ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರಕಚತುರ್ದಶಿ 2020: ನರಕಾಸುರನನ್ನು ವಧೆ ಮಾಡಿದ್ದು ಯಾರು, ಯಾವಾಗ?

|
Google Oneindia Kannada News

ದೀಪದಿಂದ ದೀಪವಾ ಹಚ್ಚಬೇಕು ಮಾನವಾ ಎಂದು ಹೇಳುತ್ತಾ ದೀಪಾವಳಿಯನ್ನು ಬರಮಾಡಿಕೊಳ್ಳುತ್ತಿದ್ದೇವೆ.

ಯಾವುದೋ ಮೂಲೆಯಲ್ಲಿ ಕೂತಿದ್ದ ಹಣತೆಗಳು, ದೂಳು ಕೊಡವಿ ಅಲಂಕಾರಕ್ಕೆ ಸಿದ್ಧಗೊಂಡಿವೆ. ಮನೆಯ ಮುಂದೆ ಆಕಾಶ ದೀಪಗಳನ್ನು ತೂಗಿಹಾಕಲಾಗಿದೆ. ಬೆಳಕಿನ ಹಬ್ಬ ದೀಪಾವಳಿ ಭಾರತದ ಅತಿದೊಡ್ಡ ಹಬ್ಬವಾಗಿದ್ದು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.

ಅಂತರಂಗದ ಕತ್ತಲೆಯನ್ನು ಓಡಿಸಿ ಬೆಳಕಿನ ಪ್ರಣತಿಯ ಹಚ್ಚಿ ದೀಪ ಬೆಳಗಿಸುವ ಮೂಲಕ ಮನ ಬೆಳಗುವ ದಿವ್ಯ ಜ್ಯೋತಿಯ ಹಬ್ಬ ದೀಪಾವಳಿ.

Narak Chaturdashi 2020: Who Killed Narakasura And When? Story Of Narakasura In Kannada

ದೀಪಾವಳಿಯನ್ನು ಐದು ದಿನಗಳ ಹಬ್ಬವನ್ನಾಗಿ ಸಂಪ್ರದಾಯಿಕವಾಗಿ ಆಚರಿಸಲಾಗುತ್ತಿತ್ತು. ಎಣ್ಣೆ ಸ್ನಾನ, ನರಕಚತುರ್ದಶಿ, ಅಮಾವಾಸ್ಯೆಯ ಲಕ್ಷ್ಮೀ ಪೂಜೆ, ಬಲಿಪಾಡ್ಯಮಿ, ಗೋವರ್ಧನ ಗಿರಿ ಎತ್ತಿದ ದಿನ ಹೀಗೆ ಐದು ದಿನಗಳನ್ನು ವಿಶೇಷವಾಗಿ ಆಚರಿಸಲಾಗುತ್ತಿತ್ತು.

ನರಕ ಚತುರ್ದಶಿಯ ವಿಶೇಷವೇನು?: ವ್ರತ ಮತ್ತು ಉತ್ಸವ ಎಂದು ಎರಡು ವಿಧಗಳಿರುತ್ತವೆ. ಉತ್ಸವ ಆಚರಣೆಗಳಿರುವ ಹಬ್ಬಗಳಲ್ಲೆಲ್ಲಾ ಅಭ್ಯಂಗ ಇರುತ್ತದೆ.

ಎಣ್ಣೆ ಹಚ್ಚಿ ಸ್ನಾನ ಮಾಡಿದರೆ ಮೈಗೆ ಒಳ್ಳೆಯದು. ಮನೆಯಲ್ಲಿರುವ ಹಿರಿಯ ತಾಯಿ, ಅಜ್ಜಿ ಯಾರೇ ಮಹಿಳೆ ಮನೆಯ ಎಲ್ಲಾ ಸದಸ್ಯರ ತಲೆಗೆ ಎಣ್ಣೆಹಚ್ಚಿ ಶಾಸ್ತ್ರ ಮಾಡುತ್ತಾರೆ. ಆಮೇಲೆ ಎಲ್ಲರೂ ಮೈಕೈ-ಕಾಲುಗಳಿಗೆ ಎಣ್ಣೆಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟು ಬಿಸಿಬಿಸಿಯಾದ ನೀರಿನಲ್ಲಿ ಸ್ನಾನ ಮಾಡುತ್ತಾರೆ.

ನಕರಾಸುರ ತುಂಬಾ ದುಷ್ಠ ಮತ್ತು ಕಾಮುಕನಾಗಿದ್ದ, ಕಾಮಪಿಶಾಚಿಯಾದ ಆತನು 16 ಸಾವಿರ ಹೆಣ್ಣುಮಕ್ಕಳನ್ನು ಅಂತಃಪುರಕ್ಕೆ ಕರೆದುಕೊಂಡು ಹೋಗಿ ಬಂಧಿಸಿಟ್ಟು ಕಾಮಪಶುಗಳಾಗಿ ನೋಡಿಕೊಳ್ಳುತ್ತಿದ್ದ. ಆ ಹೆಣ್ಣುಮಕ್ಕಳು ಅವನ ಬಂಧನದಲ್ಲಿದ್ದು ವಯಸ್ಸಾಗಿ ಮಕ್ಕಳು, ಮೊಮ್ಮಕ್ಕಳಾಗಿ, ಕಾಯಿಲೆ ಬಿದ್ದು ನರಳುತ್ತಿರುತ್ತಾರೆ. ಹೀಗೆ ಕಷ್ಟಪಡುತ್ತಿದ್ದ ಹೆಣ್ಣುಮಕ್ಕಳು ಕೃಷ್ಣನನ್ನು ನರಕಾಸುರನಿಂದ ಪಾರು ಮಾಡುವಂತೆ ಬೇಡಿಕೊಳ್ಳುತ್ತಾರೆ.

