ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದುಕಿಗಾಗಿ ನಾನಾ ಅವತಾರವೆತ್ತುವ ಮಹಿಳೆಯೇ ನಮೋನ್ನಮಃ

|
Google Oneindia Kannada News

ಅವಳಿಲ್ಲದ ಬದುಕಿಗೆ ಪರಿಪೂರ್ಣತೆಯಿಲ್ಲ. ಬರೆದಷ್ಟೂ ಉಳಿಯುವ, ಅರ್ಥೈಸಿಕೊಂಡಷ್ಟೂ ಗಹನವಾಗುವ, ಬಾಚಿಕೊಂಡಷ್ಟೂ ನಿಗೂಢವಾಗುವ ಮಹೋನ್ನತ ವ್ಯಕ್ತಿತ್ವ ಆಕೆಯದ್ದು. ಬಾನೆತ್ತರಕ್ಕೆ ಹಾರಿ ಚುಕ್ಕಿಗಳಿಗೆ ಮುತ್ತಿಕ್ಕುವ ಆಕೆಗೆ ಮನೆಮಂದಿಗೆ ಅಕ್ಕರೆಯಿಂದ ಉಣಬಡಿಸೋದೂ ಗೊತ್ತು. ತನ್ನವರನ್ನೆಲ್ಲ ಮಮತೆಯ ಜೋಪಡಿಯಲ್ಲಿ ಜೋಪಾನ ಮಾಡುವ ಕಲೆಯನ್ನು ಕರಗತ ಮಾಡಿಕೊಂಡವಳು ಆಕೆ.

ಸಾಹಿತ್ಯ, ಸಂಗೀತ, ತಂತ್ರಜ್ಞಾನ, ಬಾಹ್ಯಾಕಾಶ, ಕಲೆ, ಶಿಕ್ಷಣ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಹೆಜ್ಜೆಗುರುತು ಮೂಡಿಸಿದ ಮಹಿಳೆಯರ ಸಾಹಸಗಾಥೆಯನ್ನು ಅಂತರಾಷ್ಟ್ರೀಯ ಮಹಿಳಾ ದಿನದಂದು ಸ್ಮರಿಸಿಕೊಳ್ಳುತ್ತಿದ್ದೇವೆ. ಈ ಹೊತ್ತಲ್ಲಿ ಪ್ರಸಿದ್ಧಿಯ ಪರಿಧಿಯಾಚೆಯೇ ಉಳಿದ, ಸದ್ದೂ ಮಾಡದ, ಸುದ್ದಿಯೂ ಆಗದ ಕೆಲವು ಮಹಿಳೆಯರ ಚಿತ್ರ ಇಲ್ಲಿದೆ.[ಸವಾಲಿದ್ದ ಮಾಲಂಗಿ ಗ್ರಾಮಪಂಚಾಯಿತಿಯಲ್ಲಿ ಮಹಿಳೆಯರ ಕಮಾಲ್!]

ಇವರಲ್ಲಿ ಹಲವರ ಹೆಸರೂ ಗೊತ್ತಿಲ್ಲ, ಚಿತ್ರವೇ ಇವರ ಕತೆ ಹೇಳುತ್ತದೆ.

ಚಾಲಾಕಿ ಹೆಣ್ಣು ಆಟೋ ಚಾಲಕಿಯೂ ಆಗಿ...

ಚಾಲಾಕಿ ಹೆಣ್ಣು ಆಟೋ ಚಾಲಕಿಯೂ ಆಗಿ...

