ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣೇಶ ಚತುರ್ಥಿ ಸನ್ನಿಹಿತ: ಮೂರ್ತಿಗಳನ್ನು ಕೊಳ್ಳುವವರೇ ಇಲ್ಲ

|
Google Oneindia Kannada News

ಬೆಂಗಳೂರು, ಜುಲೈ 13: ಗಣೇಶ ಚತುರ್ಥಿ ಸನ್ನಿಹಿತವಾಗುತ್ತಿದ್ದು, ಬೆಂಗಳೂರಿನಲ್ಲಿ ಗಣೇಶ ಮೂರ್ತಿ ಮಾರಾಟಗಾರರಿಗೆ ಆತಂಕ ಶುರುವಾಗಿದೆ. ಗಣೇಶ ಚತುರ್ಥಿ ಒಂದು ತಿಂಗಳಿರುವಾಗಲೇ ಮೂರ್ತಿಗಳ ಮಾರಾಟ, ಖರೀದಿ ಆರಂಭವಾಗುತ್ತದೆ. ಆದರೆ ಈ ಬಾರಿ ಕೊರೊನಾ ಭೀತಿಯಿಂದ ಮೂರ್ತಿಗಳನ್ನು ಕೊಳ್ಳುವವರೇ ಇಲ್ಲದಂತಾದರೆ ಎನ್ನುವುದು ಮಾರಾಟಗಾರರ ಭೀತಿಯಾಗಿದೆ.

Recommended Video

Steve Jobs , ಹೆತ್ತವರಿಗೆ ಬೇಡವಾಗಿದ್ದ ಕೂಸು , ಜಗತ್ತನ್ನೇ ಗೆದ್ದ ಕಥೆ | Oneindia Kannada

ಮೂರ್ತಿ ತಯಾರಿ ಕೇವಲ ಒಂದು ದಿನದ ಕೆಲಸವಲ್ಲ, ಮೂರ್ತಿ ತಯಾರಿಸಲು ಎರಡು ತಿಂಗಳಿನಿಂದಲೇ ತಯಾರಿ ಆರಂಭವಾಗುತ್ತದೆ. ಪ್ರತಿ ವರ್ಷದ ಬೇಡಿಕೆ ಆಧಾರದಲ್ಲಿ ಮೂರ್ತಿಯನ್ನು ತಯಾರಿಸಲಾಗುತ್ತದೆ. ಆದರೆ ಈ ಬಾರಿ ಹೆಚ್ಚು ಮೂರ್ತಿಗಳನ್ನು ತಯಾರಿಸಿದರೆ ಖರೀದಿ ಕಡಿಮೆಯಾದರೆ ಎಂಬ ಆತಂಕ ಎದುರಾಗಿದೆ.

ಬೆಂಗಳೂರಲ್ಲಿ ಈ ಬಾರಿ 1654 ಪಿವಿಪಿ ಗಣೇಶ ವಿಗ್ರಹ ಬಳಕೆಬೆಂಗಳೂರಲ್ಲಿ ಈ ಬಾರಿ 1654 ಪಿವಿಪಿ ಗಣೇಶ ವಿಗ್ರಹ ಬಳಕೆ

ಮೂರ್ತಿ ಮಾರಾಟಗಾರರಾದ ಶಿಖರ್ ಅವರು ಮಾತನಾಡಿ, ಇದುವರೆಗೆ ಒಂದೇ ಒಂದು ಆರ್ಡರ್ ಬಂದಿಲ್ಲ. ಸಾಮಾನ್ಯವಾಗಿ ಜೂನ್ ಅಂತ್ಯದಿಂದಲೇ ಆರ್ಡರ್‌ಗಳು ಬರಲು ಆರಂಭವಾಗುತ್ತದೆ. ಜುಲೈ ಮಧ್ಯ ವಾರಕ್ಕೆ ಬಂದರೂ ಒಂದೇ ಒಂದು ಆರ್ಡರ್ ಬಂದಿಲ್ಲ ಎಂದಿದ್ದಾರೆ.

ಚೌತಿ ಹಬ್ಬ ಮುಗಿಯುತ್ತದ್ದಂತೆ ಮುಂದಿನ ವರ್ಷಕ್ಕೆ ಮೂರ್ತಿಗಳ ತಯಾರಿಕೆ ಆರಂಭವಾಗುತ್ತವೆ. ಈಗ ಯಾರೂ ಮೂರ್ತಿಗಳನ್ನು ಕೊಳ್ಳದಿದ್ದರೆ ಇಡೀ ಒಂದು ವರ್ಷದ ಶ್ರಮ ವ್ಯರ್ಥವಾಗಲಿದೆ. ಕುಟುಂಬದವರಿಗೂ ತೊಂದರೆಯಾಗಲಿದೆ. ಜನವರಿಯಲ್ಲೇ ಕೊರೊನಾ ಸೋಂಕಿನ ಬಗ್ಗೆ ಮಾಹಿತಿ ಬಂದಿದ್ದರಿಂದ ಶೇ.50 ರಷ್ಟು ಮೂರ್ತಿ ತಯಾರಿಕೆಯನ್ನು ನಿಲ್ಲಿಸಿದ್ದೇವೆ.

