ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ ಪೂಜಾ ಮುಹೂರ್ತ ಹೀಗಿವೆ, ನೋಟ್ ಮಾಡಿಕೊಳ್ಳಿ

By ನಾಗನೂರಮಠ ಎಸ್.ಎಸ್.
|
Google Oneindia Kannada News

ದೀಪಾವಳಿ ಎಂದತಕ್ಷಣ ಮನಸುಗಳು ಬೆಳಗಲು ಪ್ರಾರಂಭಿಸುತ್ತವೆ. ಎಲ್ಲರ ಮನೆ ಮುಂದೆ ಬೆಳಗಲು ಶಿವನಬುಟ್ಟಿಗಳು ಸಜ್ಜಾಗಿವೆ. ಹಾರಾಡಲು ಆಕಾಶಬುಟ್ಟಿಗಳು ಕಾಯುತ್ತಿವೆ. ಮನೆ ಮನೆಗಳೆಲ್ಲವೂ ಈ ಸಮಯದಲ್ಲಿ ದೀಪಗಳ ಬೆಳಕಿನಲ್ಲಿ ಮಿನುಗಲಿವೆ. ಮನೆಯಂಗಳದಲ್ಲಿ ಪಟಾಕಿ ಸಿಡಿಸಲು ಚಿಣ್ಣರು ಕಾತುರದಿಂದಿದ್ದಾರೆ.

ಬೋನಸ್ ಪಡೆದುಕೊಂಡು ಕಾರ್ಮಿಕ ವರ್ಗ ಸಂಭ್ರಮಿಸಲಿದೆ. ಹೊಸ ಬಟ್ಟೆ ಪಡೆದುಕೊಂಡವರು, ಹೊಸ ಸಿಹಿತಿನಿಸುಗಳ ಬಾಕ್ಸ್ ಗಳನ್ನು ಪಡೆದುಕೊಂಡವರ ಮುಖದಲ್ಲಿ ದೀಪಾವಳಿ ಹಬ್ಬದ ಮುಗುಳ್ನಗೆ ಇದ್ದಬದ್ದ ಕಷ್ಟನಷ್ಟಗಳನ್ನು ಮರೆಸುತ್ತಿದೆ. ಇದೇ ನಮ್ಮ ಹಿಂದೂ ಧರ್ಮದ ಹಬ್ಬಗಳ ಮಹಿಮೆ ಎಂದರೆ ತಪ್ಪಾಗಲಿಕ್ಕಿಲ್ಲ.

ಇನ್ನು ದೀಪಾವಳಿಯೊಂದಿಗೆ ಕಾರ್ತಿಕ ಮಾಸವು ಆರಂಭವಾಗುವುದರಿಂದ ಇಡೀ ತಿಂಗಳಾಂತ್ಯದವರೆಗೂ ಎಲ್ಲೆಡೆಗೆ ದೀಪಗಳ ಅಲಂಕಾರ ನೋಡುವುದೇ ಚೆಂದ. ನಾಡಿನ ಎಲ್ಲ ದೇವಾಲಯಗಳಲ್ಲಿ ಕಾರ್ತಿಕ ಪೂಜೆ, ದೀಪೋತ್ಸವ, ಕಾರ್ತಿಕೋತ್ಸವ ಸೇರಿದಂತೆ ಬರೀ ಬೆಳಕಿನ ಹಬ್ಬವೇ ತಿಂಗಳುಗಟ್ಟಲೇ ಇರುತ್ತದೆ. ಜೊತೆಗೆ ಮನೆದೇವರಿಗೆ ಕಾರ್ತಿಕ ಹಚ್ಚಲು ದೈವಭಕ್ತರು ಸಾಲುಗಟ್ಟಿ ನಿಲ್ಲುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಾದರೆ, ಸಾವಿರುಗಟ್ಟಲೇ ಬೆಳಗುತ್ತಿರುವ ದೀಪಗಳನ್ನು ಕಣ್ತುಂಬಿಕೊಳ್ಳುವುದು ಕೂಡ ಮನಸ್ಸಿಗೆ ಮುದ ನೀಡುತ್ತದೆ. [ಶಾಸ್ತ್ರೋಕ್ತವಾಗಿ ದೀಪಾವಳಿ ಹಬ್ಬ ಆಚರಿಸುವುದು ಹೇಗೆ?]

Deepavali (Diwali) festival puja timing and muhurat

ದೀಪಾವಳಿ ಹಬ್ಬದ ಪೂಜಾ ಮುಹೂರ್ತಗಳು:

ನವೆಂಬರ್ 9, ಸೋಮವಾರ - ಧನತ್ರಯೋದಶಿ, ದೀಪದಾನ ಮಾಡಲು ಶುಭ. ಪ್ರದೋಷ. ನೀರು ತುಂಬುವ ಹಬ್ಬ. ಯಮದರ್ಪಣ.

