿದ್ದಾಳೆ. ಬೆಳೆಸಿದರೂ ಅವಳ ಕಾಳಜಿ ಇನ್ನೂ ಹೋಗಿಲ್ಲ. ನಮ್ಮ ಜನನ ಮತ್ತು ಮರಣ, ಅದರ ಅಂತರದಲ್ಲಿ ಅಮ್ಮನ ಕಾಳಜಿ ತುಂಬಾ ದೊಡ್ಡದು. ನಾವು ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಪಡೆಯಬೇಕೆಂಬುದು ಅವಳ ಆಸೆ. [ಅಮ್ಮನ ನೆನೆಯುವ ಚೆಂದದ ಹಾಡುಗಳು]

ನಮ್ಮ ಬಾಲ್ಯದಲ್ಲಿನ ತಾಯಿಯ ಸವಿನೆನಪುಗಳನ್ನು ಮರೆಯಲಾಗುವುದಿಲ್ಲ. ಹಾಗೆಯೇ ಅವಳು ಸಹ ಆ ಸವಿನೆನಪುಗಳನ್ನು ಮರೆಯುವುದಿಲ್ಲ. ತಾಯಿಯೇ ದೇವರು. ಜೀವನದಲ್ಲಿ ನಮಗೆ ನುಡಿಯಲು ಬರುವಂತಹ ಮೊದಲ ಪದ ಅಮ್ಮ. ತಮ್ಮ ಸುಖ ದುಃಖಗಳನ್ನು ಹಂಚಿಕೊಂಡು ಬಾಳುತ್ತಾರೆ. ಅಮ್ಮ ಎಂದರೆ ತಾಯಿ, ಮಾತೆ, ಜನನಿ ಎಂದರ್ಥಗಳಿರುತ್ತವೆ.

Jayaprakash H.M., Bellary

ನಮಗೆ ಏನೇ ಕಷ್ಟಗಳು ಬರಲಿ ನಮಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ವಸತಿ ಗೃಹದಲ್ಲಿರುವ ಮಕ್ಕಳಿಗೆ ತಿಳಿದಿರುತ್ತದೆ ತಾಯಿಯ ಪ್ರೀತಿ. ತಾಯಿಯನ್ನು ಬಿಟ್ಟು ದೂರದ ಊರಿನಲ್ಲಿ ಇರುವವರಿಗೆ ತಿಳಿದಿರುತ್ತದೆ ತಾಯಿಯ ಪ್ರೀತಿ. ತಾಯಿಯನ್ನು ಕಳೆದುಕೊಂಡವರಿಗೆ ತಿಳಿದಿರುತ್ತದೆ ತಾಯಿಯ ನಿಜವಾದ ಪ್ರೀತಿ.

ತಾಯಿಯೇ ಮೊದಲ ಗುರು ಎಂಬ ವಾಕ್ಯದಲ್ಲಿ ಎಷ್ಟು ಅರ್ಥವಿದೆ ನೋಡಿ. ನಾವು ಮಾಡುವ ಪ್ರತಿ ಕೆಲಸದಲ್ಲೂ ಅವರ ಅನಿಸಿಕೆ ಇರುತ್ತದೆ. ನಾವು ಬಿದ್ದಾಗ ದುಃಖ ಪಡುತ್ತಾಳೆ. ಏಕೆಂದರೆ ಅದು ನನ್ನ ಮಗು ಅಂತ. ನಾವು ಚೇಷ್ಟೆ ಮಾಡಿದರೆ ಬಯ್ಯುತ್ತಾಳೆ ನನ್ನ ಮಗು ಚೆನ್ನಾಗಿರಬೇಕಂತ. ನಾವು ರುಚಿ ರುಚಿ ತಿಂಡಿ ಕೇಳಿದರೆ ಕೊಡಿಸುತ್ತಾಳೆ. ತಾಯಿ ಮತ್ತು ಅವರ ಮಕ್ಕಳ ಮಧ್ಯೆ ಇರುವುದೇ ದೊಡ್ಡ ಪ್ರೀತಿ.

ಎಚ್.ಎಂ. ಜಯಪ್ರಕಾಶ್
7ನೇ ತರಗತಿ, ವಿಯಾನ್ನಿ ವಿದ್ಯಾಲಯ, ಬಳ್ಳಾರಿ

English summary
Is it possible to explain the love showered by mother in words? Is it possible to match the concern she shows to her kids? Possibly not. Eleven year old boy from Bellary writes about his mother, who is everything to him. Happy Mother's Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X