• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೋಳಿ ಎಂಬ ರಂಗಿನ ಹಬ್ಬದ ರಂಗು ರಂಗಾದ ಚಿತ್ರಗಳು...

|

ಬಣ್ಣಗಳು ಕತೆ ಹೇಳುತ್ತವೆ. ಒಂದೊಂದು ಬಣ್ಣವೂ ಒಂದೊಂದು ಮೇರು ನೀತಿಯ ಸಂಕೇತವಾಗಿ ಬದುಕಿಗೆ ರಂಗುನೀಡುತ್ತವೆ.

ಈ ಎಲ್ಲ ಬಣ್ಣಗಳು ಜೊತೆ ಸೇರಿ ಬಿಳಿ ಬಣ್ಣವಾಗುವಂತೆ, ಎಲ್ಲ ಜಾತಿ, ಮತ, ಕೋಮುಗಳೂ ಸಾಮರಸ್ಯದಿಂದ ಬದುಕಿ ಶಾಂತಿಯ ಸಂದೇಶ ಸ್ಪುರಿಸುವ ಸಾಂಕೇತಿಕ ಆಚರಣೆಯಾಗಿ ಹೋಳಿ ಮಹತ್ವ ಪಡೆದುಕೊಂಡಿದೆ.

ದುಷ್ಟಶಕ್ತಿಯ ಸಂಹಾರ, ಸಾಮರಸ್ಯದ ದ್ಯೋತಕವಾದ ಹೋಳಿ ದೇಶದೆಲ್ಲೆಡೆ ಸಂಭ್ರಮದ ಓಕುಳಿ ಚೆಲ್ಲಿದೆ. ಪ್ರತಿವರ್ಷ ಪಾಲ್ಗುಣ ಮಾಸದ ಹುಣ್ಣಿಮೆಯಂದು ಆಚರಿಸಲ್ಪಡುವ ಈ ಹೋಳಿಯನ್ನು ಈ ವರ್ಷ ಮಾರ್ಚ್ 1 ರಂದು ಆಚರಿಸಲಾಯಿತು. ಕೆಲವೆಡೆ ಮಾರ್ಚ್ 2 ರಂದೂ ಹೋಳಿ ಸಂಭ್ರಮ ಕಾಣಿಸುತ್ತಿದೆ.

ಒಲವಿನ ಬಣ್ಣ ಬಳಿಯಲು ಮತ್ತೆ ಬಂತು ಹೋಳಿ!

ಕಾಮ ದಹನದ ಮೂಲಕ ನಮ್ಮೊಳಗಿನ ಅರಿಷಡ್ವರ್ಗಗಳನ್ನು ಸುಟ್ಟು , ಸಾಮರಸ್ಯ, ಸಹಬಾಳ್ವೆ, ಶಾಂತಿಯ ಬಣ್ಣಗಳನ್ನು ಮೈಗೂಡಿಸಿಕೊಳ್ಳುವ ಸಂದೇಶದೊಂದಿಗೆ ಹೋಳಿಯ ಹುಮ್ಮಸ್ಸು ಮುಗಿಲಿಗೇರಿದೆ. ಗುರುವಾರ ದೇಶದಾದ್ಯಂತ ಆಚರಿಸಲ್ಪಟ್ಟ ಹೋಳಿಯ ಕೆಲವು ಸುಮದರ ಚಿತ್ರಗಳು ಇಲ್ಲಿವೆ. ಇವು ರಂಗಿನ ಹಬ್ಬಕ್ಕೆ ಮತ್ತಷ್ಟು ರಂಗು ನೀಡಿದ ಚಿತ್ರಗಳು...

ಎಲ್ಲೆಲ್ಲೂ ಗುಲಾಲಿನ ರಂಗು...

ಎಲ್ಲೆಲ್ಲೂ ಗುಲಾಲಿನ ರಂಗು...

