ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಂಪ್ರದಾಯಿಕ ಗೂಡುದೀಪ ತಯಾರಿಸಿ ಚೀನಿ ವಸ್ತುಗಳಿಗೆ ಸೆಡ್ಡು ಹೊಡೆದ ಉಡುಪಿ ಯುವತಿಯರ ತಂಡ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ನವೆಂಬರ್ 2: ಬೆಳಕಿನ ಹಬ್ಬ ದೀಪಾವಳಿಯ ಅಂದ ಹೆಚ್ಚಿಸುವುದು ಬಣ್ಣ ಬಣ್ಣದ ಗೂಡು ದೀಪಗಳು. ಮನೆ ಮುಂದೆ ಕಂಗೊಳಿಸುವ ಸಾಂಪ್ರದಾಯಿಕ ಗೂಡುದೀಪಗಳನ್ನು ತಯಾರಿಸುವುದೇ ಒಂದು ವಿಶಿಷ್ಟ ಕಲೆ. ಇಂತಹ ಕಲೆಯನ್ನು ಕರಗತ ಮಾಡಿಕೊಂಡ ಯುವತಿಯರ ತಂಡ ಬಗೆಬಗೆಯ ಗೂಡುದೀಪಗಳನ್ನು ತಯಾರಿಸುತ್ತಿದೆ.

ಬೆಳಕಿನ ಹಬ್ಬ ದೀಪಾವಳಿಗೆ ಕೆಲವೇ ಗಂಟೆಗಳಷ್ಟೇ ಬಾಕಿ ಇದೆ. ಹಬ್ಬದ ಭರ್ಜರಿ ಸಿದ್ದತೆಗಳು ಈಗಾಗಲೇ ಶುರುವಾಗಿದೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಪಟಾಕಿ, ಗೂಡುದೀಪ, ಬಣ್ಣದ ಹಣತೆಗಳ ವ್ಯಾಪಾರ ಜೋರಾಗಿದೆ. ಅದರಲ್ಲೂ ಮನೆ ಮುಂದೆ‌ ಲಕಲಕ ಅಂತಾ ಹೊಳೆಯುವ ಗೂಡು ದೀಪಗಳನ್ನು ಇಡುವುದು ಟ್ರೆಂಡ್ ಆಗಿ ಬಿಟ್ಟಿದೆ.

ಮಾರುಕಟ್ಟೆಯಲ್ಲಿ ಚೀನಾ ಗೂಡುದೀಪಗಳೇ ಪ್ರಾಬಲ್ಯ ಮೆರೆಯುತ್ತಿದ್ದರೆ, ಚೀನಾ ವಸ್ತುಗಿಂತಲೂ ತಾವೇನೂ ಕಮ್ಮಿ ಇಲ್ಲ ಎಂಬಂತೆ ಉಡುಪಿಯ ಯುವತಿಯರ ತಂಡ ಸಾಂಪ್ರದಾಯಿಕ ಗೂಡು ದೀಪ ತಯಾರಿಸುತ್ತಿದೆ.

Udupi: Girls Created Traditional Diyas For Deepawali

ಚೀನಿ ಗೂಡುದೀಪಗಳಿಗೆ ಸಡ್ಡು ಹೊಡೆಯುವಂತೆ, ಸಾಂಪ್ರದಾಯಿಕ ಗೂಡು ದೀಪಗಳನ್ನು ಉಡುಪಿಯ ಹೆಣ್ಣುಮಕ್ಕಳ ತಂಡ ತಯಾರಿಸುತ್ತಿದೆ. ಈ ಹಿಂದೆ ಮಾರುಕಟ್ಟೆಯಲ್ಲಿ ಚೀನಿ ಗೂಡು ದೀಪಗಳಿಗೆ ಜನರ ಬೇಡಿಕೆ ಇತ್ತು. ಇದರಿಂದ ಜನರ ಹೆಚ್ಚಾಗಿ ಚೀನಿ ಗೂಡು ದೀಪಗಳನ್ನು ತೆಗೆದುಕೊಳ್ಳುತ್ತಿದ್ದರು.

ಆದರೆ ಇತ್ತೀಚಿನ ವರ್ಷಗಳಲ್ಲಿ ಚೀನಿ ಗೂಡುದೀಪಗಳನ್ನು ಓವರ್ ಟೇಕ್ ಮಾಡಿ ಸಾಂಪ್ರದಾಯಿಕ ಗೂಡು ದೀಪಗಳು ‌ಮಾರುಕಟ್ಟೆಯಲ್ಲಿ ಜನರ ವಿಶೇಷ ಬೇಡಿಕೆ ಸೃಷ್ಟಿಸಿಕೊಂಡಿದೆ. ಇದನ್ನೇ ರೈಟ್ ಟೈಮ್ ಅಂತ ಯುವತಿಯರ ತಂಡ ಕಳೆದ ನಾಲ್ಕು ವರ್ಷಗಳಿಂದ ಸಾಂಪ್ರದಾಯಿಕ ಗೂಡು ದೀಪಗಳನ್ನು ತಯಾರಿಸುತ್ತಿದೆ.

