ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿಗೆ ಸ್ವಾದಿಷ್ಟಕರ ಡ್ರೈ ಫ್ರುಟ್ಸ್ ಹಲ್ವಾ

By * ವಾಣಿ, ಬೆಂಗಳೂರು
|
Google Oneindia Kannada News

Dry fruits Halwa recipe
ಈ ದೀಪಾವಳಿಗೆ ಏನು ವಿಶೇಷ ಸಿಹಿತಿನಿಸು ತಯಾರಿಸುತ್ತಿದ್ದೀರಿ? ಎಲೆತುದಿಗೆ ಶ್ಯಾವಿಗೆ ಪಾಯಸ ಇದ್ದದ್ದೆ. ಹೂರಣದ ಹೋಳಿಗೆ, ಸಕ್ಕರೆ ಹೋಳಿಗೆ, ಸಿಹಿ ಅನ್ನ (ಕೇಸರಿ ಭಾತ್), ಕುಂಬಳಕಾಯಿ ಹಲ್ವಾ, ಬಾದಾಮ್ ಪೂರಿ ಮುಂತಾದವು ನಿಮ್ಮ ಮನದಲ್ಲಿ ಬರುತ್ತಿದ್ದರೆ, ಅವಕ್ಕೆ ಈ ಬಾರಿಯಾದರೂ ಬಿಡುವುಕೊಟ್ಟು ಹೊಸರುಚಿಗೆ ತಯಾರಿ ಮಾಡಿಕೊಳ್ಳಿ.

ಅದೇ ಒಣಹಣ್ಣುಗಳ ಸ್ವಾದಿಷ್ಟಕರ ಹಲ್ವಾ. ಈ ಸಿಹಿತಿನಿಸು ದೀಪಾವಳಿ ಹಬ್ಬಕ್ಕೆ ಒಂದು ಕಳೆತಂದುಕೊಡವಲ್ಲಿ ಸಂದೇಹವೇ ಇಲ್ಲ. ಈ ಹೊಸರುಚಿ ಸ್ವಾದಿಷ್ಟಕರ ಅಷ್ಟೇ ಅಲ್ಲ, ಆರೋಗ್ಯಕ್ಕೂ ಹಿತಕರ. ಮಕ್ಕಳಂತೂ ಇದನ್ನು ಆಸೆಪಟ್ಟು ತಿನ್ನುತ್ತವೆ. ಹಬ್ಬದಲ್ಲಿ ಮಾಡುವ ಸ್ವೀಟ್ ಮೆನುದಲ್ಲಿ ಡ್ರೈ ಫ್ರುಟ್ ಹಲ್ವಾ ಕೂಡ ಸೇರ್ಪಡೆಯಾಗಲಿ.

ಇದನ್ನು ತಯಾರಿಸುವಾಗ ಉತ್ತತ್ತಿ ಅಥವಾ ಖರ್ಜೂರವನ್ನು ಬಳಸಬಹುದು. ಎರಡೂ ರುಚಿಗಳು ವಿಭಿನ್ನವಾಗಿರುತ್ತವೆ. ಅದರಲ್ಲೂ, ಉತ್ತತ್ತಿ ಬಳಸಿದಾಗ ಸಿಗುವ ರುಚಿ ಖರ್ಜೂರಕ್ಕಿಂತ ಹೆಚ್ಚು. ಆದರೆ, ಖರ್ಜೂರವನ್ನು ಉಪಯೋಗಿಸಿದಾಗ ಉತ್ತತ್ತಿಯಂತೆ ನೆನೆಯಿಡುವ ಪ್ರಮೇಯ ಬರುವುದಿಲ್ಲ.

