ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಡಿಗೇ ದೊಡ್ಡ ಹಬ್ಬ ನಾಗರ ಪಂಚಮಿ ವೈಶಿಷ್ಟ್ಯ: ಮಹತ್ವದ 6 ಸಂಗತಿ

|
Google Oneindia Kannada News

ನಾಡಿಗೆ ದೊಡ್ಡ ಹಬ್ಬ ಎಂಬ ಖ್ಯಾತಿ ಪಡೆದ ನಾಗರ ಪಂಚಮಿ ಹಬ್ಬವನ್ನು ಕರ್ನಾಟಕದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರತಿವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನ(ಪಂಚಮಿ) ಆಗಸ್ಟ್ 2, 2022
ಆಚರಿಸಲ್ಪಡುವ ಈ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ.

ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿ ಹಬ್ಬಗಳ ಸಾಲು ಆರಂಭವಾಗುವುದಕ್ಕೆ ನಾಂದಿ ಹಾಡುತ್ತದೆ. ನಾಗರ ಪಂಚಮಿಯ ನಂತರ ರಕ್ಷಾಬಂಧನ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಹೀಗೆ ಹಬ್ಬಗಳು ಒಂದರ ಹಿಂದೊಂದರಂತೆ ಆರಂಭವಾಗುತ್ತವೆ.

ವಿಶೇಷ ಲೇಖನ : ನಾಗಪಂಚಮಿ- ನಾಗಾವಲೋಕನ ವಿಶೇಷ ಲೇಖನ : ನಾಗಪಂಚಮಿ- ನಾಗಾವಲೋಕನ

ನಾಗರ ಪಂಚಮಿ ಹಬ್ಬ ವನ್ನು ಭಾರತದ ಹಲವು ಭಾಗಗಳಲ್ಲಿ ಹಿಂದುಗಳು ಆಚರಿಸುತ್ತಾರೆ. ಆದರೆ ಕರ್ನಾಟಕದಲ್ಲಿ ಇದಕ್ಕೆ ಮತ್ತಷ್ಟು ಮಹತ್ವದ ಸ್ಥಾನವಿದೆ. ಈ ದಿನ ಹಾವಿಗೆ ಹಾಲೆರೆದು, ಪೂಜಿಸಿ, ಸಕಲ ಇಷ್ಟಾರ್ಥಗಳೂ ಪ್ರಾಪ್ತಿಯಾಗುವಂತೆ ನಾಗದೇವನನ್ನು ಬೇಡುವುದು ವಾಡಿಕೆ. ಈ ದಿನ ಶೇಷ ನಾಗ ಮತ್ತು ಶ್ರೀ ವಿಷ್ಣುವನ್ನು ಭಕ್ತಿಯಿಂದ ಸ್ತುತಿಸಲಾಗುತ್ತದೆ.

ಪುರಾಣ ಕತೆಯೊಂದರ ಪ್ರಕಾರ ಹಾವು ಕಚ್ಚಿ ಮಡಿದ ತನ್ನ ಸಹೋದರನನ್ನು ಸಹೋದರಿಯೊಬ್ಬಳು ಬದುಕಿಸಿಕೊಂಡ ದಿನ ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಾಗಿತ್ತು. ಹಾವನ್ನು ಭಕ್ತಿಭಾವದಿಂದ ಪೂಜಿಸಿ ತನ್ನ ಅಣ್ಣನನ್ನು ತಂಗಿ ಬದುಕಿಸಿಕೊಂಡ ದಿನವಾಗಿದ್ದರಿಂದ ಈ ದಿನವನ್ನು ಭ್ರಾತೃತ್ವದ ಸಂಕೇತವಾಗಿಯೂ ಕೆಲವೆಡೆ ಆಚರಿಸಲಾಗುತ್ತದೆ.

ನಾಗರ ಪಂಚಮಿ ಆರಾಧನೆ ಹಿನ್ನೆಲೆ, ವಿಶೇಷ ಹಾಗೂ ಪೂಜಾ ಕ್ರಮದ ಮಾಹಿತಿನಾಗರ ಪಂಚಮಿ ಆರಾಧನೆ ಹಿನ್ನೆಲೆ, ವಿಶೇಷ ಹಾಗೂ ಪೂಜಾ ಕ್ರಮದ ಮಾಹಿತಿ

