• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2017: ಶ್ರಾವಣ, ಭಾದ್ರಪದ, ಕಾರ್ತಿಕ ಮಾಸದ ಹಬ್ಬಹರಿದಿನಗಳ ಪಟ್ಟಿ

|

ಆಷಾಢದ ರಭಸದ ಗಾಳಿ ನಿಲ್ಲುವ ಋತುಮಾನ ಬಂದಿದೆ. ಚಾಂದ್ರಮಾನ ಪಂಚಾಂಗದ ಐದನೇ ಮಾಸ 'ಶ್ರಾವಣ ಮಾಸ' ಆರಂಭವಾಗಲು ಇನ್ನು ಮೂರು ದಿನ ಬಾಕಿ ಇದೆ. ಭಾನುವಾರ ಹೊಸ ಮಾಸ ತೆರೆದುಕೊಳ್ಳುತ್ತಿದೆ. ಕರೆಯುತಿದೆ.

ಪರಿಹಾರ ಜ್ಯೋತಿಷ್ಯ: ಚೌಡೇಶ್ವರಿ ದೇವಿಗೆ ಯಾವ ಪೂಜೆ ಮಾಡಿದರೆ ಏನು ಫಲ?

ಶ್ರಾವಣ ಮಾಸ ಆರಂಭವಾದರೆ ಸಾಕು ಸಾಲು ಸಾಲು ಹಬ್ಬಗಳು, ರಜೆಗಳು. ಭೀಮನ ಅಮವಾಸ್ಯೆಯಿಂದ ಆರಂಭವಾಗುವ ಹಬ್ಬಗಳ ಸಾಲು ಮುಗಿಯುವುದು ಕಾರ್ತಿಕ ಮಾಸದ ಬಲಿಪಾಡ್ಯಮಿಯಂದು.

2017ರ ಹಬ್ಬಗಳು, ರಾಷ್ಟ್ರೀಯ ರಜಾದಿನಗಳು ಒಂದಷ್ಟು ವಾರದ ಮಧ್ಯೆ ಬಂದಿದ್ದರೆ, ಇನ್ನಷ್ಟು ವಾರಾಂತ್ಯಕ್ಕೆ ಬಂದಿದೆ. ಶ್ರಾವಣ, ಭಾದ್ರಪದ ಮತ್ತು ಕಾರ್ತಿಕ ಮಾಸದಲ್ಲಿ ಬರುವ ಹಬ್ಬಹರಿದಿನಗಳ ಪಟ್ಟಿ ರೆಡಿ ರೆಕನರ್ ರೀತಿಯಲ್ಲಿ ಟೇಬಲ್ ಮೂಲಕ ಈ ಕೆಳಗೆ ನೀಡಲಾಗಿದೆ.

ಮಂಗಳಸೂತ್ರದ ಮಹತ್ವ, ಹವಳ ದೋಷಕ್ಕೆ ಪರಿಹಾರ

ಹಬ್ಬಹರಿದಿನಗಳ ಪಟ್ಟಿಯತ್ತ ಕಣ್ಣಾಡಿಸಿ, ನಿಮ್ಮಾಪ್ತರಿಗೂ ತಿಳಿಸಿ, ಬೇಕಿದ್ದಲ್ಲಿ ಪ್ರಿಂಟ್ ಔಟ್ ತೆಗೆದುಕೊಂಡು ಇಟ್ಟುಕೊಳ್ಳಿ. ಎಲ್ಲಾ ಹಬ್ಬಗಳ 'ಶುಭಾಶಯಗಳು' ಇನ್ ಅಡ್ವಾನ್ಸ್...

