ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Ganesh Chaturthi 2022 : ಗಣೇಶ ಚತುರ್ಥಿ ಪೂಜಾ ವಿಧಾನ, ಶುಭ ಮುಹೂರ್ತ ಹಾಗೂ ಮಹತ್ವ

|
Google Oneindia Kannada News

ಗಣೇಶನನ್ನು ನಿಮ್ಮ ಮನೆಗಳಿಗೆ ಬರಮಾಡಿಕೊಳ್ಳಲು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಈ ಬಾರಿ ಕೊರೊನಾದ ನಡುವೆ ಹಬ್ಬ ಕೊಂಚ ಮಂಕಾದರೂ ಹಬ್ಬದ ಆಚರಣೆ ಎಂದಿನಂತೆ ನಡೆಯುತ್ತದೆ.

ಏಕೆಂದರೆ ನೆಂಟರಿಷ್ಟರ ಆಗಮನ ಕಡಿಮೆಯಾಗಲಿದೆ, ಬೀದಿಬೀದಿಗಳನ್ನು ಗಣಪತಿ ಮೂರ್ತಿಗಳನ್ನಿಟ್ಟು ಪೂಜೆ ಮಾಡುವುದು ಕೂಡ ಕಡಿಮೆಯಾಗಲಿದೆ. ಮಣ್ಣಿನಿಂದ ಗಣಪನನ್ನು ತಯಾರಿಸಿ ಪೂಜೆ ಮಾಡಿ ಮೆರವಣಿಗೆ ನಡೆಸಿ ನೀರಿನಲ್ಲಿ ವಿಸರ್ಜಿಸಲಾಗುತ್ತದೆ.

ಪ್ರಥಮ ಪೂಜೆಗೆ ಭಾಜನರಾಗಿರುವ ಗಣಪತಿಯ ಪೂಜೆಯನ್ನು ಗಣಪನ ಹಬ್ಬದಂದು ವಿಜೃಂಭಣೆಯಿಂದ ನೆರವೇರಿಸಲಾಗುತ್ತದೆ. ಗಣಪತಿ ಬಪ್ಪಾ ಮೋರೆಯಾ ಮಂಗಳ ಮೂರ್ತಿ ಮೋರೆಯಾ ಎಂಬ ಉದ್ಘೋಷದೊಂದಿಗೆ ಗಣಪತಿಯನ್ನು ನೀರಿನಲ್ಲಿ ವಿಸರ್ಜಿಸಲಾಗುತ್ತದೆ.

ಮನೆಯಲ್ಲಿ ನೀವು ಗಣೇಶನನ್ನು ಸ್ಥಾಪಿಸಿ ಮೂರ್ತಿಗೆ ಪೂಜೆಯನ್ನು ಮಾಡುತ್ತೀರಿ ಎಂದಾದಲ್ಲಿ ಕೆಲವೊಂದು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ವಿಧಿವತ್ತಾಗಿ ಮನೆಯಲ್ಲಿ ಗಣಪನ ಪೂಜೆಯನ್ನು ನಡೆಸಬೇಕು.

ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಗಣೇಶ ಉತ್ಸವ ಆರಂಭವಾಗುತ್ತದೆ ಮತ್ತು ಈ 10 ದಿನಗಳ ಗಣೇಶೋತ್ಸವವನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಗಣೇಶನು ಭದ್ರ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಜನಿಸಿದನು ಮತ್ತು ಈ ದಿನಾಂಕವನ್ನು ಗಣೇಶ ಚತುರ್ಥಿಯೆಂದು ಆಚರಿಸಲಾಗುತ್ತದೆ.

ಈ ಬಾರಿ 10 ದಿನಗಳ ಗಣೇಶ ಹಬ್ಬವು ಆಗಸ್ಟ್ 31 ರಿಂದ ಆರಂಭವಾಗಲಿದೆ.

