ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರಮಹಾಲಕ್ಷ್ಮಿ ಹಬ್ಬ: ಸುಲಭ, ಸುಂದರ ಅಲಂಕಾರ ಹೇಗೆ?

|
Google Oneindia Kannada News

ಶ್ರಾವಣ ಮಾಸ ಬಂತು ಅಂದ್ರೆ ಹಬ್ಬಗಳದ್ದೇ ಜಾತ್ರೆ. ಹೆಂಗೆಳೆಯರಿಗಂತೂ ಸಂಭ್ರಮವೋ ಸಂಭ್ರಮ. ಶ್ರಾವಣ ಮಾಸದ ಶುಕ್ಲಪಕ್ಷದ ಹುಣ್ಣಿಮೆಗೂ ಮೊದಲ ಶುಕ್ರವಾರ ನಡೆಯುವ ವರಮಹಾಲಕ್ಷ್ಮಿ ಹಬ್ಬ ಈ ಬಾರಿ ಆಗಸ್ಟ್ 4 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಲಲನೆಯರೆಲ್ಲ ಈಗಿನಿಂದಲೇ ವರಮಹಾಲಕ್ಷ್ಮಿ ವ್ರತಕ್ಕಾಗಿ ಸಿದ್ಧತೆ ನಡೆಸುವುದಕ್ಕೆ ತೊಡಗಿದ್ದಾರೆ.

ಹೆಂಗಳೆಯರು ಮತ್ತೈದೆತನದ ಆಶೀರ್ವಾದ ಬೇಡುವ, ಕುಟುಂಬದ ನೆಮ್ಮದಿಗಾಗಿ ಲಕ್ಷ್ಮಿಯನ್ನು ಪ್ರಾರ್ಥಿಸಿ ವ್ರತ ಕೈಗೊಳ್ಳುವ ಈ ಹಬ್ಬವನ್ನು ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ಭಕ್ತಿ-ಸಂಭ್ರಮದಿಂದ ವಿವಾಹಿತ ಮಹಿಳೆಯರು ಆಚರಿಸುತ್ತಾರೆ.

ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ ಮತ್ತು ಹಿನ್ನೆಲೆವರಮಹಾಲಕ್ಷ್ಮಿ ಹಬ್ಬದ ವಿಶೇಷತೆ ಮತ್ತು ಹಿನ್ನೆಲೆ

ಆದರೆ ವರಮಹಾಲಕ್ಷ್ಮಿ ಹಬ್ಬದ ಅಲಂಕಾರವೇ ಒಂದು ದೊಡ್ಡ ತಲೆಬಿಸಿ ಎನ್ನಿಸಿದೆ. ಅದರಲ್ಲೂ ದೇವಿಗೆ ಸೀರೆ ಉಡಿಸುವುದು, ಹೆಚ್ಚು ಹಣ ವೆಚ್ಚ ಮಾಡದೆ ಸರಳವಾಗಿಯೂ, ಸುಂದರವಾಗಿಯೂ ಕಾಣುವಂತೆ ವರಮಹಾಲಕ್ಷ್ಮಿಯನ್ನು ಸಿಂಗರಿಸುವುದು ಹೇಗೆ ಎಂಬುದು ಹೆಂಗೆಳೆಯರ ಪ್ರಶ್ನೆ. ಅದಕ್ಕೆಂದೇ ವರಮಹಾಲಕ್ಷ್ಮಿ ಹಬ್ಬಕ್ಕೆ ಹೆಚ್ಚು ಹಣ ವೆಚ್ಚ ಮಾಡದೆ, ಗೃಹೋಪಯೋಗಿ ವಸ್ತುಗಳನ್ನು ಬಳಸಿಯೇ ಅಲಂಕಾರ ಮಾಡುವುದು ಹೇಗೆ ಎಂಬ ಬಗ್ಗೆ ಸ್ಟೆಬ್ ಬೈ ಸ್ಟೆಪ್ ಮಾಹಿತಿ ನೀಡುವ ವಿಡಿಯೋ ವೊಂದು ಯೂಟ್ಯೂಬ್ ನಲ್ಲಿ ಅಪ್ಲೋಡ್ ಆಗಿದ್ದು, ಹಬ್ಬ ಹತ್ತಿರವಾಗುತ್ತಿದ್ದಂತೆಯೇ ಈ ವಿಡಿಯೂ ವೈರಲ್ ಆಗಿದೆ.

