ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಲಿನ್ಯರಹಿತ ದೀಪಾವಳಿಗೆ ಐದು ಸಲಹೆಗಳು

By * ಸುಮಲತಾ ಎನ್
|
Google Oneindia Kannada News

Ways to Prevent Pollution
ದೀಪಾವಳಿ ಬಂತೆಂದರೆ ಪಟಾಕಿಗಳ ಅಬ್ಬರ ಬೀದಿಬೀದಿಯಲ್ಲೂ ತುಂಬಿರುತ್ತೆ. ಹಬ್ಬ ಮುಗಿಯುತ್ತಿದ್ದಂತೆ ಎಲ್ಲೆಲ್ಲೂ ಕಣ್ಣಿಗೆ ರಾಚುವ ಅಳಿದುಳಿದ ಪಟಾಕಿ ಕಸ, ಹೊಗೆ ವಾಸನೆ ಪರಿಸರವನ್ನು ರಾಡಿ ಮಾಡಿರುತ್ತೆ. ಆದರೆ ಹಬ್ಬದ ಸಂಭ್ರಮದೊಂದಿಗೆ ನಮ್ಮ ವಾತಾವರಣವನ್ನೂ ಶುದ್ಧವಾಗಿಟ್ಟುಕೊಳ್ಳಲು ಸಾಧ್ಯವಿದೆ.

ನಾವು ಕೈಗೊಳ್ಳುವ ಸಣ್ಣ ಬದಲಾವಣೆ ಅನೇಕ ರೀತಿಯಿಂದ ಮಾಲಿನ್ಯ ತಡೆಯಲು ಸಹಕರಿಸುತ್ತೆ. ಇದಕ್ಕೆಂದು ಐದು ಮಾರ್ಗಗಳನ್ನು ಇಲ್ಲಿ ನೀಡಲಾಗಿದೆ. ಒಮ್ಮೆ ನೋಡಿ.

1. ಗ್ರೀನ್ ಲೈಟ್ ಬಳಸಿ : ದೀಪಾವಳಿಯಲ್ಲಿ ಮನೆಗೆ ಬೆಳಕಿನ ಅಲಂಕಾರ ಮಾಡುವುದು ಸಂಪ್ರದಾಯ. ಹಬ್ಬದ ಒಂದು ವಾರದ ಮುಂಚೆ ಮತ್ತು ನಂತರ ಮನೆಯ ಒಳಗೆ ಮತ್ತು ಅಂಗಳದಲ್ಲಿ ಬೆಳಕು ಮೂಡಿರಬೇಕು. ಆದರೆ ದೀಪಗಳ ಬದಲು ಹಸಿರು ಲೈಟ್ ಬಳಸುವುದರಿಂದ ಹೆಚ್ಚು ಉಪಯೋಗವಿದೆ. ವಿವಿಧ ಬಣ್ಣಗಳಲ್ಲಿರುವ ಎಲೆಕ್ಟ್ರಾನಿಕ್ ಬಲ್ಬ್ ಬಳಸಿದರೆ ಅದೂ ಒಂದು ರೀತಿ ಪರಿಸರ ಪ್ರೇಮಿ ಕ್ರಮವೆನಿಸುತ್ತದೆ.

2. ಪಟಾಕಿಯನ್ನು ವಿಸ್ತಾರ ಜಾಗದಲ್ಲಿ ಸಿಡಿಸಿರಿ : ದೀಪಾವಳಿಯಲ್ಲಿ ಹೆಚ್ಚು ಪಟಾಕಿ ಸುಡುವುದರಿಂದ ಮಾಲಿನ್ಯವೂ ಹೆಚ್ಚು. ಆದರೆ ಪಟಾಕಿ ಸುಡಲೇಬೇಕೆಂದಿದ್ದವರು ಈ ಮಾರ್ಗವನ್ನು ಅನುಸರಿಸಬಹುದು. ಮನೆ, ಅಪಾರ್ಟ್ ಮೆಂಟ್ ಗಳ ಮುಂದೆ ಪಟಾಕಿ ಹೊಡೆಯುವುದಕ್ಕಿಂತ ನಿವಾಸಗಳಿಂದ ದೂರವಿರುವ ವಿಸ್ತಾರ ಜಾಗದಲ್ಲಿ ಸಿಡಿಸಬಹುದು.

