ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಸುಗಳಿಗೂ ಬಣ್ಣ ಹಚ್ಚುವ ಕಾಮನಹಬ್ಬ ಹೋಳಿ

By Prasad
|
Google Oneindia Kannada News

ಹಕ್ಕಿಗಳು ಚಿಲಿಪಿಲಿಗುಟ್ಟುವ ಸಮಯದಲ್ಲಿ ಭೂರಮೆಯ ಮೇಲೆ ಸೂರ್ಯ ಹರಿಸುವ ಬಂಗಾರದ ರಂಗು, ಸೊಂಟ ಬಳಕಿಸುತ್ತ ಹೊರಟ ಹಳದಿ ಸೀರೆಯುಟ್ಟ ಯುವತಿ ಹಣೆಗೆ ಇಟ್ಟುಕೊಂಡ ಕೆಂಪು ಚುಕ್ಕಿಯ ರಂಗು, ಅದೇ ತಾನೆ ಹುಟ್ಟಿದ ಮಗುವಿನ ತುಟಿಯ ಗುಲಾಬಿಯ ರಂಗು, ಮಾರ್ಚ್ ತಿಂಗಳಲ್ಲಿ ಬೆಂಗಳೂರಿನ ತುಂಬೆಲ್ಲ ಟ್ರಂಪೆಟ್ ಟ್ರೀಗಳು ತುಂಬಿಕೊಂಡಿರುವ ವಿಶಿಷ್ಟ ಹೂಗಳ ಪಿಂಕ್ ರಂಗು...

ನಿಮಗಿಷ್ಟವಾದ ಬಣ್ಣ ಯಾವುದು ಹೇಳಿ? ಆಗಸದ ತುಂಬೆಲ್ಲ ಅನಂತ ದೂರಕ್ಕೆ ಹರಡಿಕೊಂಡಿರುವ ನೀಲಿ ಬಣ್ಣವಾ, ಮತಯಾಚನೆಗೆಂದು ಬಿಸಿಲನ್ನು ಲೆಕ್ಕಿಸದೆ ಬೀದಿಬೀದಿ ಸುತ್ತುತ್ತಿರುವ ರಾಜಕಾರಣಿಗಳು ತೊಟ್ಟ ಕುರ್ತಾದ ಬಿಳಿ ಬಣ್ಣವಾ, ವಸಂತ ಕಾಲಿಟ್ಟಕೂಡಲೆ ನಲಿದಾಡುವ ಚಿಗುರು ಎಲೆಗಳ ಹಸಿರು ಬಣ್ಣವಾ, ಅಥವಾ ಹೋಳಿ ಹಬ್ಬದಂದು ಕೈಗೆ ಮೆತ್ತಿಕೊಳ್ಳುವ ಗುಲಾಲ್ ಬಣ್ಣವಾ?

ವಾವ್, ಆಕೆ ಹಾಕ್ಕೊಂಡಿರುವ ಚೂಡಿಬಣ್ಣ ನೋಡೋ, ಪಾರ್ಟಿಗೆ ನೀವು ಹಾಕ್ಕೊಂಡಿರುವ ಸೂಟು ಸೂಟಾಗಲ್ಲ ಕಣ್ರೀ, ಥೂ ಏನೇ ಇದು ಕಾಫಿಗೆ ಈ ಕಲರ್ ಬಂದಿದೆ, ಮೂವತ್ತಕ್ಕೇ ಗಡ್ಡ ಬೆಳ್ಳಗಾಗೋಕೆ ಶುರುವಾಯ್ತಲ್ಲೋ, ಕೂಲ್ ಡ್ರಿಂಕ್ ಕಲರ್ ನೋಡಿದ್ಯಾ ಚರಂಡಿ ನೀರಿದ್ದಂಗಿದೆ.... ಹೀಗೆ ಕಲರ್ ಬಗ್ಗೆ ಕಲರ್ ಕಲರ್ ಮಾತುಗಳು ದಿನನಿತ್ಯ ನಡೆಯುತ್ತಲೇ ಇರುತ್ತವೆ. ಇನ್ನು ರಾಜಕಾರಣಿಗಳಾಡುವ ಬಣ್ಣಬಣ್ಣದ ಮಾತುಗಳನ್ನು ಕೇಳುವುದೇ ಬೇಡ.

