ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಲವಿನ ಬಣ್ಣ ಬಳಿಯಲು ಮತ್ತೆ ಬಂತು ಹೋಳಿ!

|
Google Oneindia Kannada News

ಬೆಂಗಳೂರು, ಮಾರ್ಚ್ 1: ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ಶಿವರಾತ್ರಿಯ ನಂತರ ಬರುವ ಆಧ್ಯಾತ್ಮಿಕ ಹಿನ್ನೆಲೆ ಇರುವ ಹಬ್ಬವೆಂದರೆ ಹೋಳಿ. ಭಾರತದಲ್ಲಿ ಮಾತ್ರವಲ್ಲ,ಭಾರತೀಯರು ವಾಸವಿರುವ ನೇಪಾಳ,ಬಾಂಗ್ಲಾ ದೇಶ,ಪಾಕಿಸ್ತಾನ, ಯುರೋಪ್, ಉತ್ತರ ಅಮೆರಿಕಾ, ಮುಂತಾದ ದೇಶಗಳಲ್ಲಿ ಈ ಹಬ್ಬವನ್ನು ಪ್ರೇಮ, ಬಣ್ಣ ಮತ್ತು ಸ್ನೇಹದ ಹಬ್ಬವೆಂದು ಆಚರಿಸಲಾಗುತ್ತದೆ.

ಹೋಳಿ ಹಬ್ಬವು ಹೊಲಿಕಾ ಶಬ್ದದಿಂದ ಬಂದಿದೆ. ಉತ್ತರಭಾರತದಲ್ಲಿ ಹೋಳಿ', ಹೋಲಿಕಾ ದಹನ", ಧುರಿಯಾ ಎಂದೂ, ಮಹಾರಾಷ್ಟ್ರದಲ್ಲಿ ಹೋಳಿ', ರಂಗಪಂಚಮಿ', ಧೂಲಿವಂದನ' ಎಂದೂ, ಉತ್ತರಕರ್ನಾಟಕದಲ್ಲಿ ಹೋಳಿ', ಓಕಳಿ ಕಾಮಣ್ಣನ ಹಬ್ಬವೆಂದು ಪ್ರಚಲಿತವಾಗಿದೆ.

ರಂಗಿನ ಹಬ್ಬ ಹೋಳಿಗೆ ಶುಭ ಹಾರೈಕೆಯ ಓಕುಳಿ ಚೆಲ್ಲಿ...ರಂಗಿನ ಹಬ್ಬ ಹೋಳಿಗೆ ಶುಭ ಹಾರೈಕೆಯ ಓಕುಳಿ ಚೆಲ್ಲಿ...

ಫಾಲ್ಗುಣ ಮಾಸದ ಹುಣ್ಣಿಮೆಯ ದಿನ ಹೋಳಿ' ಹಬ್ಬವನ್ನು ಆಚರಿಸುವರು. ತದನಂತರ ರಂಗಪಂಚಮಿ', ಬಣ್ಣವನ್ನು ಹಾಕಿ ಬಣ್ಣದ ಹಬ್ಬ ಆಚರಿಸುತ್ತಾರೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಹಬ್ಬದ ಆಚರಣೆ ಸಂಪೂರ್ಣ ಬದಲಾಗಿದ್ದು, ವ್ಯಭಿಚಾರ, ಹಿಂಸಾಚಾರದ ರೂಪ ತಾಳುತ್ತಿದೆ. ಹೋಳಿಯ ಹಬ್ಬದಲ್ಲಿ ಹೋಳಿಯನ್ನು ಸುಡಲು ಕಟ್ಟಿಗೆಯ ಸಂಗ್ರಹಣೆ, ಚಂದಾ ವಸೂಲಿ, ಹಲಗೆಯ ಕರ್ಕಶ ಧ್ವನಿ ಮಿತಿಮೀರುತ್ತಿವೆ. ಬಣ್ಣದ ಹಬ್ಬ ತನ್ನ ನಿಜ ಬಣ್ಣವನ್ನು ಕಳೆದುಕೊಳ್ಳುತ್ತಿದೆ.

