• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶರನ್ನವರಾತ್ರಿಯ 21ನೇ ದಿನಕ್ಕೇ ದೀಪಾವಳಿ; ಏನಿದು ರಾಮಾಯಣ ನಂಟು?

By ಅನಿಲ್ ಆಚಾರ್
|
   Diwali / Deepavali 2018 : ನವರಾತ್ರಿ 21ನೇ ದಿನ ದೀಪಾವಳಿ ಹಬ್ಬ | ಇದುಕ್ಕೂ ರಾಮಾಯಣಕ್ಕೂ ನಂಟಿದ್ಯಾ?

   ಕಾರ್ತೀಕ ಮಾಸದ ಕೃಷ್ಣಪಕ್ಷದ ಚತುರ್ದರ್ಶಿಯ ಹಿಂದಿನ ದಿನದಿಂದಲೇ ಆರಂಭವಾಗುವ ದೀಪಾವಳಿಯು ತುಂಬ ವಿಶಿಷ್ಟವಾದ ಹಬ್ಬ. ಈ ಹಬ್ಬದ ಸಂದರ್ಭದಲ್ಲಿ ವ್ಯಾಪಾರಸ್ಥರು, ಕೃಷಿಕರು ಆ ವರ್ಷದ ಆದಾಯ ಹಾಗೂ ವ್ಯಯವನ್ನು ಲೆಕ್ಕ ಹಾಕಿ, ಉಳಿದ ಹಣದಲ್ಲಿ ಮನೆಯವರಿಗೆ ಚಿನ್ನ-ಬೆಳ್ಳಿ ಮತ್ತಿತರ ವಸ್ತುಗಳನ್ನು ಖರೀದಿಸುವ ಪದ್ಧತಿಯೂ ನಡೆದುಕೊಂಡು ಬಂದಿದೆ.

   ಹೌದು, ಹೇಗೆ ಶರನ್ನವರಾತ್ರಿಗೆ ಪ್ರಾಶಸ್ತ್ಯ ಇದೆಯೋ ಅದಾಗಿ ಇಪ್ಪತ್ತೊಂದನೇ ದಿನಕ್ಕೆ ಆಚರಿಸುವ ದೀಪಾವಳಿ ಕೂಡ ಬಹಳ ವಿಶಿಷ್ಟ. ಅಸುರ ವಧೆಯ ವಿಜಯೋತ್ಸವದ ರೂಪಕವಾಗಿ, ದ್ಯೋತಕವಾಗಿ ಕೂಡ ದೀಪಾವಳಿಯನ್ನು ಆಚರಿಸಲಾಗುತ್ತದೆ. ಅದರಲ್ಲೂ ದಸರಾ ಮುಗಿದ ಇಪ್ಪತ್ತೊಂದನೇ ದಿನವೇ ಏಕೆ ದೀಪಾವಳಿಯ ಆಚರಣೆ ಮಾಡಲಾಗುತ್ತದೆ ಎಂಬುದು ಆಸಕ್ತಿಕರವಾದದ್ದು.

   ಬೆಳಕಿನ ಹಬ್ಬ ದೀಪಾವಳಿ ಹೀಗಿದ್ದರೆ ಚೆನ್ನ: 10 ಸಲಹೆಗಳು

   ನಿಮಗೆ ಇದನ್ನು ತಿಳಿಸಬೇಕು ಅಂದರೆ ರಾಮಾಯಣದ ಕಥೆಯನ್ನು ಹೇಳಬೇಕಾಗುತ್ತದೆ. ಮರ್ಯಾದಾ ಪುರುಷೋತ್ತಮನಾದ ರಾಮನು ಲಂಕೆಯಲ್ಲಿ ರಾವಣನನ್ನು ಸಂಹಾರ ಮಾಡಿದ. ಆ ನಂತರ ತನ್ನ ಪತ್ನಿ ಜಾನಕಿಯನ್ನು ಬಂಧನದಿಂದ ಮುಕ್ತಗೊಳಿಸಿ, ವಾಪಸ್ ಅಯೋಧ್ಯೆಗೆ ಕರೆತಂದ. ಹೀಗೆ ಅವನು ಲಂಕೆಯಿಂದ ಅಯೋಧ್ಯೆಗೆ ಬರಲು ತೆಗೆದುಕೊಂಡ ಸಮಯ ಇಪ್ಪತ್ತೊಂದು ದಿನವಂತೆ.

