ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಣಂ ಹಬ್ಬಕ್ಕೆ ಹೂವಿನ ರಂಗೋಲಿ ಬಿಡಿಸುವುದು ಹೀಗೆ

|
Google Oneindia Kannada News

Rangoli designs for Onam
ಹೂವಿನಿಂದ ರಂಗೋಲಿ ಬಿಡುವುದು ಓಣಂ ಹಬ್ಬದ ವಿಶೇಷತೆ. ಓಣಂ ದಿನ ಮನೆ ಮುಂದೆ ಚೆಂದದ ಹೂವಿನ ರಂಗೋಲಿ ಬಿಡುವುದು ಕೇರಳದ ಸಂಸ್ಕೃತಿ. ಈ ದಿನ ಹೂವಿನಿಂದ ರಂಗೋಲಿಯನ್ನು ಅಲಂಕರಿಸಿದರೆ ರಾಜ ಬಲಿ ಸಂತಸದಿಂದ ಬಂದು ಆಶೀರ್ವಾದ ಮಾಡುವನು ಎಂಬ ನಂಬಿಕೆ. ಆದ್ದರಿಂದ ಓಣಂ ಹಬ್ಬಕ್ಕೆ ಹೂವಿನ ರಂಗೋಲಿ ಬಿಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಓಣಂ ದಿನ ರಂಗೋಲಿಗೆ ಹೂವಿನ ಅಲಂಕಾರ ಮಾಡುವ ಸುಲಭ ವಿಧಾನ:

1. ರಂಗೋಲಿ ವಿಧಾನ:
ಮೊದಲು ನೀವು ಯಾವ ರೀತಿ ರಂಗೋಲಿ ಬಿಡಬೇಕು ಎಂಬುದನ್ನು ನಿರ್ಧರಿಸಿ. ಹೂವಿನ ಅಲಂಕಾರಕ್ಕೆ ವೃತ್ತಾಕಾರದ ರಂಗೋಲಿಯನ್ನು ಆಯ್ಕೆ ಮಾಡಿಕೊಂಡರೆ ಸುಂದರವಾಗಿ ಕಾಣುತ್ತದೆ.

2. ಗಾಢ ಬಣ್ಣದ ಹೂವು: ಮೊದಲು ರಂಗೋಲಿಯನ್ನು ಬಳಪದಿಂದ ಬಿಡಿಸಿಕೊಂಡು ಅಲಂಕಾರಕ್ಕೆ ಗಾಢ ಬಣ್ಣದ ಹೂವುಗಳನ್ನು ಆಯ್ಕೆ ಮಾಡಿಕೊಳ್ಳಿ. ಚೆಂಡು ಹೂವು, ಗುಲಾಬಿ, ಡೇರಿ ಹೂವುಗಳ ದಳಗಳು ಅಲಂಕಾರಕ್ಕೆ ಹೇಳಿ ಮಾಡಿಸಿದಂತಿರುತ್ತದೆ.

3. ತಿಳಿ ಬಣ್ಣವೂ ಇರಲಿ: ಗಾಢ ಬಣ್ಣದ ಹೂವುಗಳಿಗೆ ವಿರುದ್ದವಾಗಿ ತಿಳಿ ಬಣ್ಣದ ಹೂವುಗಳ ದಳಗಳನ್ನು ಅಲಂಕಾರಕ್ಕೆ ಬಳಸಿದರೆ ರಂಗೋಲಿ ಇನ್ನೂ ಆಕರ್ಷಕವಾಗಿ ಕಾಣುತ್ತದೆ. ತಿಳಿ ಬಣ್ಣದ ಹೂವುಗಳಾದ ಕನಕಾಂಬರ, ಬಿಳಿ ಸೇವಂತಿ ಮುಂತಾದುವನ್ನು ಬಳಸಿದರೆ ಅಲಂಕಾರ ಎದ್ದು ಕಾಣುತ್ತದೆ.

4. ಹಸಿರು ಎಲೆ: ಹಸಿರು ಎಲೆಗಳನ್ನೂ ಸಹ ರಂಗೋಲಿಗೆ ಹೂವಿನ ನಡುವೆ ಬಳಸಿದರೆ ನೋಡಲು ಸುಂದರವಾಗಿರುತ್ತದೆ. ಹೂವಿನೊಂದಿಗೆ ಹಸಿರು ಎಲೆಗಳು ಒಳ್ಳೆಯ ಕಾಂಬಿನೇಶನ್ ಕೂಡ ಹೌದು.

5. ನೀರು ಚುಮುಕಿಸಿ: ಹೂವಿನ ರಂಗೋಲಿ ಮೇಲೆ ಆಗಾಗ್ಗೆ ಸ್ವಲ್ಪ ನೀರು ಚುಮುಕಿಸುತ್ತಿರಿ. ಇದು ಹೂವುಗಳು ಹೆಚ್ಚು ಕಾಲ ತಾಜಾ ಆಗಿರುವಂತೆ ನೋಡಿಕೊಳ್ಳುತ್ತದೆ.

6. ದೀಪವಿರಲಿ: ಹೂವಿನ ಅಲಂಕಾರವಾದ ನಂತರ ರಂಗೋಲಿ ಮಧ್ಯೆ ದೀಪವನ್ನು ಮತ್ತು ಸುತ್ತಲೂ ಕ್ಯಾಂಡಲ್ ಇಡಬಹುದು. ಸುಗಂಧಭರಿತ ಕ್ಯಾಂಡಲ್ ಗಳೂ ಈಗ ಲಭ್ಯವಿದೆ. ಅದನ್ನು ಬಳಸುವುದರಿಂದ ರಂಗೋಲಿ ಆಕರ್ಷಿತವಾಗಿ ಕಾಣುವುದಲ್ಲದೆ ಹೂಗಳ ಜೊತೆ ಕ್ಯಾಂಡಲ್ ಕೂಡ ಕಂಪು ಬೀರಿ ಹಬ್ಬದ ಕಳೆ ಹಬ್ಬುವಂತೆ ಮಾಡುತ್ತದೆ.

7. ಮಿನುಗುವ ವಸ್ತುಗಳಿರಲಿ: ಮಿನುಗುವ ಅಲಂಕಾರಿಕ ವಸ್ತುಗಳನ್ನು ಮತ್ತು ಅಕ್ವೇರಿಯಂಗಳಲ್ಲಿ ಬಳಸುವ ಕಲ್ಲುಗಳನ್ನೂ (ಪೆಬೆಲ್ಸ್) ರಂಗೋಲಿಗೆ ಬಳಸಿದರೆ ನಿಮ್ಮ ಮನೆ ರಂಗೋಲಿ ಎಲ್ಲರೂ ತಿರುಗಿ ನೋಡುವಂತಿರುತ್ತದೆ.

ಈ ರಂಗೋಲಿಯನ್ನು ಓಣಂಗೆ ಮಾತ್ರ ಬಿಡಬೇಕೆಂದಿಲ್ಲ. ಎಲ್ಲಾ ಹಬ್ಬಗಳಿಗೂ ಈ ಹೂವಿನ ರಂಗೋಲಿ ಮೆರುಗು ನೀಡಿ ಹಬ್ಬದ ಕಳೆಯನ್ನು ಮನೆತುಂಬ ತುಂಬುತ್ತದೆ.

English summary
What is Onam without the famous pookalam? The kerala floral art is decorated at the entrance of house to welcome the devotee of Vishnu “Bali”. Let's take a look on how to make pookalams in the house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X