ಆರೋಗ್ಯಕ್ಕೆ ಹಾನಿ ಮಾಡುವ ಪದಾರ್ಥಗಳ ಬಳಕೆ

ಆರೋಗ್ಯಕ್ಕೆ ಹಾನಿ ಮಾಡುವ ಪದಾರ್ಥಗಳ ಬಳಕೆ

ನೈಸರ್ಗಿಕ ಬಣ್ಣಗಳ ಬದಲಾಗಿ ಆರೋಗ್ಯಕ್ಕೆ ಹಾನಿ ಮಾಡುವ ಆಮ್ಲ, ರಾಸಾಯನಿಕ ಬಣ್ಣ, ಡಾಂಬರ, ಸಗಣಿ, ಮುಂತಾದ ಪದಾರ್ಥಗಳು ಬಳಕೆಯಾಗುತ್ತಲಿವೆ. ಇದರಿಂದ ನಮ್ಮ ಈ ಬಡ ದೇಶದಲ್ಲಿ ಕೊಟ್ಯಾಂತರ ಹಣದ ಬಣ್ಣ ಹಾಗೂ ಬಟ್ಟೆಗಳು, ಹೋಳಿ ಹಬ್ಬಕ್ಕೆ ಹಾಳಾಗುತ್ತದೆ. ಶಾಂತಿ ಸುವ್ಯವಸ್ಥೆಗಾಗಿ ಅಪಾರ ಹಣ ಖರ್ಚಾವಾಗುತ್ತದೆ.

ಇದರಿಂದ ಅನೇಕರಿಗೆ ಖುಷಿಯ ಬದಲಾಗಿ ದು:ಖವಾಗುತ್ತದೆ. ಹಾಗೂ ದೇಶದ ಧನ, ಬಡವರ ಸಹಾಯಕ್ಕೆ ಬರಲಾರದೇ ಹೋಳಿಯ ಬೂದಿಯಾಗಿ ವ್ಯರ್ಥವಾಗುತ್ತಿದೆ. ಇದರ ಪರಿಣಾಮ ಹಬ್ಬ ಆಚರಣೆ ಮಾಡುವವರ ಸಂಖ್ಯೆ ಪ್ರತಿವರ್ಷ ಕಡಿಮೆ ಆಗುತ್ತಿದೆ. ವಾಸ್ತವಿಕವಾಗಿ ಹೋಳಿಯ ಆಧ್ಯಾತ್ಮಿಕ ರಹಸ್ಯವನ್ನು ತಿಳಿದು ಹಬ್ಬವನ್ನು ಆಚರಿಸಿದ್ದರೆ ಮಾನವ ಜೀವನದಲ್ಲಿ ಹೊಸತನವು ಬರಬಹುದು.

ಪವಿತ್ರ ಯೋಗಿಗಳಾಗಿ ಎಂದು ಸಂದೇಶ ಸಾರುವ ಹೋಳಿ

ಪವಿತ್ರ ಯೋಗಿಗಳಾಗಿ ಎಂದು ಸಂದೇಶ ಸಾರುವ ಹೋಳಿ

ಬ್ರಹ್ಮಕುಮಾರಿಯರ ತತ್ವಜ್ಞಾನದ ಪ್ರಕಾರ ನಿಜವಾದ ಹೋಳಿ ಎಂದರೆ ಹೊಲಿ' ಪವಿತ್ರತೆ. ಪವಿತ್ರತೆಯೆ ಸುಖ ಶಾಂತಿಯ ಜನನಿ. ಪರಮಪಿತ ಪರಮಜ್ಯೋತಿ ನೀರಾಕಾರ ಪರಮಾತ್ಮನು ಪರಮಪವಿತ್ರನಾಗಿದ್ದಾನೆ. ಅವನ ಮುಖ್ಯ ಸಂದೇಶವೆ ಪವಿತ್ರರಾಗಿ ಯೋಗಿಗಳಾಗ ಎಂದು. ಪವಿತ್ರತೆ ಎಂದರೆ ಬ್ರಹ್ಮಚರ್ಯಮಾತ್ರವಲ್ಲ, ಮನ ವಚನ ಕರ್ಮ ಸಂಬಂಧ ಸಂಪರ್ಕಗಳಲ್ಲಿ ಪವಿತ್ರತೆ. ಇದನ್ನು ಸಂಪೂರ್ಣವಾಗಿ ಪಾಲಿಸುವವನು ನೀಜವಾದ ಯೋಗಿ.