   ರಾವಣನ ವಧೆ ಮಾಡಿ ಅಯೋಧ್ಯೆಗೆ ಹಿಂತಿರುಗಿದ ದಿನ

   ರಾವಣನ ವಧೆ ಮಾಡಿ ಅಯೋಧ್ಯೆಗೆ ಹಿಂತಿರುಗಿದ ದಿನ

   ಯಾವ ದಿನದಂದು ಶ್ರೀರಾಮನು ಅಯೋಧ್ಯೆಗೆ ಹಿಂತಿರುಗಿದನೋ ಅಂದು ಅಲ್ಲಿನ ಜನರು ಭಾರೀ ದೊಡ್ಡ ಹಬ್ಬವನ್ನೇ ಆಚರಿಸಿದರು. ರಾವಣನ ವಧೆ ಮಾಡಿದ ಸಂಭ್ರಮಾಚರಣೆ ಅದಾಗಿತ್ತು. ಆದ್ದರಿಂದ ಆಗಿನಿಂದಲೂ ಈ ಪದ್ಧತಿ ನಡೆದುಕೊಂಡು ಬರುತ್ತಿದೆ. ಶ್ರೀರಾಮನೆಂಬ ಬೆಳಕು ಅಯೋಧ್ಯೆಗೆ ಮತ್ತೆ ಪ್ರವೇಶಿಸಿದ ದಿನವೆಂದು ಈಗಲೂ ಅಲ್ಲಿನ ಜನರು ದೀಪೋತ್ಸವ ಮಾಡುತ್ತಾರೆ.

   ಸುದೀರ್ಘವಾದ ಹಬ್ಬದ ಆಚರಣೆ

   ಸುದೀರ್ಘವಾದ ಹಬ್ಬದ ಆಚರಣೆ

   ದೀಪಾವಳಿಯ ಹಿಂದಿನ ದಿನ ನೀರು ತುಂಬುವ ಹಬ್ಬ ಎಂದು ಮಾಡುತ್ತಾರೆ. ಮರು ದಿನ ನರಕ ಚತುರ್ದಶಿ, ಆ ನಂತರ ಅಮಾವಾಸ್ಯೆ ಲಕ್ಷ್ಮಿ ಪೂಜೆ ಹಾಗೂ ಅದಾದ ಮರು ದಿನ ಬಲಿ ಪಾಡ್ಯಮಿ ಆಚರಿಸಲಾಗುತ್ತದೆ. ಇಷ್ಟು ಸುದೀರ್ಘವಾದ ಹಬ್ಬದ ಆಚರಣೆ ಆದ ಮೇಲೆ ವರ್ಷ ತೊಡಕು ಎಂದು ಮಾಡುವ ಪದ್ಧತಿ ಕೆಲವೆಡೆ ಇದೆ.

