ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿ ಅರೇಬಿಯಾದಲ್ಲಿ ಪವಿತ್ರ ಹಬ್ಬ ರಂಜಾನ್ ಹೇಗೆ ಆಚರಿಸುತ್ತಾರೆ?

By ಅಬ್ದುಲ್ ಭದ್ರಾವತಿ, ರಿಯಾದ್
|
Google Oneindia Kannada News

ಇಸ್ಲಾಮೀ ಪಂಚಾಂಗದ ಒಂಭತ್ತನೇ ತಿಂಗಳು ವಿಶ್ವದಾದ್ಯಂತ ಮುಸ್ಲಿಂ ಬಾಂಧವರಿಗೆ ಅತ್ಯಂತ್ರ ಪವಿತ್ರ ಮಾಸ. ರಂಜಾನ್ ತಿಂಗಳ ಪೂರ್ತಿ, ಅರುಣೋದಯದಿಂದ - ಸೂರ್ಯಾಸ್ತದವರೆಗೆ, ನೀರು, ಆಹಾರ, ಲೈಂಗಿಕ ಸಂಪರ್ಕವನ್ನು ತ್ಯಜಿಸಿ ವೃತಾಚರಣೆ ಮಾಡಿ ಮುಸ್ಲಿಮರು ಕೃತಾರ್ಥರಾಗುತ್ತಾರೆ.

ಹಲವು ಕಾರಣಗಳಿಗಾಗಿ ರಂಜಾನ್ ಅತ್ಯಂತ ಪುಣ್ಯದಾಯೀ ಮಾಸ ಎಂದು ಪರಿಗಣಿಸಲ್ಪಡುತ್ತದೆ. ಮುಖ್ಯವಾಗಿ, ಈ ತಿಂಗಳು ಪವಿತ್ರ ಕುರ್'ಆನ್ ಅವತೀರ್ಣಗೊಳ್ಳಲು ಆರಂಭವಾಯಿತು. ಹಾಗಾಗಿ, ಮುಸ್ಲಿಮ ಬಾಂಧವರೆಲ್ಲರೂ, ವ್ರತಾಚರಣೆಯ ಜೊತೆಗೆ ಕುರ್'ಆನ್ ಪಾರಾಯಣ ಸಹ ಮಾಡುತ್ತಾರೆ.

ರಂಜಾನ್ 'ವಸ್ತ್ರ ಸಂಹಿತೆ' ಬಿಸಿ, ಟಿವಿ ನಿರೂಪಕಿ ಅಮಾನತು!ರಂಜಾನ್ 'ವಸ್ತ್ರ ಸಂಹಿತೆ' ಬಿಸಿ, ಟಿವಿ ನಿರೂಪಕಿ ಅಮಾನತು!

ವಿವಿಧ ದೇಶಗಳಲ್ಲಿ ವಿವಿಧ ರೀತಿಯಲ್ಲಿ ರಂಜಾನ್ ಆಚರಿಸಲ್ಪಡುತ್ತದೆ. ಆರಾಧನೆಯ ವೈಖರಿ ಒಂದೇ ತೆರನದ್ದಾದರೂ, ದಿನಚರಿಯಲ್ಲಿ ಬಹಳ ವ್ಯತ್ಯಾಸ ಕಾಣಲು ಸಿಗುತ್ತದೆ. ಮುಸ್ಲಿಂ ರಾಷ್ಟ್ರಗಳು ರಂಜಾನ್ ತಿಂಗಳ ಪೂರ್ತಿ ವಿಶೇಷವಾದ ವೇಳಾಪಟ್ಟಿಯನ್ನು ಶಾಲಾ ಕಾಲೇಜುಗಳಿಗೂ, ಕಛೇರಿಗಳಿಗೂ ಘೋಷಿಸುತ್ತವೆ. ಹಗಲಿಡೀ ಉಪವಾಸ ಇರುವ ಜನರಿಗೆ ಅನುಕೂಲವಾಗಲೆಂದು 8 ಘಂಟೆಗಳ ಬದಲು 5-6 ಘಂಟೆಗಳ ಕೆಲಸ ಮಾತ್ರ ನಿರೀಕ್ಷಿಸುತ್ತವೆ. ಬಹುತೇಕ ಶಾಲೆಗಳು, ತಿಂಗಳು ಪೂರ್ತಿ ಮುಚ್ಚಿರುತ್ತವೆ.

How Ramadan is celebrated in Saudi Arabia

ಮೇಲೆ ಹೇಳಿದ ರೀತಿಯಲ್ಲಿ ಹಲವು ಸೌಲಭ್ಯಗಳ ಕಾರಣ ಮುಸ್ಲಿಂ ರಾಷ್ಟ್ರಗಳಲ್ಲಿ ವ್ರತಾಚರಣೆ ಬಹು ಸುಲಭ ಎಂದೇ ಹೇಳಬಹುದು. ಹಗಲಿನ ಬಹುಪಾಲು ಕಛೇರಿಗಳು, ಶಾಲಾ ಕಾಲೇಜುಗಳು, ಮಳಿಗೆಗಗಳು ಮುಚ್ಚಿ, ಸೂರ್ಯಾಸ್ತದ ನಂತರ, ರಾತ್ರಿಯ ವಿಶೇಷ ಆರಾಧನೆಯ ನಂತರ ಕಾರ್ಯಾಚರಿಸುತ್ತವೆ.