ಇರಲಿ, ಬಣ್ಣವನ್ನು ಇಷ್ಟಪಡುವವರಿಗೆ ಪ್ರತಿದಿನವೂ ಹೋಳಿ ಹಬ್ಬವೆ. ಆದರೂ, ಬಣ್ಣದ ಸಂಭ್ರಮವನ್ನು ಹೆಚ್ಚಿಸುವಂಥ, ಮನಸಿನಲ್ಲಿನ ಸುಪ್ತ ಕಾಮನೆಗಳನ್ನು ದಹಿಸುವಂಥ ಹೋಳಿ ಅಥವಾ ಕಾಮನಹಬ್ಬಗ್ಗೆ ವಿಶಿಷ್ಟವಾದ ಸ್ಥಾನ ಹಿಂದೂಗಳಲ್ಲಿದೆ. ಶಿಶಿರ ಋತು, ಫಾಲ್ಗುಣ ಮಾಸದ ಹುಣ್ಣಿಮೆಯಂದು ಕಾಮನಹಬ್ಬವನ್ನು ದೇಶ ಮತ್ತು ವಿದೇಶಗಳಲ್ಲಿ ಆಚರಿಸಲಾಗುತ್ತದೆ. [ಹೋಳಿ ಆಚರಿಸೋಣು, ಓಕುಳಿ ಎರಚೋಣು ಬರ್ರಿ]

ಕಾಮಣ್ಣನ ಮಕ್ಕಳು ಕಳ್ಳ ಸೂಳೆ ಮಕ್ಕಳು

ಕಾಮಣ್ಣನ ಮಕ್ಕಳು ಕಳ್ಳ ಸೂಳೆ ಮಕ್ಕಳು

'ಕಾಮಣ್ಣನ ಮಕ್ಕಳು ಕಳ್ಳ ಸೂಳೆ ಮಕ್ಕಳು' ಎಂದು ಹಾಡುತ್ತ, ತಮ್ಮಟೆಯನ್ನು ಬಾರಿಸುತ್ತ ಓಣಿ ತುಂಬ ಓಡಾಡಿ, ಜನರಿಂದ ವಂತಿಗೆ ವಸೂಲಿ ಮಾಡಿ, ಕೈಗೆ ಸಿಕ್ಕ ಕಟ್ಟಿಗೆ ಕುಳ್ಳನ್ನು ಪೇರಿಸಿ, ಒಂದು ಪುರಾಣ ಕಥೆಯ ಪ್ರಕಾರ ಹಿರಣ್ಯಕಶಿಪುವಿನ ತಂಗಿ 'ಹೋಲಿಕಾ'ನ ಪ್ರತಿಕೃತಿಯನ್ನು ಅಥವಾ ಕಾಮನ ಪ್ರತಿಕೃತಿಯನ್ನು ದಹಿಸಿ, ನಂತರ ಇಡೀದಿನ ಓಕುಳಿ ಆಡುವ ಸಂಪ್ರದಾಯ ಉತ್ತರ ಕರ್ನಾಟಕದಲ್ಲಿ ಚಾಲ್ತಿಯಲ್ಲಿದೆ.

ಓಕುಳಿಯ ಅಬ್ಬರವಿರಲಿ, ಆದರೆ ಆಡಂಬರ ಬೇಡ

ಓಕುಳಿಯ ಅಬ್ಬರವಿರಲಿ, ಆದರೆ ಆಡಂಬರ ಬೇಡ

ಬೆಂಗಳೂರಿನಲ್ಲಿ ಕೂಡ, ಯುವಕ ಯುವತಿಯರು ಸೇರಿಕೊಂಡು ಅಲ್ಲಲ್ಲಿ ಈ ರೀತಿ ಬಣ್ಣ ಎರಚಾಡುವ ಆಟವಾಡುತ್ತಾರಾದರೂ, ಇಲ್ಲಿ ಉತ್ತರ ಕರ್ನಾಟಕದ ಸಂಭ್ರಮವಿರುವುದಿಲ್ಲ. ಏನಿದ್ದರೂ ಆಡಂಬರ ಮಾತ್ರ.

ಒಂದುಗೂಡಿ ಮನಸೋಲ್ಲಾಸ ಹೆಚ್ಚಿಸುವ ಹಬ್ಬ

ಒಂದುಗೂಡಿ ಮನಸೋಲ್ಲಾಸ ಹೆಚ್ಚಿಸುವ ಹಬ್ಬ

ಹೋಳಿ ಹಬ್ಬವನ್ನು ಬಣ್ಣದ ಹಬ್ಬವಾಗಿ ಮಾತ್ರ ಆಚರಿಸುವುದಿಲ್ಲ, ಇದು ಪ್ರೀತಿಪ್ರೇಮ ಹಂಚಿಕೊಳ್ಳುವ ಹಬ್ಬ, ಎಲ್ಲರೂ ಒಂದುಗೂಡಿ ಮನಸೋಲ್ಲಾಸ ಹೆಚ್ಚಿಸುವ ಹಬ್ಬ, ಸ್ನೇಹ ಬಾಂಧವ್ಯವನ್ನು ವೃದ್ಧಿಸುವ ಹಬ್ಬ.

ಪ್ರೀತಿ ಪ್ರೇಮ ಭಾವನೆಗಳಿಗೆ ಬಣ್ಣವಿರುತ್ತದಾ?

ಪ್ರೀತಿ ಪ್ರೇಮ ಭಾವನೆಗಳಿಗೆ ಬಣ್ಣವಿರುತ್ತದಾ?

