ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮನಬಿಲ್ಲಿಗೆ ಏಳು ಬಣ್ಣವಾದರೆ ಕಾಮನಹಬ್ಬಕ್ಕೆ ಎಷ್ಟು ಬಣ್ಣ?

|
Google Oneindia Kannada News

ವಸಂತ ಋತುವಿನ ಆಗಮನವನ್ನು ಸೂಚಿಸುವ ಹೋಳಿ ಹಬ್ಬದ ರಂಗಿನ ಗುಂಗು ಈಗಾಗಲೇ ಆರಂಭವಾಗಿದೆ. ಈ ವರ್ಷ ಮಾರ್ಚ್ 12 ಮತ್ತು ಕೆಲವೆಡೆ ಮಾರ್ಚ್ 13 ರಂದು ನಡೆಯಲಿರುವ ಹೋಳಿಗೆ ಉತ್ತರ ಭಾರತದ ಹಲವು ರಾಜ್ಯಗಳು ಈಗಾಗಲೇ ಸಿದ್ಧತೆ ನಡೆಸಿಕೊಂಡಿವೆ. ಪಾಲ್ಗುಣ ಮಾಸದ ಹುಣ್ಣಿಮೆಯಂದು ಪ್ರತಿವರ್ಷ ನಡೆಯುವ ಈ ಹಬ್ಬವನ್ನು ಕೇವಲ ಹಿಂದುಗಳಷ್ಟೇ ಅಲ್ಲದೆ, ಎಲ್ಲ ಮತೀಯರೂ ಅತ್ಯಂತ ಸಂಭ್ರಮದಿಂದ, ಸಾಮರಸ್ಯದಿಂದ ಆಚರಿಸುತ್ತಾರೆ.

ರಂಗಿನ ಹೋಳಿ ಸಂಭ್ರಮಿಸೋಕೆ ದೇಶದಾದ್ಯಂತ ಜನರು ಹೇಗೆಲ್ಲ ಸಿದ್ಧರಾಗಿದ್ದಾರೆ, ನೀವೇ ನೋಡಿ

ಬಣ್ಣದೋಕುಳಿಯಲ್ಲಿ ನಗುವಿನ ಜಾತ್ರೆ

ಬಣ್ಣದೋಕುಳಿಯಲ್ಲಿ ನಗುವಿನ ಜಾತ್ರೆ

ಅನಾರ್ಕಲಿ ಚಿತ್ರದ ನಾಯಕಿ, ಬಾಲಿವುಡ್ ತಾರೆ ಸ್ವರಾ ಭಾಸ್ಕರ್ ಹೋಳಿ ಹಬ್ಬಕ್ಕೆ ಸಿದ್ಧರಾಗಿದ್ದು ಹೀಗೆ. ಬಣ್ಣ ಕೊಂಡವರಿಗೆ ನಗು ಫ್ರೀ ಅಂತಿದ್ದಾರೆ ಅವರು.

ಬಣ್ಣಕ್ಕಿಲ್ಲ ದೇಶ

ಬಣ್ಣಕ್ಕಿಲ್ಲ ದೇಶ

ಹೃಷಿಕೇಶದಲ್ಲಿ ಕೆಲ ವಿದೇಶಿಯರು ಹೋಳಿ ಆಚರಿಸಿ ಸಂಭ್ರಮಪಡುತ್ತಿದ್ದಾರೆ. ಬಣ್ಣದ ಮುಂದೆ ದೇಶ-ವಿದೇಶ ಎಂಬ ಭೇದವಿಲ್ಲ ಅನ್ನೋಕೆ ಇದಕ್ಕಿಂತ ಸಾಕ್ಷಿ ಬೇಕಾ?

ಬಣ್ಣದೋಕುಳಿಯಲ್ಲಿ ಸೀರೆ ಉಟ್ಟ ನೀರೆ

ಬಣ್ಣದೋಕುಳಿಯಲ್ಲಿ ಸೀರೆ ಉಟ್ಟ ನೀರೆ

ಬಣ್ಣಕ್ಕೇ ಸೌಂದರ್ಯ ಸ್ಪರ್ಧೆ ನೀಡೋಕೆ ಕೋಲ್ಕತ್ತದ ಕಾಲೇಜೊಂದರ ವಿದ್ಯಾರ್ಥಿಗಳು ಸೀರೆ ಉಟ್ಟು ರೆಡಿಯಾಗಿದ್ದಾರೆ!

ಬಣ್ಣದೊಂದಿಗೆ ಬಲ್ಲೆ ಬಲ್ಲೆ

ಬಣ್ಣದೊಂದಿಗೆ ಬಲ್ಲೆ ಬಲ್ಲೆ

ಮಿಥಿಲಾ ಮಖಾನ್ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಬಾಲಿವುಡ್ ನಟಿ ನೀತು ಚಂದ್ರ ಬಣ್ಣಕ್ಕೆ ಬಲ್ಲೆ ಬಲ್ಲೆ ಅಂದಿದ್ದು ಹೀಗೆ.

ಬಣ್ಣಕ್ಕೂ ರಾಜಕೀಯ?

ಬಣ್ಣಕ್ಕೂ ರಾಜಕೀಯ?