ನರಕಾಸುರನ ಪೀಡೆಯಿಂದ ಹೆಣ್ಣುಮಕ್ಕಳು ಬಿಡುಗಡೆಯೇನೋ ಆದರು, ಆದರೆ ತಮ್ಮನ್ನು ಹೊರಗೆ ಸಮಾಜದಲ್ಲಿ ಯಾರು ಸ್ವೀಕರಿಸುತ್ತಾರೆ, ವೈಶ್ಯೆಯರಂತೆ ಕಾಣುತ್ತಾರೆ, ಮರ್ಯಾದೆ ಕೊಡುವುದಿಲ್ಲ ಎಂದು ಕೃಷ್ಣನಲ್ಲಿ ಬೇಡಿಕೊಂಡು ತಮಗೆ ದಾರಿ ತೋರಿಸು ಇಲ್ಲದಿದ್ದರೆ ಯಮನ ಕಾಲಿಗೆ ಬಿದ್ದು ಸಾಯುತ್ತೇವೆ ಎನ್ನುತ್ತಾರೆ.

ಆಗ ಕೃಷ್ಣ ಅಷ್ಟೂ ಜನ ಹೆಣ್ಣುಮಕ್ಕಳನ್ನು ಮದುವೆಯಾಗುತ್ತಾನೆ. ಪತ್ನಿಯರು ನೀವು ಎಂದು ಸ್ವೀಕರಿಸುತ್ತಾನೆ, ಆದರೆ ಅಷ್ಟು ಜನರ ಜೊತೆ ಸಂಸಾರ ಮಾಡಲು ಸಾಧ್ಯವಾಗುವುದಿಲ್ಲವಲ್ಲ, ಹಾಗಾಗಿ ಅವರಿಗೆಲ್ಲಾ ಒಂದು ಸ್ಥಾನಮಾನ ಕೊಟ್ಟು ಆಜನ್ಮಪರ್ಯಂತ ಊಟ ಹಾಕಿ, ರಕ್ಷಣೆ ಕೊಡುತ್ತಾನೆ.ಹೆಣ್ಣುಮಕ್ಕಳ ದುಸ್ಥರವಾದ ಜೀವನ ಹೋಗಿ ಉತ್ತಮವಾಗುತ್ತದೆ.

ಹಬ್ಬದ ಮೊದಲ ದಿನ ನರಕಚತುದರ್ಶಿಯಾಗಿದ್ದು, ಹಲವು ಕಡೆ ಈ ವರ್ಷ ನವೆಂಬರ್ 14ರಂದೇ ನರಕ ಚತುರ್ದಶಿ ಆಚರಿಸುತ್ತಿದ್ದಾರೆ. ನರಕ ಚತುರ್ದಶಿಯ ಕೇಂದ್ರಬಿಂದುವೇ ನರಕಾಸುರ. ಮಹಾವಿಷ್ಣು ತನ್ನ ವರಾಹವತಾರದಲ್ಲಿದ್ದಾಗ ಅವನ ಶರೀರದಿಂದ ಒಂದು ತೊಟ್ಟು ಬೆವರು ಬೀಳಲಾಗಿ ಭೂದೇವಿಗೆ ನರಕಾಸುರ ಜನಿಸುತ್ತಾನೆ.

ಎಲ್ಲರೂ ನಸುಕಿನಲ್ಲೇ ಎದ್ದು ತೈಲಾಭ್ಯಂಜನ ಮಾಡಿ, ಹೊಸ ಬಟ್ಟೆ ತೊಟ್ಟು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಅಂದು ಸೂರ್ಯೋದಯ ಕಾಲದಲ್ಲಿ ಮಾಡುವ ಅಂಗಾಂಗ ಸ್ನಾನ ಗಂಗಾಸ್ನಾನಕ್ಕೆ ಸಮ ಎಂಬ ನಂಬಿಕೆಯಿದೆ. ತೈಲ್ಯಾಭ್ಯಂಜನ ಮಾಡುವುದು ಆರೋಗ್ಯಕ್ಕೆ ಸಹ ಒಳ್ಳೆಯದು ಎಂಬ ವೈಜ್ಞಾನಿಕ ಕಾರಣ ಕೂಡ ಇದೆ.

English summary
The fourteenth tithi of Kartik Krishna Paksha is celebrated as Naraka Chaturdashi, and it also marks the second day of Diwali. Named after Narakasura, this festival is considered significant as it marks the end of Shri Krishna’s consort Satyabhama. This year, it falls on November 14, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X