ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Gowri Habba 2021: ಗೌರಿ ಹಬ್ಬ ಶುಭ ಮುಹೂರ್ತ, ಪೂಜಾ ವಿಧಾನ ಹಾಗೂ ಮಹತ್ವ

|
Google Oneindia Kannada News

ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಹಬ್ಬವೂ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಅಂತಹ ಹಬ್ಬಗಳಲ್ಲಿ ಗೌರಿ-ಗಣೇಶ ಹಬ್ಬವೂ ಅತ್ಯಂತ ಮುಖ್ಯವಾದುದು. ಭಾದ್ರಪದ ಮಾಸದಲ್ಲಿ ಬರುವ ಮೊದಲ ಹಬ್ಬವೇ ಗೌರಿಹಬ್ಬ. ಈ ಗೌರಿ ಹಬ್ಬದ ಆಚರಣೆಗೆ ಕಥೆಗಳಿವೆ.

ಬಂಧು ಬಾಂಧವರನ್ನು ಭಾವೈಕ್ಯತೆಯನ್ನು ಗಟ್ಟಿಗೊಳಿಸುವುದು ಈ ಹಬ್ಬದ ವಿಶೇಷ. ತವರು ಮನೆಗೆ ಬಂದ ಹೆಣ್ಣು ಮಕ್ಕಳು ಉಡುಗೊರೆಯನ್ನು ಪಡೆದುಕೊಳ್ಳುವುದು. ಹೆತ್ತವರು ಒಡ ಹುಟ್ಟಿದವರು ಚೆನ್ನಾಗಿರಲಿ ಎಂದು ಹಾರೈಸುವುದು ಗೌರಿ ಹಬ್ಬದ ಮಹತ್ವವಾಗಿದೆ. ಗೌರಿಗೆ ಸ್ವರ್ಣಗೌರಿ ಎಂಬ ಹೆಸರು ಬಂದಿದ್ದು , ಶಿವನಿಂದ

ಒಮ್ಮೆ ಶಿವ ಕೈಲಾಸದಲ್ಲಿ ಕುಳಿತಿರುವಾಗ ಪಾರ್ವತಿ ಬಂದು ಶಿವನ ಕಣ್ಣುಗಳನ್ನು ಮುಚ್ಚುತ್ತಾಳೆ. ನಂತರ ಶಿವ ಕಣ್ಣು ತೆರೆದು ನೋಡಿದಾಗ ಪಾರ್ವತಿಯು ಕಪ್ಪಾಗಿ ಕಾಣುತ್ತಾಳೆ. ಆಗ ಶಿವನು ಪಾರ್ವತಿಯನ್ನು ಗೌರಿ ಎಂದು ಕರೆಯುತ್ತಾನೆ. ಸಂಸ್ಕೃತದಲ್ಲಿ ಗೌರಿ ಎಂದರೆ ಕಪ್ಪು ಎಂಬರ್ಥ. ಶಿವ ಗೌರಿ ಎಂದು ಕರೆದಿದ್ದರಿಂದ ಪಾರ್ವತಿ ಮುನಿಸಿಕೊಂಡು ಹೋಗುತ್ತಾಳೆ.

ಮುನಿಸಿಕೊಂಡ ಪಾರ್ವತಿಯನ್ನು ಓಲೈಸುವುದಕ್ಕಾಗಿ ಪರಮೇಶ್ವರನು ಗೌರಿಗೆ ಹೇಳುತ್ತಾನೆ. ನೀನು ಗೌರಿ ಅಲ್ಲ. ಸ್ವರ್ಣಗೌರಿ ಎಂದು ಕರೆದ. ಸ್ವರ್ಣ ಎಂದರೆ ಚಿನ್ನ ಎಂದರ್ಥ. ಆದ್ದರಿಂದ ಶಿವನು ಸ್ವರ್ಣಗೌರಿ ಎಂದು ಪಾರ್ವತಿಯನ್ನು ಓಲೈಸುತ್ತಾನೆ.