Udupi: Girls Created Traditional Diyas For Deepawali

ದೀಪಾವಳಿ ಹಬ್ಬದ ಮುಂಚಿತದ ನಾಲ್ಕು ತಿಂಗಳ ಮೊದಲೇ ಹೆಣ್ಣುಮಕ್ಕಳ ತಂಡ, ಬಿದಿರಿನ ಗೂಡು ದೀಪಗಳನ್ನು ತಯಾರಿಸಲು ಶುರು ಮಾಡಿದ್ದಾರೆ. ಪ್ಲಾಸ್ಟಿಕ್ ರಹಿತವಾದ ಗೂಡದೀಪ ಅಪ್ಪಟ ಮಂಟಪ ಶೈಲಿಯನ್ನು ಹೋಲುತ್ತದೆ. ಗೂಡ ದೀಪದ ಒಳಗೆ ಹಣತೆ ಅಥವಾ ಲೈಟ್ ಇಡುವುದಕ್ಕೂ ವ್ಯವಸ್ಥೆ ಮಾಡಿದ್ದಾರೆ. ಬಣ್ಣದ ಕಾಗದಗಳನ್ನು ಅಂಟಿಸಿ, ವಿಶೇಷ ಮೆರಗು ಕೂಡ ನೀಡುತ್ತಾರೆ. ಸದ್ಯ ಕೃಷ್ಣನೂರಿನ ಈ ಯುವತಿಯರು ತಯಾರಿಸುವ ಗೂಡು ದೀಪಗಳಿಗೆ ಮಾರುಕಟ್ಟೆಗಳಲ್ಲಿ ಸಖತ್ ಡಿಮ್ಯಾಂಡ್ ಇದೆ.

ಅದರಲ್ಲೂ ಈ ಬಾರಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಲ್ಪನೆಯಂತೆ "ಲೋಕಲ್ ಫಾರ್ ವೋಕಲ್' ಎಂಬ ವಿಶೇಷ ಧ್ಯೇಯದಡಿಯಲ್ಲಿ ಮಾರುಕಟ್ಟೆಯಲ್ಲಿ ದೇಶಿಯ ವಸ್ತುಗಳೇ ಅತೀ ಹೆಚ್ಚಾಗಿ ಬರುತ್ತಿದ್ದು, ಇದರಿಂದ ಗ್ರಾಹಕರೂ ಖುಷಿಯಾಗಿದ್ದಾರೆ. ಮತ್ತು ಕಲಾವಿದರಿಗೂ ದೀಪಾವಳಿ ಹಲವು ಅವಕಾಶಗಳನ್ನು ನೀಡಿದೆ.

Udupi: Girls Created Traditional Diyas For Deepawali

ಒಟ್ಟಿನಲ್ಲಿ ದೀಪಾವಳಿಯಂದು ಸಾಂಪ್ರದಾಯಿಕ ಗೂಡು ದೀಪಗಳನ್ನು ಮನೆ ಮುಂದೆ ಇರಿಸಿ ಹಣತೆ ಬೆಳೆಗಿಸಿದರೆ, ಅದರ ಖುಷಿನೇ ಬೇರೇ. ಎಣ್ಣೆಯ ಬಲದಿಂದ ದೀಪ ಸುಂದರವಾಗಿ ಬೆಳಗಿದಂತೇ ನಮ್ಮ ದೇಶಿಯ ಸಂಸ್ಕೃತಿ ಕೂಡ ಬೆಳೆಸಿದಂತಾಗುತ್ತದೆ. ಈ ಬಾರಿ ಪರಿಸರಕ್ಕೆ ಹಾನಿಕಾರಕ ಪಟಾಕಿಯನ್ನು ಸ್ವಲ್ಪ ಕಡಿಮೆ ಮಾಡಿ, ಗೂಡುದೀಪ ಹಾಗೂ ಬಣ್ಣದ ಹಣತೆಗಳೊಂದಿಗೆ ಹಬ್ಬವನ್ನು ಖುಷಿಯಿಂದ ಮಾಡೋಣ ಅನ್ನುವುದು ನಮ್ಮ ಆಶಯ.

English summary
Deepavali Special: Udupi Girls Group created traditional Diyas for Deepawali Festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X