• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಂತು ಬಂತು ಸಂಭ್ರಮದ ಹೋಳಿ... ಚೆಲ್ಲಿದೆ ಎಲ್ಲೆಲ್ಲೂ ರಂಗಿನ ಓಕುಳಿ...

By ವಿಶ್ವಾಸ ಸೋಹೋನಿ
|

ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ಶಿವರಾತ್ರಿಯ ನಂತರ ಬರುವ ಆಧ್ಯಾತ್ಮಿಕ ಹಿನ್ನೆಲೆ ಇರುವ ಹಬ್ಬವೆಂದರೆ ಹೋಳಿ. ಭಾರತದಲ್ಲಿ ಮಾತ್ರವಲ್ಲದೆ. ಭಾರತಿಯರು ವಾಸಿಸುವ ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ, ಯುರೊಪ, ಉತ್ತರ ಅಮೆರಿಕಾ, ಸುರೆನಾಮ್, ಗಯಾನಾ, ಟ್ರಿನಿಡಾಡ್, ಆಫ್ರಿಕಾ, ಮಾರಿಶಿಯಸ್, ಫುಜಿ ಮುಂತಾದ ಕಡೆ ಈ ಹಬ್ಬವು ಪ್ರೇಮ, ಬಣ್ಣ, ಕುಣಿದು ಕುಪ್ಪಳಿಸುವ ಮತ್ತು ಸ್ನೇಹದ ಹಬ್ಬವೆಂದು ಆಚರಿಸಲಾಗುತ್ತದೆ.

ಹೋಳಿ ಆಚರಿಸೋಣು, ಓಕುಳಿ ಎರಚೋಣು ಬರ್ರಿ

ಹೋಳಿ ಹಬ್ಬವು ಹೋಲಿಕಾ ಶಬ್ದದಿಂದ ಬಂದಿದೆ. ಉತ್ತರಭಾರತದಲ್ಲಿ ಹೋಳಿ', ಹೋಲಿಕಾ ದಹನ", ಧುರಿಯಾ' ಎಂದೂ, ಮಹಾರಾಷ್ಟ್ರದಲ್ಲಿ ಹೋಳಿ', 'ಶಿಮಗ' ರಂಗಪಂಚಮಿ', ಧೂಲಿವಂದನ' ಎಂದೂ, ಉತ್ತರ ಕರ್ನಾಟಕದಲ್ಲಿ ಹೋಳಿ', 'ಓಕಳಿ' 'ಕಾಮಣ್ಣ'ನ ಹಬ್ಬವೆಂದು ಪ್ರಚಲಿತವಾಗಿದೆ. ಇದೆ ಸಮಯದಲ್ಲಿ ಸಿರಸಿಯಲ್ಲಿ ರಾತ್ರಿಯ ವೇಳೆ ಬೇಡರ ವೇಷ ಧರಿಸಿ ಲೋಕನೃತ್ಯ ಮಾಡುತ್ತಾರೆ. ಹುಬ್ಬಳ್ಳಿಯ ಮ್ಯಾದರ ಓಣಿಯ ಕಾಮಣ್ಣ-ರತಿದೇವಿ ಬಾಂಬುದಿಂದ ಮಾಡಿರುವ, 8 ಅಡಿ ಎತ್ತರದ ಕಾಮಣ್ಣವಾಗಿದ್ದು ನೊಡಲು ಸುಂದರವಾಗಿರುತ್ತದೆ.

ಹೋಳಿ ಹಬ್ಬದ ನೆಪದಲ್ಲಿ ಪುಂಡಾಟ ನಡೆಸಿದರೆ ಹುಷಾರ್!

ಉತ್ತರ ಪ್ರದೇಶದ ಬ್ರಿಜ ಪ್ರಾಂತದಲ್ಲಿ 'ಲಾಠ ಮಾರ' ಆಟ ಪ್ರಚಲಿತವಾಗಿದೆ. ಮಹಿಳೆಯರು ಪುರುಷರಿಗೆ ದೊಣ್ಣೆಯಿಂದ ಹೊಡೆಯುತ್ತಾರೆ, ಪುರುಷರು ಗುರಾಣಿಯ ಸಹಾಯದಿಂದ ಬಚಾವ್ ಮಾಡುತ್ತಾರೆ.

