ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಥಮ ಪೂಜಿತಗೆ ಶರಣು, ಶ್ರದ್ಧೆಯ ಗಣೇಶೋತ್ಸವ ನಮ್ಮದಾಗಲಿ

By ವಿಶ್ವಾಸ ಸೋಹೋನಿ
|
Google Oneindia Kannada News

ವಿಘ್ನನಾಶಕ, ಪ್ರಥಮ ಪೂಜಿತ ಗಣೇಶನ ಪೂಜೆಗೆ ಸಕಲ ಭಾರತೀಯರು ಸಿದ್ಧರಾಗಿದ್ದಾರೆ. ಎಲ್ಲೆಲ್ಲೂ ಅದ್ಧೂರಿ ಗಣೇಶೋತ್ಸವದ ಸಿದ್ಧತೆ ನಡೆಯುತ್ತಿರುವ ಹೊತ್ತಲ್ಲಿ ಗಣೇಶನ ಕುರಿತು ಒಂದಷ್ಟು ಆಸಕ್ತಿದಾಯಕ ಮಾಹಿತಿ ಮತ್ತು ಗಣೇಶೋತ್ಸವದ ಕುರಿತ ಕಳಕಳಿ ಇಲ್ಲಿದೆ.

ಗಣೇಶನ ಅಷ್ಟವಿನಾಯಕ ಮಂದಿರಗಳು ಸುಪ್ರಸಿದ್ಧವಾಗಿದೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಅಷ್ಟವಿನಾಯಕ ದರ್ಶನಯಾತ್ರೆ ಮಾಡುತ್ತಾರೆ. ಮುಖ್ಯವಾಗಿ ಇದರಲ್ಲಿ ಅನೇಕ ಸ್ಥಳಗಳು ಸ್ವಯಂಭು ಮತ್ತು ಜಾಗೃತವಾಗಿವೆ.

ವಿಘ್ನನಾಶಕ ಗಣೇಶನ ಆರಾಧನೆಗೂ ಮುನ್ನ ತಿಳಿದಿರಲಿ ಈ ಸಂಗತಿ ವಿಘ್ನನಾಶಕ ಗಣೇಶನ ಆರಾಧನೆಗೂ ಮುನ್ನ ತಿಳಿದಿರಲಿ ಈ ಸಂಗತಿ

ಮೋರೆಗಾಂನಲ್ಲಿ ಮೇರೆಶ್ವರ, ಥೇಯುರದಲ್ಲಿ ಚಿಂತಾಮಣಿ, ಸಿದ್ಧಟೇಕದ ಸಿದ್ಧಿವಿನಾಯಕ, ರಾಂಜಣಗಾಂವದ ಮಹಾಗಣಪತಿ, ಓಝರನಲ್ಲಿ ವಿಘ್ನೇಶ್ವರ, ಲೆಣ್ಯಾದ್ರಿಯ ಗಿರಿಜಾತ್ಮಜ, ಮಹಾಡದ ವರದವಿನಾಯಕ, ಮತ್ತು ಪಾಲಿಯ ಬಲ್ಲಾಳೇಶ್ವರ. ಈ ರೀತಿ ಪುಣೆ ಜಿಲ್ಲಿಯಲ್ಲಿ ಏದು, ರೈಗಡ್ ಜಿಲ್ಲೆಯಲ್ಲಿ ಎರಡು ಮತ್ತು ಅಹಮದನಗರ ಜಿಲ್ಲೆಯಲ್ಲಿ ಒಂದು ತೀರ್ಥಸ್ಥಾನ ಇದೆ.

