ಭೀಮನ ಅಮಾವಾಸ್ಯೆ ವ್ರತ ಆಚರಣೆ ಸಂಪೂರ್ಣ ವಿಧಾನ

By: ಮನಸ್ವಿನಿ, ನಾರಾವಿ
Subscribe to Oneindia Kannada

ಆಷಾಢ ಬಹುಳ ಅಮಾವಾಸ್ಯೆಯಂದು ಶ್ರೀ ಜ್ಯೋತಿರ್ಭೀಮೇಶ್ವರ ವ್ರತವನ್ನು ಸತಿ ಸಂಜೀವಿನಿ ವ್ರತ, ಭೀಮನ ಅಮಾವಾಸ್ಯೆ ವ್ರತ, ಗಂಡನ ಪೂಜೆ, ಜ್ಯೋತಿಸ್ತಂಭ ವ್ರತ ಎಂದು ಕರೆಯುವುದುಂಟು. ಆದರೆ, ಭೀಮನ ಅಮಾವಾಸ್ಯೆ ಎಂದು ಎಲ್ಲೆಡೆ ಜನಪ್ರಿಯವಾಗಿದೆ. ಈ ವ್ರತ ಆಚರಣೆ ವಿಧಾನ ಇಲ್ಲಿದೆ.

ವ್ರತಾಚರಣೆ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಭಿನ್ನತೆಯಿಂದ ಕೂಡಿದೆ. ಉದ್ದೇಶ ಒಂದೇ ಆದರೂ, ಆಚರಣೆಯಲ್ಲಿ ವಿವಿಧತೆಯನ್ನು ಕಾಣಬಹುದು. ದಕ್ಷಿಣ ಕನ್ನಡದಲ್ಲಿ ಇದನ್ನು ಆಟಿ ಅಮಾವಾಸ್ಯ ಎಂದರೆ ಉತ್ತರ ಕನ್ನಡದ ಕಡೆ ಇದನ್ನೇ ಕೊಡೆ ಅಮಾವಾಸ್ಯೆ, ಅಳಿಯನ ಅಮಾವಾಸ್ಯೆ ಎನ್ನುತ್ತಾರೆ. ಕಾರವಾರದಲ್ಲಿ ಮಾತ್ರ ಅದಕ್ಕೆ ಗಟಾರದ ಅಮಾವಾಸ್ಯೆ ಎಂದು ಕರೆಯುತ್ತಾರೆ. ಅದು ಮಾಂಸ, ಮದಿರೋಪಾಸಕರ ಮಹೋತ್ಸವ.

How to perform Bheemana Amavasya Vrata

ಹೆಂಗಳೆಯರು ಕೈ ಕಂಕಣ ಕಟ್ಟಿಕೊಂಡು ಜ್ಯೋರ್ತಿರ್ಭೀಮೇಶ್ವರನ್ನು ಧ್ಯಾನಿಸಿ, ವ್ರತ ಕೈಗೊಳ್ಳುತ್ತಾರೆ. ರಾಹುಕಾಲ ಹೊರತುಪಡೆಸಿ ಬೆಳಗ್ಗೆ ಅಥವಾ ಸಂಜೆ ಯಾವುದೇ ಶುಭ ಮಹೂರ್ತದಲ್ಲಿ ವ್ರತ ಕೈಗೊಳ್ಳಬಹುದು.

ಯಾರು ಆಚರಿಸಬೇಕು? : ಮೊದಲೇ ಹೇಳಿದಂತೆ ಅವಿವಾಹಿತ ಹೆಣ್ಣು ಮಕ್ಕಳು, ವಿವಾಹಿತ ನವ ವಧು ಆಚರಿಸಬಹುದು. ಒಮ್ಮೆ ವ್ರತ ಕೈಗೊಂಡರೆ ಐದು, ಒಂಭತ್ತು ಅಥವಾ ಹದಿನಾರು ವರ್ಷ ಸಂಪೂರ್ಣಗೊಳಿಸಿ ಉದ್ಯಾಪನೆ ಮಾಡಿ ಎಲ್ಲರಿಗೂ ಸಿಹಿಯೂಟ ಹಾಕಿಸಬೇಕು ಎಂದು ಹಿಂದೂ ಪುರಾಣಗಳು ಹೇಳುತ್ತವೆ. ಆಷಾಢದಲ್ಲಿ ಗಂಡನ ಸಂಗ ತೊರೆದು ತವರಿನ ಗೂಡು ಸೇರಿಕೊಂಡ ಹೆಂಗಳೆಯರು ಗಂಡನ ಪಾದಕ್ಕೆರಗಿ ಮತ್ತೆ ಜೀವನದ ಬಂಡಿ ಹೂಡುವುದು ವಾಡಿಕೆ.

