ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದೆಲ್ಲೆಡೆ ಶ್ರದ್ಧಾಭಕ್ತಿಯ ಬುದ್ಧ ಜಯಂತಿ ಆಚರಣೆ

|
Google Oneindia Kannada News

ಬುದ್ಧನೆಂಬುವ ಒಬ್ಬ ಎಂದೊ ಇದ್ದ
ಎನುವಂತೆ ಇಂದಿಗೂ ಇಲ್ಲೇ ಇಲ್ಲ
ಬುದ್ಧ ಹುಟ್ಟಿದ ಮೇಲೆ ಹಳೆ ಜಗವು ಸತ್ತು
ಇದ್ದು ಇಲ್ಲದ ಹಾಗೆ, ಹಾಗೆ ಇತ್ತು.
ಬುದ್ಧ ಸತ್ತನು ಎಂದು ಯಾರೆಂದರೂ
ಬುದ್ಧನ ಜಯಂತಿಗಿದೆ ಜಯವೆಂದಿಗೂ
ಬುದ್ಧನ ಸಮಾಧಿಯದು ಮಾನವನ ಹೃದಯ
ಅದುವೆ ಕಾಯುತ್ತಲಿದೆ ಕಲ್ಕಿ ಉದಯ

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ವರಕವಿ ದ.ರಾ.ಬೇಂದ್ರೆ ಅವರ 'ಗಂಗಾವತರಣ'ದ 'ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ' ಕವನವನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವ ಹೊತ್ತಿದು.

ಪರಮಸತ್ಯದ ಹುಡುಕಾಟಕ್ಕಾಗಿ ಅಧಿಕಾರ, ಸಂಪತ್ತು, ಮೋಹ ಎಲ್ಲವನ್ನೂ ತೊರೆದ ಬುದ್ಧ ವೈಶಾಖ ಮಾಸದ ಹುಣ್ಣಿಮೆಯಂದು ಜನಿಸಿದನಂತೆ. ಆದ್ದರಿಂದ ಈ ದಿನವನ್ನು ಬುದ್ಧ ಪೂರ್ಣಿಮಾ, ಅಥವಾ ಬುದ್ಧ ಜಯಂತಿ ಎಂದು ಆಚರಿಸಲಾಗುತ್ತದೆ. ಈ ವರ್ಷ ಮೇ 18 ರಂದು ಬುದ್ಧ ಜಯಂತಿ ಆಚರಣೆಗೊಳ್ಳುತ್ತಿದ್ದು, ಜಗತ್ತಿನಾದ್ಯಂತ ಬೌದ್ಧರು ಮತ್ತು ಬುದ್ಧನ ಅನುಯಾಯಿಗಳೆಲ್ಲರೂ ಈ ದಿನವನ್ನು ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಿದ್ದಾರೆ.

ಬುದ್ದ ಪೂರ್ಣಿಮೆಯ ದಿನ ದೊಡ್ಡ ದಾಳಿಗೆ ಮಹಿಳಾ ಉಗ್ರರ ಸಂಚು?ಬುದ್ದ ಪೂರ್ಣಿಮೆಯ ದಿನ ದೊಡ್ಡ ದಾಳಿಗೆ ಮಹಿಳಾ ಉಗ್ರರ ಸಂಚು?

ಸಕಲ ಸಂಪತ್ತು, ರಾಜನೆಂಬ ಗೌರವ, ನೆಚ್ಚಿನ ಮಡದಿ, ಮುದ್ದಾದ ಮಗ... ಎಲ್ಲವೂ ಇದ್ದರೂ ರಸ್ತೆಯಲ್ಲಿ ಕಂಡ ಓರ್ವ ಭಿಕ್ಷುಕ, ಓರ್ವ ವೃದ್ಧ, ಓರ್ವ ರೋಗಿಯಿಂದಾಗಿ ಮೋಹವನ್ನೇ ಗೆಲ್ಲುವ ಜಿದ್ದಿಗೆ ಬೀಳುವ ಸಿದ್ಧಾರ್ಥ, ಜ್ಞಾನೋದಯವಾಗಿ ಬುದ್ಧನಾಗುತ್ತಾನೆ. ಕೋಟ್ಯಂತರ ಜನ ಅನುಯಾಯಿಗಳನ್ನು ಹೊಂದುತ್ತಾನೆ. ಭಗವಾನ್ ವಿಷ್ಣುವಿನ ದಶಾವತಾರಗಳಲ್ಲಿ ಒಂಬತ್ತನೆಯ ಅವತಾರ ಎನ್ನುವ ಬುದ್ಧನನ ಜಯಂತಿಯನ್ನು ಇಂದು ಆಚರಿಸಲಾಗುತ್ತಿದ್ದು ಅದರ ಸಣ್ಣ ಝಲಕು ಇಲ್ಲಿದೆ.