ದಿನಾಂಕ ದಿನ ಹಬ್ಬ ರಜಾ
ಶ್ರಾವಣ
ಜುಲೈ 23 ಭಾನುವಾರ ದೀವಿಗೆ ಅಮವಾಸ್ಯೆ/ಭೀಮನ ಅಮವಾಸ್ಯೆ/ನಾಗರ ಅಮವಾಸ್ಯೆ ಭಾನುವಾರ
ಜುಲೈ 24 ಸೋಮವಾರ ಶ್ರಾವಣ ಮಾಸಾರಂಭ, ಸಪ್ತ ಪರಮಸ್ಥಾನ ವ್ರತ ರಜೆಯಿಲ್ಲ
ಜುಲೈ 25, ಆಗಸ್ಟ್ 1, 8 ಮಂಗಳವಾರ ಮಂಗಳಗೌರಿ ವ್ರತ ರಜೆಯಿಲ್ಲ
ಜುಲೈ 26 ಬುಧವಾರ ಸಂಪತ್ ಗೌರಿ ವ್ರತ, ಕಾರ್ಗಿಲ್ ಸ್ಮರಣಾರ್ಥ ದಿನ ರಜೆಯಿಲ್ಲ
ಜುಲೈ 30 ಭಾನುವಾರ ತುಳಸೀದಾಸರ ಜಯಂತಿ ಭಾನುವಾರ
ಆಗಸ್ಟ್ 4 ಶುಕ್ರವಾರ ವರಮಹಾಲಕ್ಷ್ಮೀ ವ್ರತ ನಿರ್ಬಂಧಿತ ರಜೆ
ಆಗಸ್ಟ್ 5, 12, 19 ಶನಿವಾರ ಶ್ರಾವಣ ಶನಿವಾರ ರಜೆಯಿಲ್ಲ
ಆಗಸ್ಟ್ 7 ಸೋಮವಾರ ರಕ್ಷಾ ಬಂಧನ, ನೂಲ ಹುಣ್ಣಿಮೆ, ಖಗ್ರಾಸ ಚಂದ್ರಗ್ರಹಣ ನಿರ್ಬಂಧಿತ ರಜೆ
ಆಗಸ್ಟ್ 9 ಬುಧವಾರ ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ ರಜೆಯಿಲ್ಲ
ಆಗಸ್ಟ್ 14 ಸೋಮವಾರ ಚಾಂದ್ರ ಶ್ರೀಕೃಷ್ಣ ಜನ್ಮಾಷ್ಟಮಿ ನಿರ್ಬಂಧಿತ ರಜೆ
ಆಗಸ್ಟ್ 15 ಮಂಗಳವಾರ ಸ್ವಾತಂತ್ರ್ಯ ದಿನಾಚರಣೆ, ಆಡಿಕೃತ್ತಿಕೋತ್ಸವ ಸಾರ್ವತ್ರಿಕ ರಜೆ
ಆಗಸ್ಟ್ 21 ಸೋಮವಾರ ಬೆನಕನ ಅಮವಾಸ್ಯೆ ರಜೆಯಿಲ್ಲ
ಭಾದ್ರಪದ
ಆಗಸ್ಟ್ 23 ಬುಧವಾರ ಕಲ್ಕಿ ಜಯಂತಿ ರಜೆಯಿಲ್ಲ
ಆಗಸ್ಟ್ 24 ಗುರುವಾರ ಸ್ವರ್ಣಗೌರೀ ವ್ರತ ನಿರ್ಬಂಧಿತ ರಜೆ
ಆಗಸ್ಟ್ 25 ಶುಕ್ರವಾರ ಗಣೇಶ ಚತುರ್ಥಿ ಸಾರ್ವತ್ರಿಕ ರಜೆ
ಸೆಪ್ಟಂಬರ್ 2 ಶನಿವಾರ ಬಕ್ರೀದ್ ರಜೆ
ಸೆಪ್ಟಂಬರ್ 4 ಸೋಮವಾರ ಋಗ್ ಉಪಾಕರ್ಮ ರಜೆಯಿಲ್ಲ
ಸೆಪ್ಟಂಬರ್ 5 ಮಂಗಳವಾರ ಅನಂತ ಪದ್ಮನಾಭ ವ್ರತ, ನೋಂಪು ರಜೆಯಿಲ್ಲ
