ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಲಯ ಅಮವಾಸ್ಯೆಯಿಂದ ರಮಜಾನ್ ವರೆಗೆ

By Staff
|
Google Oneindia Kannada News

India marches towards longest week-end, 2009
ಯಾವುದೇ ಶುಭಕಾರ್ಯಗಳಿಗೆ ಕಡಿವಾಣ ಹಾಕುವ ಪಕ್ಷಮಾಸ ಮುಗಿದು ನವರಾತ್ರಿ ಸಂಭ್ರಮಕ್ಕೆ ಇಡೀ ಕನ್ನಡ ನಾಡು ಸಜ್ಜಾಗುತ್ತಿರುವ ಸಂದರ್ಭದಲ್ಲಿಯೇ ಮತ್ತೊಂದು ಸಡಗರಕ್ಕೆ ಖಾಸಗಿ, ಸರಕಾರಿ ಉದ್ಯೋಗಿಗಳು ಅಣಿಯಾಗಲಿದ್ದಾರೆ.

ಸೆಪ್ಟೆಂಬರ್ 18ರಿಂದ ಹಿಡಿದು 21ರವರೆಗೆ ಸತತ ನಾಲ್ಕು ದಿನಗಳ ಕಾಲ ರಾಷ್ಟ್ರದಾದ್ಯಂತ ಖಾಸಗಿ ಬ್ಯಾಂಕುಗಳು, ಇನ್ಶೂರೆನ್ಸ್ ಕಂಪನಿಗಳು, ಸಾಫ್ಟ್ ವೇರ್ ಕಂಪನಿಗಳು, ಇನ್ನಿತರ ಖಾಸಗಿ ಸಂಸ್ಥೆಗಳು ಕಚೇರಿಗಳಿಗೆ ಬೀಗ ಜಡಿಯಲಿವೆ. ಸೆಪ್ಟೆಂಬರ್ 18ರ ಮಹಾಲಯ ಅಮವಾಸ್ಯೆಯಿಂದ ಹಿಡಿದು 21ರ ರಮಜಾನ್ ವರೆಗೆ ಗುಡ್ ಬೈ ಟು ವರ್ಕ್.

ಮಹಾಲಯ ಅಮವಾಸ್ಯೆ ಶುಕ್ರವಾರವಾದರೆ, ಮಾರನೇ ದಿನ ಶನಿವಾರ ಅರ್ಧದಿನ (ಬಂದರೂ ಆಯಿತು ಬಿಟ್ಟರೂ ಆಯಿತು), ಮರುದಿನ ಹ್ಯಾಪಿ ಸಂಡೇ, ನಂತರದ್ದೇ ಮುಸಲ್ಮಾನರ ಪವಿತ್ರ ಹಬ್ಬವಾದ ರಮಜಾನ್. ಮೊದಲೇ ಪ್ರೊಡಕ್ಟಿವಿಟಿ ಕಡಿಮೆಯಾಗಿದೆ ಎಂದು ಹಲುಬುವ ಕಂಪನಿಗಳಿಗೆ ಈ ರಜೆಗಳು ಸಂಕಟ ತಂದರೆ, ಉದ್ಯೋಗಿಗಳಿಗೆ ಚೆಲ್ಲಾಟವಾಡಲು ಸುಸಮಯ.

ಕಂಪ್ಯೂಟರನ್ನು ಲಾಗೌಟ್ ಮಾಡಿ ನಾಲ್ಕು ದಿನಗಳ ಕಾಲ ಯಾವುದೇ ಚಿಂತೆಯಿಲ್ಲದೇ ಹೆಗಲಿಗೆ ಬ್ಯಾಗೇರಿಸಿ ಸಂಸಾರದೊಂದಿಗೆ ರಜಾ ಕಳೆಯಲು ಪ್ರವಾಸಿ ತಾಣ ಹುಡುಕುವವರಿಗೆ ಪ್ರಶಸ್ತ ಸಮಯ. ಜೇಬೆಲ್ಲ ಖಾಲಿಯಾಗಿದ್ದರೆ ಎಟಿಎಂ ಬಳಸದವರು ಗುರುವಾರವೇ ಸಮಯ ಮಾಡಿಕೊಂಡು ಅಗತ್ಯಕ್ಕೆ ಬೇಕಷ್ಟು ಹಣವನ್ನು ಬ್ಯಾಂಕಿನಿಂದ ತೆಗೆದಿರಿಸಿಕೊಳ್ಳುವುದು ಜಾಣತನ. ಗುರುವಾರ ಸಂಜೆ ಹಾಕಿದ ಚೆಕ್ಕುಗಳು ಮಂಗಳವಾರ ಬೆಳಗಿನವರೆಗೂ ಇದ್ದ ಸ್ಥಳದಿಂದ ಅಲ್ಲಾಡುವುದಿಲ್ಲ, ನೆನಪಿರಲಿ.

ಮಹಾಲಯ ಅಮವಾಸ್ಯೆ :

ರಮಜಾನ್ : ಮುಸ್ಲಿಮರ 9ನೇ ತಿಂಗಳು ಪೂರ್ತಿ ರೋಜಾ ಅಂದರೆ ಉಪವಾಸ ಮಾಡಿ ಕುರಾನ್ ಮತ್ತು ಅಲ್ಲಾಹುವಿನ ಉಪಾಸನೆ ಮಾಡಲು ಸಮಯ ವಿನಿಯೋಗಿಸುತ್ತಾರೆ. ಕುಡಿತ, ಧೂಮಪಾನ ಮತ್ತು ಲೈಂಗಿಕ ಕ್ರಿಯೆಗಳಿಂದ ದೂರವಿರುವ ಅಲ್ಲಾಹುವಿನ ಭಕ್ತರಲ್ಲಿ ಈ ತಿಂಗಳಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆಯಿದೆ. ಪವಿತ್ರಗ್ರಂಥವಾದ ಕುರಾನ್ ಅನ್ನು ದೇವರು ಪ್ರಾಫೆಟ್ ಮೊಹಮ್ಮದನಿಗೆ ರಮಜಾನ್ ತಿಂಗಳಲ್ಲಿ ಬೋಧಿಸಿದನೆಂಬ ನಂಬಿಕೆಯೂ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X