2017: ಶ್ರಾವಣ, ಭಾದ್ರಪದ, ಕಾರ್ತಿಕ ಮಾಸದ ಹಬ್ಬಹರಿದಿನಗಳ ಪಟ್ಟಿ 2017: ಶ್ರಾವಣ, ಭಾದ್ರಪದ, ಕಾರ್ತಿಕ ಮಾಸದ ಹಬ್ಬಹರಿದಿನಗಳ ಪಟ್ಟಿ

ಕಲೆ ಮತ್ತು ಕರಕುಶಲ ತರಬೇತಿದಾರರಾದ ಮಮತಾ ಎನ್ ಸ್ವಾಮಿ ಮತ್ತು ಗಾಯಕಿ ಚೂಡಾಮಣಿ ಡಿ.ಎನ್ ಎಂಬುವವರು ಈ ವಿಡಿಯೋದಲ್ಲಿ ವರಮಹಾಲಕ್ಷ್ಮಿಯ ಅಲಂಕಾರದ ಕುರಿತು ಸಚಿತ್ರ ವಿವರ ನೀಡಿದ್ದಾರೆ.

ಈ ವಿಡಿಯೋ ಮೂಲಕ ನೀವೂ ವರಮಹಾಲಕ್ಷ್ಮಿ ವ್ರತಕ್ಕಾಗಿ ಲಕ್ಷ್ಮಿಯನ್ನು ಸುಲಭವಾಗಿ, ಅಷ್ಟೇ ಸುಂದರವಾಗಿ ಸಿಂಗರಿಸಬಹುದು. ಈ ವಿಡಿಯೋದಲ್ಲಿ ಹೇಳಿರುವಂತೆ ವರಮಹಾಲಕ್ಷ್ಮಿ ಸಿಂಗಾರಕ್ಕೆ ಅಗತ್ಯವಿರುವ ವಸ್ತುಗಳ ಪಟ್ಟಿ, ಅಲಂಕಾರ ಹೇಗೆ ಎಂಬೆಲ್ಲ ಮಾಹಿತಿ ನಿಮಗಾಗಿ ಇಲ್ಲಿದೆ...

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಸೀರೆ
ಬ್ಲೌಸ್ ಪೀಸ್
ಬಿಂದಿಗೆ (ಕಂಚಿನದ್ದಾದರೆ ಒಳ್ಳೆಯದು)
ಚಿಕ್ಕ ಬಿಂದಿಗೆ
ಸೆಫ್ಟಿಪಿನ್
ಶರ್ಟ್ ಹ್ಯಾಂಗರ್
ಬಾಲ್ ಪಿನ್ಸ್
ದಾರ
ಫ್ಲೆಕ್ಸಿ ವೈಯರ್
ನ್ಯೂಸ್ ಪೇಪರ್
ಕತ್ತರಿ
ಸೆಲ್ಲೋ ಟೇಪ್
ಅಕ್ಕಿ
ನೀರು
ಆಭರಣಗಳು (ಅಗತ್ಯವಿದ್ದರೆ)
ರೆಡಿ ಮೇಡ್ ಪಾದ ಮತ್ತು ಕೈ(ಅಗತ್ಯವಿದ್ದರೆ)
ತೆಂಗಿನ ಕಾಯಿಯಲ್ಲಿ ಬರೆದ ದೇವಿಯ ಮುಖ
ಹೂವು, ಮಾಲೆ

