ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಚ್ಚಿಟ್ಟ ಲೈಂಗಿಕತೆಯಿಂದ ಹೆಚ್ಚುತ್ತಿರುವ ಏಡ್ಸ್

By ವಿವೇಕ ಬೆಟ್ಕುಳಿ
|
Google Oneindia Kannada News

December 1, World AIDS day
ಮಾನವ ಮೂಲತಃ ಒಂದು ಪ್ರಾಣಿ. ಆದರೆ, ನಮ್ಮನ್ನು ನಾವೇ ಬುದ್ದಿವಂತ ಪ್ರಾಣಿ ಎಂದು ನಾವು ಹೇಳಿಕೊಳ್ಳುತ್ತಿರುವೆವು. ಅದಕ್ಕಾಗಿಯೇ ಸಮಾಜ, ರೀತಿ, ನೀತಿ, ನಿಯಮ, ಸರಿ ತಪ್ಪು, ದೇವರು, ಧರ್ಮಗಳನ್ನು ನಾವು ಸೃಷ್ಟಿಮಾಡಿಕೊಂಡು ಜೀವನ ಸಾಗಿಸುತ್ತಿರುವೆವು. ನಾವೇ ಸೃಷ್ಟಿ ಮಾಡಿದ ಸಮಾಜದ ನೀತಿ ನಿಯಮದ ಬಗ್ಗೆ ಮಾತನಾಡುವ ಧೈರ್ಯ ಸಹಾ ನಮಗೆ ಇಲ್ಲ. ನಾವು ಮಾಡಿಕೊಂಡ ಕಾನೂನು ಸಹಾ ಅದನ್ನು ವಿರೋಧಿಸುವುದು.

ಆದರೇ ಮಾನವನಿಗೆ ಇತರೆ ಪ್ರಾಣಿಗಳಂತೆ ಹಸಿವು, ನಿದ್ರೆ, ಲೈಂಗಿಕತೆ ಇವು ಸ್ವಾಭಾವಿಕವಾಗಿಯೆ ಇರುವುದು. ಇದರಲ್ಲಿಯೂ ಸಹಾ ನಾವು ನಮ್ಮದೇ ಆದ ನೀತಿ ನಿಯಮವನ್ನು ಸೃಷ್ಟಿ ಮಾಡಿಕೊಂಡಿರುವೆವು. ಸರಿಯಾದ ವೇಳೆಗೆ ಆಹಾರ ಸೇವನೆ, ನಿರ್ದಿಷ್ಟ ಅವಧಿಯಲ್ಲಿ ನಿದ್ದೆ, ನಾಲ್ಕು ಗೋಡೆಯ ನಡುವೆ ಲೈಂಗಿಕತೆ ಈ ರೀತಿಯ ನಿಯಮಗಳನ್ನು ಹೆಚ್ಚಾಗಿ ಪಾಲಿಸುತ್ತಾ ಬಂದಿರುವೆವು.

ಆದರೆ ಪ್ರಾಣಿಗಳಲ್ಲಿ ಈ ರೀತಿಯಾಗಿಲ್ಲ. ಹಸಿವಾದಾಗ ಆಹಾರ ಸೇವನೆ, ಹೊಟ್ಟೆ ತುಂಬಿದಾಗ ನಿದ್ದೆ, ಲೈಂಗಿಕತೆಯ ಅಗತ್ಯತೆ ಎನಿಸಿದಾಗ ಅನ್ಯ ಲಿಂಗದ ಜೊತೆ ಲೈಂಗಿಕತೆ ಇವು ಸ್ವಾಭಾವಿಕವಾಗಿದೆ. ಯಾರಿಗೂ ಕಾಣದಂತೆ ಕೋಣೆಯಲ್ಲಿ, ಮರೆಯಾಗಿ ಲೈಂಗಿಕತೆ ಮಾಡುವ ಅಗತ್ಯವೂ ಪ್ರಾಣಿಗೆ ಇಲ್ಲ. ಸ್ವಾಭಾವಿಕವಾಗಿ ಜೀವಿಯ ಮೂರು ಅಗತ್ಯತೆಗಳನ್ನು ಆಯಾ ಸಂದರ್ಭದಲ್ಲಿ ನೆರವೇರಿಸಿಕೊಳ್ಳುತ್ತಿರುವವು.

