ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣೇಶ ಹಬ್ಬ ಹಾಪ್ ಕಾಮ್ಸ್ ವಿಶೇಷ ಮಾರಾಟ

By Mahesh
|
Google Oneindia Kannada News

ಬೆಂಗಳೂರು, ಸೆ.9: ಹಾಪ್‌ಕಾಮ್ಸ್ ಸಂಸ್ಥೆಯು 'ಗೌರಿ ಗಣೇಶ ಹಬ್ಬದ' ಪ್ರಯುಕ್ತ ವಿಶೇಷ ಮಾರಾಟ ವ್ಯವಸ್ಥೆಯನ್ನು ಅಯೋಜಿಸಿದೆ. ಹಬ್ಬಕ್ಕೆ ಅವಶ್ಯವಿರುವಂತಹ ಹೂ. ಪೂಜಾ ಸಾಮಗ್ರಿಗಳು ಹಾಗೂ ಹಣ್ಣು, ತರಕಾರಿಗಳು ನ್ಯಾಯಯುತ ಬೆಲೆಗಳಲ್ಲಿ ಒಂದೇ ಸೂರಿನಡಿ ಗ್ರಾಹಕರ ಅನುಕೂಲಕ್ಕಾಗಿ ಪೂರೈಸುವ 'ವಿಶೇಷ ಮಾರಾಟ' ವ್ಯವಸ್ಥೆಯನ್ನು ದಿನಾಂಕ 9/9/2010ರಿಂದ ದಿನಾಂಕ 11/09/2010ರವರೆಗೆ ಹಮ್ಮಿಕೊಂಡಿದೆ.

ಬೆಂಗಳೂರಿನಾದ್ಯಂತ ಕಾರ್ಯನಿರ್ವಹಿಸುತ್ತಿರುವ 239 ಮಳಿಗೆಗಳಲ್ಲಿ, ಪ್ರಧಾನ ಕಚೇರಿ ಹಾಗೂ ಕೆಳಕಂಡಂತೆ ಆಯ್ದ 14ಸ್ಥಳಗಳಲ್ಲಿ ಹಡ್ಸನ್ ವೃತ್ತ ಸ್ಥಳಗಳಲ್ಲಿ "ವಿಶೇಷ ಮಾರಾಟ" ವ್ಯವಸ್ಥೆಯನ್ನು ಆಯೋಜಿಸಲಾಗಿದೆ.

ದೇವಿ ನಗರ (ಆರ್.ಎಂ.ವಿ. ಅಪಾರ್ಟ್‌ಮೆಂಟ್ ಎದುರು, ಲಾಲ್‌ಬಾಗ್ ಪಶ್ಷಿಮ ದ್ವಾರ , ಬ್ರಿಗೇಡ್ ಮಿಲೇನಿಯಮ್, ಜೆ.ಪಿ. ನಗರ, ಮಹದೇವಪುರ. ಬಿ.ಡಿ.ಎ. ಕಚೇರಿ ಹತ್ತಿರ, ರಾಮಮೂರ್ತಿ ನಗರ, ನಂಜಪ್ಪ ವೃತ್ತ ವಿದ್ಯಾರಣ್ಯಪುರ, ಸುಬ್ರಮಣ್ಯ ನಗರ, ಕೆಂಗೇರಿ ಬಸ್ ನಿಲ್ದಾಣ/ಶಾಸ್ತ್ರಿ ಕೆಫೆ ಮುಂಭಾಗ, ಹೂಡಿ ಬಸ್ ನಿಲ್ದಾಣ, ಓ ಫಾರಂ ಸರ್ಕಲ್ ಬಿ.ಡಿ.ಎ. ಕಾಂಪ್ಲೆಕ್ಸ್, ಇಂದಿರಾನಗರ, ಬಿ.ಡಿ.ಎ. ಕಾಂಪ್ಲೆಕ್ಸ್ , ಹೆಚ್.ಎಸ್.ಆರ್. ಲೇಔಟ್, ಬಿ.ಡಿ.ಎ. ಕಾಂಪ್ಲೆಕ್ಸ್ , ಕೋರಮಂಗಲ , ಬಿ.ಡಿ.ಎ. ಕಾಂಪ್ಲೆಕ್, ನಾಗರಬಾವಿ.

ವಿಶೇಷ ಮಾರಾಟ ವ್ಯವಸ್ಥೆಯ ಮುಖ್ಯಾಂಶಗಳು:

* ರೈತರ ತೋಟಗಳಿಂದ ನೇರ ಖರೀದಿ ವ್ಯವಸ್ಥೆ.
* ರೈತರ ಫಸಲಿಗೆ ಉತ್ತಮ ಧಾರಣೆ ಒದಗಿಸುವುದು.
* ಹೆಚ್ಚು ಪರಿಮಾಣದ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು.
* ವಿವಿಧ ಹಣ್ಣ ತರಕಾರಿಗಳು, ಹೂ ಹಾಗೂ ಪೂಜಾ ಸಾಮಗ್ರಿಗಳು ಕೇಂದ್ರ, ಕಚೇರಿ ಆವರಣದ ವಿಶೇಷ ಮಾರಾಟ ಮಳಿಗೆಯಲ್ಲಿ ಒಂದೇ ಸೂರಿನಡಿ ಲಭ್ಯತೆ.
* ಹಬ್ಬಕ್ಕೆ ಅವಶ್ಯಕವಾದ ಬಾಳೆಕಂದು, ಮಾವಿನ ಸೊಪ್ಪು, ಹೂ, ಪೂಜಾ ಸಾಮಗ್ರಿಗಳ ಮಾರಾಟ
* ನಂದಿನಿ ಬ್ರಾಂಡ್‌ನ, ಹಾಲು, ಹಾಲಿನ ಉತ್ಪನ್ನಗಳು ಹಾಗೂ ಕೆ.ಓ.ಎಫ್‌ನ ಖಾದ್ಯ ತೈಲಗಳು ಗ್ರಾಹಕರ ಅನುಕೂಲಕ್ಕಾಗಿ ಉಚಿತ ವಾಹನದ ನಿಲುಗಡೆ ಸೌಲಭ್ಯ ಕಲ್ಪಿಸಿದೆ.


ಗಣೇಶ ಹಬ್ಬದ ಪ್ರಯುಕ್ತ ನಿಮ್ಮ ಆಪ್ತರಿಗೆ ಹೂಗುಚ್ಛ ಕಳಿಸಿ

ಈ ಮಾರಾಟ ಸೌಲಭ್ಯವನ್ನು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಂಡು ಯಶ್ವಸಿಗೊಳಿಸಬೇಕಾಗಿ ಹಾಪ್‌ಕಾಮ್ಸ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X