ಸೀರೆ ಸಿದ್ಧಮಾಡಿಕೊಳ್ಳಿ

ಸೀರೆ ಸಿದ್ಧಮಾಡಿಕೊಳ್ಳಿ

ದೇವಿಯನ್ನು ಸಿಂಗರಿಸುವುದಕ್ಕಾಗಿ ನಿಮಗಿಷ್ಟವಾದ ಸೀರೆಯನ್ನು ಆರಿಸಿಕೊಳ್ಳಿ. ಬಿಳಿ ಬಣ್ಣದ, ಕೆಂಪಂಚಿನ ಸೀರೆಯಾದರೆ ದೇವಿಗೆ ಶ್ರೇಷ್ಠ. ಅದಿಲ್ಲವೆಂದರೆ ಯಾವ ಬಣ್ಣದ್ದಾದರೂ ನಡೆಯುತ್ತದೆ. ಭಕ್ತಿಯಿದ್ದರೆ ಸಾಕು. ಸೀರೆಯ ನೆರಿಗೆಯನ್ನು ನೀಟಾಗಿ ಹಿಡಿದು ಅದನ್ನು ಪಿನ್ ಮಾಡಿಟ್ಟುಕೊಳ್ಳಿ. ಸೆರಗಿಗೆ ಅಗತ್ಯವಿರುವಷ್ಟನ್ನು ಬಿಟ್ಟು ನೆರಿಗೆಯನ್ನು ಎರಡು ಭಾಗ ಮಾಡಿ ಪಿನ್ ಮಾಡಿಕೊಳ್ಳಿ. ಸೆರಗಿನ ಭಾಗವನ್ನೂ ಹಾಗೆಯೇ ನೀಟಾಗಿ ಮಡಚಿ ಪಿನ್ ಮಾಡಿಕೊಳ್ಳಿ. ಅದೇ ಬಣ್ಣದ ಬ್ಲೌಸ್ ಪೀಸ್ ತೆಗೆದುಕೊಂಡು ಅದರೊಳಗೆ ನ್ಯೂಸ್ ಪೇಪರ್ ಇಟ್ಟು ಅದನ್ನು ಪೈಪ್ ನಂತೆಯೇ ಮಡಚಿ. ಅದು ದೇವಿಯ ಕೈ ಅನ್ನಿಸುವಂತಿರಲಿ.

ಹ್ಯಾಂಗರ್

ಹ್ಯಾಂಗರ್

ಸ್ಟೀಲ್ ಹ್ಯಾಂಗರ್ ವೊಂದನ್ನು ತೆಗೆದುಕೊಂಡು ಅದನ್ನು ಚಿತ್ರದಲ್ಲಿ ತೋರಿಸಿರುವಂತೆ ಬೆಂಡ್ ಮಾಡಿ. ಅದನ್ನು ಪುಟ್ಟ ಬಿಂದಿಗೆಯ ಕಂಠಕ್ಕಿಟ್ಟು ಅದು ಬೀಳದಂತೆ ಒಂದು ತಂತಿ ಕಟ್ಟಿ. ಈ ಬಿಂದಿಗೆಯನ್ನು ದೊಡ್ಡ ಬಿಂದಿಗೆಯ ಮೇಲಿಟ್ಟು ಎರಡೂ ಬಿಂದಿಗೆಯನ್ನೂ ಸೇರಿಸಿ ಮಧ್ಯೆ ಸೆಲ್ಲೋ ಟೇಪ್ ಅಂಟಿಸಿ. (ಇಲ್ಲವೆಂದರೆ ಮೇಲಿನ ಬಿಂದಿಗೆ ಬೀಳುವ ಸಾಧ್ಯತೆ ಇರುತ್ತೆ).