ಬಣ್ಣ ಅಂದ್ರೇನು ಅಂತ ಕಂಡರಿಯದ ಮಕ್ಕಳು ಕೂಡ ಸಂಭ್ರಮದಿಂದ ಆ ಆಟವನ್ನು ಮುಂಬೈನಲ್ಲಿ ಆಡುತ್ತಿರುವ ಚಿತ್ರವಿದು. ಭಾವನೆಗಳಿಗೆ ಬಣ್ಣವಿರುತ್ತದಾ?

ಮೇಲು ಕೀಳೆಂಬ ಭೇದಭಾವವಿರುವುದಿಲ್ಲ

ಮೇಲು ಕೀಳೆಂಬ ಭೇದಭಾವವಿರುವುದಿಲ್ಲ

ಈ ಹಬ್ಬದಲ್ಲಿ ಬಡವ ಬಲ್ಲಿದ, ಮೇಲು ಕೀಳೆಂಬ ಭೇದಭಾವವಿರುವುದಿಲ್ಲ. ಈ ಬಣ್ಣದಲ್ಲಿ ನಿಜವಾದ ಕಳಕಳಿಯಿರುತ್ತದೆ, ನಿಜವಾದ ಪ್ರೇಮ ಅಡಗಿರುತ್ತದೆ.

ವಿಧವೆಯರಿಂದ ವೃಂದಾವನದಲ್ಲಿ ಓಕುಳಿ ಸಂಭ್ರಮ

ವಿಧವೆಯರಿಂದ ವೃಂದಾವನದಲ್ಲಿ ಓಕುಳಿ ಸಂಭ್ರಮ

ವೃಂದಾವನದ ವಿಧವೆಯರು ಓಕುಳಿ ಆಡುವ ಸಂಪ್ರದಾಯ ಇಂದು ಕೂಡ ಚಾಲ್ತಿಯಲ್ಲಿದೆ.

ಬಣ್ಣ ನನ್ನ ಒಲವಿನ ಬಣ್ಣ, ನನ್ನ ಬದುಕಿನ ಬಣ್ಣ

ಬಣ್ಣ ನನ್ನ ಒಲವಿನ ಬಣ್ಣ, ನನ್ನ ಬದುಕಿನ ಬಣ್ಣ

ಹಳದಿ, ಕೆಂಪು, ಕೇಸರಿ, ನೀಲಿ, ನೇರಳೆ, ಗುಲಾಲ್... ಯಾವುದು ಬೇಕು ಹೇಳಿ? ನಂತರ ನೋಡಿ ಬಣ್ಣದ ಕಮಾಲ್!

ಭಾವೈಕ್ಯತೆಯ ಸಂಕೇತ ಕಾಮನ ಹಬ್ಬ

ಭಾವೈಕ್ಯತೆಯ ಸಂಕೇತ ಕಾಮನ ಹಬ್ಬ

ಈ ಹಬ್ಬದಲ್ಲಿ ಹಿಂದೂಗಳು ಮಾತ್ರವಲ್ಲ, ಮುಸ್ಲಿಂ ಬಾಂಧವರು ಕೂಡ ಅಷ್ಟೇ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಜಮ್ಮುವಿನಲ್ಲಿ ಬಣ್ಣದಾಟವಾಡುತ್ತಿರುವ ಯುವತಿಯರು.

ವಿದೇಶಿಯರಿಂದ ಓಕುಳಿ ಆಟದ ಮಜಾ

ವಿದೇಶಿಯರಿಂದ ಓಕುಳಿ ಆಟದ ಮಜಾ

ಹೋಳಿ ಸರ್ವಾಂತರ್ಯಾಮಿಯಾಗಿದೆ. ವಿದೇಶಿಯರು ಕೂಡ ಈ ಹಬ್ಬದ ವೈಶಿಷ್ಟ್ಯತೆಗೆ ಮಾರುಹೋಗಿದ್ದಾರೆ.

ನಿನ್ನ ಕೈಗೆ ಅಂಟಿರೋದು ಯಾವ ಬಣ್ಣ ಕಣೋ?

ನಿನ್ನ ಕೈಗೆ ಅಂಟಿರೋದು ಯಾವ ಬಣ್ಣ ಕಣೋ?

ಥೂ, ಬಣ್ಣ ಯಾವುದಾಗಿದ್ದರೇನಂತೆ, ನೀನು ತೋರುತ್ತಿರುವ ಪ್ರೀತಿಗೆ ಯಾವದೇ ಬಣ್ಣವಿಲ್ಲ, ಕಲಬೆರಕೆ ಇಲ್ಲದ ನಿಷ್ಕಲ್ಮಷ ಬಣ್ಣವದು. ಈ ಹಬ್ಬದ ಸಂಭ್ರಮ ಹೀಗೇ ಇರಲಿ.

English summary
Let's celebrate Holi, the festival of colors. Holi is a spring festival also known as festival of colors, and sometimes festival of love. It is celebrated in Karnataka and many parts of India and world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X