ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ನಂ ಒನ್ ಸಾಂತಾಕ್ಲಾಸ್ ಜಿಮ್ಮಿ ಚಾನ್

By Staff
|
Google Oneindia Kannada News

Santa claus
ಹಾಂಗ್ ಕಾಂಗ್ ನ ಚಾನ್ ಎಂಬ ಜಾದೂಗಾರ ವಿಶ್ವದ ನಂಬರ್ 1 ಸಾಂತಾ ಕ್ಲಾಸ್ ಪಟ್ಟ ಅಲಂಕರಿಸಿದ್ದಾನೆ. ಉತ್ತರ ಸ್ವೀಡನ್ನಿನಲ್ಲಿ ನಡೆದ ಯಾರು ಫೇಮಸ್ ಸಾಂತಾ ಕ್ಲಾಸ್? ಸ್ಪರ್ಧೆಯಲ್ಲಿ ಆತ ಇತರ ಎಂಟು ಮಂದಿ ಹುರಿಯಾಳುಗಳನ್ನು ಹಿಂದಕ್ಕಿಕ್ಕಿ ಸಾಂತಾಗಳ ಸಾಂತಾ ಎನಿಸಿದ್ದಾನೆ. ಕ್ರಿಸ್ಮಸ್ ಹಬ್ಬ ಹತ್ತಿರವಾಗುತ್ತಿರುವಂತೆಯೇ ಇಂತಹ ಸ್ಪರ್ಧೆಗಳು ಮತ್ತು ಆಕರ್ಷಣೆಗಳು ಜಗತ್ತಿನ ನಾನಾ ಭಾಗಗಳಿಂದ ಹೆಚ್ಚು ಹೆಚ್ಚಾಗಿ ವರದಿಯಾಗುತ್ತಿವೆ.

ಅವನ ಹೆಸರು ಜಿಮ್ಮಿ ಚಾನ್. 44 ವರ್ಷ. ವೃತ್ತಿ ಮತ್ತು ಹವ್ಯಾಸದಿಂದ ಮ್ಯಾಜಿಶಿಯನ್. ವಿಶ್ವದ ನಾನಾ ಭಾಗಗಳಿಂದ ಆಗಮಿಸಿದ್ದ ಸಾಂತಾ ಕ್ಲಾಸುಗಳ ನಡುವಿನ ಹಣಾಹಣಿ ಸ್ಪರ್ಧೆಯಲ್ಲಿ ವಿಜೇತನಾದ ಚಾನ್ ಸಖತ್ ಜಾಲಿ ಫೆಲೋ. ಸಾಂತಾಕ್ಲಾಸುಗಳಿಗಾಗಿ ಏರ್ಪಡಿಸಲಾಗಿದ್ದ ಗಂಜಿಕುಡಿಯುವ ಸ್ಪರ್ಧೆ, ಚಿಮಣಿ ಹತ್ತುವ ಸ್ಪರ್ಧೆ ಮತ್ತಿತರ ತಮತಮಾಶೆ ಆದರೆ ಕ್ಲಿಷ್ಟ ಆಟಗಳಲ್ಲಿ ಆತ ಉತ್ತೀರ್ಣನಾದ.

ಚಾನ್ ಕಳೆದ 17 ವರ್ಷಗಳಿಂದ ಸಾಂತಾಕ್ಲಾಸ್ ಮತ್ತು ಜಾದೂಗಾರನಾಗಿ ಹಾಂಗ್ ಕಾಂಗಿನಲ್ಲಿ ವೃತ್ತಿಪರನಾಗಿದ್ದಾನೆ. ಏನೇ ಬರಲಿ ಉತ್ಸಾಹ ಮತ್ತು ನಗುನಗುತ್ತ ಎಲ್ಲವನ್ನೂ ಸ್ವೀಕರಿಸುವ ಮನೋಭಾವ ನನ್ನ ಯಶಸ್ಸಿನ ಒಳಗುಟ್ಟು ಎಂದು ಸ್ಪರ್ಧೆಯಲ್ಲಿ ಗೆದ್ದ ನಂತರ ಚಾನ್ ಹೇಳಿದ.

(ಒನ್ ಇಂಡಿಯಾ.ಇನ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X