• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏಡ್ಸ್ ಮನೋರೋಗಕಾರಿ, ಅರಿತರೆ ಸಹಕಾರಿ

By ಡಾ.ವಿನೋದ ಕುಲಕರ್ಣಿ, ಮನೋವೈದ್ಯರು,
|

ಏಡ್ಸ್ ಹಾಗೂ ಮನೋರೋಗಗಳಿಗೆ ಗಾಢವಾದ ಸಂಬಂಧವಿದೆಯೆಂದು ಹೇಳಿದಾಗ ತಿಳಿವಳಿಕೆ ಇಲ್ಲದವರು ಕೇಳುವ ಪ್ರಶ್ನೆ "ಇಮಾಮಸಾಬಿಗೂ ಗೋಕುಲಾಷ್ಠಮಿಗೂ ಎಂಥಹ ಸಂಬಂಧ"? ಎಂದು ಆದರೆ ಮನೋರೋಗಕ್ಕೆ ಮದ್ದಿಲ್ಲ ಎಂಬ ಗಾದೆ ಮಾತೂ ಇದೆ. ಮನೋರೋಗಕ್ಕೆ ಏಡ್ಸ್ ಕಾರಣವಾದರೆ ಅವರಿಗೆ ಧೈರ್ಯ ತುಂಬುವುದು ಹೇಗೆ ಎಂಬುದನ್ನು ಇಲ್ಲಿ ಯೋಚಿಸಬೇಕು.

ಪ್ರತಿ ವರ್ಷ ಡಿಸೆಂಬರ್ 1 ರಂದು ಏಡ್ಸ್ ದಿನಾಚರಣೆಯನ್ನು ಆಚರಿಸುತ್ತಲೇ ಇದ್ದೇವೆ. ಇಡೀ ಪ್ರಪಂಚದಲ್ಲಿ ಡಿ.1 ರಂದು ಇಂತಹ ದಿನಾಚರಣೆ ಆಚರಿಸಬೇಕು ಈ ಕಾಯಿಲೆ ಬಗ್ಗೆ ಅರಿವು, ಜಾಗೃತಿ ಮೂಡಿಸಬೇಕು ಎಂದು ಯೋಚಿಸಿದವರು ಥಾಮಸ್ ನೆಟ್ಟರ್ ಹಾಗೂ ಜೇಮ್ಸ್ ಡಬ್ಲ್ಯೂ ಬ್ರೌನ್ ಎಂಬ ವಿಜ್ಞಾನಿಗಳು. ಅವರು ಈ ಯೋಚನೆ ಮಾಡಿದ್ದು 1987ರಲ್ಲಿ.[ಡಿಸೆಂಬರ್ 1 ಏಡ್ಸ್ ದಿನಾಚರಣೆ : ಒಂದಿಷ್ಟು ಉಪಯುಕ್ತ ಮಾಹಿತಿ]

ಏಡ್ಸ್ ತಗುಲಿದ ರೋಗಿಗಳಿಗೆ ರೋಗ ಬಂದಿದೆಯಲ್ಲಾ ಎಂಬ ಆತಂಕ, ಖಿನ್ನತೆ, ಮತಿಭ್ರಾಂತಿ ತಗಲುವ ಸಾಧ್ಯತೆಯಿದೆ. ಈ ವೇಳೆ ವೈದ್ಯರು, ಮನೋವೈದ್ಯರು ಮುಂದಾಳತ್ವ ವಹಿಸಿ ಅರಿವು ಮೂಡಿಸಿದರೆ ಅಂತಹ ರೋಗಿಗಳಿಗೆ ಪುನರ್ಜನ್ಮ ನೀಡಬಹುದು.

ಏಡ್ಸ್ ಸಾಮಾನ್ಯ ಲಕ್ಷಣಗಳು

ಏಡ್ಸ್ ಸಾಮಾನ್ಯ ಲಕ್ಷಣಗಳು

ಜ್ವರ, ಥಂಡಿ, ಚಳಿ, ಗಂಟಲುಬೇನೆ, ರಾತ್ರಿ ಹೊತ್ತು ವಿಪರೀತ ಬೆವರುವಿಕೆ, ದೇಹದ ತೂಕದಲ್ಲಿ ಗಣನೀಯ ಇಳಿಕೆ, ದಣಿವು, ಆಯಾಸ, ನಿಶ್ಯಕ್ತಿ, ಕೀಲು ನೋವುಗಳು, ಮಾಂಸಖಂಡಗಳ ನೋವುಗಳು ಇವುಗಳು ಏಡ್ಸ್ ರೋಗದ ಶಾರೀರಿಕ ಲಕ್ಷಣಗಳು. ಇವುಗಳ ಬಗ್ಗೆ ಸಾರ್ವಜನಿಕರಿಗೆ ಈಗಾಗಲೇ ಸಾಕಷ್ಟು ಅರಿವು ಮೂಡಿದೆ. ದೀರ್ಘ ಕಾಲದ ಲಕ್ಷಣಗಳ ಬಗ್ಗೆ ಮಾತನಾಡಿದರೆ ಜನ ಅವಕ್ಕಾಗುವುದಂತೂ ಖಂಡಿತ.