 ಗಣೇಶ ಮೂರ್ತಿ ಸ್ಥಾಪನೆ ವಿಧಾನ

ಗಣೇಶ ಮೂರ್ತಿ ಸ್ಥಾಪನೆ ವಿಧಾನ

ಸ್ನಾನ ಮಾಡಿ, ಶುಭ್ರ ಬಟ್ಟೆ ತೊಟ್ಟು, ಪೂಜಾ ಸ್ಥಳವನ್ನು ಶುದ್ಧೀಕರಿಸಬೇಕು, ಬಳಿಕ ದೇವರ ಮಂಟಪ ಅಥವಾ ಮೇಜು, ಸ್ಟೂಲ್ ಏನೇ ಇರಲಿ ಅದರ ಮೇಲೆ ಕೆಂಪು ಬಟ್ಟೆಯನ್ನು ಹಾಸಬೇಕು. ಮಧ್ಯಭಾಗದಲ್ಲಿ, ಸ್ವಲ್ಪ ಅಕ್ಕಿ ಹರಡಿ ಮತ್ತು ಅಕ್ಕಿಯ ಪದರದ ಮೇಲೆ ಗಣೇಶ ಮೂರ್ತಿಯನ್ನಿರಿಸಿ. ಗಣೇಶನ ಸೊಂಡಿಲು ಎಡಭಾಗದಲ್ಲಿದೆ ಮತ್ತು ಮೂರ್ತಿಯ ಬಣ್ಣವು ಕೆಂಪು ಇಲ್ಲದಿದ್ದರೆ ಬಿಳಿ ಬಣ್ಣದಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

 ಗಣೇಶ ಚತುರ್ಥಿಯ ಮುಹೂರ್ತ

ಗಣೇಶ ಚತುರ್ಥಿಯ ಮುಹೂರ್ತ

ಭಾದ್ರಪದ ಮಾಸ, ಶುಕ್ಲ ಪಕ್ಷ, ಚತುರ್ಥಿಯಂದು ಆಗಸ್ಟ್ 31 ಬುಧವಾರಪೂಜೆಗೆ ಮುಹೂರ್ತ: ಬೆಳಿಗ್ಗೆ 11.05 ರಿಂದ ಮಧ್ಯಾಹ್ನ 1.38 ರವರೆಗೆ.

 ಗಣೇಶ ಚತುರ್ಥಿ ಮಹತ್ವ ಹೀಗಿದೆ

ಗಣೇಶ ಚತುರ್ಥಿ ಮಹತ್ವ ಹೀಗಿದೆ

ಗಣೇಶ ಚತುರ್ಥಿ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಗಣೇಶ ಎಂದರೆ ಮಕ್ಕಳಿಂದ ಹಿಡಿದು ಬಹುತೇಕ ಎಲ್ಲರಿಗೂ ಅಚ್ಚುಮೆಚ್ಚಿನ ದೇವರು. ದೇಶದಲ್ಲಷ್ಟೇ ಅಲ್ಲದೆ, ವಿದೇಶದಲ್ಲೂ ವಿನಾಯಕ ಚತುರ್ಥಿಯನ್ನು ಶ್ರದ್ಧಾಭಕ್ತಿಯಿಂದ, ಸಂಭ್ರಮದಿಂದ ಆಚರಿಸಲಾಗುತ್ತದೆ.

