ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದೆಲ್ಲೆಡೆ ಉಲ್ಲಾಸದ ಓಕುಳಿಯ ಚೆಲ್ಲಿದೆ ಹೋಳಿಯ ಬಣ್ಣ!

|
Google Oneindia Kannada News

ದುಷ್ಟ ಶಕ್ತಿಯ ಸಂಹಾರ, ಸಾಮರಸ್ಯದ ದ್ಯೋತಕವಾದ ಹೋಳಿ ಹಬ್ಬದ ಗೌಜು ಹಲವರ ವಾರಾಂತ್ಯವನ್ನು ಅವೀಸ್ಮರಣೀಯಗೊಳಿಸಿದೆ. ಭಾನುವಾರದ ರಜೆಯೊಂದಿಗೆ ರಂಗಿನ ಹಬ್ಬದ ಸಂಭ್ರಮವೂ ಸೇರಿ ಬಣ್ಣದ ಜಾತ್ರೆಗೆ ಮತ್ತಷ್ಟು ಸೊಬಗು ನೀಡಿದೆ.

ತರಹೇವಾರಿ ಬಣ್ಣಗಳ ಓಕುಳಿಯೊಂದಿಗೆ, ಮೋಜು ನೀಡುವ ಮನರಂಜೆನೆಗಳೂ, ಸವಾಲೆಸೆಯುವ ಸ್ಪರ್ಧೆಗಳೂ ಸೇರಿ ಒತ್ತಡದ ಬದುಕಿಗೆ ಒಂದಷ್ಟು ಸಾಂತ್ವನ ನೀಡಿದೆ. ಕಾಮನ ಕಾಲ್ಪನಿಕ ಪ್ರತಿಕೃತಿ ಸುಟ್ಟಂತೆ ನಮ್ಮೊಳಗಿನ ದ್ವೇಷಾಸೂಯೆಗಳು, ನೋವು, ತಲೆಬಿಸಿ ಎಲ್ಲವೂ ಸುಟ್ಟು ಕಪ್ಪಾಗಿ, ಸಂತೋಷವೆಂಬ ರಂಗಿನ ಬಣ್ಣ ನಮ್ಮ ಮನಸ್ಸನ್ನು ತುಂಬಲಿ ಎಂಬ ಹಾರೈಕೆಯೊಂದಿಗೆ ಬಣ್ಣದ ಹಬ್ಬಕ್ಕೆ ಬೀಳ್ಕೊಟ್ಟಿದ್ದೇವೆ.

ಕೆಲವೆಡೆ ಇಂದೂ ಬಣ್ಣದ ಹಬ್ಬದ ಸಂಭ್ರಮ ನಡೆಯುತ್ತಲೇ ಇದೆ. ನೆರೆಯ ಪಾಕಿಸ್ತಾನದ ಕರಾಚಿಯಲ್ಲೂ ನಿನ್ನೆ ಹೋಳಿ ಸಂಭ್ರಮದಿಂದ ಆಚರಿಸಲ್ಪಟ್ಟಿದ್ದು ಮತ್ತೊಂದು ಅಚ್ಚರಿಯ ವಿಷಯ. ಕರ್ನಾಟಕದಲ್ಲಿ ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹಲವೆಡೆ ಹುಣ್ಣಿಮೆಯಿಂದ ಆರಂಭವಾಗುವ ಹೋಳಿ ಐದು ದಿನಗಳ ಕಾಲ ಸಂಭ್ರಮದಿಂದ ನಡೆಯುತ್ತದೆ.

ಪಂಚರಾಜ್ಯಗಳ ಚುನಾವಣೆಯ ನಂತರ ಹಲವರ ಪಾಲಿಗೆ ಭಾನುವಾರದ ಹಬ್ಬ ವರ್ಣಮಯವಾಗಿದ್ದರೆ, ಮತ್ತಷ್ಟು ಜನರಿಗೆ ಅದು ವಿವರ್ಣ! ಒಟ್ಟಿನಲ್ಲಿ ಸಿಹಿ-ಕಹಿ ಎರಡನ್ನೂ ಹೊತ್ತು ತಂದು, ಸಮರಸ ಜೀವನದ ಪಾಠ ಹೇಳಿದ ಹೋಳಿಯ ಝಲಕ್ ನಿಮಗಾಗಿ ಇಲ್ಲಿದೆ...