ಕೊಯಮತ್ತೂರಿನ ಈ ಆಟೋ ಚಾಲಕಿ ಪುರು‌ಷರಿಗಷ್ಟೇ ಸೀಮಿತವೆನ್ನಿಸಿದ್ದ ಆಟೋ ಚಾಲನೆಯ ವೃತ್ತಿಯನ್ನು ಹಿಡಿದು ಸಂಪ್ರದಾಯವನ್ನು ಮೀರಿನಿಂತವರು, ತಮ್ಮ ಕುಟುಂಬದ ನಿರ್ವಹಣೆಗಾಗಿ ಆಟೋ ಚಾಲನೆಯಂಥ ಸವಾಲಿನ ಕೆಲಸ ನೆಚ್ಚಿಕೊಂಡವರು. ಮಹಿಳಾ ದಿನದ ಪ್ರಯಕ್ತ ಅವರಿಗೆ ತಮಿಳುನಾಡು ಸರ್ಕಾರ ನೀಡಿದ ಆಟೋ ರಿಕ್ಷಾದ ಮೂಲಕ ತಮ್ಮ ಸ್ವಾವಲಂಬಿ ಬದುಕಿನ ಕನಸನ್ನು ಈಡೇರಿಸಿಕೊಳ್ಳುತ್ತಿದ್ದಾರೆ.[ಅಂತಾರಾಷ್ಟ್ರೀಯ ಮಹಿಳಾ ದಿನದಂದು ಚಾಂದನಿ ಬಿಡುಗಡೆ]

ಬುಡಕಟ್ಟು ಜನರ ದೇಶಕಟ್ಟುವ ಕಾರ್ಯ

ಬುಡಕಟ್ಟು ಜನರ ದೇಶಕಟ್ಟುವ ಕಾರ್ಯ

ಗುಜರಾತಿನ ಮಿಟಾಪುರ ಎಂಬಲ್ಲಿಯ ಬುಡಕಟ್ಟು ಮಹಿಳೆಯರು ಸ್ವಸಹಾಯ ಸಂಘವೊಂದರ ಸಹಕಾರದಿಂದ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ತಯಾರಿಸುವ ಕರಕುಶಲ ವಸ್ತುಗಳು ಇಡೀ ದೇಶದಲ್ಲೇ ಪ್ರಸಿದ್ಧಿ ಪಡೆದಿವೆ. ತಮ್ಮೂರಿನ ನಿರುದ್ಯೋಗಿಗಳನ್ನೂ ಈ ಕೆಲಸದಲ್ಲಿ ತೊಡಗಿಸಿ, ಭಾರತ ನಿರುದ್ಯೋಗ ಮುಕ್ತ ರಾಷ್ಟ್ರವಾಗುವಲ್ಲಿ ತಮ್ಮದೇ ಆದ ಕಾಣಿಕೆ ನೀಡುತ್ತಿದ್ದಾರೆ.[ಕೋಲನೂರಿ ನಿಂತ ದೇವತೆ... ಕಾಲಮೀರಿ ನಡೆದಳು...!]

ಹೀಗೊಂದು ಬಳೆ ಪ್ರತಿಭಟನೆ

ಹೀಗೊಂದು ಬಳೆ ಪ್ರತಿಭಟನೆ

ಪಟ್ನಾದ ಈ ಮಹಿಳೆಯರು ಬಿಹಾರದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಸಚಿವರೊಬ್ಬರ ಮನೆಮುಂದೆ ಬಳೆ ಹಿಡಿದು ಪ್ರತಿಭಟಿಸುತ್ತಿದ್ದಾರೆ. ತೀರಾ ಸಾಮಾನ್ಯ ವಿಷಯವೇ ಆದರೂ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ಖಂಡಿಸುವುದಕ್ಕಾಗಿ ಎಂಥ ಪ್ರಭಾವೀ ವ್ಯಕ್ತಿಗಳ ಎದುರಲ್ಲೂ ನಿಂತು ಹೋರಾಡಬಲ್ಲೆವು ಎಂದು ಈ ಮಹಿಳೆಯರು ನೀಡಿದ ಸಂದೇಶ ಅನುಕರಣೀಯ.[ಮಲ್ಯನನ್ನು ಹಿಡಿದರೆ 1ಲಕ್ಷ, ಜಗತ್ತನೇ ಮೆಚ್ಚಿಸಿದ ವಿಕಲಚೇತನರು]

ತುತ್ತಿನ ಚೀಲ ತುಂಬೋದಕ್ಕೆ ದಿನದ ಹಂಗಿಲ್ಲ!

ತುತ್ತಿನ ಚೀಲ ತುಂಬೋದಕ್ಕೆ ದಿನದ ಹಂಗಿಲ್ಲ!