ಭೀಕರ ಲಕ್ಷಣಗಳು

ಭೀಕರ ಲಕ್ಷಣಗಳು

ಮಂದದೃಷ್ಟಿ, 24x7 ದಣಿವು, ಯಾವಾಗಲೂ ಜ್ವರ, ಪದೇ ಪದೇ ಭೇದಿಗಳಿಂದ ಎಡಬಿಡದೇ ಶೌಚಾಲಯಗಳಿಗೆ ಎಡತಾಕುವದು, ಒಣ ಕೆಮ್ಮು, ದಮ್ಮು, ಉಸಿರಾಟದ ತೊಂದರೆ, ಟಿ.ಬಿ, ನ್ಯೂಮೋನಿಯಾ ಮುಂತಾದವುಗಳು, ಏಡ್ಸ್ ಕಾಯಿಲೆಯ ಭೀಕರ ಲಕ್ಷಣಗಳು. ಇನ್ನು, ಹಲವರ ನಾಲಿಗೆಯ ಮೇಲೆ ಹಾಗೂ ಬಾಯಿತುಂಬ, ಬಿಳಿಬಣ್ಣದ ಮಚ್ಛೆಗಳು ಕಾಣಿಸಿಕೊಂಡು, ರೋಗಿಯನ್ನು, ನೋಡುಗರನ್ನು ದಿಗ್ಭ್ರಾಂತರನ್ನಾಗಿ ಮಾಡುತ್ತವೆ.

ಏಡ್ಸ್ ಒಂದು ಖಿನ್ನತೆ ರೋಗ

ಏಡ್ಸ್ ಒಂದು ಖಿನ್ನತೆ ರೋಗ

ಏಡ್ಸ್ ರೋಗಿ ಚಿತ್ರ ವಿಚಿತ್ರವಾಗಿ ವರ್ತಿಸಲ್ಲ, ಹೆದರಿಸಬಲ್ಲ! ತಾನೇ ಹೆದರಬಲ್ಲ! ಭಯಂಕರವಾಗಿ ಚೀರಾಡಬಲ್ಲ, ಅರ್ಭಟಿಸಬಲ್ಲ, ಆರ್ತನಾದ ತೆರೆಯಬಲ್ಲ. ಟಿ.ಬಿ, ಮೆನಿಂಜೈಟಿಸ್ ರೋಗದಿಂದ ಬಳಲಿ, ಅಪಸ್ಮಾರ ರೋಗಕ್ಕೆ ತುತ್ತಾಗಬಲ್ಲ! ದೇಹ ಹಾಗೂ ಮನಸ್ಸಿನ ಅಸಮತೋಲನೆಯನ್ನು ತೋರಿಸಿ, ತನ್ನ ಅಸಮರ್ಥತೆಯನ್ನು, ಅಸಹಾಯಕತೆಯನ್ನು, ಆಕ್ರಂದನದ ಮೂಲಕ ಅವಿಷ್ಕಾರಗೊಳಿಸಬಲ್ಲ !!. ಎಲ್ಲೆ ಮೀರಿದ ಆತಂಕದಿಂದ, ಗಾಬರಿ, ಬಾಯಾರಿಕೆ, ತಲೆಸುತ್ತುವಿಕೆ, ಎದೆಯಲ್ಲಿ 24‍X7 ಡವಡವ, ನಿದ್ರಾಹೀನತೆಯನ್ನು ತೋರಿಸಬಲ್ಲ. ಏಡ್ಸ್ ಹಾಗೂ ಖಿನ್ನತೆ ರೋಗ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ?