ಕೋಲ್ಕತ್ತಾದಲ್ಲಿ ಹೋಲಿಕಾ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದ್ದಕ್ಕೆ ಈ ಚಿತ್ರಕ್ಕಿಂತ ಬೇರೆ ಸಾಕ್ಷಿ ಬೇಕಾ? ಯುವತಿಯೊಬ್ಬರು ಮುಖವಾಡ ಧರಿಸಿ, ಮೈಗೆಲ್ಲ ಮೆತ್ತಿಕೊಂಡ ಬಣ್ಣದೊಂದಿಗೆ ಫೋಟೋಕ್ಕೆ ಪೋಸು ನೀದಿದ್ದು ಹೀಗೆ!

ರಂಗಿನ ಹಬ್ಬ ಹೋಳಿಗೆ ಶುಭ ಹಾರೈಕೆಯ ಓಕುಳಿ ಚೆಲ್ಲಿ...

ಕೆಂಪಾದವೋ ಎಲ್ಲ ಕೆಂಪಾದವೋ..!

ಕೆಂಪಾದವೋ ಎಲ್ಲ ಕೆಂಪಾದವೋ..!

ಪಂಜಾಬಿನ ಅಮೃತಸರದಲ್ಲಿ ಮಹಿಳೆಯೊಬ್ಬರು ಹೋಳಿ ಆಚರಿಸಿದ್ದು ಹೀಗೆ. ಕಾಮನ ಹಬ್ಬದಂದು ಕೆಂಪು ಕೆಂಪಾದ ಈ ಯುವತಿ, ಕೆಂಪಾದವೋ ಎಲ್ಲ ಕೆಂಪಾದವೋ ಎಂದು ನಾಚಿ ನುಡಿಯುತ್ತಿರುವಂತಿದೆ!

ಸ್ನೇಹ ಸೂಚಕ ಈ ಬಣ್ಣದೋಕುಳಿ...

ಸ್ನೇಹ ಸೂಚಕ ಈ ಬಣ್ಣದೋಕುಳಿ...

ಯುವತಿಯೊಬ್ಬಳು ತನ್ನ ಸ್ನೇಹಿತೆಗೆ ಹೋಳಿ ಹಬ್ಬದಂದು ಬಣ್ಣ ಬಳಿದು ಸಂಭ್ರಮಿಸಿದ ಸುಂದರ ಕ್ಷಣ. ಈ ಕ್ಷಣಕ್ಕೆ ಸಅಕ್ಷಿಯಾಗಿದ್ದು ಗುವಾಹಟಿ.

ವಸಂತ ಉತ್ಸವ

ವಸಂತ ಉತ್ಸವ

ಹೋಳಿ ಮುಗಿದ ಹದಿನೈದು ದಿನಗಳಲ್ಲಿ ವಸಂತ ಋತು ಆರಂಭವಾಗುತ್ತದೆ. ಅದರ ಸೂಚಕವೆಂಬಂತೆ ಆಚರಿಸುವ ಹೋಳಿಯನ್ನು ಕೋಲ್ಕತ್ತಾದಲ್ಲಿ ಬಸಂತ ಪಂಚಮಿ ಎಂದೂ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಬಣ್ಣದೋಕುಳಿಯಲ್ಲಿ ಮಿಂದೆದ್ದ ಹೆಂಗಳೆಯ ಚಿತ್ರ ಇಲ್ಲಿದೆ.

ಹವಾ ಹವಾ ಹೋಳಿ ಹವಾ...

ಹವಾ ಹವಾ ಹೋಳಿ ಹವಾ...

ಗುಜರಾತಿನ ಅಹ್ಮದಾಬಾದಿನಲ್ಲಿ ಹೋಳಿ ಬಣ್ಣದ ಹವಾ ಸೃಷ್ತಿಸಿತ್ತು. ಎಲ್ಲೆಲ್ಲೂ ಬಣ್ಣದ ಸಿಂಚನವಾಗುತ್ತಿದ್ದರೆ ಅದಕ್ಕೆ ಮುಖವೊಡ್ಡಿ ನಿಂತ ಯುವಕರು ಕಂಡಿದ್ದು ಹೀಗೆ.