3. ಲಘು ಪಟಾಕಿ ಇದ್ದರೆ ಚೆಂದ : ದೀಪಾವಳಿ ಬೆಳಕಿನ ಹಬ್ಬ. ಆದರೆ ಈ ಸಮಯದಲ್ಲಿ ಉಂಟಾಗುವ ಪಟಾಕಿ ಶಬ್ದ ಹೃದಯ ಬೆಚ್ಚಿಬೀಳುವಂತೆ ಮಾಡುತ್ತದೆ. ಕಿವಿಗೆ ಅಹಿತವೆನಿಸುವ ಬಾಂಬ್ ಪಟಾಕಿಗಳನ್ನು ಸಿಡಿಸುವ ಸಂಪ್ರದಾಯ ದೀಪಾವಳಿಯಲ್ಲಿಲ್ಲ. ಆದ್ದರಿಂದ ಲಘು ಪಟಾಕಿಗಳನ್ನು ಸಿಡಿಸಿದರೆ ಹಬ್ಬಕ್ಕೆ ಸಾಕು.

4. ನಿಮ್ಮ ಮನೆಯಂಗಳ ನೀವೆ ಶುದ್ಧಗೊಳಿಸಿ : ನಿಮ್ಮ ಮನೆಯಂಗಳದಲ್ಲಿ ನೀವೇ ಸಿಡಿಸಿದ ಪಟಾಕಿಯಿಂದ ಉಂಟಾದ ಕಸವನ್ನು ನೀವೇ ಶುದ್ಧಗೊಳಿಸಿದರೆ ನೀವು ಪರಿಸರಕ್ಕೆ ಮಾಡಬಹುದಾದ ಒಂದು ಒಳ್ಳೆ ಕೆಲಸ ಇದಾಗಿರುತ್ತದೆ.

5. ಪ್ಲಾಸ್ಟಿಕ್ ಹೆಚ್ಚು ಬಳಕೆ ಹಬ್ಬಕ್ಕೆ ಬೇಡ : ಹಬ್ಬದ ಸಮಯದಲ್ಲಿ ಪಟಾಕಿಯಿಂದ ಮಾಲಿನ್ಯವಾಗುವುದು ಸಹಜ. ಆದರೆ ಹಬ್ಬದ ನೆಪದಿಂದ ಪ್ಲಾಸ್ಟಿಕ್ ಬಳಕೆಯೂ ಹೆಚ್ಚಾಗುವುದು ವಿಷಾದ. ಸ್ವೀಟ್ ತರಲು, ಪಟಾಕಿ ತರಲು ಇನ್ನಿತರ ಕೆಲಸಗಳಿಗೆ ಪ್ಲಾಸ್ಟಿಕ್ ಪರ್ಯಾಯವಾಗಿ ಬೇರೆ ಮಾರ್ಗ ಅನುಸರಿಸಿದರೆ ಅರ್ಧ ಸಮಸ್ಯೆ ಬಗೆಹರಿದಂತೆ.

ಈ ಐದೂ ಮಾರ್ಗಗಳನ್ನು ಅರಿತು ಅನುಸರಿಸಿದರೆ ಖಂಡಿತ ಈ ಬಾರಿಯ ದೀಪಾವಳಿ ಸ್ವಲ್ಪ ಮಟ್ಟಿಗಾದರೂ ಮಾಲಿನ್ಯರಹಿತವೆನಿಸುತ್ತದೆ.

English summary
Heavy smoke, heaps of used explosives and papers and a din in the eardrums is what we are left with after the celebration of Deepavali. It is hard to think that a few small changes on our end can help prevent pollution in many ways. If you want to make a difference then here are some very simple ways by which pollution can be prevented in spite of enjoying Diwali.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X