ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈದ್ ಇಂದಲ್ಲ ನಾಳೆ, ಕರಾವಳಿಯಲ್ಲಿ ಮಾತ್ರ ಇಂದು

By Mahesh
|
Google Oneindia Kannada News

Karnataka muslims to celebrate Ramadan Eid on Saturday
ಬೆಂಗಳೂರು ಸೆ 10 : ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ಪವಿತ್ರ ರಂಜಾನ್ ಹಬ್ಬವನ್ನು ಶನಿವಾರ (ಸೆ 11 ) ಆಚರಿಸಲು ಮುಸಲ್ಮಾನ ಬಾಂಧವರು ನಿರ್ಧರಿಸಿದ್ದಾರೆ. ಆದರೆ ಕರಾವಳಿ ಕರ್ನಾಟಕ ಭಾಗದಲ್ಲಿ ಮಾತ್ರ ಇಂದು ( ಸೆ 10 ) ಹಬ್ಬ ಆಚರಿಸಲಿದ್ದಾರೆಂದು ವಕ್ಫ್ ಮಂಡಳಿ ಚಂದ್ರ ದರ್ಶನ ಸಮಿತಿ ನಿರ್ಧರಿಸಿದೆ.

ಕಾಸರಗೋಡಿನಲ್ಲಿ ಚಂದ್ರ ದರ್ಶನ ವಾಗಿರುವ ಹಿನ್ನಲೆಯಲ್ಲಿ ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಈದ್ ಆಚರಿಸಲು ನಿರ್ಧರಿಸಲಾಗಿದೆ ಎಂದು ಚಂದ್ರ ದರ್ಶನ ಸಮಿತಿಯ ಸಂಚಾಲಕ ಮೌಲಾನ ಖದೀರ್ ಅಹಮದ್ ತಿಳಿಸಿದ್ದಾರೆ.

ಚಂದ್ರ ದರ್ಶನ ಮತ್ತು ಖಗೋಳ ತಜ್ಞರ ಲೆಕ್ಕಾಚಾರದ ಪ್ರಕಾರ ರಂಜಾನ್ ಹಬ್ಬದ ಆರಂಭವನ್ನು ನಿರ್ಧರಿಸಲಾಗುತ್ತದೆ. ಕರುಣೆ, ಸ್ವಯಂ ನಿಯಂತ್ರಣ, ಸಮಾಜಕ್ಕೆ ಸ್ಪಂದಿಸುವುದು ಮತ್ತಿತರ ಗುಣಗಳನ್ನು ರಂಜಾನ್ ಅವಧಿಯಲ್ಲಿ ಮುಸ್ಲಿಮರು ಅನುಸರಿಸಬೇಕು. ಈದ್-ಉಲ್-ಫಿತರ್ ಮುಸ್ಲಿಮರಿಗೆ ಪವಿತ್ರವಾದ ಕಾಲ. ಅಲ್ಲಾನಿಗೆ ಧನ್ಯವಾದ ಹೇಳುವ ಸೂಕ್ತ ಅವಕಾಶ. ಈ ಸಮಯದಲ್ಲಿ ಸಿಹಿ, ಉಡುಗೊರೆಗಳ ವಿತರಣೆ, ದಾನ ಧರ್ಮ ನಡೆಯುತ್ತದೆ.

ಸೌದಿ ಅರೇಬಿಯಾ, ಯುಎ ಇ, ಕತಾರ್ ಹಾಗೂ ಇತರೆ ಗಲ್ಫ್ ರಾಷ್ಟ್ರಗಳಲ್ಲಿ ಶುಕ್ರವಾರದಂದು ಈದ್ ಆಚರಿಸಲಾಗುತ್ತಿದೆ.

ನಾಡಿನ ಸಮಸ್ತ ಮುಸಲ್ಮಾನ ಬಾಂಧವರಿಗೆ ಈದ್-ಉಲ್-ಫಿತರ್ ಹಬ್ಬದ ಶುಭಾಶಯಗಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X