ಉತ್ತರ ಕರ್ನಾಟಕ ಮತ್ತು ಗುಜರಾತದಲ್ಲಿ 'ದಹಿ-ಹಂಡಿ' ಹೊಡೆಯುವ ಸ್ಪರ್ಧೆ ನಡೆಯುತ್ತದೆ.

ಪೌರಾಣಿಕ ದಂತ ಕಥೆಗಳು

ಪೌರಾಣಿಕ ದಂತ ಕಥೆಗಳು

1.ವಿಷ್ಣು ಭಕ್ತ ಪ್ರಹ್ಲಾದನಿಗೆ ತನ್ನ ತಂದೆಯಾದ ಹಿರಣ್ಯಕಶಿಪು ಮತ್ತು ಅವನ ಸೋದರಿಯ ಹೋಲಿಕಾ ಎಂಬ ರಾಕ್ಷಸಿಯಿಂದ ಹಿಂಸೆಯಾಗುತ್ತದೆ, ಅವನನ್ನು ಸುಟ್ಟುಹಾಕಲು, ಬಯಸುವ ಹೋಲಿಕ ತಾನೆ ದಹನವಾದಳು.

2.ತಾರಕಾಸುರನಿಂದ ಪಿಡಿತರಾದ ದೇವತೆಗಳು, ಶಿವನನ್ನು ತಪಸ್ಸುನಿಂದ ಎಬ್ಬಿಸಲು ಕಾಮದೇವನ ಸಹಾಯ ಪಡೆಯುತ್ತಾರೆ. ಪುಷ್ಪಬಾಣನ ಪ್ರಯೋಗದಿಂದ ವಿಚಲಿದನಾದ ಮಹಾದೇವನು ತನ್ನ ಮೂರನೆಯ ಕಣ್ಣನಿಂದ ಅವನನ್ನು ಸುಟ್ಟು ಹಾಕುತ್ತಾನೆ. ಆಗ ಕಾಮದೇವನ ಪತ್ನಿ ರತಿದೇವಿ ಮತ್ತು ದೇವತೆಗಳು ಕ್ಷಮಾಯಾಚನೆ ಮಾಡಿದಾಗ, ಶಿವನು ಕಾಮನನ್ನು ಬದುಕಿಸಿ ರತಿಗೆ ಶಾಶ್ವತ ಸೌಭಾಗ್ಯವನ್ನು ನೀಡುತ್ತಾನೆ.

3.ಕೃಷ್ಣ ರಾಕ್ಷಸಿ ಪುತನೇಯ ವಿಷಪ್ರಾಷನ ಮಾಡಿ ಕಪ್ಪು ವರ್ಣದವನಾದನು. ಅತಿ ಸುಂದರವಾದ ಗೋಪ ಗೋಪಿಯರ ನಡುವೆ ಅವನು ಶ್ಯಾಮವರ್ಣದವನು. ಆವನ ತಾಯಿ, ರಾಧೆಗೆ ಇಷ್ಟವಾದ ಯಾವ ಬಣ್ಣವಾದರು ಕೃಷ್ಣನಿಗೆ ಹಚ್ಚಲು ತಿಳಿಸುತ್ತಾರೆ. ಅಂದಿನಿಂದ ರಂಗಪಂಚಮಿ ಆಡುತ್ತಾರೆ.

ಹೋಳಿ ರಂಗಿನ ಬಣ್ಣ, ಯುಗಾದಿ ಚಿಗುರಿನ ಬಣ್ಣ... ಅಬ್ಬಬ್ಬಾ ಎಷ್ಟೆಲ್ಲಾ ಬಣ್ಣ!