Gowri Habba 2021 Date, Shubh Muhurat, Puja Vidhi, Rituals, History And Significance In Kannada

ಗೌರಿ ಹಬ್ಬವೆಂದರೆ ಹೆಣ್ಣು ಮಕ್ಕಳಿಗೆ ಬಹಳ ಸಂತಸ. ಅದರಲ್ಲೂ ಮದುವೆಯಾಗಿರುವ ಹೆಣ್ಣು ಮಕ್ಕಳಿಗೆ ಖುಷಿ ಸ್ವರ್ಗಕ್ಕೆ ಮೂರೇ ಗೇಣು. ಗೌರಿ ಹಬ್ಬ ಹೆಣ್ಣು ಮಕ್ಕಳಿಗೆ ವಿಶೇಷವಾದುದು. ವರ್ಷಕ್ಕೊಮ್ಮೆ ತವರಿಗೆ ಹೋಗಿ ತಂದೆ-ತಾಯಿ, ಅಕ್ಕ-ತಂಗಿ, ಅಣ್ಣ-ತಮ್ಮಂದಿರೊಡನೆ ಹಬ್ಬವನ್ನು ಆಚರಿಸಿ ಬಾಗಿನ ತರುವುದೇ ಅವರಿಗೆ ಸಂಭ್ರಮ.

ಗೌರಿಹಬ್ಬ ಹೆಣ್ಣು ಮಕ್ಕಳು ಹುಟ್ಟಿದ ಮನೆ ಮತ್ತು ಕೊಟ್ಟ ಮನೆಯ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುವ ಹಬ್ಬವಾಗಿದೆ. ಎಷ್ಟೇ ಬಡ ಕುಟುಂಬದವರಾದರೂ ಸಹ ಈ ಗೌರಿ ಹಬ್ಬವನ್ನು ಆಚರಿಸುವ ಮೂಲಕ ತಮ್ಮ ಹೆಣ್ಣು ಮಕ್ಕಳನ್ನು ತವರಿಗೆ ಕರೆದು ಬಾಗಿನ ಕೊಡುವ ಸಂಪ್ರದಾಯವಿದೆ. ಇನ್ನೂ ಕೆಲವೆಡೆ ಗೌರಿ ಹಬ್ಬದಲ್ಲಿ ನಮ್ಮ ಜೀವನಾಡಿಯಾಗಿರುವ ತುಂಬಿದ ಕೆರೆ, ಕಟ್ಟೆ, ನದಿಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಗಂಗಾಮಾತೆಗೆ ಬಾಗಿನ ಅರ್ಪಿಸುವ ವಾಡಿಕೆ ಇದೆ.

ನಂತರ ಕೆರೆಯ ಮಣ್ಣಿನಲ್ಲಿ ಗಣೇಶ ಮೂರ್ತಿ ತಯಾರಿಸಿ ಮೆರವಣಿಗೆಯಲ್ಲಿ ತಂದು ಮನೆಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಕ್ರಮವೂ ಇದೆ. ಗೌರಿ ಹಬ್ಬದಂದು ಹೆಣ್ಣು ಮಕ್ಕಳು ಸಡಗರದಿಂದ ಗೌರಿಗೆ ಪೂಜೆ ಸಲ್ಲಿಸಿ, ಗೌರಿದಾರ ಕಟ್ಟಿಸಿಕೊಂಡು ತಾಯಿಯ ಕಾಲಿಗೆ ನಮಸ್ಕರಿಸಿ ಮುತ್ತೈದೆಯರಿಗೆ ಬಾಗಿನವನ್ನು ನೀಡುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಗೌರಿಹಬ್ಬದ ಮರುದಿನ ಗಂಡು ಮಕ್ಕಳು ಗಣೇಶನ ಹಬ್ಬಕ್ಕೆ ಸಜ್ಜಾಗುತ್ತಾರೆ.

ನಮ್ಮಲ್ಲಿ ಯಾವುದೇ ಸಮಾರಂಭ ಹಾಗೂ ಶುಭಾರಂಭಗಳಲ್ಲಿ ಮೊದಲಿಗೆ ವಿಘ್ನಗಳ ನಿವಾರಕ ವಿನಾಯಕನನ್ನು ಪೂಜಿಸುವುದು ಪದ್ಧತಿ. ಯಾವುದೇ ಒಂದು ಶುಭ ಕೆಲಸಗಳನ್ನು ಕೈಗೊಳ್ಳಬೇಕಾದರೆ ಜನರು ವಿಘ್ನೇಶ್ವರನನ್ನು ಆರಾಧಿಸಿ ನಂತರ ಪ್ರಾರಂಭಿಸುತ್ತಾರೆ. ಗೌರಿಗಣೇಶ ಹಬ್ಬವನ್ನು ಬಡವ ಬಲ್ಲಿದ ಎಂಬ ಬೇಧವಿಲ್ಲದೆ ಎಲ್ಲರೂ ಅವರವರ ಅನುಕೂಲಕ್ಕೆ ತಕ್ಕಂತೆ ಆಚರಿಸುತ್ತಾರೆ.