   ಜ್ಞಾನದ ಬೆಳಕಿನ ಉತ್ಸವ ದೀಪಾವಳಿ ಶುಭತರಲಿ

   ಅಮಾವಾಸ್ಯೆ ಲಕ್ಷ್ಮೀ ಪೂಜೆಗೆ ವಿಶೇಷ ಪ್ರಾಶಸ್ತ್ಯ

   ಅಮಾವಾಸ್ಯೆ ಲಕ್ಷ್ಮೀ ಪೂಜೆಗೆ ವಿಶೇಷ ಪ್ರಾಶಸ್ತ್ಯ

   ಹಾಗಂತ ಅಲ್ಲಿಗೇ ದೀಪಾವಳಿ ಹಬ್ಬದ ಕೊನೆ ಆಗುವುದಿಲ್ಲ. ತುಳಸಿ ಹಬ್ಬ ಅಥವಾ ಕಿರು ದೀಪಾವಳಿ ಎಂದು ಕರೆಯುವ ದಿನದ ತನಕ ಮುಂದುವರಿಯುತ್ತದೆ. ದೀಪಾವಳಿ ಸಂದರ್ಭದಲ್ಲಿ ಬರುವ ಅಮಾವಾಸ್ಯೆಯ ಲಕ್ಷ್ಮಿ ಪೂಜೆಗೆ ವಿಶೇಷ ಪ್ರಾಶಸ್ತ್ಯ ಇದೆ. ಆ ದಿನ ಲಕ್ಷ್ಮಿ ದೇವಿಯ ಆರಾಧನೆ ಮಾಡಿದರೆ ಹಾಗೂ ದಾನ-ಧರ್ಮ ಮಾಡಿದರೆ ಅದರ ಫಲ ಹೆಚ್ಚು ಎಂಬ ನಂಬಿಕೆ ಇದೆ.

   ಹಣತೆ ಹಚ್ಚುತ್ತೇನೆ, ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ!

   ನರಕ ಚತುರ್ದಶಿ ಹಿನ್ನೆಲೆಯಿದು

   ನರಕ ಚತುರ್ದಶಿ ಹಿನ್ನೆಲೆಯಿದು

   ಹಿರಣ್ಯ ಕಶ್ಯಪುವಿನ ಸೋದರ ಹಿರಣ್ಯಾಕ್ಷ ಭೂ ದೇವಿಯನ್ನು ಹೊತ್ತುಕೊಂಡು ಸಮುದ್ರದ ಆಳದಲ್ಲಿ ಸೇರಿಕೊಂಡು ಬಿಡ್ತಾನೆ. ಆಗ ಮಹಾ ವಿಷ್ಣುವು ವರಾಹ ರೂಪವನ್ನು ತಾಳಿ, ಹಿರಣ್ಯಾಕ್ಷನನ್ನು ಕೊಂದು, ಭೂ ದೇವಿಯನ್ನು ರಕ್ಷಿಸುತ್ತಾನೆ. ಆಗ ಮಹಾ ವಿಷ್ಣುವಿನ ಮೋಹಕ್ಕೆ ಭೂ ದೇವಿ ಒಳಗಾಗುತ್ತಾಳೆ. ಆಗ ವಿಷ್ಣುವಿನಿಂದ ಭೂ ದೇವಿಗೆ ನರಕಾಸುರ ಎಂಬ ರಾಕ್ಷಸನ ಜನನ ಆಗುತ್ತದೆ. ಮುಂದೆ ಅವನನ್ನು ವಿಷ್ಣುವೇ ಕೊಲ್ಲುತ್ತಾನೆ. ಹಾಗೆ ನರಕಾಸುರನನ್ನು ಕೊಂದ ಸ್ಮರಣೆಗಾಗಿ ನರಕ ಚತುರ್ದಶಿ ಆಚರಿಸುವ ರೂಢಿಯೂ ಇದೆ. ಇನ್ನು ಅಜ್ಞಾನ ಎಂಬ ಅಂಧಕಾರವನ್ನು ತೊಲಗಿಸುವ, ದುರ್ಬುದ್ಧಿ- ದುರಾಲೋಚನೆ ಎಂಬ ನಮ್ಮ ಮನಸಿನೊಳಗಿನ ತಮಸ್ಸು ತೊಲಗಿಸುವ, ರಾಕ್ಷಸ ಸಂಹಾರ ಮಾಡುವ ಹಬ್ಬವಾಗಿಯೂ ದೀಪಾವಳಿ ಆಚರಿಸಲಾಗುತ್ತದೆ.

   ಪಟಾಕಿ ಮಾರಾಟಕ್ಕೆ ನಿಷೇಧವಿಲ್ಲ, ಸುಪ್ರೀಂ ವಿಧಿಸಿದ ಷರತ್ತುಗಳೇನು?

   English summary
   Why Deepavali celebrated after 21 days of Dasara? Here is an interesting story. As per Hindu mythology, in Ramayana after defeating demon Ravana, Sri Rama took 21 days to travel from Lanka (Sri Lanka) to Ayodhya. So, Deepavali celebrated after 21 days of Dasara.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more