ನವೆಂಬರ್ 10, ಮಂಗಳವಾರ - ರೂಪ ಚತುರ್ದಶಿ, ನರಕ ಚತುರ್ದಶಿ. ಸೂರ್ಯನು ಉದಯಿಸುವ ಸಮಯದಲ್ಲಿ (ನಸುಕಿನಲ್ಲಿ) ಅಭ್ಯಂಜನ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿಕೊಳ್ಳುವುದು. [ಬೆಳಕಿನೊಂದಿಗೆ ಆತ್ಮದ ಬಂಧ ಬೆಸೆಯುವ ಮಿಣಮಿಣ ಹಣತೆ!]

ನವೆಂಬರ್ 11, ಬುಧವಾರ - ದೀಪಾವಳಿ ಅಮವಾಸ್ಯೆ. ಶ್ರೀಚಕ್ರ ಮತ್ತು ಕುಬೇರ ಹಾಗೂ ಧನಲಕ್ಷ್ಮೀ ಪೂಜೆಯನ್ನು ಮಾಡಬೇಕು. ಬೆಳಗ್ಗೆ 7-20ರಿಂದ 8-51 (ಮಹೇಂದ್ರ ಕಾಲ), 8-51ರಿಂದ 9-36 (ಅಮೃತ ಕಾಲ), ಸಂಜೆ 5-58ರಿಂದ ರಾತ್ರಿ 9-20ರವರೆಗೆ (ಅಮೃತ ಕಾಲ) ಪೂಜೆಗೆ ಶ್ರೇಷ್ಠ ಸಮಯ. ಮಧ್ಯಾಹ್ನ 12ರಿಂದ 1-30ರವರೆಗೆ ರಾಹುಕಾಲ ಇರುವುದರಿಂದ ಪೂಜೆ ಈ ಸಮಯದಲ್ಲಿ ಸೂಕ್ತವಲ್ಲ. ರಾತ್ರಿಯ ಸಮಯದಲ್ಲಿ ಲಕ್ಷ್ಮೀಪೂಜೆ ಮಾಡಬೇಕು. ಹಗಲಿನಲ್ಲಿ ಕುಬೇರ ಮತ್ತು ಶ್ರೀಚಕ್ರ ಪೂಜೆ ಮಾಡಬಹುದು.

ನವೆಂಬರ್ 12, ಗುರುವಾರ - ದೀಪಾವಳಿ ಪಾಡ್ಯ. ಹೊಸ ಖಾತೆ ಪುಸ್ತಕಗಳನ್ನು ಪೂಜಿಸಬೇಕು. ಹೊಸ ಲೆಕ್ಕಪತ್ರದ ರಿಜಿಸ್ಟರ್ ಪೂಜಿಸಬೇಕು. ಮನೆಯಲ್ಲಿ ಪಾಂಡವರನ್ನು ಪ್ರತಿಷ್ಠಾಪಿಸಬೇಕು. ಬಲಿಪ್ರತಿಪದ, ಬಲೀಂದ್ರ ಪೂಜೆ ಮಾಡಬೇಕು. ಹೊಸದಾಗಿ ಗೃಹಪ್ರವೇಶ ಮತ್ತು ಇತರ ಹೊಸ ಕಾರ್ಯಗಳನ್ನು ಆರಂಭಿಸಲು ತುಂಬಾ ಶುಭಕರ ದಿನವಿದು.

ಬೆಳಗ್ಗೆ 6-35ರಿಂದ 8-05ರವರೆಗೆ (ಅಮೃತ ಕಾಲ), 9-25ರಿಂದ 10-20ರವರೆಗೆ (ಶುಕ್ರ ಹೋರಾ), 10-20ರಿಂದ 11-52ರವರೆಗೆ (ಅಮೃತ ಕಾಲ), ಸಂಜೆ 6-48ರಿಂದ ರಾತ್ರಿ 10-05ರವರೆಗೆ (ಅಮೃತ ಕಾಲ) ಪೂಜೆಗೆ ಶ್ರೇಷ್ಠ ಸಮಯ. (ಮಧ್ಯಾಹ್ನ 1-30ರಿಂದ 3 ಗಂಟೆಯವರೆಗೆ ರಾಹುಕಾಲ ಇರುವುದರಿಂದ ಈ ಸಮಯದಲ್ಲಿ ಪೂಜೆ ಸಲ್ಲದು.

English summary
Deepavali (Diwali) festival puja timing and muhurat. Puja timings for Naraka Chaturdashi, Amavasya, Bali Padyami etc. Have a wonderful, delightful and safe Deepavali.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X