ಬೆಂಗಳೂರಿನಲ್ಲಿ ಬುದ್ಧ ಜಯಂತಿ

ಬೆಂಗಳೂರಿನಲ್ಲಿ ಬುದ್ಧ ಜಯಂತಿ

ಬುದ್ಧ ಪೂರ್ಣಿಮೆಗೂ ಮುನ್ನ ಬೆಂಗಳೂರಿನಲ್ಲಿ ಬೌದ್ಧ ಭಿಕ್ಕುವೊಬ್ಬರು ತಯಾರಿ ನಡೆಸುತ್ತಿರುವ ದೃಶ್ಯ. ಬೆಂಗಳೂರಿನ ಹಲವೆಡೆ ಇಂದು ಬುದ್ಧ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ.

ಬುದ್ದ ಪೂರ್ಣಿಮೆಯ ದಿನ ದೊಡ್ಡ ದಾಳಿಗೆ ಮಹಿಳಾ ಉಗ್ರರ ಸಂಚು?ಬುದ್ದ ಪೂರ್ಣಿಮೆಯ ದಿನ ದೊಡ್ಡ ದಾಳಿಗೆ ಮಹಿಳಾ ಉಗ್ರರ ಸಂಚು?

ಗಂಗೆಯಲ್ಲಿ ಬುದ್ಧ ಪೂರ್ಣಿಮಾ

ಗಂಗೆಯಲ್ಲಿ ಬುದ್ಧ ಪೂರ್ಣಿಮಾ

ಬಿಹಾರದ ಪಾಟ್ನಾದಲ್ಲಿ ಹೆಂಗೆಳೆಯರು ಗಂಗೆಯನ್ನು ಪೂಜಿಸಿ ಬುದ್ಧ ಪೂರ್ಣಿಮಾ ಆಚರಿಸಿದರು. ಗಂಗಾ ಸ್ನಾನ ಮಾಡಿ, ತೀರ್ಥ ಸೇವಿಸಿ ತಮ್ಮದೇ ಆದ ರೀತಿಯಲ್ಲಿ ಬುದ್ಧ ಪೂರ್ಣಿಮೆ ಆಚರಿಸಿ, ಭಗವಾನ್ ಬುದ್ಧನಿಗೆ ನಮನ ಸಲ್ಲಿಸಿದರು.

ಬೋಧಗಯಾದಲ್ಲಿ ಬುದ್ಧ ಪೂರ್ಣಿಮಾ

ಬೋಧಗಯಾದಲ್ಲಿ ಬುದ್ಧ ಪೂರ್ಣಿಮಾ

ಬಿಹಾರದ ಗಯಾ ಜಿಲ್ಲೆಯ ಬೋಧಗಯಾದ ಮಹಾಬೋಧಿ ದೇವಾಲಯದಲ್ಲಿ ಬುದ್ಧ ಪೂರ್ಣಿಮೆಗೆಂದು ಸಿಂಗಾರಕೊಂಡ ಆವರಣ.

ವಿರಕ್ತಮೂರ್ತಿ

ವಿರಕ್ತಮೂರ್ತಿ

ಬೆಂಗಳೂರಿನ ಮಹಾಬೋಧಿ ಸೊಸೈಟಿಯ ಮುಖ್ಯ ಹಾಲ್ ನಲ್ಲಿ ಬುದ್ಧ ಪೂರ್ಣಿಮೆಗೆ ತಯಾರಿ ನಡೆಯುತ್ತಿರುವ ದೃಶ್ಯ.

ಸಾಷ್ಟಾಂಗ ನಮಸ್ಕಾರ

ಸಾಷ್ಟಾಂಗ ನಮಸ್ಕಾರ

ಕೋಲ್ಕತ್ತಾದಲ್ಲಿ ಜನರು ಬುದ್ಧನ ವಿಗ್ರಹಕ್ಕೆ ನಮಿಸಿ ಬುದ್ಧಪೂರ್ಣಿಮೆ ಆಚರಿಸಿ, ವೈರಾಗ್ಯ ಮೂರ್ತಿಯ ಆಶೀರ್ವಾದ ಪಡೆದಿದ್ದು ಹೀಗೆ.

English summary
Buddha Purnima is the most sacred day in the Buddhist calendar. It is the most important festival of the Buddhists, and is celebrated with great enthusiasm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X