ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಕುತಿಯಿಂದ ಪೂಜಿಸಿದ ಗಣಪನ ಫೋಟೋ ನಮಗೆ ಕಳಿಸಿಕೊಡಿ

|
Google Oneindia Kannada News

ಹಿಂದೂಗಳಿಗೆ ಕೃಷ್ಣ ಜನ್ಮಾಷ್ಟಮಿ ಎಷ್ಟು ಪ್ರಿಯವೋ, ಗಣೇಶ ಚತುರ್ಥಿ ಕೂಡ ಅಷ್ಟೇ ಪ್ರಿಯ. ಕೃಷ್ಣ ಜನ್ಮಾಷ್ಟಮಿಯಂದು ತಮ್ಮ ಮನೆಯ ಪುಟಾಣಿ ಮಕ್ಕಳಿಗೆ ಹೇಗೆ ಕೃಷ್ಣನ ವೇಷ ಹಾಕಿ ಅಂದಚೆಂದ ಕಣ್ಣಲ್ಲಿ ತುಂಬಿಕೊಳ್ಳುತ್ತಾರೋ, ಹಾಗೆ ಗಣೇಶ ಚತುರ್ಥಿಯನ್ನು ತಮ್ಮ ಮಕ್ಕಳಿಗೆ ಗಣಪನ ವೇಷ ಹಾಕಲ್ಲ ಅಷ್ಟೇ.

ಆದರೆ, ಇಂದಿನ ಮಕ್ಕಳು ಗಜಾನನನಿಗಿಂತ ಕಡಿಮೆಯೆ? ನೈವೇದ್ಯಕ್ಕಂತ ಇಟ್ಟ ಮೋದಕ, ಕಡುಬು, ಚಕ್ಕುಲಿಗಳನ್ನು ನೋಡನೋಡುತ್ತಿದ್ದಂತೆ ಗಾಯಬ್ ಮಾಡಿರುತ್ತಾರೆ. ಹೊಸ ಬಟ್ಟೆ ಹಾಕಿಕೊಂಡು ನಲಿದಾಡಿದ್ದು ಅಲ್ಲದೆ, ಸಂಜೆ ಅರ್ಧ ಚಂದ್ರನನ್ನು ಬೇಕಂತಲೇ ನೋಡಿ ಶ್ಯಮಂತಮಣಿ ಕಥೆಯನ್ನು ಕೇಳಿಯೇ ನಿದ್ದೆಗೆ ಜಾರುವುದು.

ಅದ್ದೂರಿ ಸ್ವರ್ಣಗೌರಿ ವ್ರತಕ್ಕೆ 16 ಸಲಹೆ: ಚಿತ್ರಮಾಹಿತಿ ಅದ್ದೂರಿ ಸ್ವರ್ಣಗೌರಿ ವ್ರತಕ್ಕೆ 16 ಸಲಹೆ: ಚಿತ್ರಮಾಹಿತಿ

Send the photos of Gowri Ganesha festival

ಈ ಬಾರಿ ಎಲ್ಲರೂ ಪರಿಸರ ಪ್ರೇಮಿಗಳಾಗಲೇಬೇಕು. ಏಕೆಂದರೆ, ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಮಾಡಿರುವ ಸಿಂಗಾರಗೊಂಡ ಗಣೇಶನನ್ನು ಕೂಡಿಸುವ ಹಾಗಿಲ್ಲ. ಪ್ರತಿಯೊಬ್ಬರೂ ಮಣ್ಣಿನ ಗಣಪನನ್ನೇ ಕೂಡಿಸಿ, ಪೂಜಿಸಿ, ವಿಸರ್ಜಿಸಬೇಕು. ಯಾರೇಕೆ ಬಲವಂತ ಪಡಿಸಬೇಕು? ನಾವೇ ಪರಿಸರ ಪ್ರೇಮಿಗಳಾದರಾಯಿತು.