ಬೇಕಾಗುವ ಸಾಮಗ್ರಿಗಳು

* ಉತ್ತತ್ತಿ (ಒಣಗಿಸಿದ ಖರ್ಜೂರ) 8-10 (ಖರ್ಜೂರ ಕೂಡ ಬಳಸಬಹುದು)
* ಬಾದಾಮಿ 1 ಕಪ್
* ಗೋಡಂಬಿ 1 ಕಪ್
* ಒಣ ದ್ರಾಕ್ಷಿ 1 ಕಪ್
* ಹಾಲು 2 ಕಪ್
* ತುಪ್ಪ 1 ಕಪ್
* ಸಕ್ಕರೆ 1 ಕಪ್
* ರೋಸ್ ಎಸೆನ್ಸ್ 1 ಚಮಚ
* ಮೈದಾಹಿಟ್ಟು ಅಥವಾ ಕಡಲೆಹಿಟ್ಟು 2 ಚಮಚ (ಬೇಕಿದ್ದರೆ)

ತಯಾರಿಸುವ ವಿಧಾನ

* ಉತ್ತತ್ತಿಯಿಂದ ಬೀಜಗಳನ್ನು ಬೇರ್ಪಡಿಸಿ. ಒಂದು ದೊಡ್ಡ ಬುಟ್ಟಿಯಲ್ಲಿ ಹಾಲನ್ನು ಹಾಕಿ ಅದರಲ್ಲಿ ಉತ್ತತ್ತಿಗಳನ್ನು 4 ಗಂಟೆಗಳ ಕಾಲ ನನೆಯಿಡಿ.

* ಬಾದಾಮಿ ಮತ್ತು ಗೋಡಂಬಿಗಳನ್ನು ಸಣ್ಣ ತುಂಡು ಮಾಡಿಟ್ಟುಕೊಳ್ಳಿ.

* ಚೆನ್ನಾಗಿ ನೆಂದ ಉತ್ತತ್ತಿಗಳನ್ನು ಗ್ರೈಂಡರಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೆ ತುಂಡು ಮಾಡಿಕೊಂಡ ಬಾದಾಮಿ, ಗೋಡಂಬಿ ಮತ್ತು ಒಣದ್ರಾಕ್ಷಿಗಳನ್ನು ಹಾಕಿ ಮತ್ತೆ ಗ್ರೈಂಡರಲ್ಲಿ ಒಂದು ನಿಮಿಷ ತಿರುಗಿಸಿ.

* ಮತ್ತೊಂದು ಅಗಲ ತಳದ ಪಾತ್ರೆಯಲ್ಲಿ ಹಾಲು ಮತ್ತು ಸಕ್ಕರೆ ಹಾಕಿ ಕಾಯಿಸಲಿಕ್ಕೆ ಇಡಿ. ಹಾಲು ಕುದಿ ಹಂತಕ್ಕೆ ಬರುತ್ತಿದ್ದಂತೆ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ, ತುಪ್ಪವನ್ನು ಸ್ವಲ್ಪಸ್ವಲ್ಪವೇ ಹಾಕುತ್ತ ಕೈಯಾಡಿಸುತ್ತಿರಿ.

* ಇದು ಕುದ್ದು ಗಟ್ಟಿಯಾಗುತ್ತಿದ್ದಂತೆ ಸ್ಟೌನಿಂದ ಕೆಳಗಿಳಿಸಿ. ಬಿಸಿಬಿಸಿಯಾಗಿರುವಾಗಲೇ ಬಾಳೆ ಎಲೆ ಮೇಲೆ ಬಡಿಸಿದ ಊಟದೊಡನೆ ಒಣಹಣ್ಣುಗಳ ಹಲ್ವಾ ಬಡಿಸಿರಿ. ದೀಪಾವಳಿಗೆ ಈ ಸಿಹಿ ತಿನಿಸು ವಿಶೇಷ ಕಳೆತಂದುಕೊಡುವಲ್ಲಿ ಸಂದೇಹವೇ ಇಲ್ಲ. ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

English summary
Which special sweet dish do you have on Diwali menu? Dry fruits Halwa recipe is unique and liked by everyone including children. Have a wonderful Deepavali with dry fruits halwa you can savour for many days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X