ಜನಮೇಜಯ ಎಂಬ ರಾಜ ತನ್ನ ತಂದೆ ಪರೀಕ್ಷಿತನ ಸಾವಿಗೆ ಹಾವು ಕಾರಣ ಎಂದು ತಿಳಿದು ಭೂಲೋಕದಲ್ಲಿರುವ ಸರ್ಪಸಂಕುಲವನ್ನೆಲ್ಲ ನಾಶ ಮಾಡುವ ಶಪಥ ಮಾಡಿ, ಸರ್ಪಯಜ್ಞ ಮಾಡಲು ಹೊರಡುತ್ತಾನೆ. ಆದರೆ ಪ್ರಾಣಿ ಹಿಂಸೆ ಮಹಾಪಾಪ ಎಂಬುದನ್ನು ಸಂತರೊಬ್ಬರ ಹಿತವಚನದಿಂದ ಅರಿತ ಜನಮೇಜಯ ಸರ್ಪಯಜ್ಞವನ್ನು ಹಿಂದೆಗೆದುಕೊಳ್ಳುತ್ತಾನೆ. ಹೀಗೆ ಜನಮೇಜಯ ಸರ್ಪಯಜ್ಞವನ್ನು ನಿಲ್ಲಿಸಲು ನಿರ್ಧರಿಸಿದ ದಿನ ಶ್ರಾವಣ ಶುಕ್ಲ ಪಂಚಮಿಯಾಗಿತ್ತು. ಆದ್ದರಿಂದ ಈ ದಿನವನ್ನು ನಾಗರ ಪಂಚಮಿ ಎಂದು ಆಚರಿಸಲಾಗುತ್ತದೆ ಎಂಬ ಪ್ರತೀತಿಯೂ ಇದೆ.

ಶ್ರೀಕೃಷ್ಣನ ನೆನಪು

ಶ್ರೀಕೃಷ್ಣನ ನೆನಪು

ನಾಗರ ಪಂಚಮಿಗೂ ಭಗವಾನ್ ಶ್ರೀಕೃಷ್ಣನಿಗೂ ಸಂಬಂಧವಿದೆ. ಪುರಾಣ ಕತೆಯೊಂದರ ಪ್ರಕಾರ ಬಾಲ ಕೃಷ್ಣ ಯಮುನಾ ನದಿ ತೀರದಲ್ಲಿ ಆಟವಾಡುತ್ತಿದ್ದಾಗ ನದಿಯಲ್ಲಿ ಜಾರಿ ಬೀಳುತ್ತಾನೆ. ಕೃಷ್ಣ ನದಿಗೆ ಬಿದ್ದ ಸಂದರ್ಭದಲ್ಲಿ ಕಾಳಿಯಾ ಎಂಬ ಹಾವೊಂದು ಆಅತನ ಮೇಲೆ ದಾಳಿ ನಡೆಸುತ್ತದೆ. ಆದರೆ ದೈವತ್ವದ ಸ್ವರೂಪವಾಗಿದ್ದ ಶ್ರೀಕೃಷ್ಣ ಕಾಳಿಯಾನನ್ನು ಮಣಿಸುತ್ತಾನೆ. ಈತ ಸಾಮಾನ್ಯ ಮಗುವಲ್ಲ ಎಂಬುದನ್ನು ಅರಿತ ಕಾಳಿಯ ಹಾವು ತನ್ನನ್ನು ಬಿಟ್ಟುಬಿಡುವಂತೆ ಕೃಷ್ಣನಲ್ಲಿ ಬೇಡುತ್ತದೆ. ಆಗ ಜನರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದೆಂದು ವಚನ ಪಡೆದು, ಶ್ರೀಕೃಷ್ಣ ಆ ಹಾವನ್ನು ಬಿಟ್ಟು ಬಿಡುತ್ತಾನೆ. ಹೀಗೆ ಕೃಷ್ಣನು ಕಾಳಿಯಾ ಹಾವನ್ನು ಸೋಲಿಸಿದ ದಿನ ಶ್ರಾವಣ ಶುಕ್ಲ ಪಂಚಮಿಯಾಗಿತ್ತು. ಭಯಂಕರ ಝಾವನ್ನು ಕೃಷ್ಣ ಮಣಿಸಿದ ನೆನಪಿಗಾಗಿ ಈ ಹಬ್ಬ ಆಚರಿಸಲಾಗುತ್ತದೆ ಎಂಬ ನಂಬಿಕೆಯೂ ಇದೆ.

ಮಳೆಗಾಲದಲ್ಲಿ ಹಾವಿನ ಭಯ

ಮಳೆಗಾಲದಲ್ಲಿ ಹಾವಿನ ಭಯ

ನಾಗರ ಪಂಚಮಿಯನ್ನು ಮಳೆಗಾಲದ ಸಮಯದಲ್ಲೇ ಆಚರಿಸುವುದಕ್ಕೆ ಕಾರಣ ಹುಡುಕಿದರೆ, ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಹಾವುಗಳಿಂದ ರಕ್ಷಣೆ ಪಡೆಯುವ ಉದ್ದೇಶ ಎದ್ದು ಕಾಣುತ್ತದೆ. ಈ ಸಮಯದಲ್ಲಿ ಹಾವಿಗೆ ಹಾಲೆರೆಯುವ ಮೂಲಕ ಯಾವುದೇ ರೀತಿಯ ಅಪಾಯ ನೀಡದಿರು ಎಂದು ಬೇಡುವ ಉದ್ದೇಶವೂ ಇರುವುದು ಸುಳ್ಳಲ್ಲ.