ನಂತರ ಕೆರೆಯ ಮಣ್ಣಿನಲ್ಲಿ ಗಣೇಶ ಮೂರ್ತಿ ತಯಾರಿಸಿ ಮೆರವಣಿಗೆಯಲ್ಲಿ ತಂದು ಮನೆಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಕ್ರಮವೂ ಇದೆ. ಗೌರಿ ಹಬ್ಬದಂದು ಹೆಣ್ಣು ಮಕ್ಕಳು ಸಡಗರದಿಂದ ಗೌರಿಗೆ ಪೂಜೆ ಸಲ್ಲಿಸಿ, ಗೌರಿದಾರ ಕಟ್ಟಿಸಿಕೊಂಡು ತಾಯಿಯ ಕಾಲಿಗೆ ನಮಸ್ಕರಿಸಿ ಮುತ್ತೈದೆಯರಿಗೆ ಬಾಗಿನವನ್ನು ನೀಡುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಗೌರಿಹಬ್ಬದ ಮರುದಿನ ಗಂಡು ಮಕ್ಕಳು ಗಣೇಶನ ಹಬ್ಬಕ್ಕೆ ಸಜ್ಜಾಗುತ್ತಾರೆ.

ಸ್ವರ್ಣಗೌರಿ ವ್ರತವನ್ನು ಮಾಡುವುದರಿಂದ ವ್ರತ ಮಾಡುವವರಿಗೆ ಗೌರಿಯು ಸಂಪತ್ತನ್ನು ಅನುಗ್ರಹಿಸುತ್ತಾಳೆ. ಸದಾ ಅವರ ಮನೆಯಲ್ಲಿ ಸಂಪತ್ತು ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಗೌರಿ-ಗಣೇಶ ಹಬ್ಬ ಎಂದಾಕ್ಷಣ ಚಿಕ್ಕ ಮಕ್ಕಳಿಂದ ದೊಡ್ಡವರಿಗೂ ಏನೋ ಸಂತೋಷ, ಸಡಗರ. ವಯಸ್ಸಿನ ಮಿತಿಯಿಲ್ಲದೆ ಎಲ್ಲರೂ ಒಗ್ಗೂಡಿ ಸಂಭ್ರಮ, ಸಡಗರದಿಂದ ಗೌರಿ-ಗಣೇಶ ಹಬ್ಬವನ್ನು ದೇಶಾದ್ಯಂತ ಆಚರಣೆ ಮಾಡುತ್ತಾರೆ. ಇದು ಯಾವುದೇ ಭಾಷೆ, ಧರ್ಮ, ಜಾತಿ, ಪ್ರದೇಶ ಎಂಬ ಬೇಧವಿಲ್ಲದೆ ಎಲ್ಲರೂ ಜೊತೆಗೂಡಿ ಆಚರಿಸುವ ಹಬ್ಬವಾಗಿದೆ.

ಗೌರಿ ಹಬ್ಬದ ಪೂಜಾ ವಿಧಾನ:

* ಗೌರಿ ದೇವಿಯ ಮೂರ್ತಿಯನ್ನು ಗಣೇಶ ಚತುರ್ಥಿ ಹಿಂದಿನ ದಿನ ಮನೆಗೆ ತರಲಾಗುತ್ತದೆ. ಗೌರಿಯನ್ನು ಮನೆಗೆ ಆಹ್ವಾನಿಸುವ ಮುನ್ನ ಆ ಮನೆಯ ಮಹಿಳೆಯರು ಸ್ನಾನ ಮಾಡಿ, ಶುದ್ಧರಾಗಿ ಮನೆಯನ್ನು ಅಲಂಕರಿಸಿ ಮನೆ ಮುಂದೆ ರಂಗೋಲಿಯನ್ನು ಹಾಕುತ್ತಾರೆ.

* ಸ್ವರ್ಣ ಗೌರಿ ಹಬ್ಬವೆಂದು ಕರೆಯಲಾಗುವ ಗೌರಿ ಹಬ್ಬದಂದು ಮಹಿಳೆಯರು ಸಾಂಪ್ರಧಾಯಿಕ ಉಡುಪನ್ನು ಧರಿಸಿ, ನಂತರ ಅರಿಶಿಣದಿಂದ ಗೌರಿ ವಿಗ್ರಹವನ್ನು ರಚಿಸಬೇಕು. ಹಾಗೂ ಮಂತ್ರದ ಮೂಲಕ ಗೌರಿಯನ್ನು ಆಹ್ವಾನಿಸಬೇಕು.

ಮಂತ್ರ: "ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ".

