ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳಿಗರ ಹೊನ್ನಿನ ಹಬ್ಬ ಓಣಂ

By ಬಿ.ಎಂ. ಲವಕುಮಾರ್, ಮೈಸೂರು
|
Google Oneindia Kannada News

ಓಣಂ ಕೇರಳದ ನಾಡಹಬ್ಬ. ಕೇರಳದಲ್ಲಿ ಮಾತ್ರವಲ್ಲ ಕೇರಳಿಗರು ಎಲ್ಲೆಲ್ಲಿ ವಾಸಿಸುತ್ತಾರೋ ಅಲ್ಲೆಲ್ಲ ಓಣಂ ಹಬ್ಬದ ಸಂಭ್ರಮ ಮನೆಮಾಡುತ್ತದೆ. ಕೃಷಿಯ ಹಿನ್ನೆಲೆಯಲ್ಲಿ ಆಚರಿಸಲ್ಪಡುವ ಈ ಹಬ್ಬ ಮಳೆಗಾಳಿಗೆ ದುಡಿದು ಬೆಂಡಾದ ಜೀವಗಳಿಗೆ ಸಂತಸ ಸಂಭ್ರಮನ್ನೀಯುವ ಹಬ್ಬ ಎಂದರೆ ತಪ್ಪಾಗಲಾರದು. ಇದುವರೆಗೆ ಮಳೆಯ ಆರ್ಭಟದ ನಡುವೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು ಅದನ್ನೆಲ್ಲಾ ಮುಗಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟು ಕೂರುವ ಕಾಲ ಇದಾಗಿದೆ. ಅಲ್ಲದೆ ಮಳೆಯಲ್ಲಿ ಮಿಂದೆದ್ದ ಪ್ರಕೃತಿಯಲ್ಲಿ ಹೊಸಪುಳಕ. ಅದು ಮುಂದೆ ಬರುತ್ತಿರುವ ಓಣಂ ಹಬ್ಬ ಶುಭ ಸೂಚಕವೂ ಹೌದು.

ಕೇರಳದ ನಾಡಹಬ್ಬ : ಮನೆಯ ಮುಂದಿನ ಅಂಗಳದಲ್ಲೊಂದು ಹೂವಿನ ರಂಗೋಲಿ(ಪೂಕಳಂ)... ನಡುವೆ ಬೆಳಗುವ ಹಣತೆ... ಸುಣ್ಣ ಬಣ್ಣ ಬಳಿದು ಶುಭ್ರವಾಗಿ ಕಂಗೊಳಿಸುವ ಮನೆಗಳು... ಮನೆಯ ಸುತ್ತ ಹೊಸಬಟ್ಟೆ ತೊಟ್ಟು ಕೇಕೆ ಹಾಕುತ್ತಾ ಓಡಾಡುವ ಪುಟ್ಟ ಮಕ್ಕಳು... ಒಳಗೆ ವಿವಿಧ ಭಕ್ಷ್ಯ ಭೋಜನಗಳ ತಯಾರಿಯಲ್ಲಿ ನಿರತರಾದ ಹೆಂಗಳೆಯರು... ಇದು ಓಣಂ ಆಚರಿಸುವ ಮನೆಗಳಲ್ಲಿ ಕಂಡು ಬರುವ ಮೇಲ್ಮೋಟದ ದೃಶ್ಯಗಳು.

Onam festival 2011 | Onam celebration in Karnataka
ಹಾಗೆನೋಡಿದರೆ ಓಣಂ ಹಬ್ಬ ಸಿಂಹ ಮಾಸದಲ್ಲಿ ಬರುತ್ತದೆ. ಈ ಸಿಂಹ ಮಾಸ ಕೇರಳದವರ ಪಾಲಿಗೆ ಚಿನ್ನದ ಮಾಸ. ಏಕೆಂದರೆ ಈ ವೇಳೆಗೆ ಕೃಷಿ ಚಟುವಟಿಕೆಯನ್ನು ಮುಗಿಸಿ ನೆಮ್ಮದಿಯಾಗಿರುತ್ತಾರಲ್ಲದೆ, ಹಬ್ಬವನ್ನು ಸ್ವಾಗತಿಸಲು ಉತ್ಸುಕರಾಗಿರುತ್ತಾರೆ. ಸಿಂಹ ಮಾಸದ ಹಸ್ತ ನಕ್ಷತ್ರದಿಂದ ಹತ್ತು ದಿನಗಳ ಕಾಲ ಓಣಂ ಆಚರಣೆಯಲ್ಲಿರುತ್ತದೆಯಾದರೂ ಕೊನೆಯ ಶ್ರಾವಣ ನಕ್ಷತ್ರದ ದಿನ ಬಹುಮುಖ್ಯವಾಗಿದ್ದು, ಇದೇ ತಿರುವೋಣಂ. ಓಣಂ ಹಬ್ಬಕ್ಕೆ ತನ್ನದೇ ಆದ ಇತಿಹಾಸ ಹಾಗೂ ಪೌರಾಣಿಕ ಹಿನ್ನೆಲೆಯಿರುವುದನ್ನು ನಾವು ಕಾಣಬಹುದು. ಈ ಹಬ್ಬ ಪ್ರಾಚೀನ ಕಾಲದಲ್ಲಿಯೇ ಆಚರಣೆಯಲ್ಲಿತ್ತು ಎನ್ನಲಾಗುತ್ತಿದ್ದು, ಕ್ರಿ.ಶ. 861ರ ರವಿವರ್ಮನ ಕಾಲದ ತಾಮ್ರದ ಶಾಸನದಲ್ಲಿ ಓಣಂ ಕುರಿತಂತೆ ಉಲ್ಲೇಖಗಳಿವೆ ಎಂದು ಹೇಳಲಾಗಿದೆ.
English summary
Onam is the biggest festival in Kerala. Keralites believe that emperor Bali chakravarti comes to meet the people. On this occasion relatives get together, prepare delicious food. Decorating the rangoli with flower petals is the highlight of the festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X