ಏಡ್ಸ್ ಹಾಗೂ ಮತಿಭ್ರಾಂತಿ

ಏಡ್ಸ್ ಹಾಗೂ ಮತಿಭ್ರಾಂತಿ

ಏಡ್ಸ್ ತಗುಲಿದ ಮೇಲೆ, ಈ ರೋಗಿ ಸ್ಕಿಜೋಫ್ರಿನಿಯಾ ಅಥವಾ ಮತಿಭ್ರಾಂತಿ ತರಹದ ರೋಗಕ್ಕೆ ಬಲಿ ಆಗಬಹುದು. ಈ ಕಾಯಿಲೆಯಲ್ಲಿ ಇತರರ ಮೇಲೆ ಸಂಶಯ ಮಾಡುವದು ತನ್ನ ಹೆಂಡತಿಯ ಶೀಲವನ್ನೇ ಶಂಕಿಸಿ ದೂರುವದು ಅವಳನ್ನು ಹಿಂಸಿಸುವದು ಅವಳನ್ನು ಕೊಲ್ಲುವ ಪ್ರಯತ್ನಕ್ಕೆ ಕೈ ಹಾಕಬಹುದು. ನೀನು ಏಡ್ಸ್ ರೋಗಿ, ಇದಕ್ಕೆ ನಿನ್ನ ಹೆಂಡತಿಯೇ ಕಾರಣ ಎಂಬ ಸಂಶಯವೂ ಮೂಡಬಹುದು.

 ಏಡ್ಸ್ ರೋಗಿಗೆ ಮರೆಗುಳಿ ತನವೇ?

ಏಡ್ಸ್ ರೋಗಿಗೆ ಮರೆಗುಳಿ ತನವೇ?

ಏಡ್ಸ್ ಡಿಮೆನ್ಸಿಯಾ ಕಾಂಪ್ಲೆಕ್ಸ್, ಎಂಬ ರೋಗದಲ್ಲಿ, ಈ ಏಡ್ಸ್ ರೋಗಿ ತನ್ನ ಜ್ಞಾಪಕ ಶಕ್ತಿಯನ್ನು ಕಳೆದುಕೊಳ್ಳಬಲ್ಲ. ಯಾರನ್ನೂ ಗುರುತಿಸಲಾರದೇ, ತನ್ನ ಮಲ ಮೂತ್ರವಿಸರ್ಜನೆಯನ್ನೂ ತನಗೇ ಅರಿವಿಲ್ಲದಂತೆ ತನ್ನ ಬಟ್ಟೆಗಳಲ್ಲಿ ಮಾಡಿಕೊಳ್ಳಬಲ್ಲ ! ಆದರೆ! ಅವನಿಗೆ ಇದಾವುದರ ಬಗ್ಗೆಯೂ ಒಂದಿಷ್ಟು ಬೇಸರ, ಲಜ್ಜೆ, ಜ್ಞಾನ ಏನೂ ಇರಲಾರದು.! ಇಂಥಹ ಏಡ್ಸ ಡಿಮೆನ್ಸಿಯಾ ರೋಗಿ, ಒಂದು ತರಹದ "ಈಗ ತಾನೇ ಹುಟ್ಟಿದ ಮಗುವಿನಂತೆ". ಮುಗ್ಧ, ಅತೀ ಮುಗ್ಧ ನಾಗುತ್ತಾನೆ.

ಕ್ಯಾನ್ಸರ್ ತಗಲುವುದೇ?

ಕ್ಯಾನ್ಸರ್ ತಗಲುವುದೇ?

ಏಡ್ಸ್ ರೋಗಿಗಳಿಗೆ ಪುಪ್ಪುಸದ ಕ್ಯಾನ್ಸರ್, ಕಪೋಸಿ, ಗುದದ್ವಾರದ ಕ್ಯಾನ್ಸರ್, ಯಕೃತ್ ಹಾಗೂ ಮಿದುಳಿನ ಕ್ಯಾನ್ಸರ್ ರೋಗಗಳು ತಗಲುವ ಸಾಧ್ಯತೆಯಿದೆ ಏಕೆಂದರೆ ಏಡ್ಸ್ ಎಲ್ಲ ರೋಗಳಗಳಿಗೂ ಆಹ್ವಾನಕಾರಕ.

ಮನೋವೈಜ್ಞಾನಿಕ ಚಿಕಿತ್ಸೆ ಹೇಗೆ ?

ಮನೋವೈಜ್ಞಾನಿಕ ಚಿಕಿತ್ಸೆ ಹೇಗೆ ?