ಪೂಜಾ ವಿಧಾನ: ಒಂದು ತಟ್ಟೆಯಲ್ಲಿ ಧಾನ್ಯ ರಾಶಿ (ಅಕ್ಕಿ) ಹಾಕಿ , ಅದರ ಮೇಲೆ 2 ದೀಪದ ಕಂಭ ಇಡಬೇಕು. ತುಪ್ಪ ಹಾಕಿ ದೀಪ ಹಚ್ಚಬೇಕು . ಈ ದೀಪಸ್ತಂಭದಲ್ಲಿ ಈಶ್ವರ ಪಾರ್ವತಿಯನ್ನು ಆವಾಹನೆ ಮಾಡಿ ಪೂಜೆ ಮಾಡಬೇಕು .

ಪೂಜಾ ವ್ರತ ವಿಧಾನ ಆಡಿಯೋ ಡೌನ್ ಮಾಡಿಕೊಳ್ಳಿ (ವಿಎಲ್ ಸಿ ಪ್ಲೇಯರ್ ನಲ್ಲಿ ಪ್ಲೇ ಆಗುತ್ತದೆ)
ಭಾಗ 1 ಹಾಗೂ ಭಾಗ 2

ಪೂಜಾ ಸಾಮಾಗ್ರಿಗಳು: ಮಣೆ / ಮಂಟಪ, ಭೀಮೇಶ್ವರ ದೇವರ ಪಟ
* ನಂದಾ ದೀಪ, ತುಪ್ಪ, ಎಣ್ಣೆ, ದೀಪಕ್ಕೆ ಹಾಕುವ ಬತ್ತಿ
* ಘಂಟೆ, ಪಂಚಪಾತ್ರೆ, ಉದ್ದರಣೆ, ಅರ್ಘ್ಯ ಪಾತ್ರೆ, ನೀರು
* ಅರಿಶಿನ, ಕುಂಕುಮ, ಮಂತ್ರಾಕ್ಷತೆ
* ಶ್ರೀಗಂಧ, ಊದಿನ ಕಡ್ಡಿ
* ವಿವಿಧ ಹೂವು, ಬಿಲ್ವ ಪತ್ರೆ, ಗೆಜ್ಜೆ ವಸ್ತ್ರ
* ವೀಳ್ಯದ ಎಲೆ, ಅಡಿಕೆ, ಹಣ್ಣು , ತೆಂಗಿನಕಾಯಿ,ದಕ್ಷಿಣೆ
* ನೈವೇದ್ಯ - ಪಾಯಸ, ಹಣ್ಣು..ಭಂಡಾರಕ್ಕೆ ಮಾಡಿದ ಹಿಟ್ಟಿನ ಪದಾರ್ಥ
*ಆರತಿ ತಟ್ಟೆ, ಹಲಗಾರತಿ, ಕರ್ಪೂರ, ಮಂಗಳಾರತಿ ಬತ್ತಿ.

HubliDharwad Municipal Corporation decided to ban POP Ganesh idol

9 ಗಂಟಿನ ಗೌರಿ ದಾರ ಇಟ್ಟು ಪೂಜೆ ಮಾಡಬೇಕು, ಪೂಜೆ ನಂತರ ಕೈಗೆ ಕಟ್ಟಿಕೊಳ್ಳಬೇಕು. ಸಂಕಲ್ಪದಿಂದ ಮೊದಲುಗೊಂಡು ಗಣಪತಿ ಪೂಜೆ ಮಾಡಿ ನಂತರ ಭೀಮೆಶ್ವರನ ಪೂಜೆ ಮಾಡಬೇಕು. ಗಣಪತಿ ಅಷ್ಟೋತ್ತರ, ಶಿವ ಅಷ್ಟೋತ್ತರ, ದೇವರ ಆವಾಹನೆ,ಸ್ಥಾಪನೆ, ಅರ್ಚಣೆ, ಹೂವು, ನೈವೇದ್ಯ ಅರ್ಪಣೆ, ಆರತಿಯೊಂದಿಗೆ ಒಂದು ಹಂತ ಪೂಜೆ ಸಮಾಪ್ತಿಗೊಳಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bheemana Amavasya (Bhima Amavasya or Jyoti Bheemeswara Vrata / Pathi Sanjivani Puja) is observed on Ashada Amavasy in Karnataka. Here is method how to perform the vratha pooja.
Please Wait while comments are loading...