ಪಾಲ್ಗುಣ ಮಾಸದ ಹುಣ್ಣಿಮೆ

ಪಾಲ್ಗುಣ ಮಾಸದ ಹುಣ್ಣಿಮೆ

ಫಾಲ್ಗುಣ ಮಾಸದ ಹುಣ್ಣಿಮೆಯ ದಿನ `ಹೋಳಿ' ಹಬ್ಬವನ್ನು ಆಚರಿಸುವರು. ತದನಂತರ `ರಂಗಪಂಚಮಿ', ಬಣ್ಣವನ್ನು ಹಾಕಿ ಬಣ್ಣದ ಹಬ್ಬ ಆಚರಿಸುತ್ತಾರೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಹಬ್ಬದ ಆಚರಣೆ ಸಂಪೂರ್ಣ ಬದಲಾಗಿದ್ದು, ವ್ಯಭಿಚಾರ, ಹಿಂಸಾಚಾರದ ರೂಪ ತಾಳುತ್ತಿದೆ. ಹೋಳಿಯ ಹಬ್ಬದಲ್ಲಿ ಹೋಳಿಯನ್ನು ಸುಡಲು ಕಟ್ಟಿಗೆಯ ಸಂಗ್ರಹಣೆ, ಚಂದಾ ವಸೂಲಿ, ಹಲಗೆಯ ಕರ್ಕಶ ಧ್ವನಿ ಮಿತಿಮೀರುತ್ತಿವೆ. ಬಣ್ಣದ ಹಬ್ಬ ತನ್ನ ನಿಜ ಬಣ್ಣವನ್ನು ಕಳೆದುಕೊಳ್ಳುತ್ತಿದೆ. ನೈಸರ್ಗಿಕ ಬಣ್ಣಗಳ ಬದಲಾಗಿ ಆರೋಗ್ಯಕ್ಕೆ ಹಾನಿ ಮಾಡುವ ಆಮ್ಲ, ರಾಸಾಯನಿಕ ಬಣ್ಣ, ಡಾಂಬರ, ಶಗಣಿ, ಮುಂತಾದ ಪದಾರ್ಥಗಳು ಬಳಕೆಯಾಗುತ್ತಲಿವೆ.

ಹೋಳಿ ಎಂಬ ರಂಗಿನ ಹಬ್ಬದ ರಂಗು ರಂಗಾದ ಚಿತ್ರಗಳು...

ಅರ್ಥ ಕಳೆದುಕೊಳ್ಳುತ್ತಿರುವ ಆಚರಣೆ

ಅರ್ಥ ಕಳೆದುಕೊಳ್ಳುತ್ತಿರುವ ಆಚರಣೆ

ಇದರಿಂದ ನಮ್ಮ ಈ ಬಡ ದೇಶದಲ್ಲಿ ಕೋಟ್ಯಂತರ ಹಣದ ಬಣ್ಣ ಹಾಗೂ ಬಟ್ಟೆಗಳು, ಹೋಳಿ ಹಬ್ಬಕ್ಕೆ ಹಾಳಾಗುತ್ತದೆ. ಶಾಂತಿ ಸುವ್ಯವಸ್ಥೆಗಾಗಿ ಅಪಾರ ಹಣ ಖರ್ಚವಾಗುತ್ತದೆ. ಇದರಿಂದ ಅನೇಕರಿಗೆ ಖುಷಿಯ ಬದಲಾಗಿ ದುಃಖವಾಗುತ್ತದೆ. ಹಾಗೂ ದೇಶದ ಧನ, ಬಡವರ ಸಹಾಯಕ್ಕೆ ಬರಲಾರದೇ ಹೋಳಿಯ ಬೂದಿಯಾಗಿ ವ್ಯರ್ಥವಾಗುತ್ತಿದೆ. ಇದರ ಪರಿಣಾಮ ಹಬ್ಬ ಆಚರಣೆ ಮಾಡುವವರ ಸಂಖ್ಯೆ ಪ್ರತಿವರ್ಷ ಕಡಿಮೆ ಆಗುತ್ತಿದೆ. ವಾಸ್ತವಿಕವಾಗಿ ಹೋಳಿಯ ಆಧ್ಯಾತ್ಮಿಕ ರಹಸ್ಯವನ್ನು ತಿಳಿದು ಹಬ್ಬವನ್ನು ಆಚರಿಸಿದ್ದರೆ ಮಾನವ ಜೀವನದಲ್ಲಿ ಹೊಸತನವು ಬರಬಹುದು.

