• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶೇಷ ಲೇಖನ: ಅಮ್ಮ... ನಮ್ಮೆಲ್ಲರ ಬದುಕಿನ ಜೀವಂತ ಪವಾಡ!

|

ತನ್ನೊಡಲಲ್ಲಿ ಮುದ್ದು ಮಗುವೊಂದು ಚಿಗುರೊಡೆಯುತ್ತಿದೆ ಎಂಬುದು ತಿಳಿಯುತ್ತಿದ್ದಂತೆಯೇ ಹೆಣ್ಣು ತಾಯ್ತನದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಳ್ತಾಳೆ. ಒಬ್ಬ ಸಾಮಾನ್ಯ ಹೆಣ್ಣು ದೈವತ್ವಕ್ಕೇರುವ ಪಯಣ ಆರಂಭವಾಗೋದೇ ಆಗ. ತೊದಲು ನುಡಿವ ಕಂದನ ಬಾಯಿಂದ ಮೊದಲ ಬಾರಿಗೆ ಬಂದ 'ಅಮ್ಮ' ಎಂಬ ಪದಕ್ಕೆ ಹೆಣ್ಣಿನ ಬದುಕನ್ನೇ ಸಾರ್ಥಕಗೊಳಿಸುವ ಶಕ್ತಿಯಿದೆ!

ಹೌದು, ಮತ್ತೆ ಬಂದಿದೆ ಅಮ್ಮಂದಿರ ದಿನ. ಆಕೆಯ ಬಗ್ಗೆ ಬರೆಯುವುದಕ್ಕೆ ಹೋದರೆ ಭಾಷೆ ಬಡವಿ ಅನ್ನಿಸುತ್ತೆ. ಯಾವುದೇ ಪದದಲ್ಲಿ ಅವಳನ್ನು ವರ್ಣಿಸುವುದಕ್ಕೆ ಹೋದರೂ, ಆಕೆಯ ಪಾತ್ರದೆದುರು ಆ ಪದವೇ ಸೋತುಬಿಡುತ್ತದೆ! ಒಂದು ಪದದಲ್ಲಿ, ಒಂದು ವಾಕ್ಯದಲ್ಲಿ, ಒಂದು ಕತೆಯಲ್ಲಿ, ಒಂದು ಹೊತ್ತಿಗೆಯಲ್ಲಿ ಹಿಡಿದಿಡಲು ಸಾಧ್ಯವಾಗದ ಮಹೋನ್ನತ ವ್ಯಕ್ತಿತ್ವ ಅಮ್ಮನದು.[ಅಕ್ಷರದಿಂದ ಅಮ್ಮಂದಿರ ವರ್ಣಿಸಲು ಸಾಧ್ಯವಿಲ್ಲ]

ತಾಯಿ ಎಂಬ ಶಿಲ್ಪಿಗೆ ಆಕಾರವಿಲ್ಲದ ಕಲ್ಲನ್ನೂ ಸಂಸ್ಕಾರದ ಉಳಿಪೆಟ್ಟಿನಿಂದ ಪೂಜನೀಯ ಮೂರ್ತಿಯನ್ನಾಗಿಸುವ ತಾಕತ್ತಿದೆ. ಇಂದು ಮಹೋನ್ನತವಾದದ್ದನ್ನು ಸಾಧಿಸಿದ ಶೇ.95 ರಷ್ಟು ಜನರ ಸಾಧನೆಯಲ್ಲಿ ನಿಸ್ಸಂದೇಹವಾಗಿ ಅವರಮ್ಮನ ಬೆವರಿದೆ, ಆಕೆಯ ನಿದ್ದೆಯಿಲ್ಲದ ರಾತ್ರಿಯಿದೆ, ಹಸಿದ ಹೊಟ್ಟೆಯ ತ್ಯಾಗವಿದೆ!'[ಮೈಮೇಲೆ ಮನೆ ಬಿದ್ದಿದ್ರೂ ಮಗುವನ್ನು ಹೊಟ್ಟೆಯಲ್ಲಿ ರಕ್ಷಿಸಿದ ಮಹಾತಾಯಿ!]

ಸ್ವಂತ ಮಗನಿಂದ ಪರಿತ್ಯಕ್ತಳಾಗಿ ವೃದ್ಧಾಶ್ರಮದ ಮೂಲೆಯೊಂದರಲ್ಲಿ ಕೂತರೂ ಅದೇ ಮಗನ ಬಾಲ್ಯವನ್ನು ನೆನಪಿಸಿಕೊಂಡು ನಸುನಗೆಬೀರುವ, ಆತನ ಭವಿಷ್ಯ ಚೆನ್ನಾಗಿರಲೆಂದು ಎರಡೂ ಕೈಯೆತ್ತಿ ಹಾರೈಸುವ ಆ ದೈವತ್ವದ ಸಾಕಾರ ಮೂರ್ತಿಯನ್ನು ಪುಟ್ಟ ಲೇಖನದಲ್ಲಿ ಕಟ್ಟಿಹಾಕೋಕೆ ಸಾಧ್ಯಾನಾ..?