ನಿರಾಶೆ ಸಲ್ಲದು. ವೈದ್ಯಕೀಯ ಶಾಸ್ತ್ರಗಳಲ್ಲಿ, ದಿನನಿತ್ಯವೂ, ಹೊಸ ಹೊಸ ಸಂಶೋಧನೆಗಳು, ಅವಿಷ್ಕಾರಗಳು ನಡೆಯುತ್ತಲೇ ಇವೆ. ಶಾರೀರಿಕ ರೋಗದ ತಜ್ಞರು, ರೋಗಿಯ ಏಡ್ಸ್ ಕಾಯಿಲೆಗೆ ಚಿಕಿತ್ಸೆ ನೀಡಿದರೆ, ಮನೋರೋಗ ತಜ್ಞರು ಸೂಕ್ತ ಔಷಧಿ ಚಿಕಿತ್ಸೆ, ಕೌನ್ಸೆಲಿಂಗ್, ವರ್ತನಾ ಚಿಕಿತ್ಸೆ, ಸಿ.ಬಿ.ಟಿ, ವಿದ್ಯುತ್ ಕಂಪನಾ ಚಿಕಿತ್ಸೆಗಳಿಂದ, ಈ ಏಡ್ಸ್ ರೋಗಿಯ ಖಿನ್ನತೆಗೆ ಹೊಸ ದಾರಿ ತೋರಬಲ್ಲರು.

ಇ.ಸಿ.ಟಿ. ಚಿಕಿತ್ಸೆ ನೀಡಬಹುದೇ?

ಇ.ಸಿ.ಟಿ. ಚಿಕಿತ್ಸೆ ನೀಡಬಹುದೇ?

ಖಂಡಿತವಾಗಿಯೂ, ನಿಸ್ಸಂಶಯವಾಗಿಯೂ ನೀಡಬಹುದು. ಅಷ್ಟೇ ಅಲ್ಲ, ಆತ್ಮಹತ್ಯೆಯ ವಿಚಾರಗಳಿದ್ದಾಗ, ಖಿನ್ನತೆ ರೋಗ, 'ಮರಣ'ವನ್ನೇ ತರುವಂಥಹ ಘೋರ ಸ್ಥಿತಿ ತಲುಪಿದಾಗ, ಮನೋವೈದ್ಯರು ಇ.ಸಿ.ಟಿ. ಚಿಕಿತ್ಸೆಯನ್ನು ನೀಡಲೇಬೇಕು ! ಇದು ರೋಗಿಯ "ಹಕ್ಕು" ಆಗಿದೆ.

ಏಡ್ಸ್ ಇದೆಯೆಂದು ದೂರ ಸರಿಯದಿರಿ

ಏಡ್ಸ್ ಇದೆಯೆಂದು ದೂರ ಸರಿಯದಿರಿ

ನೆನಪಿಡಿ, ನಾವು ನೀವು, ಎಲ್ಲರೂ ಏಡ್ಸ್ ರೋಗಿಯ ಕೈ ಕುಲುಕಬಹುದು ! ಅವನನ್ನು ಅಪ್ಪಿಗೊಳ್ಳಬಹುದು ! ಅವನು ಶೀನಿದರೂ, ಅದರಿಂದ ಏಡ್ಸ್ ಹರಡುವದಿಲ್ಲ ! ಅವನ ಚರ್ಮವನ್ನು (ಯಾವುದೇ ಗಾಯಗಳಿರದಿದ್ದರೆ) ನಾವು ಮುಟ್ಟಬಹುದು. ಏಡ್ಸ ರೋಗಿ ಬಳಸಿದ ಶೌಚಾಲಯವನ್ನು ಇತರರೂ ಬಳಸಬಹುದು!. ಇನ್ನಾದರೂ, ಏಡ್ಸ್ ರೋಗಿಯ ಬಗ್ಗೆ ಅವಹೇಳನ, ಅಸಹ್ಯತನ ಬೇಡ! ಅನಾವಶ್ಯಕವಾಗಿ, ಆತಂಕವನ್ನು ಸೃಷ್ಟಿಸುವದು ಸಲ್ಲದು!

ಡಿಸೆಂಬರ್ 1 ವಿಶ್ವ ಏಡ್ಸ್ ದಿನ. ಜಾಗ್ರತೆ ವಹಿಸಿದರೆ ಏಡ್ಸ್ ರೋಗಿಯು ಬಹಳಷ್ಟು ದಿನ ಬದುಕಿಸಬಹುದು ನಮ್ಮಂತೆ, ನಿಮ್ಮಂತೆ.

English summary
World AIDS Day on 1st December : This day is dedicated to raising awareness of the AIDS pandemic caused by the spread of HIV infection, aids is also kind Psychiatry to whip hand contact to Psychiatrists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X