ಬಣ್ಣಕ್ಕೂ ರಾಜಕೀಯವೇ? ಇಲ್ಲ, ರಾಜಕೀಯದ ಜಂಜಾಟವನ್ನೆಲ್ಲ ಮರೆಯೋಕೆ ಈ ಬಣ್ಣ ಅಂತಿದ್ದಾರೆ ಪಾಟ್ನಾದಲ್ಲಿ ಬಿಜೆಪಿಯ ಸುಶೀಲ್ ಕುಮಾರ್ ಮೋದಿ ಮತ್ತು ಪ್ರತಿಪಕ್ಷ ನಾಯಕ ಪ್ರೇಮ್ ಕುಮಾರ್.

ರಂಗು-ರಂಗ ಇರುವಾಗ ಇನ್ಯಾರ ಹಂಗೇಕೆ?

ರಂಗು-ರಂಗ ಇರುವಾಗ ಇನ್ಯಾರ ಹಂಗೇಕೆ?

ಶ್ರೀಕೃಷ್ಣನ ನೆಲೆ ವೃಂದಾವನದಲ್ಲಿ ಹೋಲಿ ಆಚರಿಸುತ್ತಿರುವ ಈ ವಿಧವೆಯರು ರಂಗು-ರಂಗ ಇಬ್ಬರೂ ನಮ್ಮ ಪಾಲಿಗಿರುವಾಗ ಇನ್ಯಾರದೋ ಕುಹಕದ ಮಾತಿನ ಹಂಗೇಕೆ ಎನ್ನುವಂತಿದೆ

ಬಣ್ಣದೊಂದಿಗೆ ಹೆಜ್ಜೆ

ಬಣ್ಣದೊಂದಿಗೆ ಹೆಜ್ಜೆ

ಅಹಮದಾಬಾದಿನ ಈ ಮಹಿಳೆಯರಿಗೆ ಹೋಳಿ ಎಂದರೆ ಬರಿ ಬಣ್ಣವಲ್ಲ, ಅದರೊಂದಿಗೆ ಮನದಣಿಯೆ ಕುಣಿಯುವ ಸಂಪ್ರದಾಯವೂ ಇದೆ.

ರಂಗೀ'ಲಾಲೂ'

ರಂಗೀ'ಲಾಲೂ'

ಪಟ್ನಾದಲ್ಲಿ ಹೋಳಿ ರಂಗೀಲಾಲಾ ಅಲ್ಲ, ರಂಗೀಲಾಲೂ. ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಜೊತೆ ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಹೋಲಿ ಶುಭಾಶಯ ವಿನಿಮಯ ಮಾಡಿಕೊಂಡಿದ್ದು ಹೀಗೆ.

ವರ್ಣಮಯ ಈ ಲೋಕವೆಲ್ಲ...

ವರ್ಣಮಯ ಈ ಲೋಕವೆಲ್ಲ...

ಜಗತ್ತಿನ ಜಂಜಾಟವನ್ನೆಲ್ಲ ಮರೆತು ವೃಂದಾವನದ ಬಾಲಕರು ಮೈತುಂಬ ಬಣ್ಣ ಹಚ್ಚಿಕೊಂಡು ಸಂಭ್ರಮಿಸುತ್ತಿರುವ ದೃಶ್ಯಕ್ಕೆ ಸಾಟಿ ಎಲ್ಲಿದೆ?

ಶಿವ ಮತ್ತು ಪಾರ್ವತಿ

ಶಿವ ಮತ್ತು ಪಾರ್ವತಿ

ತಾರಕಾಸುರ ಎಂಬ ರಾಕ್ಷಸ ಶಿವ ಮತ್ತು ಪಾರ್ವತಿಯರ ಮಗುವಿನಿಂದಲ್ಲದೆ ತನ್ನನ್ನು ಇನ್ಯಾರೂ ವಧಿಸುವುದಕ್ಕೆ ಸಾಧ್ಯವಿಲ್ಲ ಎಂಬ ವರ ಪಡೆದು ದುರಹಂಕಾರದಿಂದ ಮೆರೆಯುತ್ತಿದ್ದ. ಆತನನ್ನು ವಧಿಸುವ ಸಲುವಾಗಿ ಮನ್ಮಥ ಶಿವನ ತಪಸ್ಸನ್ನು ಭಂಗಮಾಡಿ ಶಿವ-ಪಾರ್ವತಿಯರ ಸಮಾಗಮವಾಗುವಂತೆ ಮಾಡುತ್ತಾನೆ .

ಆದರೆ ಹೂಬಾಣಗಳಿಂದ ತಪೋಭಂಗ ಮಾಡಿದ ಕಾಮದೇವನನ್ನು ಶಿವ ತನ್ನ ಮೂರನೇ ಕಣ್ಣಿನಲ್ಲಿ ಸುಟ್ಟುಬಿಡುತ್ತಾನೆ. ಇದರ ಸಾಂಕೇತಿಕ ಆಚರಣೆಯಾಗಿ ಕಾಮದಹನವನ್ನು ಈಗಲೂ ಆಚರಿಸಲಾಗುತ್ತದೆ.

ಶಿವನ ಕೋಪದ ಅರಿವಿದ್ದೂ ಲೋಕಕಲ್ಯಾಣಕ್ಕಾಗಿ ತನ್ನನ್ನು ತಾನು ಸುಟ್ಟುಕೊಳ್ಳಲು ಸಿದ್ಧನಾದ ಮನ್ಮಥನ ನೆನೆಕೆಗೆ ಈ ಹಬ್ಬ.

English summary
Holi is an ancient Hindu religious festival, known as the festival of colours or the festival of love. The festival signifies the victory of good over evil, and the arrival of spring. It's celebrated all over India and now around the world, and is all about partying and enjoyment
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X