ಅಸ್ಸಾಂ ನ ನಾಗೋನ್ ಜಿಲ್ಲೆಯಲ್ಲಿ ಗಾರೆ ಕೆಲಸದಲ್ಲಿ ತೊಡಗಿರುವ ಮಹಿಳೆಯರ ಈ ಚಿತ್ರ, ಮಹಿಳಾ ದಿನಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತಿದೆ. ತುತ್ತಿನ ಚೀಲ ತುಂಬುವ ಅನಿವಾರ್ಯತೆಗೆ ಮಹಿಳಾ ದಿನವೆಂಬ ಹಂಗಿಲ್ಲ, ಎಲ್ಲ ದಿನವೂ ನಮಗೆ ಒಂದೇ ಎಂಬ ಭಾವ ಅವರದ್ದಿದ್ದೀತು.[ನವದೆಹಲಿಯಲ್ಲಿ ನಾರಿಶಕ್ತಿ, ಮಹಿಳಾ ದಿನ ಸಂತಸದಲ್ಲಿ ಸುಷ್ಮಾ]

ಸಾರಥಿಯೂ ಹೌದು ಆಕೆ

ಸಾರಥಿಯೂ ಹೌದು ಆಕೆ

ರಾಜಸ್ಥಾನದ ಅಜ್ಮೇರ್ ನಲ್ಲಿ ಮಹಿಳೆಯೊಬ್ಬಳು ಎತ್ತಿನ ಗಾಡಿಯನ್ನು ಓಡಿಸುತ್ತಿರುವ ದೃಶ್ಯ ತೊಟ್ಟಿಲು ತೂಗೋ ಕೈಗೆ ಸಾರಥಿಯಾಗೋದು ಗೊತ್ತು ಎನ್ನುವಂತಿದೆ!

ದಂಗಲ್... ದಂಗಲ್...

ದಂಗಲ್... ದಂಗಲ್...

ಮುಂಬೈನಲ್ಲಿ ನಾವಿ ಮುಂಬೈ ಕಾರ್ಪೋರೇಶನ್ ನಡೆಸಿದ ಕುಸ್ತಿ ಸ್ಪರ್ಧೆಯ ಚಿತ್ರ ಇದು. ಪುರು‌ಷರಿಗಷ್ಟೇ ಮೀಸಲಾಗಿದ್ದ ಕುಸ್ತಿ ಕ್ಷೇತ್ರದಲ್ಲೂ ಹೆಣ್ಣು ಛಾಪು ಮೂಡಿಸುತ್ತಿದ್ದಾಳೆ ಎಂಬುದನ್ನು ಸಾಬೀತು ಪಡಿಸುವುದಕ್ಕೆ ಇದೊಂದು ಸಾಂಕೇತಿಕ ಚಿತ್ರವಷ್ಟೆ. ಸಾಕ್ಷಿ ಮಲೀಕ್, ಗೀತಾ ಫೋಗಟ್ ರಂಥ ಕುಸ್ತಿಪಟುಗಳು ಈಗಾಗಲೇ ದೇಶ ಕೀರ್ತಿಯನ್ನು ಬಾನೆತ್ತರಕ್ಕೇರಿಸಿದ್ದಾರೆ.

ಕಲಿಕೆಗಿಲ್ಲ ವಯಸ್ಸಿನ ಹಂಗು

ಕಲಿಕೆಗಿಲ್ಲ ವಯಸ್ಸಿನ ಹಂಗು

ಮಹಾರಾಷ್ಟ್ರದ ಠಾಣೆಯ 60 ವರ್ಷದ ಈ ವೃದ್ಧೆಯರು ಈ ಇಳಿ ವಯಸ್ಸಿನಲ್ಲೂ ದೇವನಾಗರಿ ಕಲಿಯುತ್ತಿದ್ದಾರೆ. ಕಲಿಕೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಸಾಬೀತು ಪಡಿಸಿದ ಮಹಿಳೆಯರು ಇವರು.

English summary
A woman is an incredible gift of God. Life is not perfect without her. There are so many women who are inspiring everyday. Here is a story on those women
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X