ಈದ್ 2018: ಕೇರಳದಲ್ಲಿ ಶುಕ್ರವಾರ, ಇತರೆಡೆ ಶನಿವಾರ ಆಚರಣೆ ಈದ್ 2018: ಕೇರಳದಲ್ಲಿ ಶುಕ್ರವಾರ, ಇತರೆಡೆ ಶನಿವಾರ ಆಚರಣೆ

ಇದನ್ನು ನೋಡಿದ ಪಾಶ್ಚಾತ್ಯ ದೇಶದ ಗೆಳೆಯನೊಬ್ಬ, "ರಂಜಾನ್ ತಿಂಗಳಿನಲ್ಲಿ ಹಗಲನ್ನು ರಾತ್ರಿಯಾಗಿಯೂ, ರಾತ್ರಿಯನ್ನು ಹಗಲಾಗಿಸಿಯೂ ಬದಲಿಸಿ ಬಿಡುತ್ತೀರಾ" ಎಂದು ಹಾಸ್ಯ ಮಾಡಿದ. ಒಂದರ್ಥದಲ್ಲಿ ಇದು ನಿಜವೂ ಹೌದು. ಆದರೆ ಮುಸ್ಲಿಮೇತರ ರಾಷ್ಟ್ರಗಳ ಮುಸ್ಲಿಮರಿಗೆ ಈ ಸೌಲಭ್ಯವಿಲ್ಲದೆ, ಎಲ್ಲರಂತೆ ಅವರು ಹಗಲು ಪೂರ್ತಿ ಕೆಲಸ, ದಂಧೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುತ್ತಾ, ಅದೇ ಸಮಯ ತಮ್ಮ ಧಾರ್ಮಿಕ ನಂಬುಗೆಗಳನ್ನೂಅನುಸರಿಸಿಕೊಂಡು, ಆಚರಿಸಿಕೊಂಡು ಹೋಗುವುದು ಅವರ ಮಟ್ಟಿಗೆ ಅವರ ಆರಾಧನೆ ಹೆಚ್ಚು ತೂಕದ್ದು ಎಂದು ಹೆಮ್ಮೆಯಿಂದ ಬೀಗುತ್ತಾರೆ.

How Ramadan is celebrated in Saudi Arabia

ನಾನಿರುವ ಸೌದಿ ಅರೇಬಿಯಾದಲ್ಲೂ, ಇತರೆ ಕೊಲ್ಲಿ ರಾಷ್ಟ್ರಗಳಲ್ಲೂ ರಂಜಾನ್ ಎಂದರೆ ಒಂದು ಮೋಜಿನ ಸಮಯದಂತೆ ಕಳೆದು ಹೋಗುತ್ತದೆ. ಹಗಲಿನಲ್ಲಿ ಕರ್ಫ್ಯೂ ತೆರನಾದ ಪರಿಸ್ಥಿತಿ ಇದ್ದು, ರಸ್ತೆಗಳು ಬಿಕೋ ಎನ್ನುತ್ತಿರುತ್ತವೆ. ವೃತಾಚರಣೆ ಮುಗಿದ ಕೂಡಲೇ ನಿಸ್ತೇಜ ನಗರಗಳಿಗೆ ಜೀವ ಬಂದು ಬಿಡುತ್ತದೆ. ಅಂಗಡಿ ಮುಂಗಟ್ಟು, ಮಾಲುಗಳು, ಝಗಝಗ ಬೆಳಕಿನಲ್ಲಿ ರಾರಾಜಿಸುತ್ತವೆ. ಸಂಪೂರ್ಣ ನಗರ ಸಾಲಂಕೃತವಾಗಿ, ಮನೋಹರವಾಗಿ ಕಂಗೊಳಿಸುತ್ತವೆ.

ದಮ್ಮಾಮ್, ಜಿದ್ದಾ ಮುಂತಾದ ನಗರಗಳಲ್ಲಿ ಸಮುದ್ರ ತೀರದಲ್ಲಿ ಜನ ಸೇರಿ, ರಾತ್ರಿ ಪೂರ್ತಿ ಮೋಜಿನಲ್ಲಿ ವೇಳೆ ಕಳೆಯುತ್ತಾರೆ. 'ಬಾರ್ಬಿಕ್ಯೂ', 'ಶೀಷಾ' ಅಥವಾ 'ಹುಕ್ಕಾ' ಸೇವನೆ ಮಾಡುತ್ತಾ ಗೆಳೆಯರೊಂದಿಗೆ ಸಂಪೂರ್ಣ ರಾತ್ರಿ ಕಳೆಯುತ್ತಾರೆ. ಅರೇಬಿಯಾದ ಮತ್ತೊಂದು ವಿಶೇಷವೇನೆಂದರೆ, ಗಂಡಸರ ರೀತಿ ಸ್ತ್ರೀಯರೂ ಹುಕ್ಕಾ ಶೀಶಾ, ಧೂಮಪಾನ ಮಾಡಿ ಆನಂದಿಸುತ್ತಾರೆ. ಈ ವರ್ತನೆ ಏಷ್ಯ ಮೂಲದ, ಭಾರತ ಪಾಕ್ ನಂಥ ದೇಶಗಳ ಸಂಪ್ರದಾಯಸ್ಥ ಸಮಾಜಗಳಲ್ಲಿ ಬೆಳೆದು ಬಂದ ಮಹಿಳೆಯರಿಗೆ ಮುಜುಗರ, ಕೋಪ ತರುತ್ತದೆ.