ಸರ್ಕಾರದ ನೋಡಿಫಿಕೇಷನ್ ಬಂದಿಲ್ಲ

ಸರ್ಕಾರದ ನೋಡಿಫಿಕೇಷನ್ ಬಂದಿಲ್ಲ

ಗಣೇಶನ ಮೂರ್ತಿ ಮಾರಾಟದ ಕುರಿತು ಸರ್ಕಾರದಿಂದ ಯಾವುದೇ ನೋಟಿಫಿಕೇಷನ್ ಬಂದಿಲ್ಲ. ಖಾಸಗಿ ಕಂಪನಿಗಳಿಂದ ಸಾಕಷ್ಟು ಲೋನ್‌ಗಳನ್ನು ಪಡೆದುಕೊಂಡಿದ್ದೇವೆ. ಮೂರ್ತಿಗಳು ಮಾರಾಟವಾಗದಿದ್ದರ ಸರಿಯಾದ ಸಮಯಕ್ಕೆ ಹಣವನ್ನು ಹಿಂದಿರುಗಿಸುತ್ತೇವೆ ಎಂಬ ನಂಬಿಕೆಯೂ ಇಲ್ಲ ಎಂದಿದ್ದಾರೆ.

ಸುಮಾರು 500 ಕುಟುಂಬಗಳು ಇದೇ ಕಸುಬನ್ನು ನಂಬಿದೆ

ಸುಮಾರು 500 ಕುಟುಂಬಗಳು ಇದೇ ಕಸುಬನ್ನು ನಂಬಿದೆ

ಬೆಂಗಳೂರಿನಲ್ಲಿ ಸುಮಾರು 500 ಕುಟುಂಬಗಳು ಇದೇ ಕಸುಬನ್ನು ನಂಬಿವೆ, ಒಟ್ಟು ನಾಲ್ಕು ತಲೆಮಾರು ಈ ಗಣೇಶನ ಮೂರ್ತಿಯನ್ನು ತಯಾರಿಸಲು ಹಗಲೂ ರಾತ್ರಿ ಶ್ರಮ ಪಡುತ್ತಿದೆ. ಈ 500 ಕುಟುಂಬಗಳು ಗಣೇಶ ಚತುರ್ಥಿಯಲ್ಲಿ ಮಾರಾಟವಾಗುವ ಮೂರ್ತಿಯನ್ನು ನಂಬಿಕೊಂಡಿದ್ದಾರೆ. ಅದೇ ಅವರ ಜೀವನಕ್ಕೆ ಆಧಾರ. ಸರ್ಕಾರವು ಯಾವುದೇ ನೋಟಿಫಿಕೇಷನ್ ಹೊರಡಿಸಿದ ಕಾರಣ ನಾವು ಮೂರ್ತಿಗಳನ್ನು ಮಾರಾಟ ಮಾಟಬೇಕೇ ಬೇಡವೇ ಎಂಬುದೇ ದೊಡ್ಡ ತಲೆನೋವಾಗಿದೆ ಎಂದು ಜಿತಿನ್ ಹೇಳಿದ್ದಾರೆ.

3 ರಿಂದ 7 ಅಡಿಯಷ್ಟು ಎತ್ತರದ ಮೂರ್ತಿ

3 ರಿಂದ 7 ಅಡಿಯಷ್ಟು ಎತ್ತರದ ಮೂರ್ತಿ

ತಾವು 3-4 ಇಂಚಿನಿಂದ 7 ಅಡಿ ಎತ್ತರದ ಮೂರ್ತಿಯನ್ನು ತಯಾರಿಸುತ್ತೇವೆ. ಸಾಮಾಜಿಕ ಅಂತರವನ್ನೂ ಕಾಯ್ದುಕೊಂಡಿದ್ದೇವೆ. ಈ ಬಾರಿ ಹೆಚ್ಚಿನ ಮೂರ್ತಿಗಳು ಮಾರಾಟವಾಗುತ್ತವೆ ಎಂದು ಅನಿಸುತ್ತಿಲ್ಲ. ಸಣ್ಣ ಮೂರ್ತಿಗಳಾದರೂ ಮಾರಾಟವಾಗಬಹುದು ಎಂಬ ಭರವಸೆಯಲ್ಲಿದ್ದೇವೆ.

25 ಸಾವಿರ ಗಣೇಶನ ಮೂರ್ತಿಗಳು

25 ಸಾವಿರ ಗಣೇಶನ ಮೂರ್ತಿಗಳು

ಒಟ್ಟು ನಮ್ಮ ಬಳಿ 25 ಸಾವಿರ ಗಣೇಶನ ಮೂರ್ತಿಗಳಿವೆ. ಚೌತಿ ಹಬ್ಬಕ್ಕೆ ಆರು ವಾರಗಳು ಮಾತ್ರ ಉಳಿದಿವೆ. ಅಷ್ಟರೊಳಗೆ ಮೂರ್ತಿಗಳನ್ನು ಮಾರಾಟ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ.

English summary
Ganesha Chaturthi Around The Corner , Idol Makers In Bengaluru Say They are bracing to Face huge losses amid the COVID19 Pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X