ಕಾಮದಹನ

ಕಾಮದಹನ

ಬಿಹಾರದ ಪಾಟ್ನಾದಲ್ಲಿ ಹೋಲಿಕಾ ದಹನನಕ್ಕೆ ಸಾಕ್ಷಿಯಾದ ನೂರಾರು ಜನ. ಉತ್ತರ ಭಾರತದ ಬಹುಪಾಲು ರಾಜ್ಯಗಳಲ್ಲಿ ಕಾಮ ದಹನ ಅಥವಾ ಹೋಲಿಕಾ ದಹನವನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸಲಾಗುತ್ತದೆ.

ಮಾರುಕಟ್ಟೆ ತುಂಬ ಬಣ್ಣದ್ದೇ ಸದ್ದು!

ಮಾರುಕಟ್ಟೆ ತುಂಬ ಬಣ್ಣದ್ದೇ ಸದ್ದು!

ಎಲ್ಲೆಡೆ ಗುಲಾಲಿನ ರಂಗು ತುಂಬಿದೆ. ಉತ್ತರ ಭಾರತದ ಲಕ್ನೋ ದಲ್ಲಿ ಮಾರುಕಟ್ಟೆಯ ತುಂಬ ಬಣ್ಣದ್ದೇ ಸದ್ದು ಜೋರಾಗಿತ್ತು. ಹೋಳಿ ಆಚರಿಸುವುದಕ್ಕಾಗಿ ಬಣ್ಣ ಖರೀದಿಸಲು ಬಂದ ಜನರು ಕಂದಿದ್ದು ಹೀಗೆ.

ರಾಜಕಾರಣಿಗಳ ಹೋಳಿ

ರಾಜಕಾರಣಿಗಳ ಹೋಳಿ

ಹೋಳಿಯ ಗುಂಗು ಚುನಾವಣೆಯ ತಲೆಬಿಸಿಯಲ್ಲಿರುವ ರಾಜಕಅರಣಿಗಳನ್ನೂ ಬಿಟ್ಟಿಲ್ಲ! ರಾಜಧಾನಿ ದೆಹಲಿಯಲ್ಲಿ ಬಿಜೆಪಿ ಮುಖಂಡ ವಿಜಯ್ ಗೋಯಲ್ ಮತ್ತು ಕೇಂದ್ರ ಸಚಿವ ಅನಂತ ಕುಮಾರ್ ಪರಸ್ಪರ ಬಣ್ಣ ಬಳಿದುಕೊಂದು ಹೋಳಿ ಆಚರಿಸಿದ್ದು ಹೀಗೆ!

ಹೋಳಿಗಿಲ್ಲ ವಯಸ್ಸಿನ ಹಂಗು!

ಹೋಳಿಗಿಲ್ಲ ವಯಸ್ಸಿನ ಹಂಗು!

ಗುವಾಹಟಿಯ ಜ್ಯೋತಿ ನಗರ ಎಂಬಲ್ಲಿ ವೃದ್ಧರು ಹೋಳಿ ಆಚರಿಸಿ ಸಂಭ್ರಮಿಸಿದರು. ಈ ಬಣ್ಣದ ಹಬ್ಬಕ್ಕೆ ಜಾತಿ, ಲಿಂಗಭೇದ ಮಾತ್ರವಲ್ಲ, ವಯಸ್ಸಿನ ಹಂಗೂ ಇಲ್ಲ ಎಂಬುದು ಸಾಬೀತಾಯಿತು!

ವಿದೇಶಿಯರನ್ನೂ ಮರುಳು ಮಾಡಿದ ಹೋಳಿ!