ಬದಲಾದ ಗಣೇಶೋತ್ಸವ

ಬದಲಾದ ಗಣೇಶೋತ್ಸವ

ಬದಲಾಗುತ್ತಿರುವ ಈ ವಿದ್ಯುನ್ಮಾನ ಯುಗದಲ್ಲಿ ಒಂದುಕಡೆ ಭಕ್ತಿಯಲ್ಲಿ ಭಾವನೆ ಜಾಸ್ತಿ ಆಗುತ್ತಿದೆ. ಗಣೇಶನ ರೂಪವು ಬದಲಾಗುತ್ತಿದೆ. ಅಶ್ಲೀಲ ಹಾಡುಗಳನ್ನು ಎಲ್ಲಡೆ ಕೆಳಿಬರುತ್ತಿದೆ. ಇದರಿಂದ ಧ್ವನಿಪ್ರದುಷಣ ಆಗುತ್ತದೆ. ಸಾಮರಸ್ಯ, ಏಕತೆ, ಸಂಘಟನೆಯ ಉದ್ದೇಶದಿಂದ 'ಲೊಕಮಾನ್ಯ ತಿಲಕರು' ಪ್ರಾರಂಭಿಸಿದ ಸಾರ್ವಜನಿಕ ಗಣಪನ ಉತ್ಸವ ಇಂದು ವಿಚಿತ್ರ ರೂಪ ತಾಳಿದೆ. ಗಣಪನ ಸ್ಥಾಪನೆ-ವಿರ್ಸಜನೆಯ ಸಮಯದಲ್ಲಿ ಅನೇಕ ಪ್ರಕಾರದ ಘರ್ಷಣೆ, ಗಲಾಟೆ, ಹಿಂಸೆಯು ನಡೆಯತ್ತಿದೆ. ಗಣಪತಿಯ ಮೂರ್ತಿಗಳು ಪ್ಲಾಸ್ಟರ್ ಆಫ್ ಪ್ಯಾರಿಸನಿಂದ ಮಾಡುತ್ತಾರೆ. ಅನೇಕ ರಾಸಾಯನಿಕ ಬಣ್ಣ ಮತ್ತು ಸಿಡಿಮದ್ದುಗಳಿಂದ ಪರಿಸರ ಹಾನಿಯಾಗುತ್ತದೆ. ಇದಕ್ಕೆ ವಿಚಾರವಂತರು, ಬುದ್ಧಿವಾದಿಗಳು, ಚಿಂತಕರು, ಎಲ್ಲರೂ ಸೇರಿದರೆ ಕಡಿವಾಣ ಹಾಕಬಹುದು.

ಗಣಪನನ್ನು ಕೂರಿಸಲು ಪಾಲಿಕೆಯಿಂದ ಏಕಗವಾಕ್ಷಿ ಅನುಮತಿ ಗಣಪನನ್ನು ಕೂರಿಸಲು ಪಾಲಿಕೆಯಿಂದ ಏಕಗವಾಕ್ಷಿ ಅನುಮತಿ

ಮಣ್ಣಿನ ಗಣೇಶನೇ ಇರಲಿ

ಮಣ್ಣಿನ ಗಣೇಶನೇ ಇರಲಿ

ವಾಸ್ತವವಾಗಿ ಗಣಪತಿಯ ಹಬ್ಬವು ನಮಗೆ ಸುಖ, ಶಾಂತಿ ಸಮೃದ್ಧಿ ತರುವ ಹಬ್ಬವಾಗಬೇಕು. ಗಣೇಶನ ಮೂರ್ತಿಯು ಮಣ್ಣಿನಿಂದ ತಯಾರಿಸಿ ಬಣ್ಣವನ್ನು ಹಚ್ಚಿಸಿ, ಶೃಂಗಾರ ಮಾಡಿ ಪೂಜೆ ಮಾಡುವರು. ಕೆಲವು ದಿನಗಳ ನಂತರ ಗಣಪನ ವಿರ್ಸಜನೆ ಮಾಡುವರು. ಇದರ ನಿಜ ಅರ್ಥ ಮಾನವನ ವಿನಾಶಿ ಶರೀರವು ಪಂಚತತ್ವಗಳಿಂದ ತಯಾರವಾಗಿದೆ. ನಾವು ಆತ್ಮ, ಜಾತಿ ಇಲ್ಲದ ಜ್ಯೋತಿ ಎಂದು ತಿಳಿದು ದಿವ್ಯಗುಣಗಳ ಶೃಂಗಾರ ಮಾಡಿದಾಗ, ಪೂಜೆಗೆ ಯೋಗ್ಯರಾಗುವೆವು. ಗುಣಗಳ ಧಾರಣೆ ದೇಹಾಭಿಮಾನದ ಮೂಲವಾಗಿರುವ ಪಂಚವಿಕಾರಗಳ ತ್ಯಾಗದಿಂದ ಆಗುವದು.

ಬಿಬಿಎಂಪಿ ಬ್ಯಾನ್ ಗೆ ಬೆಲೆ ಇಲ್ಲ: ಪಿಒಪಿ ಗಣಪನ ಹಾವಳಿ ನಿಂತಿಲ್ಲ!ಬಿಬಿಎಂಪಿ ಬ್ಯಾನ್ ಗೆ ಬೆಲೆ ಇಲ್ಲ: ಪಿಒಪಿ ಗಣಪನ ಹಾವಳಿ ನಿಂತಿಲ್ಲ!