ಸಂಭ್ರಮದ ಡಬಲ್ ಧಮಾಕಾ

ಸಂಭ್ರಮದ ಡಬಲ್ ಧಮಾಕಾ

ಜಬಲ್ ಪುರದಲ್ಲಿ ಎಬಿವಿಪಿ ವಿದ್ಯಾರ್ಥಿಗಳಿಗೆ ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಬಿಜೆಪಿ ಗೆಲುವು, ಹೋಳಿ ಹಬ್ಬ ಎರಡೂ ಸೇರಿ ಸಂಭ್ರಮದ ಡಬಲ್ ಧಮಾಕಾ ಎನ್ನಿಸಿದೆ. ಪ್ರತಿವರ್ಷ ಎಬಿವಿಪಿ ವಿದ್ಯಾರ್ಥಿಗಳು ದೇಶದೆಲ್ಲೆಡೆ ಹೋಳಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ.[ಕಾಮನಬಿಲ್ಲಿಗೆ ಏಳು ಬಣ್ಣವಾದರೆ ಕಾಮನಹಬ್ಬಕ್ಕೆ ಎಷ್ಟು ಬಣ್ಣ?]

ಕನಸಿನ ಕನ್ಯೆಯ ರಂಗಿನಾಟ

ಕನಸಿನ ಕನ್ಯೆಯ ರಂಗಿನಾಟ

ಬಾಲಿವುಡ್ ನ ಕನಸಿನ ಕನ್ಯೆ ಎಂದೇ ಹೆಸರಾದ ಬಿಜೆಪಿ ಎಂಪಿ, ಹೇಮಾಮಾಲಿನಿ ಮಥುರಾದಲ್ಲಿ ಕಾರ್ಯಕರ್ತರೊಂದಿಗೆ ಹೋಳಿ ಆಚರಿಸಿಕೊಂಡಿದ್ದು ಹೀಗೆ. ಪದ್ಮಶ್ರೀ ಪುರಸ್ಕೃತ ನಟಿ ಹೇಮಾಮಾಲಿನಿ ಸಹ ಬಿಜೆಪಿ ಗೆಲುವನ್ನೂ, ಹೋಳಿಯನ್ನೂ ಒಟ್ಟಾಗಿ ಸಂಭ್ರಮಿಸಿದರು.

ಮರಳ ಮೇಲೆ ಬಣ್ಣದುಂಗುರ

ಮರಳ ಮೇಲೆ ಬಣ್ಣದುಂಗುರ

ಹೋಳಿ ಹಬ್ಬದ ನಿಮಿತ್ತ ಪುರಿಯಲ್ಲಿ ಮಾನಸ್ ಸಹೂ ಎಂಬ ಖ್ಯಾತ ಮರಳು ಕಲಾವಿದ ಅದ್ಭುತ ಕಲಾಕೃತಿಯೊಂದನ್ನು ರಚಿಸಿ ತಮ್ಮದೇ ಆದ ರೀತಿಯಲ್ಲಿ ಹೋಳಿಯ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ.

ಬಾನೆತ್ತರದಲ್ಲಿ ರಂಗುಚೆಲ್ಲಿ...

ಬಾನೆತ್ತರದಲ್ಲಿ ರಂಗುಚೆಲ್ಲಿ...

ಹಿಮಾಚಲ ಪ್ರದೇಶದ ಮಂಡಿಯಲ್ಲಿ ಸಾವಿರಾರು ಜನ ಪರಸ್ಪರ ಬಣ್ಣ ಎರಚಿಕೊಂಡು, ಬಾನೆತ್ತರಕ್ಕೂ ರಂಗುಚೆಲ್ಲೋಕೆ ಹೊರಟಿದ್ದು ಹೀಗೆ!

ಜವಾನರಿಗೂ ಗುಲಾಲಿನ ಗುಂಗು

ಜವಾನರಿಗೂ ಗುಲಾಲಿನ ಗುಂಗು

ಅಗರ್ಥಲದಲ್ಲಿ ನಮ್ಮ ಹೆಮ್ಮೆಯ ಬಿಎಸ್ ಎಫ್ ಯೋಧರು ಗುಲಾಲಿನ ಗುಂಗಲ್ಲಿ ಸಂಭ್ರಮಿಸಿ, ದೇಶದ ಜನತೆಗೆ ಹೋಳಿಯ ಶುಭ ಕೋರಿದ್ದು ಹೀಗೆ.