ಕನಸುಗಳಿಗೂ ಬಣ್ಣ ಹಚ್ಚುವ ಕಾಮನಹಬ್ಬ ಹೋಳಿ

ಆತ್ಮೀಯತೆ ವೃದ್ಧಿಸುವ ಹಬ್ಬ

ಆತ್ಮೀಯತೆ ವೃದ್ಧಿಸುವ ಹಬ್ಬ

ವಾಸ್ತವವಾಗಿ ಹೋಳಿ' ಮತ್ತು `ರಂಗಪಂಚಮಿ' ಸಂತೋಷ, ಪ್ರೀತಿ, ಸ್ನೇಹ, ಆತ್ಮೀಯತೆಯನ್ನು ವೃದ್ಧಿಸುವ ಹಬ್ಬ. ಹೋಳಿ' ಹಬ್ಬವು ಅತಿ ಪ್ರಾಚೀನ ಕಾಲದಿಂದ ಆಚರಣೆಯಲ್ಲಿದೆ ಎಂದು ಭಾರತೀಯರ ನಂಬಿಕೆ ಇದೆ. ಇದರ ಬಗ್ಗೆ ವೇದಕಾಲೀನ `ರಕ್ಷೋಹಗಂ ಬಲಗಹಮ್' ಮುಂತಾದ ರಾಕ್ಷಸರು, ವಿನಾಶದ ಮಂತ್ರಗಳಿಂದ `ಹೋಲಿಕಾದಹನ' ಮಾಡುತ್ತಿದ್ದರು. ಇದರ ಸತ್ಯಾರ್ಥ `ನಾವು ರಾಕ್ಷಸಿ ಆಹಾರ, ಆಚಾರ, ವಿಚಾರ ವ್ಯವಹಾರಗಳಿಂದ ನಮ್ಮನ್ನು ರಕ್ಷಿಸಬೇಕೆಂದು'. ಹೋಲಿಕಾದಹನ ನಮಗೆ ಈ ಮಾತನ್ನು ನೆನಪಿಸಿಕೊಡುತ್ತವೆ `ಪಾಪಿ ತನ್ನದೇ ಪಾಪ ಕರ್ಮಗಳಿಂದ ಸುಟ್ಟು ಹೊಗುವನು.' ಅದರಿಂದ ನಾವು ಪಾಪಕರ್ಮಗಳಿಂದ ದೂರ ಇರಬೇಕು. ನಮ್ಮ ಜೀವನದಲ್ಲಿ ದೈವೀಗುಣಗಳ ಧಾರಣೆ ಮಾಡಿಕೊಳ್ಳಬೇಕು. ಹೋಳಿಯನ್ನು ದಹನ ಮಾಡಿ ಕಳೆದ ವರ್ಷದ ಕಹಿ, ನೆನಪುಗಳನ್ನು ಸುಟ್ಟು, ತಮ್ಮ ದುಃಖಗಳನ್ನು ಮರೆತು, ನಗುನಗುತ್ತಾ ಹೊಸ ವರ್ಷದ ಸ್ವಾಗತ ಬಯಸುವದು ಆಗಿದೆ.

ಹೋಳಿ ರಂಗಿನ ಬಣ್ಣ, ಯುಗಾದಿ ಚಿಗುರಿನ ಬಣ್ಣ... ಅಬ್ಬಬ್ಬಾ ಎಷ್ಟೆಲ್ಲಾ ಬಣ್ಣ!