ಸೀರೆ ಉಡಿಸಿ

ಸೀರೆ ಉಡಿಸಿ

ಬಿಂದಿಗೆ ಸಿದ್ಧವಾಗುತ್ತಿದ್ದಂತೆಯೇ ನೆರಿಗೆ ಮಾಡಿ ರೆಡಿ ಇಟ್ಟ ಸೀರೆಯನ್ನು ದೊಡ್ಡ ಬಿಂದಿಗೆಗೆ ದಾರದಿಂದ ಕಟ್ಟಿ. ನೆರಿಗೆಗಳು ಬಿಂದಿಗೆಯ ಮಧ್ಯಭಾಗಕ್ಕೆ ಬರುವಂತಿರಲಿ. ನಂತರ ನ್ಯೂಸ್ ಪೇಫರ್ ಹಾಕಿ ಸುತ್ತಿಟ್ಟ ಬ್ಲೌಸ್ ಪೀಸ್ ಅನ್ನು ದೇವಿಯ ಸೀರೆಯ ಬ್ಪೊಸ್ ನಂತೆಯೂ, ಅದೇ ಕೈಯಂತೆಯೂ ಕಾಣುವ ಹಾಗೆ ಇಡಿ. ಈ ಸಂದರ್ಭದಲ್ಲಿ ಚಿಕ್ಕ ಬಿಂದಿಗೆಗೆ ಕಟ್ಟಿದ ಹ್ಯಾಂಗರ್ ಬ್ಲೌಸ್ ಪೀಸ್ ಒಪ್ಪವಾಗಿ ನಿಲ್ಲುವುದಕ್ಕೆ ಸಹಕರಿಸುತ್ತದೆ. ಇವಕ್ಕೆ ಬಾಲ್ ಪಿನ್ಸ್ ಹಾಕಿ ಸರಿಯಾಗಿ ನಿಲ್ಲುವಂತೆ ನೋಡಿಕೊಳ್ಳಿ. ನಂತರ ಸೆರಗನ್ನು ಹೊದೆಸಿ, ಪಿನ್ ಮಾಡಿ. ಒಳಗೆ ನ್ಯೂಸ್ ಪೇಪರ್ ಇರುವುದರಿದ ಕೈಗಳನ್ನು ಮಡಚಿ ನಿಲ್ಲಿಸಿದರೆ ಅದು ಹಾಗೆಯೇ ನಿಲ್ಲುತ್ತದೆ. ಈ ಕೈಗಳಿಗೆ ಕೊನೆಯಲ್ಲಿ ಕಮಲವನ್ನಿಟ್ಟರೆ ಸಾಕ್ಷಾತ್ ಲಕ್ಶ್ಮಿಯೇ ಪ್ರತ್ಯಕ್ಷಳಾದಂತೆ ಕಾಣಿಸುತ್ತದೆ.

ದೇವಿಯ ಮುಖ

ದೇವಿಯ ಮುಖ

ನಂತರ ಚಿಕ್ಕ ಬಿಂದಿಗೆಯ ಒಳಗೆ ನೀರು ಹಾಕಿ. ಏಕೆಂದರೆ ನೀರಿದ್ದರೆ ಈ ಮೂರ್ತಿ ಗಟ್ಟಿಯಾಗಿ ನಿಲ್ಲುತ್ತೆ. ತೆಂಗಿನ ಕಾಯಿಯ ಮೇಲೆ ಅಂದವಾಗಿ ಬರೆದ ದೇವಿಯ ಮುಖವನ್ನು ಚಿಕ್ಕ ಬಿಂದಿಗೆಯ ಮೇಲೆ ಮುಖದಂತೆ ಇಡಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಭರಣಗಳನ್ನು ಹಾಕಿ, ದೇವಿಯನ್ನು ಸಿಂಗರಿಸಿ.

ಮನೆಗೆ ಬಂದಳು ಸಾಕ್ಷಾತ್ ಮಹಾಲಕ್ಷ್ಮಿ!

ಮನೆಗೆ ಬಂದಳು ಸಾಕ್ಷಾತ್ ಮಹಾಲಕ್ಷ್ಮಿ!

ಹಳೆಯ ನ್ಯೂಸ್ ಪೇಪರ್ ಗಳನ್ನು ಮುದ್ದೆ ಮಾಡಿ ಅದನ್ನು ದೇವಿಯ ತೊಡೆ ಎಂಬಂತೆ ಸೀರೆಯ ಒಳಗೆ ಇಡಿ. ದೇವಿಯ ಕೈಗಳ ಮೇಲೆ ಎರಡು ಕಮಲದ ಹೂವಿಗಳನ್ನು ಇಡಿ. ಮಾಲೆಯನ್ನೂ ಹಾಕಿ. ನಂತರ ರೆಡಿ ಮೇಡ್ ಕಾಲು ಅಥವಾ ಕೈಗಳಿದ್ದರೆ ಅವನ್ನೂ ಜೋಡಿಸಿ, ಪಿನ್ ಮಾಡಿ. ಈಗ ಸಾಕ್ಷಾತ್ ವರಮಹಾಲಕ್ಷ್ಮಿಯ ಎದ್ದು ಬಂದಂತೆ ಕಾಣಿಸುತ್ತದೆ! ಇದು ಅತ್ಯಂತ ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ಮಾಡಬಹುದಾದ ಸುಂದರ ದೇವಿಯ ಅಲಂಕಾರ. ವಿಡಿಯೋಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.

English summary
Varamahalakshmi festival is an important festival, celebrates usually on friday before full moon day of Sharavana masa. Here are the tips to prepare for Varamahalakshmi festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X