ಆದರೆ ಅದೇ ಪ್ರಾಣಿ ಜಾತಿಯಲ್ಲಿ ಹುಟ್ಟಿದ ಮಾನವ ತಾನೇ ಮಾಡಿಕೊಂಡ ಚೌಕಟ್ಟಿನಲ್ಲಿ ಈ ಮೂರು ಅಗತ್ಯತೆಯನ್ನು ಪೂರೈಸಿಕೊಳ್ಳುವ ಕಟ್ಟುಪಾಡನ್ನು ವಿಧಿಸಿಕೊಂಡಿರುವನು. ಸಹಜವಾಗಿರುವ ಆಶೆಯವನ್ನು ಕಟ್ಟುಪಾಡಿನ ಸಂಪ್ರದಾಯದಲ್ಲಿ ನೆರವೇರಿಸಿಕೊಳ್ಳಲು ಸಾಧ್ಯವಾಗದ ಇದ್ದಾಗ ಸಹಜವಾಗಿ ಸಂಪ್ರದಾಯ ಒಪ್ಪದ ರೀತಿಯಲ್ಲಿ ಅಗತ್ಯ ಚಟುವಟಿಕೆಗಳು ನಡೆಸಲು ಆರಂಭಿಸುತ್ತಾನೆ.

ಈ ರೀತಿಯ ನಾವೇ ಮಾಡಿಕೊಂಡ ಚೌಕಟ್ಟಿನಲ್ಲಿ ಎಡವಿದರ ಪರಿಣಾಮವಾಗಿ ಇಂದು ನಾವು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವೆವು. ಅದರಲ್ಲಿ ಲೈಂಗಿಕತೆ ಬಗ್ಗೆ ನಮಗೆ ಇರುವ ಚೌಕಟ್ಟು, ಸಮಾಜದ ದೃಷ್ಟಿಕೋನ ಇವೆಲ್ಲವುಗಳ ಪರಿಣಾಮವೇ ಇಂದು ನಾವು ಏಡ್ಸ್ ದಿನಾಚರಣೆ ಮಾಡುವ ಸ್ಥಿತಿಗೆ ಬಂದು ತಲುಪಿರುವೆವು. ಈ ಏಡ್ಸ್ ಎಂಬ ಮಾಹಾಮಾರಿಗೆ ದಿನೇ ದಿನೇ ಸಾಕಷ್ಟು ಜನರು ಬಲಿಯಾಗುತ್ತಾ ಇರುವರು. ಹೆಚ್ಚಾಗಿ ಏನೂ ತಿಳಿಯದ ಮಕ್ಕಳು ಬಲಿಯಾಗುತ್ತಿರುವುದು ಆತಂಕಕಾರಿಯಾದ ವಿಚಾರವಾಗಿದೆ.

