ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಷರ ಕಲಿಸಿದ ಗುರುವನ್ನು ನೆನೆಯೋಣ ಬನ್ನಿ

By * ಪ್ರಸಾದ ನಾಯಿಕ
|
Google Oneindia Kannada News

Let's remember beloved teacher on Sept 5
ಪರಿಚಯದ ಹಿರಿಯರೊಬ್ಬರು ಹತ್ತು ವರ್ಷದ ತನ್ನ ಮೊಮ್ಮಗನಿಗೆ ಪರೀಕ್ಷಿಸಲೋಸುಗ 'ಶಿಕ್ಷಕರ ದಿನಾಚರಣೆ ಎಂದು?' ಎಂದು ಕೇಳಿದರು. ಸೆಪ್ಟೆಂಬರ್ 15 ಅಂದ! ಬೇಸ್ತು ಬಿದ್ದ ಹಿರಿಯರು "ಕನಿಷ್ಠ ಸೆಪ್ಟೆಂಬರ್ ತಿಂಗಳಾದರೂ ಸರಿಯಾಗಿ ಹೇಳಿದ್ದಾನಲ್ಲ ಎಂದು ಸಮಾಧಾನಪಟ್ಟುಕೊಂಡೆ, ಆದರೆ ಈ ದಿನಾಚರಣೆಯ ಅರಿವಿಲ್ಲದಿದ್ದಕ್ಕೆ ಬೇಜಾರುಪಟ್ಟುಕೊಂಡೆ" ಎಂದು ತುಸು ಅಸಮಾಧಾನದಿಂದಲೇ ಹೇಳಿದರು.

ನಿಜ. ನಾಗಾಲೋಟದಲ್ಲಿ ಸಾಗುತ್ತಿರುವ ಇಂದಿನ ಲೋಕದಲ್ಲಿ ಮಕ್ಕಳಿಗೆ ಈ ದಿನಾಚರಣೆಯ ಮಹತ್ವದ ಅರಿವೇ ಇರುವುದಿಲ್ಲ. ಒಂದು, ಎರಡು ದಶಕಗಳ ಹಿಂದೆ ಇದ್ದ ಶಿಕ್ಷಕ-ವಿದ್ಯಾರ್ಥಿಯ ನಡುವಿನ ಆತ್ಮೀಯತೆ, ಬಾಂಧವ್ಯ, ಪ್ರೀತಿ ಇಂದು ಮಾಯವಾಗುತ್ತಿದೆಯಾ? ಎಂಬ ಪ್ರಶ್ನೆ ಕಾಡದೇ ಇರದು. ಇದಕ್ಕೆ ಕಾರಣಗಳೂ ಹಲವಾರಿರಬಹುದು.

ಕಚ್ಚೆ ಪಂಚೆ ಧರಿಸಿ, ತಲೆಮೇಲೆ ಟೋಪಿ ಧರಿಸಿ, ಕೈಯಲ್ಲಿ ಬೆತ್ತ ಹಿಡಿದ ಪ್ರೀತಿಯ ಮೇಷ್ಟ್ರು ಇಂದು ಕಾಣಸಿಗಲಿಕ್ಕಿಲ್ಲ. ಇಂದಿನ ಶಿಕ್ಷಣ, ಶಿಕ್ಷಕನ ಚೆಹರೆಯೇ ಬದಲಾಗಿದೆ. ನಗರಗಳಲ್ಲಿ ಲಕ್ಷಗಟ್ಟಲೆ ಫೀಸು ಕೊಡುವ ಶಾಲೆಯಲ್ಲಿ ಇಂದು ವಿದ್ಯಾರ್ಥಿಯನ್ನು ದಾರಿತಪ್ಪಿದಾಗ ಥಳಿಸುವುದಿರಲಿ ಮೈ ಮುಟ್ಟಲೂ ಸಾಧ್ಯವಿಲ್ಲ. ನಾವು ಎಷ್ಟು ಮುಂದುವರಿದಿದ್ದೇವೆಂದರೆ, ಶಾಲೆಯಲ್ಲಿ ಮಗು ಏನು ಮಾಡುತ್ತಿದೆಯೆಂದು ಪಾಲಕರು ಇಂಟರ್ನೆಟ್ ಮುಖಾಂತರ ಮನೆಯಲ್ಲಿ ಕುಳಿತೇ ಎಲ್ಲ ವಿವರ ತಿಳಿಯಬಹುದಾಗಿದೆ.

ಮಕ್ಕಳಿಗೂ ಕಡಿಮೆಯಿಲ್ಲದ ತಲೆಕೆಲಸ, ಶಿಕ್ಷಕರಿಗೂ ಬಿಡುವಿಲ್ಲದ ದುಡಿಮೆ. ಹೀಗಿರುವಾಗ ಮಕ್ಕಳು-ಶಿಕ್ಷಕರ ಬಾಂಧವ್ಯಕ್ಕಾದರೂ ಜಾಗ ಅಥವಾ ಸಮಯವೆಲ್ಲಿದೆ? ಆದರೂ ವಿದ್ಯಾರ್ಥಿಗಳು ಅಕ್ಷರ ಕಲಿಸುವ ಶಿಕ್ಷಕರನ್ನು ನೆನೆಯುವುದು, ಮಕ್ಕಳಿಗೆ ಗುರುವಂದನೆ ಕುರಿತು ತಿಳಿವಳಿಕೆ ನೀಡುವುದು ಪಾಲಕರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮ ಜೀವನದಲ್ಲಿ ಬಂದ ಆತ್ಮೀಯ ಮೇಷ್ಟ್ರು, ಆದರ್ಶ ಶಿಕ್ಷಕನನ್ನು ನೆನೆದು ಮಕ್ಕಳಲ್ಲಿ ಹೆಚ್ಚಿನ ಸ್ಫೂರ್ತಿ ತುಂಬುವುದು ಇಂದಿನ ಅಗತ್ಯ.

ಲೇಖನ ಆಹ್ವಾನ : ಓದುಗರೆ, ಇನ್ನೇಕೆ ತಡ. ನೀವು ಜೀವನಲ್ಲಿ ಕಂಡ, ಅಕ್ಷರ ತಿದ್ದಿತೀಡಿದ, ಮಾನವೀಯತೆಯನ್ನು ಕಲಿಸಿದ ಮೇಷ್ಟ್ರ ಕುರಿತು ನಮಗೆ ಬರೆಯಿರಿ. ಪುಟ್ಟ ಲೇಖನ ಯುನಿಕೋಡ್ ಅಥವಾ ಬರಹದಲ್ಲಿರಲಿ. ನಿಮ್ಮ ಅಥವಾ ಮೇಷ್ಟ್ರ ಫೋಟೋ ಲಗತ್ತಿಸಲು ಮರೆಯಬೇಡಿ.

ಲೇಖನ ಕಳಿಸಬೇಕಾದ ವಿಳಾಸ : [email protected]

English summary
Article invite on the occasion of teachers's day on september 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X