• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಯೋಧ್ಯೆಯಲ್ಲಿ ಅದ್ಧೂರಿ ದೀಪೋತ್ಸವ ಆಚರಣೆ: 5.84 ಲಕ್ಷ ಮಣ್ಣಿನ ದೀಪಗಳು ಬೆಳಗಿದವು

|

ಲಕ್ನೋ, ನವೆಂಬರ್ 13: ಪವಿತ್ರ ನಗರ ಅಯೋಧ್ಯೆಯಲ್ಲಿ ಮೂರು ದಿನಗಳ ಕಾಲ ಅದ್ಧೂರಿ ದೀಪೋತ್ಸವ ಆಚರಣೆ ಪ್ರಾರಂಭವಾಗಿದ್ದು, ಬರೋಬ್ಬರಿ 5.84 ಲಕ್ಷಕ್ಕೂ ಹೆಚ್ಚು ಮಣ್ಣಿನ ದೀಪಗಳು ಅಯೋಧ್ಯೆಯನ್ನು ಬೆಳಗಿಸಿದವು.

ಉತ್ತರಪ್ರದೇಶ ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಅಯೋಧ್ಯೆಯ ದೀಪೋತ್ಸವ ಆಚರಣೆಯಲ್ಲಿ ಗುರುತಿಸಲು ಶುಕ್ರವಾರ ಸಂಜೆ ಒಟ್ಟು 5,84,572 ದೀಪಗಳನ್ನು ಬೆಳಗಿಸಲಾಯಿತು.

ಮಥುರಾದ ಈದ್ಗಾ ಮೈದಾನದಲ್ಲಿ ಹನುಮಾನ್ ಚಾಲೀಸಾ ಪಠಣ: ನಾಲ್ವರ ಬಂಧನ

ಅಯೋಧ್ಯೆಯಲ್ಲಿ ನಡೆದ ಭವ್ಯ ಸಂಭ್ರಮಾಚರಣೆಯಲ್ಲಿ ದೀಪಾವಳಿಯ ಮುನ್ನಾದಿನದಂದು ತಮ್ಮ "ಪುಷ್ಪಕ್ ವಿಮಾನ', ಲೇಸರ್ ಮತ್ತು ಸೌಂಡ್ ಶೋ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಾಮ ಮತ್ತು ಸೀತಾ ದೇವಿಯ ಆಗಮನದ ಮರು ಅಭಿನಯ ಕಂಡುಬಂದಿತು.

ಅಯೋಧ್ಯೆಯ ದೀಪೋತ್ಸವ ಆಚರಣೆಯು ಶುಕ್ರವಾರ ಮಧ್ಯಾಹ್ನದಿಂದಲೇ ಆರಂಭವಾಗಿದ್ದು, ಅಯೋಧ್ಯೆಯ ಸಾಕೇತ್ ಕಾಲೇಜಿನಿಂದ ಭಗವಾನ್ ರಾಮನ ಭವ್ಯ ಪಟ್ಟಾಭಿಷೇಕ ಮೆರವಣಿಗೆ ಪ್ರಾರಂಭವಾಗಿ, ಸುಮಾರು ಐದು ಕಿಲೋಮೀಟರ್ ವಿಸ್ತೀರ್ಣದ ಸರಯೂ ನದಿ ದಂಡೆ ತಲುಪಿತು. ಮೆರವಣಿಗೆಯಲ್ಲಿ 11 ಸ್ತಬ್ಧಚಿತ್ರಗಳು ಇದ್ದು, ರಾಮಾಯಣ ವಿಷಯಗಳ ಮೇಲೆ ನಿರ್ಮಿಸಿ, ಅದರಲ್ಲಿ ಭಾಗವಹಿಸಿದ್ದರು.

ಸರಯೂ ನದಿದಂಡೆ ಹೊರತಾಗಿ ರಾಮ ದೇವಾಲಯದ ಸ್ಥಳವಾದ ರಾಮ ಜನ್ಮಭೂಮಿಯನ್ನು ಸಂಜೆ 11,000 ಮಣ್ಣಿನ ದೀಪಗಳಿಂದ ಬೆಳಗಿಸಲಾಯಿತು, ಸೂರ್ಯಾಸ್ತದ ನಂತರ ಸರಯೂ ನದಿಯಲ್ಲಿ ಭವ್ಯವಾದ ಆರತಿ ನಡೆಯಿತು.

ಈ ಹಿಂದೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಜ್ ಕುಮಾರ್ ಝಾ ಅವರು ಖಾಸಗಿ ಸುದ್ದಿ ವಾಹಿನಿಗೆ ತಿಳಿಸಿದ್ದು, ಸರ್ಕಾರದ ಆದೇಶದಂತೆ ಸಾಮಾಜಿಕ ದೂರ, ಪ್ರವೇಶ ನಿರ್ಬಂಧ, ನೈರ್ಮಲ್ಯೀಕರಣ ಮತ್ತು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹೇಳಿದ್ದರು.

English summary
The three-day Deepotsava celebration began in the holy city of Ayodhya with more than 5.84 lakh earthen lamps illuminating Ayodhya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X