ಮುಕ್ತ ಲೈಂಗಿಕತೆ, ಲೈಂಗಿಕ ಶಿಕ್ಷಣ : ನಮ್ಮ ದೇಶದಲ್ಲಿ ಯುವ ಪೀಳಿಗೆಗೆ ಮುಖ್ಯವಾಗಿ ಲೈಂಗಿಕ ಶಿಕ್ಷಣದ ಅಗತ್ಯತೆ ಇದೆ. ನಿರೋಧ, ಗರ್ಭನಿರೋಧಕ ಮಾತ್ರೆಗಳು, ಲೈಂಗಿಕ ಕಾಯಿಲೆಗಳು, ಸುರಕ್ಷಿತ ಲೈಂಗಿಕತೆ ಇವುಗಳ ಬಗ್ಗೆ ಬಾಲ್ಯಾವಸ್ಥೆ ಮುಗಿಸಿ ಬರುವ ಪ್ರತಿಯೊಬ್ಬರಿಗೂ ಮಾಹಿತಿಯ ಅಗತ್ಯತೆ ಇದೆ. ನಿರೋಧ ಬಳಕೆಯ ಬಗ್ಗೆ ಕೆಲ ಧಾರ್ಮಿಕ ಮುಖಂಡರ ಆಕ್ಷೇಪವಿದೆ. ಈ ಬಗ್ಗೆ ಹೆಚ್ಚಿನ ಮಹತ್ವವನ್ನು ನೀಡದೇ ಆಗಬೇಕಾಗಿರವ ಕಾರ್ಯಕ್ಕೆ ಹೆಚ್ಚಿನ ಗಮನ ನೀಡುವ ಅಗತ್ಯತೆ ಇದೆ. ಯಾವುದೇ ಬದಲಾವಣೆಯನ್ನು ಎಲ್ಲರಿಗೂ ಅರ್ಥಮಾಡಿಸಿ ಬದಲಾಯಿಸಲು ಸಾಧ್ಯವಿಲ್ಲ. ಪ್ರೌಢ ಶಾಲಾ ಹಂತದಲ್ಲಿ ಲೈಂಗಿಕ ಶಿಕ್ಷಣ ಕಡ್ಡಾಯ ಮಾಡುವುದು, ಲೈಂಗಿಕ ಕಾಯಿಲೆ, ಸುರಕ್ಷಿತ ಲೈಂಗಿಕತೆ ಬಗ್ಗೆ ಮುಕ್ತವಾಗಿ ಮಾತನಾಡುವಂತಹ ವಾತಾವರಣ ಸೃಷ್ಟಿಸುವುದು, ಲೈಂಗಿಕತೆಯನ್ನು ಸಹಜವಾಗಿ ನೋಡುವ ವಾತಾವರಣವನ್ನು ಸೃಷ್ಟಿಸುವ ಅಗತ್ಯವಿದೆ.

ಇಲ್ಲಿ ನಾವು ಸಂಪ್ರದಾಯ ತಪ್ಪು, ಸರಿ ಎಂದು ಚರ್ಚೆ ಮಾಡುತ್ತಾ ಇದ್ದರೆ ಮುಂದಿನ ಕೆಲವು ವರ್ಷಗಳಲ್ಲಿ ಏಡ್ಸ್ ಕಾಯಿಲೆ ಜನಸಂಖ್ಯೆಯ ಬಹುಪಾಲನ್ನು ಆಕ್ರಮಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಡಿಸೆಂಬರ್ 1ನ್ನು ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನದಂದು ಮಾತ್ರ ಈ ಮಾಹಾ ಮಾರಿಯ ಬಗ್ಗೆ ಚರ್ಚೆ ನಡೆಸುವುದು, ಮೆರವಣಿಗೆ ಮಾಡುವುದು ಇವೆಲ್ಲವುಗಳ ಜೊತೆಗೆ ಹಳ್ಳಿ ಹಳ್ಳಿಯಲ್ಲಿ ಇದರ ಬಗ್ಗೆ ತಿಳಿಯುವಂತೆ ಮೂಡಿಸುವ ಅಗತ್ಯವಿದೆ. ಕೇವಲ 30 ವರ್ಷಗಳಲ್ಲಿ ಏಡ್ಸ್ ನಮ್ಮ ಜಗತ್ತನ್ನು ವ್ಯಾಪಿಸಿರುವ ರೀತಿ ತುಂಬಾ ಭಯಾನಕವಾಗಿರುವುದು. ಮುಂಬರುವ ದಿನಗಳು ಇನ್ನೂ ಭಯಾನಕವಾಗುವ ಮೊದಲೇ ನಮ್ಮ ಸಂಪ್ರದಾಯವನ್ನು ಸ್ವಲ್ಪ ಸಡಿಲಗೊಳಿಸುವ ಅಗತ್ಯತೆ ಇದೆ. ನಾವೇ ಎಷ್ಟೇ ಬುದ್ದಿಜೀವಿಗಳೆಂದು ಹೇಳಿಕೊಂಡರೂ ಈ ಕಾಯಿಲೆಗೆ ನಾವು ಇದೂವರೆಗೂ ಪರಿಣಾಮಕಾರಿಯಾದ ಔಷಧವನ್ನು ಕಂಡುಹಿಡಿಯಲು ವಿಫಲರಾಗಿರುವೆವು ಎಂಬುದನ್ನು ನಾವು ಮರೆಯಬಾರದು.

English summary
December 1, World AIDS day. Vivek Betkuli from Karwar says AIDS is on the rise and if we do not wake up and give essential education to the children and needy people, we may have to face daunting task of eradicating it later.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X