ನಾಗರ ಪಂಚಮಿ ಉಪವಾಸ

ನಾಗರ ಪಂಚಮಿ ಉಪವಾಸ

ಪುರಾಣ ಕತೆಯೊಂದರಲ್ಲಿ ಸತ್ಯೇಶ್ವರಿ ಎಂಬ ದೇವಿಯೊಬ್ಬಳು ನಾಗರಪಂಚಮಿಯ ಮುನ್ನಾದಿನ ಮೃತನಾದ ತನ್ನ ಸಹೋದರನನ್ನು ನೆನೆದು, ನಾಗರಪಂಚಮಿಯ ದಿನ ಅನ್ನ-ನೀರು ಬಿಟ್ಟು ಉಪವಾಸ ಮಾಡಿದಳು. ಇಂದಿಗೂ ನಾಗರ ಪಂಚಮಿಯ ದಿನ ಸಹೋದರನ ಒಳಿತಿಗಾಗಿ ಸಹೋದರಿಯರು ಉಪವಾಸ ಮಾಡುವ ಪರಿಪಾಠವಿದೆ.

ಪೂಜೆ ಮಾಡುವುದು ಹೇಗೆ?

ಪೂಜೆ ಮಾಡುವುದು ಹೇಗೆ?

ಈ ದಿನ ಚಂದನ ಅಥವಾ ಅರಿಶಿಣದಿಂದ ಮಣೆ ಮೇಲೆ ನವನಾಗಗಳ ಆಕೃತಿ ಬರೆದು ಪೂಜೆ ಮಾಡುವ ಪದ್ಧತಿ ಇದೆ. ಇಲ್ಲವೆಂದರೆ ನಾಗರ ಕಲ್ಲು, ಅಥವಾ ನಅಗದೇವನ ಚಿತ್ರಕ್ಕೆ ಪೂಜೆ ಮಾಡಬಹುದು. ಈ ದಿನ, ನಾಗದೇವನಿಗೆ ಅರಳು ಮತ್ತು ಹಾಲನ್ನು ನೈವೇದ್ಯವೆಂದು ಅರ್ಪಿಸಬೇಕು. ನಾಗದೇವನಿಗೆ ಈ ದಿನ ಧೂರ್ವೆಯನ್ನು ಸಹ ಅರ್ಪಿಸಲಾಗುತ್ತದೆ.

ಯಾವುದಕ್ಕೆ ನಿಷೇಧ?

ಯಾವುದಕ್ಕೆ ನಿಷೇಧ?

ನಾಗರ ಪಂಚಮಿಯ ದಿನ ಹಲವು ಕೆಲಸಗಳಿಗೆ ನಿಷೇಧವಿದೆ. ಈ ದಿನ ಏನನ್ನೂ ಹೆಚ್ಚಬಾರದು, ಕತ್ತರಿಸಬಾರದು. ಎಣ್ಣೆಯಲ್ಲಿ ಯಾವ ಪದಾರ್ಥವನ್ನೂ ಕರಿಯುವಂತಿಲ್ಲ, ಕರಿದ ಖಾದ್ಯ ನಿಷಿದ್ಧ, ಹಾಗೆಯೇ ಭೂಮಿಯನ್ನು ಅಗಿಯಬಾರದೆಂದ ನಿಯಮವೂ ಇದೆ.

ಸಿಹಿ ತಿನಿಸು

ಸಿಹಿ ತಿನಿಸು

ನಾಗರ ಪಂಚಮಿ ದಿನ ಪಾಯಸದಂಥ ಸಿಹಿಖಾದ್ಯ ಮಾಡಿ ಸೇವಿಸುತ್ತಾರೆ. ಖರಿದ ಖ್ಯಾದ್ಯ ವರ್ಜ್ಯವಾಗಿರುವುದರಿಂದ ಮಲೆನಾಡಿನ ಭಾಗಗಳಲ್ಲಿ ಹಲಸಿನ ಬೀಜದಿಂದ ಸಿಹಿ ತಯಾರಿಸಿ ಸೇವಿಸುವ ಪರಿಪಾಠವೂ ಇದೆ.

English summary
The people of Karnataka are celebrating Nag Panchami festival with devotion every year on 5th day of Shravana masa. Here are few things to know about Nag Panchami. Festival of snakes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X