ವಿದೇಶಿಯರನ್ನೂ ಮರುಳು ಮಾಡಿದ ಹೋಳಿ!

ಕೋಲ್ಕತ್ತಾದಲ್ಲಿ ವಿದೇಶಿ ಮಹಿಳೆಯೊಬ್ಬರು ಬಣ್ಣದ ಹಬ್ಬ ಹೋಳಿಗೆ ಮುಖವೊಡ್ಡಿ ಆನಂದಿಸಿದ್ದು ಹೀಗೆ. ಹೋಳಿ ಸಮಯದಲ್ಲಿ ಭಾರತಕ್ಕೆ ಬರುವ ಪ್ರವಾಸಿಗರು ತಪ್ಪದೇ ಈ ಹಬ್ಬ ಆಚರಿಸುವುದು ವಿಶೇಷ.

ವೃಂದಾವನದಲ್ಲಿ ಆದರ್ಶದ ಹೋಳಿ

ವೃಂದಾವನದಲ್ಲಿ ಆದರ್ಶದ ಹೋಳಿ

ವೃಂದಾವನದಲ್ಲಿರುವ ವಿಧವೆಯರು ಹೋಳಿಯನ್ನು ಆಚರಿಸುವುದು ಅತ್ಯಂತ ಆದರ್ಶ ಆಚರಣೆಗಳಲ್ಲೊಂದು. ಪತಿಯನ್ನು ಕಳೆದಕೊಂಡು ಬಿಳಿ ಬಟ್ಟೆ ತೊಟ್ಟಿರುವ ಇವರೆಲ್ಲ ತಮ್ಮೆಲ್ಲ ನೋವನ್ನೂ ಮರೆತು ಬಣ್ಣಗಳೊಂದಿಗೆ ಓಕುಳಿಯಾಡುವ ಈ ದಿನ ಅವರ ಪಾಲಿಗೆ ಅತ್ಯಂತ ಸಂತಸದ ದಿನ. ಪ್ರತಿ ವರ್ಷದಂತೆ ಮಡಿಕೆಯ ತುಂಬ ಪರಿಸರ ಸ್ನೇಹಿ ಬಣ್ಣಗಳನ್ನು ತುಂಬಿ ವೃಂದಾವನದ ವಿಧವೆಯರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳಿಸಿಕೊಡುತ್ತಿರುವ ದೃಶ್ಯ.

ವಿದ್ಯಾರ್ಥಿಗಳಿಗೆ ಸಂಭ್ರಮದ ಹಬ್ಬ

ವಿದ್ಯಾರ್ಥಿಗಳಿಗೆ ಸಂಭ್ರಮದ ಹಬ್ಬ

ತ್ರಿಪುರದ ಧರ್ಮನಗರದಲ್ಲಿ ವಿದ್ಯಾರ್ಥಿಗಳು ಸಂಭ್ರಮದಿಂದ ಬಸಂತ ಪಂಚಮಿ ಆಚರಿಸಿದರು. ಮಾ.3 ರಂದು ತ್ರಿಪುರ ವಿಧಾನಸಭೆ ಚುನಾವಣೆಯ ಫಲಿತಾಂಶಸ ಹೊರಬೀಳಲಿರುವುದರಿಂದ ಈ ಭಾಗದ ರಾಜಕಾರಣಿಗಳಲ್ಲಿ ಯಾರ ಪಾಲಿಗೆ ಹೋಳಿ ವರ್ಣಮಯವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ!

ದೇಶದೆಲ್ಲೆಡೆ ಉಲ್ಲಾಸದ ಓಕುಳಿಯ ಚೆಲ್ಲಿದೆ ಹೋಳಿಯ ಬಣ್ಣ!

English summary
Irrespective of caste, religion, people all over India celebrating festival of colors holi on Thursday, and also on friday in some parts of the country. Here are some beautiful photos of Festival of colors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more