ಇಬ್ಬರು ಪತ್ನಿಯರಿದ್ದರೂ ಬ್ರಹ್ಮಚಾರಿ ಗಣೇಶ!

ಇಬ್ಬರು ಪತ್ನಿಯರಿದ್ದರೂ ಬ್ರಹ್ಮಚಾರಿ ಗಣೇಶ!

ಬ್ರಹ್ಮಚಾರಿ ವಿನಾಯಕನಿಗೆ ಎರಡು ಪತ್ನಿಯರು ಸಿದ್ಧಿ ಮತ್ತು ಬುದ್ಧಿ ಎಂದು. ಇದರ ಅರ್ಥ ಪ್ರವೃತ್ತಿ ಮಾರ್ಗದಲ್ಲಿ ಇದ್ದರೂ ನಾವು ಪವಿತ್ರತೆಯ ಬಲದಿಂದ ಸಿದ್ಧಿ ಮತ್ತು ಬುದ್ಧಿಯ ಪ್ರಾಪ್ತಿ ಮಾಡಿಕೊಳ್ಳಬಹುದು. ಸದ್ಗುಣಗಳ ಮೂರ್ತಿ, ಗುಣಗಳ ಗಣಿ, ದಿವ್ಯ ಬುದ್ಧಿಯದಾತಾ, ಗಣೇಶನಾಗಿರುವುದರಿಂದ ಪ್ರತಿಯೊಂದು ಕಾರ್ಯವು ಸೂಸುತ್ರವಾಗಲು, ಪ್ರಾರಂಭದಲ್ಲಿ ಗಣೇಶನ ಪೂಜೆಯು ಮಾಡುವ ವಾಡಿಕೆ ಇದೆ.

ಗಣಪನ ಎತ್ತರದ ಮೇಲಿನ ನಿರ್ಬಂಧ ಹಿಂತೆಗೆದ ಮಾಲಿನ್ಯ ಮಂಡಳಿಗಣಪನ ಎತ್ತರದ ಮೇಲಿನ ನಿರ್ಬಂಧ ಹಿಂತೆಗೆದ ಮಾಲಿನ್ಯ ಮಂಡಳಿ

ಗಣೇಶನ ವಿಶೇಷತೆ ಅಳವಡಿಸಿಕೊಳ್ಳೋಣ

ಗಣೇಶನ ವಿಶೇಷತೆ ಅಳವಡಿಸಿಕೊಳ್ಳೋಣ

ಪೂಜೆಯ ಜೊತೆಗೆ ನಾವು ನಮ್ಮ ಜೀವನದಲ್ಲಿ ಗಣೇಶನ ವಿಶೇಷತೆಗಳನ್ನು ಧಾರಣೆ ಮಾಡಿದರೆ ನಮ್ಮ ಜೀವನ ಸಾರ್ಥಕವಾಗುವುದು. ಅದಕ್ಕೆ ಆತ್ಮಜ್ಞಾನದ ಅವಶ್ಯಕತೆ ಇದೆ. ಇಲ್ಲಿ ಗಣಪತಿ ವ್ಯಕ್ತಿವಾಚಕ ಶಬ್ದ ಅಲ್ಲ ಅದು ಗುಣವಾಚಕ ಶಬ್ದವಾಗಿದೆ. ಆತ್ಮವು ಶರೀರ ಬಿಟ್ಟು ಹೋದ ಮೇಲೆ, ಪಂಚ ತತ್ವಗಳಲ್ಲಿ ವಿಲೀನವಾಗುತ್ತದೆ. ನಮ್ಮ ಜೀವನವು ಗಣಪತಿಯ ಹಾಗೆ ನಾಲ್ಕು ದಿನಗಳ ಬಾಳಾಗಿದೆ. ಆದ್ದರಿಂದ ಈ ಅಲ್ಪ ಸಮಯದಲ್ಲಿ ಗಣೇಶನ ಗುಣಗಳನ್ನು ಧಾರಣೆ ಮಾಡಿ, ನಮ್ಮ ಬಾಳನ್ನು ಬಂಗಾರ ಮಾಡಿಕೊಳ್ಳೊಬೇಕು.

ವಕ್ರ ತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ!
ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದ!!

English summary
Ganesha festival is celebrated by Hindus all over the world a a big festival. Every year this festival falls on 4th day of Badhrupada month(This year Sep 13). Here autor wishes peaceful Ganeshotsav everywhere in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X