ಜಗ ಮೆಚ್ಚಿದ ಸಂತನ ಕಣ್ಣಲ್ಲಿ ಅಮ್ಮ

ಜಗ ಮೆಚ್ಚಿದ ಸಂತನ ಕಣ್ಣಲ್ಲಿ ಅಮ್ಮ

ಈಗ ನಾನು ಏನಾಗಿದ್ದೀನೋ, ಅದಕ್ಕೆ ಕಾರಣ ನಮ್ಮಮ್ಮ. ನಾನು ಇನ್ನೇನೇ ಆದರೂ ಆಕೆಯ ಋಣವನ್ನು ತೀರಿಸುವುದಕ್ಕಂತೂ ಸಾಧ್ಯವಿಲ್ಲ ಎಂಬ ಮಹಾನ್ ಸಂತ ಸ್ವಾಮಿ ವಿವೇಕಾನಂದರ ಮಾತು ತಾಯಿ ಎಂಬ ಪಾತ್ರದ ಮಹೋನ್ನತಿಯನ್ನು ಪ್ರಸ್ತುತಪಡಿಸುತ್ತದೆ.[ಅಮ್ಮನಿಗೆ ಪ್ರೀತಿಯಿಂದ ಕಾಣಿಕೆ ಕೊಟ್ಟ ಗಾಯಕ ವಾಸು ದೀಕ್ಷಿತ್]

ತಾಯಿಗಿಂತ ದೊಡ್ಡದು ಇನ್ನೇನೂ ಇಲ್ಲ

ತಾಯಿಗಿಂತ ದೊಡ್ಡದು ಇನ್ನೇನೂ ಇಲ್ಲ

ತಾಯಿ ಖುಷಿಯಾಗಿದ್ದರೆ ಕುಟುಂಬ ಖುಷಿಯಾಗಿರುತ್ತದೆ, ಕುಟುಂಬ ಖುಷಿಯಾಗಿದ್ದರೆ ದೇಶ ಖುಷಿಯಾಗಿರುತ್ತದೆ. ಅಂದರೆ ಇಡೀ ದೇಶದ ಖುಷಿ ತಾಯಿಯ ಮೇಲೆ ನಿಂತಿದೆ ಎಂಬ ಭಾರತದ ಹೆಮ್ಮೆಯ ರಾಷ್ಟ್ರಪತಿಯಾಗಿದ್ದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಮಾತಲ್ಲಿ ತಾಯಿಗಿಂತ ದೊಡ್ಡದು ಇನ್ನೇನು ಇಲ್ಲ ಎಂಬ ಭಾವ ವ್ಯಕ್ತವಾಗಿದೆ.[ಆಕೆ ಕೊಟ್ಟ ಉತ್ತರ ಜೀವನದಲ್ಲಿ ಎಂದೂ ಮರೆಯಲಾಗದು]

ನನ್ನ ತಾಯಿ ನಡೆದಾಡುವ ದೇವರು

ನನ್ನ ತಾಯಿ ನಡೆದಾಡುವ ದೇವರು

ದಿ ರೆವೆನೆಂಟ್ ಚಿತ್ರದ ಅಭಿನಯಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದುಕೊಂಡ ಲಿಯೋನಾರ್ಡೋ ಡಿ ಕ್ಯಾಪ್ರಿಯೋ ತಮ್ಮೆಲ್ಲ ಸಾಧನೆಗೂ ಸ್ಫೂರ್ತಿ ತಮ್ಮಮ್ಮ ಎನ್ನುತ್ತಾರೆ. ನಮ್ಮಮ್ಮ ನನ್ನ ಬದುಕಿನ ನಡೆದಾಡುವ ದೇವರು ಎಂದು ಹೆಮ್ಮೆಯಿಂದ ಕಣ್ತುಂಬಿಸಿಕೊಂಡು ಹೇಳುವ ಅವರ ದನಿಯಲ್ಲಿ ಅಮ್ಮನ ಕುರಿತ ಅವ್ಯಕ್ತ ಪ್ರೀತಿಯ ಮಹಾಪೂರವೇ ಹರಿದಿದೆ.[ಅಮ್ಮ ಎನ್ನಲು ಏನೋ ಹರುಷವು ಎನ್ನುತ್ತಿದೆಯೇ ಈ ಮರಿ ಹಕ್ಕಿ!]

