ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಪಟಾಕಿಗಳಿಂದ ಮಾಲಿನ್ಯ ಆಗುವುದಿಲ್ಲ: 'ಹಸಿರು ಪಟಾಕಿ' ಹೊಸ ಫಾರ್ಮುಲಾ ಸಿದ್ಧ

|
Google Oneindia Kannada News

ನವದೆಹಲಿ, ಅಕ್ಟೋಬರ್ 25: ಕಡಿಮೆ ಹೊಗೆ ಉಗುಳುವ, ಕಡಿಮೆ ಶಬ್ಧ ಹೊರಡಿಸುವ ಪರಿಸರ ಸ್ನೇಹಿ 'ಹಸಿರು ಪಟಾಕಿ'ಗಳನ್ನು ಮಾತ್ರ ದೇಶದೆಲ್ಲೆಡೆ ಮಾರಾಟ ಮಾಡಬೇಕು ಎಂದು ಸುಪ್ರೀಂಕೋರ್ಟ್ ಬುಧವಾರ ಆದೇಶ ಹೊರಡಿಸಿದೆ.

ಯಾವ ಪಟಾಕಿಯೂ ಮಾಲಿನ್ಯಕಾರಕ ಅಂಶಗಳಿಲ್ಲದೆ ಇರಲು ಸಾಧ್ಯವಿಲ್ಲ. ಇರುವುದರಲ್ಲಿಯೇ ಕಡಿಮೆ ಸದ್ದು ಮಾಡುವ, ಕಡಿಮೆ ಹೊಗೆಯುಗುಳುವ ಮತ್ತು ಕಡಿಮೆ ದೂಳು ಸೃಷ್ಟಿಸುವ ಪಟಾಕಿಗಳನ್ನು ಬಳಸುವುದು ಅಗತ್ಯ.

ಪಟಾಕಿ ಮಾರಾಟಕ್ಕೆ ನಿಷೇಧವಿಲ್ಲ, ಆದರೆ ಷರತ್ತುಗಳು ಅನ್ವಯ: ಸುಪ್ರೀಂಪಟಾಕಿ ಮಾರಾಟಕ್ಕೆ ನಿಷೇಧವಿಲ್ಲ, ಆದರೆ ಷರತ್ತುಗಳು ಅನ್ವಯ: ಸುಪ್ರೀಂ

ಆದರೆ, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿ (ಸಿಎಸ್‌ಐಆರ್) ಶೇ 30-35ರಷ್ಟು ಮಾಲಿನ್ಯ ಉತ್ಪಾದನೆಯನ್ನು ಮತ್ತು ನೈಟ್ರಸ್ ಆಕ್ಸೈಡ್ ಹಾಗೂ ಸಲ್ಫರ್ ಡೈ ಆಕ್ಸೈಡ್‌ನಂತಹ ಅಪಾಯಕಾರಿ ರಾಸಾಯನಿಕಗಳ ಬಳಕೆಯನ್ನು ತಗ್ಗಿಸುವ ಪಟಾಕಿಗಳ ಅಭಿವೃದ್ಧಿಯಲ್ಲಿ ತೊಡಗಿದೆ.

ಅದರಲ್ಲಿ ನೀರಿನ ಕಣಗಳನ್ನು ಉತ್ಪಾದಿಸುವ ಮಾದರಿಗಳಿದ್ದು, ದೂಳನ್ನು ನಿಯಂತ್ರಿಸುವ ಅಂಶಗಳಾಗಿ ಕೆಲಸ ಮಾಡಲಿವೆ. ಜತೆಗೆ ಅಲ್ಯುಮಿನಿಯಂ ಪ್ರಮಾಣವನ್ನು ನಿಯಂತ್ರಿಸುವ ಅಂಶಗಳೂ ಇರಲಿವೆ.

'ಪಟಾಕಿಯಲ್ಲಿಯೇ ನೀರು ಉತ್ಪಾದನಾ ವಿಧಾನವನ್ನು ಅಳವಡಿಸಲಾಗುತ್ತದೆ. ಬೆಂಕಿ ಹಚ್ಚಿದಾಗ ಈ ವ್ಯವಸ್ಥೆಯು ನೀರಿನ ಕಣಗಳನ್ನು ಉತ್ಪಾದಿಸುತ್ತವೆ. ಇದರಿಂದ ದೂಳು ನಿಯಂತ್ರಣವಾಗುತ್ತದೆ ಎಂದು ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

ಢಂ ಢಂ ಪಟಾಕಿನ ಧಾಂ ಧೂಂ ಅಂತ ಎಲ್ಲೆಂದರಲ್ಲಿ ಮಾರುವಹಾಗಿಲ್ಲ! ಢಂ ಢಂ ಪಟಾಕಿನ ಧಾಂ ಧೂಂ ಅಂತ ಎಲ್ಲೆಂದರಲ್ಲಿ ಮಾರುವಹಾಗಿಲ್ಲ!

