ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಸ್ವತಿ ಹಬ್ಬ ಹಾಗೂ ವಸಂತ ಪಂಚಮಿ

By Shami
|
Google Oneindia Kannada News

Vasant Panchami
ವಿದ್ಯೆ, ಬುದ್ಧಿ, ಸಂಗೀತ, ಕಲೆ, ಸಂಸ್ಕೃತಿಗೆ ಪ್ರತೀಕವಾಗಿರುವ ಭಾರತೀಯ ದೇವತೆ ಸರಸ್ವತಿಯನ್ನು ಪೂಜಿಸುವ ಹಬ್ಬ ಇವತ್ತು. ಅಂತೆಯೇ, ಭರತ ಖಂಡಕ್ಕೆ ಇವತ್ತು ಮಂಗಳವಾರ ವಸಂತ ಕಾಲಿಟ್ಟಿರುವ ದಿವಸ ಕೂಡ. ವಸಂತ ಪಂಚಮಿ ಹಬ್ಬವನ್ನು ನಾಡಿನಾದ್ಯಂತ ಆಚರಿಸುತ್ತಿರುವ ಕನ್ನಡ ನಾಡಿಗರಿಗೆ ಹಬ್ಬದ ಶುಭಾಶಯಗಳು. ಭಾರತೀಯ ದೇವತೆಗಳನ್ನು ಸ್ತುತಿಸುವ ಮತ್ತು ಪ್ರಕೃತಿಯನ್ನು ಆರಾಧಿಸುವ ಹಬ್ಬದ ಡಬ್ಬಲ್ ಧಮಾಕಾ ಎಂದು ಬಣ್ಣಿಸೋಣವೇ.

ಕನ್ನಡ ನಾಡಿನಲ್ಲಿ ಈಗ ಒಣ ಹವೆ. ಬಿಸಿಲು ತನ್ನ ಬಿಚ್ಚುಗತ್ತಿಯನ್ನು ಒರೆಯಿಂದ ತೆಗೆಯಲು ತವಕಿಸುತ್ತಿರುವ ಕಾಲ. ಆದರೆ, ಅಲ್ಲಲ್ಲಿ ಚಳಿ ಇನ್ನೂ ಬಿಟ್ಟಿಲ್ಲ. ಹತ್ತರಲ್ಲಿ ಒಬ್ಬರಾದರೂ ಸ್ವೆಟರ್ ಹಾಕಿಕೊಂಡು ಅಡ್ಡಾಡುವ ಚಿತ್ರ ಕಣ್ಣಿಗೆ ಬೀಳುವುದು. ಅಂದಹಾಗೆ ಹಳೇ ಬೇರು, ಹೊಸ ಚಿಗುರನ್ನು ಚಿವುಟಿ ಮೂಸಿ ನೋಡುವ ಸಮಯ ಕೂಡಾ. ರಸ್ತೆ ಅಗಲೀಕರಣ, ಮೆಟ್ರೊ ರೈಲಿಗೆ ದಾರಿ ಮಾಡುವುದಕ್ಕೆ ಊರಿನ ನಾನಾ ಭಾಗಗಳಲ್ಲಿ ನೆಲಕ್ಕುರುಳಿದ ಹೆಮ್ಮರಗಳ ಹೆಣವನ್ನು ದಾಟಿ ಆಚೆ ಸಾಗುವ ಕಾಲಘಟ್ಟ.

ಕಂದಮ್ಮಗಳಿಗೆ ಅಕ್ಷರ ಕಲಿಸಲು ಆರಂಭಿಸುವುದಕ್ಕೆ ಇವತ್ತು ಪ್ರಶಸ್ತವಾದ ಮುಹೂರ್ತ. ಗಾಳಿಪಟ ಹಾರಿಸುವುದಕ್ಕೆ ಚೆಂದದ ವಾತಾವರಣ. ಪಿತೃಗಳಿಗೆ ತರ್ಪಣ ಕೊಡುವುದಕ್ಕೆ ಶ್ರೇಷ್ಠವಾದ ದಿನ. ಈ ಎಲ್ಲವೂ ನಿಮ್ಮ ಮನ ಮನೆಯಂಗಳದಲ್ಲಿ, ಬಾನಂಗಳದಲ್ಲಿ, ಹಿತ್ತಲಲ್ಲಿ, ನದಿ ತೀರದಲ್ಲಿ ಸಾಂಗವಾಗಲಿ.

English summary
India, on Tuesday Feb 8 is celebrating Basant Panchami or more popularly known as Saraswati Puja. Saraswati, the Hindu Goddess of knowledge, music and art is worshipped on this day which is also considered as the first day of Spring.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X