ಅಮ್ಮನ ಪ್ರಾರ್ಥನೆಗಳೇ ನನ್ನ ಸ್ಫೂರ್ತಿ

ಅಮ್ಮನ ಪ್ರಾರ್ಥನೆಗಳೇ ನನ್ನ ಸ್ಫೂರ್ತಿ

ನನಗೆ ನಮ್ಮಮ್ಮನ ಪ್ರಾರ್ಥನೆಗಳು ಇಂದಿಗೂ ನೆನಪಿನಲ್ಲಿವೆ. ಅವು ಯಾವತ್ತೂ ನನ್ನನ್ನೇ ಅನುಸರಿಸುತ್ತಿದ್ದವು. ನನ್ನ ಜೀವನದುದ್ದಕ್ಕೂ ನನ್ನನ್ನು ಗಟ್ಟಿಯಾಗಿ ಹಿಡಿದಿಟ್ಟಿದ್ದು ಅಮ್ಮನ ಪ್ರಾರ್ಥನೆಗಳೇ ಎಂದು ಸದಾ ಅಮ್ಮನ್ನು, ಆಕೆಯ ತ್ಯಾಗವನ್ನು ನೆನಪಿಸಿಕೊಳ್ಳುತ್ತಿದ್ದರಂತೆ ಅಮೆರಿಕದ 16 ನೇ ಅಧ್ಯಕ್ಷ ಅಬ್ರಾಹಂ ಲಿಂಕನ್.

ವೈದ್ಯರ ಮಾತನ್ನಲ್ಲ, ನಾನು ಅಮ್ಮನ ಮಾತು ನಂಬಿದೆ!

ವೈದ್ಯರ ಮಾತನ್ನಲ್ಲ, ನಾನು ಅಮ್ಮನ ಮಾತು ನಂಬಿದೆ!

ಪೊಲಿಯೋ ಪೀಡಿತೆಯಾಗಿ, ಒಂಬತ್ತನೇ ವಯಸ್ಸಿನವರೆಗೂ ಕಾಲಿಗೆ ಕೋಳ ಧರಿಸಿಯೇ ತಿರುಗುತ್ತಿದ್ದ ನನ್ನನ್ನು ನೋಡಿದ ವೈದ್ಯರು ನೀನು ಮುಂದೆಂದೂ ನಡದೆದಾಡುವುದಕ್ಕೆ ಸಾಧ್ಯವೇ ಇಲ್ಲ ಎಂದಿದ್ದರು. ಆದರೆ ನೀನು ನಡೆದಾಡಬಲ್ಲ, ಓಡಬಲ್ಲೆ ಎಂದು ನಮ್ಮಮ್ಮ ಪ್ರತಿದಿನ ನನ್ನನ್ನು ಹುರಿದುಂಬಿಸುತ್ತಿದ್ದರು. ನಾನು ವೈದ್ಯರನ್ನು ನಂಬಲಿಲ್ಲ, ಅಮ್ಮನನ್ನು ನಂಬಿದೆ. ನನ್ನ ನಂಬಿಕೆ ಸುಳ್ಳಾಗಲಿಲ್ಲ, ಅಮ್ಮ ಹೇಳಿದಂತೆ ನಾನು ನಡೆಯತೊಡಗಿದೆ, ಓಡಿದೆ... ಅಷ್ಟೇ ಅಲ್ಲ, ಒಲಿಂಪಿಕ್ಸ್ ನಲ್ಲಿ ಓಟದ ಸ್ಪರ್ಧೆಯಲ್ಲೇ ಮೂರು ಚಿನ್ನ ಗಳಿಸಿ, ಈ ಸಾಧನೆ ಮಾಡಿದ ಮೊದಲ ಅಮೆರಿಕದ ಮಹಿಳೆ ಎಂಬ ಗೌರವಕ್ಕೆ ಪಾತ್ರಳಾದೆ... ಅಮೆರಿಕದ ಅಥ್ಲೇಟ್ ವಿಲ್ಮಾ ರುಡೋಲ್ಫ್ ರ ಈ ಮಾತನ್ನು ಕೇಳಿದರೆ ಅಮ್ಮನ ಶಕ್ತಿಯೇನು ಎಂಬ ಅರಿವಾದೀತು!

English summary
Mothers are the living miracle of everyone's life. This year we are celebrating Mother's day on 14th May. Here is a special story which reflects importance of motherwood.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more