ಈ ಮಂತ್ರವನ್ನು ಸ್ವರ್ಣಗೌರಿ ಹಬ್ಬದ ದಿನ 108 ಬಾರಿ ಶ್ರದ್ಧಾ ಹಾಗೂ ಭಕ್ತಿಯಿಂದ ಪೂಜಿಸಬೇಕು.

*ನಂತರ ಅರಶಿಣದಿಂದ ತಯಾರಿಸಿದ ಗೌರಿ ವಿಗ್ರಹವನ್ನು ಅಕ್ಕಿ ಮತ್ತು ಧಾನ್ಯಗಳನ್ನು ಹಾಕಿರುವ ಬಟ್ಟಲಿನಲ್ಲಿ ಇಡಬೇಕು.

*ನಂತರ ಗೌರಿಗೆ ಸ್ವಚ್ಛತೆ ಮತ್ತು ಭಕ್ತಿಯಿಂದ ಪೂಜೆ ಮಾಡಲಾಗುತ್ತದೆ.

ಗೌರಿಯನ್ನು ಆಹ್ವಾನಿಸುವ ವಿಧಾನ ಹೀಗಿದೆ
ಗೌರಿಯ ಆಹ್ವಾನದ ವಿಧಿ
ಸುಖ, ಸಮೃದ್ಧಿ ಮತ್ತು ಶಕ್ತಿ ದೇವತೆಯೆಂದು ಪರಿಗಣಿಸಲಾಗುವ ಗೌರಿ ದೇವಿಯನ್ನು ಗಣೇಶ ಚತುರ್ಥಿಗೂ ಮೊದಲೇ ಮನೆಗೆ ಸ್ವಾಗತಿಸಲಾಗುತ್ತದೆ. ಗೌರಿ ಪೂಜೆಯ ವಿಧಿ - ವಿಧಾನಗಳು ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತದೆ. ಗಣೇಶನನ್ನು ಮನೆಗೆ ಆಹ್ವಾನಿಸುವ ಮುನ್ನ ಆತನ ತಾಯಿ ಗೌರಿ ಅಂದರೆ ಪಾರ್ವತಿಯನ್ನು ಮನೆಗೆ ಸ್ವಾಗತಿಸಲಾಗುತ್ತದೆ. ಗೌರಿಯನ್ನು ಮನೆಯಲ್ಲಿ ಕೂರಿಸುವುದರಿಂದ ಆ ಮನೆಯ ಸಮೃದ್ಧಿ ಮತ್ತು ಸಂಪತ್ತು ಹೆಚ್ಚಾಗುತ್ತದೆ ಎನ್ನುವ ನಂಬಿಕೆಯಿದೆ. ಈ ದಿನ ಸುಮಂಗಲಿಯರು ಮನೆ ಮುಂದೆ ರಂಗೋಲಿಯನ್ನು ಹಾಕಿ, ಮನೆಯನ್ನು ಶುದ್ಧಗೊಳಿಸಿ, ಅಲಂಕಾರವನ್ನು ಮಾಡಿ ಗೌರಿಯನ್ನು ಆಹ್ವಾನಿಸಬೇಕು

ಗೌರಿ ಪೂಜೆಯ ಶುಭ ಮುಹೂರ್ತ:
ಸೆಪ್ಟೆಂಬರ್‌ 9 ಗುರುವಾರ ಬಾಧ್ರಪದ ಮಾಸ ಶುಕ್ಲ ಪಕ್ಷದ ತದಿಗೆ ಪ್ರಾತಃಕಾಲ ಗೌರಿ ಪೂಜಾ ಶುಭ ಮುಹೂರ್ತ: ಬೆಳಗ್ಗೆ 6.03 ರಿಂದ 8.33 ಪ್ರದೋಷ ಕಾಲ ಪೂಜಾ ಮುಹೂರ್ತ: ಸಂಜೆ 6.33 ರಿಂದ 8.51.

Recommended Video

ಕತ್ತರಿ ಬದಲಿಗೆ ಹಲ್ಲಿನಿಂದ ಟೇಪ್ ಕಟ್ ಮಾಡಿದ ಪಾಕ್ ಮಂತ್ರಿಯ ಹಲ್ಲಿನ ಪವರ್ ನೋಡಿ | Oneindia Kannada

English summary
Gowri Habba is dedicated to Goddess Gowri , an incarnation of Goddess Parvati. It is a significant Hindu festival celebrated in Karnataka, Andhra Pradesh and Tamil Nadu and occurs one day before Ganesh Chaturthi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X