ಜತೆಗೆ ವಿಜ್ಞಾನಿಗಳು ಸಲ್ಫರ್ ಡೈ ಆಕ್ಸೈಡ್ ಅನ್ನು ಬಿಡುಗಡೆ ಮಾಡದಂತಹ ಶಬ್ಧ ನಿಯಂತ್ರಕ ಮಾದರಿಗಳನ್ನೂ ಅಳವಡಿಸುತ್ತಿದ್ದಾರೆ. ಫ್ಲವರ್ ಪಾಟ್‌ನಲ್ಲಿ ಪರಿಸರ ಸ್ನೇಹಿ ಬೇರಿಯಂ ನೈಟ್ರೇಟ್‌ಅನ್ನು ಬಳಸುವ ಪ್ರಯತ್ನದ ಪರೀಕ್ಷೆ ನಡೆಸಲಾಗಿದೆ.

ಅಲ್ಲದೆ, ಇ-ಪಟಾಕಿ (ಎಲೆಕ್ಟ್ರಾನಿಕ್ ಕ್ರ್ಯಾಕರ್ಸ್) ಮಾದರಿಗಳನ್ನೂ ಅವರು ತಯಾರಿಸಿದ್ದಾರೆ.

ಎನ್‌ಇಇಆರ್ಐಯಿಂದ ಅಭಿವೃದ್ಧಿ

ಎನ್‌ಇಇಆರ್ಐಯಿಂದ ಅಭಿವೃದ್ಧಿ

ಈ ಪರಿಸರ ಸ್ನೇಹಿ ಪಟಾಕಿ ಮಾದರಿಗಳನ್ನು ಸಿಎಸ್ಐಆರ್‌ನ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ಎನ್‌ಇಇಆರ್ಐ) ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದು, ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಗೆ (ಪಿಇಎಸ್ಓ) ರವಾನಿಸಲಾಗಿದೆ.

ಪಿಇಎಸ್ಓ, ಸ್ಫೋಟಕಗಳ ಕಾಯ್ದೆ 1984 ಮತ್ತು ಉರಿಯುವ ಸಾಧನಗಳ ಕಾಯ್ದೆ 1952ರ ಅಡಿಯಲ್ಲಿ ಉತ್ಪನ್ನಗಳ ಸುರಕ್ಷತೆ ಮತ್ತು ಸ್ಥಿರತೆಗಾಗಿ ನಿಯಮಗಳನ್ನು ರೂಪಿಸುವ ಹಾಗೂ ನಿಯಂತ್ರಿಸುವ ಸಾಂವಿಧಾನಿಕ ಸಂಸ್ಥೆಯಾಗಿದೆ.

ಈ ವರ್ಷ ತಯಾರಿಕೆ ಸಾಧ್ಯವಿಲ್ಲ

ಈ ವರ್ಷ ತಯಾರಿಕೆ ಸಾಧ್ಯವಿಲ್ಲ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎನ್‌ಇಇಆರ್ಐ ನಿರ್ದೇಶಕ ರಾಕೇಶ್ ಕುಮಾರ್, ಈ ಪಟಾಕಿ ಮಾದರಿಗಳಿಗೆ ಪಿಇಎಸ್ಓ ಒಮ್ಮೆ ಅನುಮೋದನೆ ನೀಡಿದರೆ, ಸಂಸ್ಥೆಯು ಉತ್ಪಾದನಾ ಪ್ರಕ್ರಿಯೆಯಲ್ಲಿ ಪಟಾಕಿ ಉತ್ಪಾದಕರಿಗೆ ಸಹಾಯ ನೀಡಲಿದೆ. ಜತೆಗೆ ಅಂತಹ ಉತ್ಪನ್ನಗಳಿಗೆ ಇರುವ ಬೇಡಿಕೆಯನ್ನು ಪೂರೈಸಲು ನೆರವಾಗಲಿದೆ ಎಂದು ತಿಳಿಸಿದ್ದಾರೆ.