ಗೌರಿ - ಗಣೇಶನನ್ನು ಬರಮಾಡಿಕೊಳ್ಳಲು ಸಜ್ಜಾದ ಸಾಂಸ್ಕೃತಿಕ ನಗರಿಗೌರಿ - ಗಣೇಶನನ್ನು ಬರಮಾಡಿಕೊಳ್ಳಲು ಸಜ್ಜಾದ ಸಾಂಸ್ಕೃತಿಕ ನಗರಿ

Send the photos of Gowri Ganesha festival

ಅಂದ ಹಾಗೆ, ಮನೆಗೆ ಎಂಥ ಗಣಪನನ್ನು ಕರೆತರುತ್ತೀರಿ? ಪುಟಾಣಿ ಗಣೇಶನಾ, ಬಲಮುರಿ ಗಣೇಶನಾ, ಪೀಠದ ಮೇಲೆ ಪವಡಿಸಿದ ಗಣಪನಾ? ವಿಘ್ನವಿನಾಯಕ ಎಂಥವನೇ ಆಗಿರಲಿ, ಮಣ್ಣಿನಿಂದ ಮಾಡಿರಲಿ ಮತ್ತು ಎಲ್ಲ ವಿಘ್ನಗಳನ್ನು ನಿವಾರಣೆ ಮಾಡಲಿ, ಎಲ್ಲರಿಗೂ ಒಳಿತನ್ನು ಮಾಡಲಿ.

ಗೌರಿ ಹಬ್ಬ: ಬಾಗಿನ ಕೊಡುವ ಹಿನ್ನೆಲೆ, ವಾಡಿಕೆ, ಮಹತ್ವ ಗೌರಿ ಹಬ್ಬ: ಬಾಗಿನ ಕೊಡುವ ಹಿನ್ನೆಲೆ, ವಾಡಿಕೆ, ಮಹತ್ವ

ನಿಮ್ಮಲ್ಲಿ ನಮ್ಮದೊಂದು ಅರಿಕೆ. ಅದೇನೆಂದರೆ, ಕೃಷ್ಣ ಜನ್ಮಾಷ್ಟಮಿಗೆ ಮಕ್ಕಳು ಫೋಟೋಗಳನ್ನು ಕಳಿಸಿದಂತೆ, ಗಣೇಶ ಚತುರ್ಥಿಯಂದೂ ನೀವು ಮನೆಯಲ್ಲಿ ಭಕುತಿಯಿಂದ ಪೂಜಿಸಿದ ಗಣೇಶನ ಮೂರ್ತಿಯ ಫೋಟೋಗಳನ್ನು ನಮಗೆ ಕಳಿಸಿ. ನಿಮ್ಮ ಊರು, ಮತ್ತಿತರ ವಿವರ ಕಳಿಸಲು ಮರೆಯಬೇಡಿ.

Send the photos of Gowri Ganesha festival

ಗಣೇಶನ ಹಬ್ಬದ ಫೋಟೋಗಳೆಂದರೆ, ಬರೀ ಗಣೇಶ ಅಥವಾ ಜೊತೆಗೆ ಕುಳಿತ ಗೌರಿಯ ಫೋಟೋ ಮಾತ್ರ ಕಳಿಸಬೇಕಂತಿಲ್ಲ. ನಿಮಗೇನೂ ಅಭ್ಯಂತರವಿಲ್ಲದಿದ್ದರೆ, ನಿಮ್ಮ ಕುಟುಂಬ ಒಟ್ಟಿಗೆ ಗಣೇಶನ ಹಬ್ಬ ಆಚರಿಸಿದ ಫೋಟೋಗಳನ್ನು ಕೂಡ ಕಳಿಸಬಹುದು. ಅವನ್ನು ನಮ್ಮ ಒನ್ಇಂಡಿಯಾ ಕನ್ನಡದ ಫೋಟೋ ಗ್ಯಾಲರಿಯಲ್ಲಿ ಪ್ರಕಟಿಸಲಾಗುವುದು.

ನೀವು ಈ ಇ-ಮೇಲ್‌ ಐಡಿಗೆ ಕಳುಹಿಸಬೇಕು : [email protected]

English summary
Lord Ganesha is as adorable as Krishna, when it comes to celebrating the festival. How do you celebrate Ganesha Chaturthi? Please send the photo of Ganesha idol or celebration with the family and friends too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X