ಸಾಂಕೇತಿಕ ಕಾಮದಹನ

ಸಾಂಕೇತಿಕ ಕಾಮದಹನ

ಕಟ್ಟಿಗೆಗಳಿಂದ ಕಾಮಣ್ಣನ ದಹನ ಮಾಡಲಾರದೇ, ನಮ್ಮಲ್ಲಿ ಇರುವ ಕಾಮ, ಕ್ರೋಧ, ಇರ್ಷೆ ದ್ವೇಷ, ಮದ, ಮತ್ಸರಗಳನ್ನು ಸುಡಬೇಕು. ಪರಸ್ಪರ ಆತ್ಮೀಯತೆ, ಸ್ನೇಹ, ಪ್ರೀತಿ ಬೆಳೆಸಿ ಸಿಹಿ ತಿಂಡಿ ತಿನಿಸುಗಳನ್ನು ಸ್ವೀಕರಿಸಬೇಕು. `ಹೋಳಿ' ಅಥವಾ `ಕಾಮಣ್ಣ-ರತಿದೇವಿ'ಯ ದಹನ ಆದ ನಂತರ ಬಣ್ಣವನ್ನೂ ಹಾಕುವರು. ಸ್ಥೂಲವಾಗಿ ಬಣ್ಣವನ್ನು ಆಡುವಾಗ ದೊಡ್ಡವರು, ಚಿಕ್ಕವರು ಎಂಬ ಭೇದಭಾವ ಮರೆತು ಬಣ್ಣವನ್ನು ಆಡುವರು. ಅದರ ನಿಜವಾದ ಅರ್ಥ ಏನೆಂದರೆ, ನಾವೆಲ್ಲರೂ ಒಬ್ಬ ಭಗವಂತನ ಮಕ್ಕಳು ಎಂದು ತಿಳಿದು ಸತ್ಯದ, ಸತ್ಸಂಗದ, ದೈವೀ ಗುಣಗಳ ನಿಜವಾದ ಬಣ್ಣ ಹಾಕಿ ಸರ್ವರನ್ನೂ ಸಹೋದರತ್ವದ ಭಾವನೆಯಿಂದ ಕಾಣಬೇಕು. ಹೋಳಿ ಅಂದರೆ ಆತ್ಮ ಗುಣಗಳ ಬಣ್ಣದಿಂದ ಹೊಳೆಯುವ ಹಬ್ಬವಾಗ ಬೇಕು.

ಹೋಳಿ ಎಂದರೆ....

ಹೋಳಿ ಎಂದರೆ....

ಹಿಂದಿ ಭಾಷೆಯಲ್ಲಿ `ಹೋ-ಲಿ', ಅಂದರೆ ಆಗಿಹೊದದ್ದನ್ನು ಮರೆತು ಬಿಡಬೇಕು, ಇಂಗ್ಲಿಷ ಭಾಷೆಯಲ್ಲಿ `ಹೋಲಿ' ಅಂದರೆ ಪವಿತ್ರತೆ. ನಮ್ಮ ಆಚಾರ, ವಿಚಾರ ವ್ಯವಹಾರಗಳನ್ನು ಶುದ್ಧಗೊಳಿಸಬೇಕು. ಪರಸ್ಪರರಲ್ಲಿ ಆತ್ಮೀಯತೆಯನ್ನು ಬೆಳೆಸಿ, ಸದ್ಗುಣಗಳಿಂದ ಕೂಡಿದ, ಸತ್ಯದ ಬಣ್ಣವನ್ನು ಹಚ್ಚಿಸಿ ನಾವು ಹೋಳಿಯನ್ನು ಆಚರಿಸಿದರೆ ನಮ್ಮ ಜೀವನವೂ ಮಂಗಳಮಯವಾಗುವುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Holi is considered as one of the most revered and celebrated festivals of India and it is celebrated in almost every part of the country. Festival of colors Holi will be celebrating in India on March 20 and somewhere on March 21st. Here is an article which explains importance of Holi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more