ಹೆಂಗೆಳೆಯರ ಹೋಳಿ ಮತ್ತು ಜಿಲೇಬಿ ಸ್ಪರ್ಧೆ!

ಹೆಂಗೆಳೆಯರ ಹೋಳಿ ಮತ್ತು ಜಿಲೇಬಿ ಸ್ಪರ್ಧೆ!

ಕೋಲ್ಕತ್ತಾದಲ್ಲಿ ಬಸಂತ ಉತ್ಸವ ಎಂಬ ಹೆಸರಿನಲ್ಲಿ ಆಚರಣೆಯಾಗುವ ಹೋಳಿ ಹೆಂಗೆಳೆಯರ ಪಾಲಿಗೆ ಅತ್ಯಂತ ಸಂತಸದ ಹಬ್ಬ. ಈ ವರ್ಷವಂತೂ ಕೋಲ್ಕತ್ತಾದ ಹಲವೆಡೆ ಹೋಳಿ ವಿಶೇಷ ಎಂಬಂತೆ ಜಿಲೇಬಿ ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿತ್ತು. ನೂರಾರು ಜನ ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಯಾರು ಗೆದ್ದರೋ ಬಿಟ್ಟರೋ, ಒಟ್ಟಿನಲ್ಲಿ ಎಲ್ಲರ ಬಾಯಿ ಸಿಹಿಯಾಗಿದ್ದಂತೂ ಸತ್ಯ!

ಕೆಂಡದೊಂದಿಗೆ ಸರಸ

ಕೆಂಡದೊಂದಿಗೆ ಸರಸ

ಗುಜರಾತಿನ ಸೂರತ್ ನಲ್ಲಿ ಹೋಲಿಕಾ ದಹನದ ನಂತರ ಉಳಿಯುವ ಕೆಂಡದಲ್ಲಿ ಬರಿಕಾಲಲ್ಲಿ ನಡೆದು ಹರಕೆ ಒಪ್ಪಿಸುವ ಪದ್ಧತಿ ಇದೆ. ನಿನ್ನೆಯ ಹೋಳಿ ಅದಕ್ಕೂ ಸಾಕ್ಷಿಯಾಯಿತು.

ಹೋಳಿಗೆ ವಿದೇಶಿಯರ ರಂಗು

ಹೋಳಿಗೆ ವಿದೇಶಿಯರ ರಂಗು

ಹೋಳಿಗೆ ಮತ್ತಷ್ಟು ರಂಗು ನೀಡಿದಂತೆ, ಗುರ್ಗಾವ್ (ಗುರುಗ್ರಾಮ) ನಲ್ಲಿ ಕೆಲ ವಿದೇಶಿ ಮಹಿಳೆಯರು ತುಂಡುಡುಗೆಯಲ್ಲೇ ಹೋಳಿ ಆಚರಿಸಿದರು.

ಬಣ್ಣ ಕರುಡಲ್ಲ

ಬಣ್ಣ ಕರುಡಲ್ಲ

ಕೋಲ್ಕತ್ತದ ಅಂಧರ ಶಿಕ್ಷಣ ಕೇಂದ್ರವೊಂದರಲ್ಲಿ ಅಂಧ ಮಹಿಳೆಯರು ಹೂವಿನ ಹೋಳಿ ಆಚರಿಸಿ, ಬಣ್ಣಕ್ಕೆ ಅಂಧತ್ವವಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಪಾಠವಿಲ್ಲ, ಬಣ್ಣವೇ ಎಲ್ಲ

ಪಾಠವಿಲ್ಲ, ಬಣ್ಣವೇ ಎಲ್ಲ

ಜಬಲ್ ಪುರದ ಗ್ವಾರಿಘಾಟ್ ನಲ್ಲಿ ಗುರುಕುಲದ ಮಕ್ಕಳು ಓದು-ಬರಹದ ತಲೆಬಿಸಿಯನ್ನೆಲ್ಲ ಕ್ಷಣಕಾಲ ಮರೆತು ಬಣ್ಣದೋಕುಳಿಯಲ್ಲಿ ಮೈಮರೆತಿದ್ದು ಹೀಗೆ.

English summary
The festival of colours is celebrating in th country today also. One of the imporatant Indian religious festivals holi has witnessed to so many joyful moments. Here is some of the photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X