ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಡಗರ ಸಂಭ್ರಮದ ಕೂಡ್ಲಿಗಿ ಊರಮ್ಮ ದೇವಿ ಉತ್ಸವ

By * ರೋಹಿಣಿ ಬಳ್ಳಾರಿ
|
Google Oneindia Kannada News

Kudligi Uramma Devi
ಕೂಡ್ಲಿಗಿ, ಮೇ 26: ಪಟ್ಟಣದ ಗ್ರಾಮ ದೇವತೆ ಊರಮ್ಮ ದೇವಿಯ ಉತ್ಸವ ಮಂಗಳವಾರ ಸಡಗರ, ಸಂಭ್ರಮದಿಂದ, ವಿಧಿ ವಿಧಾನಗಳೊಂದಿಗೆ ಆರಂಭಗೊಂಡಿತು. ಸಾವಿರಾರು ಸಂಖ್ಯೆಯ್ಲಲಿ ಸಕಲ ಸದ್ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಮಂಗಳವಾರ ಬೆಳಗಿನಿಂದ ಸಂಜೆಯವರೆಗೆ ಪಟ್ಟಣದ ಸಕಲ ದೇವತೆಗಳಿಗೆ ಪೂಜೆ, ನೈವೇದ್ಯವನ್ನು ಸಮರ್ಪಿಸಲಾಯಿತು. ನಂತರ ಜೀನಗಾರರ ಮನೆಯಿಂದ ತೊಟ್ಟಿಲನ್ನು ತರಲಾಯಿತು. ರಾತ್ರಿ ಗಂಗೆ ಪೂಜೆ ನೆರವೇರಿಸಿ, ದೇವಿಯನ್ನು ಚೌಕಿಮನೆಯಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ದೇವಿಗೆ ಸಾಂಪ್ರದಾಯಿಕವಾಗಿ ದೃಷ್ಟಿ ಇಡಲಾಯಿತು.

ವಿವಿಧ ವಾದ್ಯವೃಂದಗಳೊಂದಿಗೆ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆಯೊಂದಿಗೆ ಜೋಯಿಸರ, ಮಠಸ್ಥರ, ಬಣಕಾರರ, ಗೌಡರ, ಶೆಟ್ಟರ ಮನೆಗಳಿಂದ ನೈವೇದ್ಯ, ಉಡಿ ತುಂಬುವ ಕಾರ್ಯಕ್ರಮ ಜರುಗಿತು. ನಂತರ ಮಹಾಪೂಜೆ, ಮಹಾ ಮಂಗಳಾರತಿಯೊಂದಿಗೆ ಉತ್ಸವದೊಂದಿಗೆ ರಂಗಮಂಟಪಕ್ಕೆ ಕರೆತರಲಾಯಿತು.

ಬುಧವಾರ ನಸುಕಿನಲ್ಲಿ ಜೋಳದ ಅಂಬಲಿಯನ್ನು ಹೊತ್ತ ನೂರಾರು ಭಕ್ತರು ಪಟ್ಟಣದ ಸುತ್ತಲೂ ಚರಗ ಚೆಲ್ಲಿದರು. ಬೆಳಿಗ್ಗೆ ಅಮರದೇವರಗುಡ್ಡ ತವರು ಮನೆಯಿಂದ ಹೂ, ಹಣ್ಣು, ಕಾಯಿಯೊಂದಿಗೆ ಉಡಿ ತುಂಬುವ ವಸ್ತುಗಳನ್ನು ತಂದು ದೇವತೆಗೆ ಉಡಿ ತುಂಬಲಾಯಿತು. ನಂತರ ಪಟ್ಟಣದ ಮಹಿಳೆಯರು ದೇವಿಗೆ ಉಡಿ ತುಂಬಿದರು.

ಇಡೀ ಕಾರ್ಯಕ್ರಮದಲ್ಲಿ ವಾದ್ಯವೃಂದಗಳ ಮೆರಗು, ವರ್ಣಮಯವಾಗಿ, ಅಲಂಕರಿಸಲ್ಪಟ್ಟ ದೇವತೆಯ ಉತ್ಸವಮೂರ್ತಿ ಸಾವಿರಾರು ಭಕ್ತರ ಕಂಠಗಳ ಜಯಘೋಷ ಉತ್ಸವಕ್ಕೆ ಮೆರುಗನ್ನು ತಂದಿತ್ತು. ರಾಜೇಶ್ವರಿ ಹಾಗೂ ವೀಣಾ ಮಹಿಳಾ ಕಲಾ ತಂಡದ ಡೊಳ್ಳು ಕುಣಿತ ಉತ್ಸವದ ಆಕರ್ಷಣೆಯಾಗಿತ್ತು.

ಪಟ್ಟಣದಲ್ಲಿ ಉತ್ಸವದ ಸಂದರ್ಭದಲ್ಲಿ ನೀರಿನ ಅಭಾವವಾಗದಂತೆ ನೋಡಿಕೊಳ್ಳಲು ಪಟ್ಟಣ ಪಂಚಾಯ್ತಿವತಿಯಿಂದ ಎಂಟು ಟ್ಯಾಂಕರಗಳ ಮೂಲಕ ನೀರು ಸರಬರಾಜು ವ್ಯಾವಸ್ತೆ ಮಾಡಲಾಗಿತ್ತು.

English summary
The most famous and special car festival held in the Kudligi, Bellary District (Karnataka State) on may 26, 2011. Hundreds of devotees are attended for this holy festival of Uramma Devi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X