How Ramadan is celebrated in Saudi Arabia

ಆಹಾರದ ಬಗ್ಗೆ ಹೇಳುವುದಾದರೆ ಸೌದಿಯಲ್ಲಿ ಉಪವಾಸ ಖರ್ಜೂರದ ಮೂಲಕ ಅಂತ್ಯಗೊಳಿಸಿ, ಕರಿದ ಪದಾರ್ಥಗಳು ವಿಶೇಷವಾಗಿ ಸಮೋಸ, ಬಜಿಯಾ, ಕಬಾಬ್ ನಂಥ ತಿಂಡಿ ತಿನಿಸುಗಳ ಸೇವನೆ ಜನ ಇಷ್ಟ ಪಡುತ್ತಾರೆ. ಇಫ್ತಾರ್ ಕೂಟಗಳು ಎಲ್ಲ ಕಡೆಯಲ್ಲೂ ಕಾಣಲು ಸಿಗುತ್ತದೆ. ಶ್ರೀಮಂತ ಅರಬರು ತಮ್ಮ ದೇಶಗಳಲ್ಲಿ ಉದ್ಯೋಗಕ್ಕೆ ಬಂದ ವಿಶ್ವದ ಎಲ್ಲೆಡೆಯ ಜನರಿಗಾಗಿ ಡೇರೆಗಳನ್ನು ಹಾಕಿ ಅವರ ಅವರ ದೇಶಗಳ ಖಾದ್ಯಗಳನ್ನು ಬಡಿಸುತ್ತಾರೆ.

ಉಪವಾಸ ಇರುವ ಯಾರನ್ನಾದರೂ ಆಮಂತ್ರಿಸಿ ಪಾನೀಯ, ಆಹಾರ ಕೊಡುವುದು ಮುಸ್ಲಿಮರಿಗೆ ಪುಣ್ಯದಾಯಕ. ಹಲವು ಮುಸ್ಲಿಮೇತರ ದೇಶಗಳಲ್ಲಿ, ಅದರಲ್ಲೂ, ಅಮೇರಿಕಾ, ಐರೊಪ್ಯ ದೇಶಗಳಲ್ಲಿ "ಇಫ್ತಾರ್ ಫಾರ್ ಆಲ್" (Iftar for all), ಎನ್ನುವ ಇಫ್ತಾರ್ ಕೂಟಗಳನ್ನು ರಸ್ತೆ ಬದಿಗಳಲ್ಲಿ ಆಯೋಜಿಸುತ್ತಾರೆ.

ರಂಜಾನ್ ತಿಂಗಳ ಮಹತ್ವ, ಹಿರಿಮೆ, ಶ್ರೇಷ್ಠತೆಯನ್ನು ಗಣನೆಗೆ ತೆಗೆದುಕೊಂಡು, ಅತ್ಯಂತ ಮುತುವರ್ಜಿ ವಹಿಸುವ ಮುಸ್ಲಿಮರು ಆ ಒಂದು ತಿಂಗಳ ಕಾಲ ಇಸ್ಲಾಮಿನ ಎಲ್ಲಾ ನಿಯಮಗಳನ್ನೂ, ಸೌಜನ್ಯತೆ, ಪರೋಪಕಾರ, ದಾನ, ಇವುಗಳನ್ನು ಮಾಡುತ್ತಾ ಪುಣ್ಯ ಗಳಿಕೆಗೆ ಹೆಚ್ಚು ಆಸ್ಥೆ ವಹಿಸುತ್ತಾರೆ. ಇದೇ ವರ್ತನೆ ವರ್ಷ ಪೂರ್ತಿ ಮಾಡಲು ಇಸ್ಲಾಂ ತನ್ನ ಅನುಯಾಯಿಗಳಿಗೆ ಹುರಿದುಂಬಿಸಿದರೂ, ರಂಜಾನ್ ತಿಂಗಳ ನಂತರ ಈ ಉತ್ಸಾಹ ಮರೆಯಾಗೋದು ಖೇದಕರವೆನ್ನಿಸುತ್ತದೆ.

English summary
How Ramadan or Ramzan, the auspecious festival of muslims, is celebrated in Saudi Arabia? Syed Lateef from Bhadravati, residing in Riyad (Saudi Arabia) writes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X