ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗಿನ ಹಬ್ಬ ಹೋಳಿಗೆ ಶುಭ ಹಾರೈಕೆಯ ಓಕುಳಿ ಚೆಲ್ಲಿ...

|
Google Oneindia Kannada News

ನವದೆಹಲಿ, ಮಾರ್ಚ್ 01: ಸಾಮರಸ್ಯದ ದ್ಯೋತಕವಾದ ಹೋಳಿ ಹಬ್ಬ ದೇಶದೆಲ್ಲೆಡೆ ಆಚರಣೆಗೊಳ್ಳುತ್ತಿದೆ. ಕೆಲವೆಡೆ ಇಂದು ಆಚರಣೆಗೊಳ್ಳುತ್ತಿದ್ದರೆ, ಇನ್ನೂ ಕೆಲವೆಡೆ ಹೋಳಿ ಸಂಭ್ರಮ ನಾಳೆಗೆ. ಒಟ್ಟಿನಲ್ಲಿ ಈ ಬಾರಿ ಮಾ.1 ಮತ್ತು 2 ಎರಡು ದಿನವೂ ಹೋಳಿ ಸಂಭ್ರಮ ಮನೆಮಾಡಲಿದೆ.

ಪ್ರತಿವರ್ಷ ಪಾಲ್ಗುಣ ಮಾಸದ ಹುಣ್ಣಿಮೆಯಂದು ಆಚರಣೆಗೊಳ್ಳುವ ಈ ಹಬ್ಬಕ್ಕೆ ದೇಶದಾದ್ಯಂತ ಗಣ್ಯರು ಶುಭ ಕೋರಿದ್ದಾರೆ. ಕಾಮನ ಪ್ರತಿಕೃತಿ ದಹಿಸುವ ಮೂಲಕ ಮನಸ್ಸಿನಲ್ಲಿರುವ ಕಲ್ಮಶಗಳನ್ನೆಲ್ಲ ಸುಟ್ಟು ಸೌಹಾರ್ದತೆಯ ಬಣ್ಣ ಹಚ್ಚುವ ಸಂಕಲ್ಪಕ್ಕೆ ಈ ಹಬ್ಬ ಮುನ್ನುಡಿ ಎನ್ನಿಸಿದೆ.

ದೇಶದೆಲ್ಲೆಡೆ ಉಲ್ಲಾಸದ ಓಕುಳಿಯ ಚೆಲ್ಲಿದೆ ಹೋಳಿಯ ಬಣ್ಣ! ದೇಶದೆಲ್ಲೆಡೆ ಉಲ್ಲಾಸದ ಓಕುಳಿಯ ಚೆಲ್ಲಿದೆ ಹೋಳಿಯ ಬಣ್ಣ!

ಸಂಭ್ರಮದ ರಂಗಿನ ಹಬ್ಬಕ್ಕೆ ಟ್ವಿಟ್ಟರ್ ನಲ್ಲಿ ಹಲವರು ಶುಭಹಾರೈಸಿದ್ದಾರೆ. ಸಾಮಾಜಿಕ ಮಾಧ್ಯಮಗಳ ತುಂಬಾ ಬಣ್ಣಗಳ ಓಕುಳಿ ರಾರಾಜಿಸುತ್ತಿದೆ.

ನಿಮ್ಮ ಬದುಕನ್ನು ಬಣ್ಣವಾಗಿಸಲಿ...

ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ಹೋಳಿ ಹುಣ್ಣಿಮೆ ನಿಮ್ಮ ಬದುಕನ್ನು ಬಣ್ಣವಾಗಿಸಲಿ. ಎಲ್ಲೆಲ್ಲೂ ನೆಮ್ಮದಿ, ಸಂತೋಷ ಮನೆಮಾಡಲಿ ಎಂದು ಟ್ವೀಟ್ ಮಾಡಿದ್ದಾರೆ ಆಶಿಶ್ ಎಂಬುವವರು.

ಪ್ರತಿ ಬಣ್ಣವನ್ನೂ ಸಂಭ್ರಮಿಸಿ...

ಪ್ರತಿ ಬಣ್ಣವನ್ನೂ ಸಂಭ್ರಮಿಸಿ. ಆಅಗ ನೀವು ಬಯಸುತ್ತಿರುವ ಸಂತೋಷ ನಿಮಗೆ ಸಿಕ್ಕುತ್ತದೆ. ದೇವರು ಯಾವಾಗಲೂ ನಿಮ್ಮೊಂದಿಗಿರುತ್ತಾನೆ, ಪ್ರತಿಕ್ಷಣವೂ ಎಂದೊಬ್ಬರು ಹೋಳಿಯ ಶುಭ ಹಾರೈಸಿದ್ದಾರೆ.

ಹೋಳಿ ಹಬ್ಬಕ್ಕೆ ಮಿತಿಯಿಲ್ಲ..!

ಹೋಳಿ ಎಂದರೆ ಕೇವಲ ಹಿಂದುಗಳಿಗಷ್ಟೇ ಸೀಮಿತವಲ್ಲ. ಇದು ಎಲ್ಲಾ ಸೀಮಿಯನ್ನೂ ದಾಟಿದ್ದು. ಹೋಳಿಯ ಮೂಲಕ ಎಲ್ಲೆಲ್ಲೂ ಸಾಮರಸ್ಯ ನಿರ್ಮಿಸಲು ಪಣತೊಡೋಣ ಎಂದಿದ್ದಾರೆ ಶಂಕರ್ ದತ್ ಜೋಶಿ.

ಪ್ರೀತಿಯ ಬಣ್ಣ

ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ಪ್ರೀತಿಯ ಬಣ್ಣಗಳು ಎಲ್ಲೆಲ್ಲೂ ಶಾಂತಿ, ಸಮೃದ್ಧಿ ಮತ್ತು ಸಂತೋಷದ ಸಂದೇಶ ಸಾರಲಿ ಎಂದಿದ್ದಾರೆ ತೇಜಸ್ವಿ ಯಾದವ್.

ಯುವತಿಯ ಮೇಲೆ 'ವೀರ್ಯ' ತುಂಬಿದ ಬಲೂನ್ ಎಸೆತ! ಯುವತಿಯ ಮೇಲೆ 'ವೀರ್ಯ' ತುಂಬಿದ ಬಲೂನ್ ಎಸೆತ!

ಹೋಳಿ ಹುಣ್ಣಿಮೆಯ ಪೌರಾಣಿಕ ಕಥೆ - ಭಾಗ1ಹೋಳಿ ಹುಣ್ಣಿಮೆಯ ಪೌರಾಣಿಕ ಕಥೆ - ಭಾಗ1

ಕನಸುಗಳಿಗೂ ಬಣ್ಣ ಹಚ್ಚುವ ಕಾಮನಹಬ್ಬ ಹೋಳಿ

English summary
Holi, festival of colours celebarting in many parts of India today. In some parts tomorrow also holi will be celebrated. Here are some twitter statements on Holi festival
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X