ಸತ್ಯಯುಗದ ಸಂದಿಗ್ಧ ಕಾಲವೇ ಸಂಗಮ ಯುಗ

ಸತ್ಯಯುಗದ ಸಂದಿಗ್ಧ ಕಾಲವೇ ಸಂಗಮ ಯುಗ

ಇಂದು ಕಲಿಯುಗ ಅಂತಿಮ ಚರಣದಲ್ಲಿದೆ. ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆರಂಭದ ಸಂದಿಗ್ಧ ಕಾಲವೇ ಸಂಗಮಯುಗ. ಪ್ರತಿಯೊಬ್ಬ ಮಾನವನಿಗೆ ಸತ್ಯಯುಗದ ದೈವೀಪದವಿಯನ್ನು ಪಡೆಯುವ ಈಶ್ವರೀಯ ಜನ್ಮಸಿದ್ಧ ಅಧಿಕಾರ ಇದೆ. ಆ ಅಧಿಕಾರವನ್ನು ಸ್ವಯಂ ನಿರಾಕಾರ ಪರಮಾತ್ಮನೇ ಈ ಧರೆಗೆ ಅವತರಿಸಿ, ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಕಲಿಸುವ ಮತ್ತು ರಾಜಯೋಗದ ಅಭ್ಯಾಸದ ಮುಲಕ ನೀಡುತ್ತಿದ್ದಾನೆ.

ಪವಿತ್ರತೆ ದೈವೀಗುಣಗಳ ಧಾರಣೆ ಅಗತ್ಯ

ಪವಿತ್ರತೆ ದೈವೀಗುಣಗಳ ಧಾರಣೆ ಅಗತ್ಯ

ಪವಿತ್ರತೆ ಹಾಗೂ ದೈವೀಗುಣಗಳ ಧಾರಣೆಯಿಂದ, ಕಾಮದಹನದ ಜೊತೆ-ಜೊತೆಗೆ ಕ್ರೋಧ, ಲೋಭ, ಮೋಹ, ಅಹಂಕಾರ ಮುಂತಾದ ಆಸುರಿ ಗುಣಗಳ ತ್ಯಾಗದಿಂದ ದೇವಿ-ದೇವತಾ ಪದವಿಯು ಪ್ರಾಪ್ತವಾಗುವುದು. ಮಾನವನು ಸರ್ವಗುಣ ಸಂಪನ್ನ, 16 ಕಲಾಸಂಪೂರ್ಣ, ಮರ್ಯಾದಾ ಪುರುಷೋತ್ತಮ, ಅಹಿಂಸಾ ಪರಮೋಧರ್ಮಿ, ಸಂಪೂರ್ಣ ನಿರ್ವಿಕಾರಿ ಆಗುವನು. ಈ ನರಕದ ಮಹಾವಿನಾಶದ ನಂತರ ಸತ್ಯಯುಗವು ಬರುವುದು. ಈಗ ನಾವುಎಲ್ಲರು ಪರಮಾತ್ಮನ ಜೊತೆಯಲ್ಲಿ ಇದ್ದರೆ ಅವನ ಸಂಗದ ರಂಗಿನಿಂದ ಸ್ವರ್ಗದಲ್ಲಿ ದೇವಿ ದೇವತೆಗಳಾಗಿ ಬರುತ್ತೆವೆ.

ಯುವತಿಯ ಮೇಲೆ 'ವೀರ್ಯ' ತುಂಬಿದ ಬಲೂನ್ ಎಸೆತ!ಯುವತಿಯ ಮೇಲೆ 'ವೀರ್ಯ' ತುಂಬಿದ ಬಲೂನ್ ಎಸೆತ!

ಹೋಳಿ ಹುಣ್ಣಿಮೆಯ ಪೌರಾಣಿಕ ಕಥೆ - ಭಾಗ1ಹೋಳಿ ಹುಣ್ಣಿಮೆಯ ಪೌರಾಣಿಕ ಕಥೆ - ಭಾಗ1

ಕನಸುಗಳಿಗೂ ಬಣ್ಣ ಹಚ್ಚುವ ಕಾಮನಹಬ್ಬ ಹೋಳಿ

English summary
In India, Holi or Ranga panchami is not only festival of colors and also praise divine couple Karma and Rati. The festival also a symbol of equality who participate in Holi despite differences of caste, age, gender and other.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X