ಪಿಇಎಸ್ಓ ಅನುಮೋದನೆ ತಕ್ಷಣ ಸಿಗದೆ ಇರುವುದರಿಂದ ಈ ದೀಪಾವಳಿಗೆ 'ಹಸಿರು ಪಟಾಕಿ'ಗಳ ಉತ್ಪಾದನೆ ಮಾಡುವುದು ಸಾಧ್ಯವಾಗುವುದಿಲ್ಲ. ಹೀಗಾಗಿ ಕಳೆದ ವರ್ಷ ಅನುಮೋದನೆ ನೀಡಿದ ಪಟಾಕಿಗಳೇ ಈ ಬಾರಿ ಲಭ್ಯವಾಗಲಿವೆ.

ಪಟಾಕಿ ಮಾರಾಟಕ್ಕೆ ನಿಷೇಧವಿಲ್ಲ, ಸುಪ್ರೀಂ ವಿಧಿಸಿದ ಷರತ್ತುಗಳೇನು?ಪಟಾಕಿ ಮಾರಾಟಕ್ಕೆ ನಿಷೇಧವಿಲ್ಲ, ಸುಪ್ರೀಂ ವಿಧಿಸಿದ ಷರತ್ತುಗಳೇನು?

ಮಾಲಿನ್ಯಕಾರಕ ಅಂಶ ಬೇಡ

ಮಾಲಿನ್ಯಕಾರಕ ಅಂಶ ಬೇಡ

ಆರ್ಸೆನಿಕ್, ಮರ್ಕ್ಯುರಿ, ಲೀಥಿಯಂ, ಆಂಟಿಮೊನಿ ಮತ್ತು ಸೀಸದಂತಹ ಅಪಾಯಕಾರಿ ಮಾಲಿನ್ಯಕಾರಕ ಅಂಶಗಳನ್ನು ಹೊಂದಿರದಂತೆ ಎಚ್ಚರಿಕೆ ವಹಿಸಲು ಪಿಇಎಸ್ಓ ಪಟಾಕಿ ತಯಾರಕರಿಗೆ ಸೂಚನೆ ನೀಡಿದೆ. ಈ ನಡುವೆ ಪಟಾಕಿಗಳನ್ನು ಅಭಿವೃದ್ಧಿಪಡಿಸುವಂತೆ ಸಿಇಇಆರ್‌ಐಗೆ (ಕೇಂದ್ರೀಯ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ) ಕೇಂದ್ರ ಸರ್ಕಾರ ನಿರ್ದೇಶನ ನೀಡಿತ್ತು.

ಶಿವಕಾಶಿಯಲ್ಲಿ ಪರೀಕ್ಷೆ

ಶಿವಕಾಶಿಯಲ್ಲಿ ಪರೀಕ್ಷೆ

ಸೂಚಿತ ಮಿತಿಯೊಳಗೆ ಶಬ್ದ ಹೊರಡಿಸುವ ವೈವಿಧ್ಯಮಯ ಬಣ್ಣದ ಪಟಾಕಿ ಮಾದರಿಗಳನ್ನು ನಾವು ಈಗಾಗಲೇ ಸಿದ್ಧಪಡಿಸಿದ್ದೇವೆ. ಈಗ ಅದರ ತಯಾರಿಕೆಗೆ ಕಾಯುತ್ತಿದ್ದೇವೆ ಎಂದು ಸಿಇಇಆರ್ಐ ನಿರ್ದೇಶಕರು ತಿಳಿಸಿದ್ದಾರೆ.

ಇದುವರೆಗೂ ಸಿಎಸ್ಐಆರ್-ಎನ್ಇಇಆರ್ಐ ಈ ಉತ್ಪನ್ನಗಳನ್ನು ಪಟಾಕಿ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ತಮಿಳುನಾಡಿನ ಶಿವಕಾಶಿಯ ಕೈಗಾರಿಕಾ ಕೇಂದ್ರದಲ್ಲಿ ಪರೀಕ್ಷೆ ಮಾಡಿದೆ.

ಪಟಾಕಿ ದುಷ್ಪರಿಣಾಮಗಳೇನು? ಆರೋಗ್ಯಕ್ಕೆ ಹೇಗೆ ಮಾರಕ?ಪಟಾಕಿ ದುಷ್ಪರಿಣಾಮಗಳೇನು? ಆರೋಗ್ಯಕ್ಕೆ ಹೇಗೆ ಮಾರಕ?

English summary
CSIR is developing fire crakcers that reduce the emission of particulate matter by using water generating molecules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X