ಹಿಂದೂಗಳು ಅತ್ಯಂತ ಆರಾಧಿಸುವ ಮತ್ತು ಆಚರಿಸುವ ದೇವರುಗಳಲ್ಲಿ ಗಣೇಶನೂ ಒಬ್ಬ. ಗಣೇಶನ ಜನನವನ್ನು ಗಣೇಶ ಚತುರ್ಥಿಯನ್ನಾಗಿ 10 ದಿನಗಳ ಕಾಲ ಉತ್ಸವವನ್ನಾಗಿ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ವಿನಾಯಕ ಚವಿತಿ ಅಥವಾ ವಿನಾಯಕ ಚತುರ್ಥಿ ಎಂದೂ ಕರೆಯಲ್ಪಡುವ ಗಣೇಶನನ್ನು ಬುದ್ಧಿವಂತಿಕೆ, ಸಮೃದ್ಧಿ, ಅದೃಷ್ಟ ಮತ್ತು ಕೆಟ್ಟದ್ದನ್ನು ನಾಶಮಾಡುವ ದೇವರು ಎಂದು ಗೌರವಿಸಲಾಗುತ್ತದೆ. ಈ ಹಿನ್ನೆಲೆ ಗಜಮುಖನನ್ನು ವಿಘ್ನನಿವಾರಕ ಎಂದೂ ಕರೆಯಲಾಗುತ್ತದೆ.

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಬೃಹತ್ ಗಾತ್ರದ ಪ್ರತಿಮೆಗಳನ್ನು ಸ್ಥಾಪಿಸುವುದರಲ್ಲಿ ಜನರು ಬಹಳ ಸಂತೋಷಪಡುತ್ತಾರೆ . ತಮ್ಮ ಅತ್ಯಂತ ಪ್ರಿಯವಾದ ದೇವರ ಆರಾಧನೆ ಮಾಡಲು ಸಂತೋಷಪಡುತ್ತಾರೆ ಮತ್ತು ಅವರ ಆಶಯಗಳನ್ನು ಈಡೇರಿಸುತ್ತಾರೆ. ಅಲ್ಲದೆ, ಮನೆಗಳಲ್ಲೂ ವಿನಾಯಕ ಚತುರ್ಥಿ ಪೂಜೆ ಮತ್ತು ವ್ರತವನ್ನು ಮಾಡಲಾಗುತ್ತದೆ.

 ಗಣೇಶ ಚತುರ್ಥಿಯ ಮೊದಲು ಗೌರಿ ಹಬ್ಬ

ಗಣೇಶ ಚತುರ್ಥಿಯ ಮೊದಲು ಗೌರಿ ಹಬ್ಬ

ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಹಬ್ಬವೂ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಅಂತಹ ಹಬ್ಬಗಳಲ್ಲಿ ಗೌರಿ-ಗಣೇಶ ಹಬ್ಬವೂ ಅತ್ಯಂತ ಮುಖ್ಯವಾದುದು. ಭಾದ್ರಪದ ಮಾಸದಲ್ಲಿ ಬರುವ ಮೊದಲ ಹಬ್ಬವೇ ಗೌರಿಹಬ್ಬ. ಈ ಗೌರಿ ಹಬ್ಬದ ಆಚರಣೆಗೆ ಕಥೆಗಳಿವೆ.

ಬಂಧು ಬಾಂಧವರನ್ನು ಭಾವೈಕ್ಯತೆಯನ್ನು ಗಟ್ಟಿಗೊಳಿಸುವುದು ಈ ಹಬ್ಬದ ವಿಶೇಷ. ತವರು ಮನೆಗೆ ಬಂದ ಹೆಣ್ಣು ಮಕ್ಕಳು ಉಡುಗೊರೆಯನ್ನು ಪಡೆದುಕೊಳ್ಳುವುದು. ಹೆತ್ತವರು ಒಡ ಹುಟ್ಟಿದವರು ಚೆನ್ನಾಗಿರಲಿ ಎಂದು ಹಾರೈಸುವುದು ಗೌರಿ ಹಬ್ಬದ ಮಹತ್ವವಾಗಿದೆ. ಗೌರಿಗೆ ಸ್ವರ್ಣಗೌರಿ ಎಂಬ ಹೆಸರು ಬಂದಿದ್ದು , ಶಿವನಿಂದ

English summary
According to Hindu customs, Ganesh Chaturthi is the birth of the elephant-headed deity Ganesha. Lord Ganesh is believed to be the god of prosperity and wisdom. The day is observed on the fourth day of the month of Bhadrapada (August-September), which falls on the sixth month of the Hindu calendar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X