ಸೆಪ್ಟಂಬರ್ 6 ಬುಧವಾರ ಯಜುರ್ ಉಪಾಕರ್ಮ, ನಾರಾಯಣಗುರು ಜಯಂತಿ, ಪಿತೃಪಕ್ಷಾರಂಭ ರಜೆಯಿಲ್ಲ
ಸೆಪ್ಟಂಬರ್ 8 ಶುಕ್ರವಾರ ಸಂತಮೇರಿ ಹಬ್ಬ, ರಾಷ್ಟ್ರೀಯ ಸಾಕ್ಷರತಾ ದಿನ ರಜೆಯಿಲ್ಲ
ಸೆಪ್ಟಂಬರ್ 13, 14 ಬುಧವಾರ, ಗುರುವಾರ ಸೌರ ಕೃಷ್ಣಜನ್ಮಾಷ್ಠಮಿ, ಉಡುಪಿ ವಿಟ್ಲಪಿಂಡಿ ಉತ್ಸವ ರಜೆಯಿಲ್ಲ
ಸೆಪ್ಟಂಬರ್ 17 ಭಾನುವಾರ ವಿಶ್ವಕರ್ಮ ಜಯಂತಿ ಭಾನುವಾರ
ಸೆಪ್ಟಂಬರ್ 19 ಮಂಗಳವಾರ ಸರ್ವಪಿತೃ ಅಮವಾಸ್ಯೆ, ಮಹಾಲಯ ಅಮವಾಸ್ಯೆ ರಜೆ
ಸೆಪ್ಟಂಬರ್ 28 ಗುರುವಾರ ದುರ್ಗಾಷ್ಟಮಿ ರಜೆಯಿಲ್ಲ
ಸೆಪ್ಟಂಬರ್ 29 ಶುಕ್ರವಾರ ಮಹಾನವಮಿ, ಆಯುಧಪೂಜೆ ರಜೆ
ಸೆಪ್ಟಂಬರ್ 30 ಶನಿವಾರ ವಿಜಯದಶಮಿ ರಜೆ
ಅಕ್ಟೋಬರ್ 1 ಭಾನುವಾರ ಮೊಹರಂ ಭಾನುವಾರ
ಅಕ್ಟೋಬರ್ 2 ಸೋಮವಾರ ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತಿ ಜಯಂತಿ ಸಾರ್ವತ್ರಿಕ ರಜೆ
ಅಕ್ಟೋಬರ್ 5 ಗುರುವಾರ ವಾಲ್ಮೀಕಿ ಜಯಂತಿ ರಜೆ
ಅಕ್ಟೋಬರ್ 18 ಬುಧವಾರ ನರಕ ಚತುರ್ದಶಿ ರಜೆ
ಅಕ್ಟೋಬರ್ 19 ಗುರುವಾರ ದೀಪಾವಳಿ ರಜೆ
ಕಾರ್ತಿಕ
ಅಕ್ಟೋಬರ್ 20 ಶುಕ್ರವಾರ ಬಲಿಪಾಡ್ಯಮಿ ರಜೆ
ನವೆಂಬರ್ 1 ಬುಧವಾರ ಕನ್ನಡ ರಾಜ್ಯೋತ್ಸವ, ಉತ್ಥಾನ ದ್ವಾದಶಿ ಸಾರ್ವತ್ರಿಕ ರಜೆ
ನವೆಂಬರ್ 4 ಶನಿವಾರ ಗುರುನಾನಕ್ ಜಯಂತಿ ನಿರ್ಬಂಧಿತ ರಜೆ
ನವೆಂಬರ್ 6 ಸೋಮವಾರ ಕನಕದಾಸ ಜಯಂತಿ ರಜೆ

English summary
List of Holidays, Festivals fall on Shravana, Bhadrapada and Karthika Masa from July to November 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X