ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಅತ್ತೆ ಬಲು ಚಾಲಾಕಿ, ಸಖತ್ ಘಾಟಿ

By * ಅನಾಮಧೇಯ
|
Google Oneindia Kannada News

Diwali gifts
ನಮ್ಮ ಅತ್ತೆ ಬಲು ಚಾಲಾಕಿ, ಬಲು ಘಾಟಿಯಾದರೂ ಇಂಥವರೊಬ್ಬರು ಮನೆಯಲ್ಲಿರಬೇಕೆಂಬುದು ನನ್ನ ಆಶಯ. ಮಹಾ ವ್ಯವಹಾರಸ್ಥೆ. ಪೈಸಾಗೆ ಪೈಸಾ ಲೆಕ್ಕಹಾಕುವ ಗಿರಾಕಿ. ಗಂಡನನ್ನು ಸೇರಿಸಿ ಉಳಿದವರೆಲ್ಲ ಸೂತ್ರದ ಗೊಂಬೆಗಳಂತೆ. ಹಾಗಾಗಿಯೇ ಅಷ್ಟೆಲ್ಲಾ ಮಕ್ಕಳ ಮದುವೆ ಮಾಡಿ ಸಂಸಾರವನ್ನು ಸರಿದೂಗಿಸಿಕೊಂಡು ಹೋಗಲು ಸಾಧ್ಯವಾಗಿದ್ದು.

ಇಂತಹ ಅತ್ತೆ ತಟ್ಟೆ ಮುಂದೆ ಹಿಡಿದಾಗ ಸಾವಿರ ರುಪಾಯಿ ಹಾಕಿ ಕೈಸುಟ್ಟುಕೊಂಡೆ. ಯಾಕೆಂದರೆ, ಉಳಿದವರೆಲ್ಲ ನೀಡಿದ ಕಾಣಿಕೆಯ ಲೆಕ್ಕಾಚಾರ ಹಾಕಿದರೆ ಐನೂರು ಕೂಡ ದಾಟಿರಲಿಲ್ಲ. ನನ್ನ ಹರಳೆಣ್ಣೆ ಕುಡಿದಂತಿದ್ದ ಮುಖವನ್ನು ಮತ್ತು ಅರಳಿರುವ ಅತ್ತೆಯ ಮುಖವನ್ನು ಆಗ ನೋಡಬೇಕಿತ್ತು. ಫೋಟೋ ತೆಗೆದಿದ್ದರೆ ಚೆನ್ನಾಗಿತ್ತು. ಇಷ್ಟೆಲ್ಲ ಆದಮೇಲೆ ಕಾಣಿಕೆ ಪಡೆಯುವ ಸರದಿ ನನ್ನದು.

ಮೂಗಿನ ತುದಿಗೆ ಇಳಿದಿದ್ದ ಕನ್ನಡಕ ಏರಿಸಿಕೊಂಡು ರೆಡಿಯಾದೆ. ಭರ್ತಿ ನಿರೀಕ್ಷೆಯಿಂದ ಕಣ್ಣರಳಿತ್ತು. ಮೊದಲು ಹಣೆಯ ಮೇಲೆ ಉದ್ದೋಉದ್ದಕ್ಕೆ ಕುಂಕುಮವಿಟ್ಟರು. ಮಗಳಿಗೊಂದು ಸೀರೆ. ನನಗೆ ಪ್ಯಾಂಟು ಮತ್ತು ಶರ್ಟಿನ ಬಟ್ಟೆ. ಅವರಿವರು ಕೊಟ್ಟಿದ್ದರಲ್ಲಿಯೇ, ಒಂದಕ್ಕೊಂದು ಮ್ಯಾಚ್ ಆಗದಿದ್ದರೂ, ಚೆನ್ನಾಗಿದ್ದುದನ್ನು ಆರಿಸಿ ನನಗೆ ಕೊಟ್ಟಿದ್ದರು. ಅಷ್ಟರಲ್ಲಿ ಬಂತಲ್ಲ ಬೆಳ್ಳಿ ಚೊಂಬು. ಅದಾದರೂ ಫಸ್ಟ್ ಹ್ಯಾಂಡ್ ಆಗಿರಬಾರದಾ? ಅದೂ ಕೂಡ ಯಾರೋ ಕೊಟ್ಟದ್ದನ್ನೇ ಕಲರ್ ಪೇಪರ್ ಸುತ್ತಿ ನನಗೆ ಕೊಟ್ಟಿದ್ದರು.

ಅದನ್ನು ನನಗಾಗಿಯೇ ಕೊಂಡದ್ದೆಂದು ಯಾರೂ ಆರ್ಗ್ಯೂ ಮಾಡುವ ಹಾಗೇ ಇರಲಿಲ್ಲ. ಚೊಂಬಿನ ಮೇಲೆ ಕೊಟ್ಟವರ ಹೆಸರು, ದಿನಾಂಕ ಸಖತ್ತಾಗಿ ಒಡಮೂಡಿತ್ತು. ಅನ್ನುವ ಹಾಗೂ ಇಲ್ಲ ಅನುಭವಿಸುವ ಹಾಗೂ ಇಲ್ಲ. ಅತ್ತೆಯನ್ನು ತರಾಟೆಗೆ ತೆಗೆದುಕೊಳ್ಳುವ ಧೈರ್ಯವಂತೂ ನನ್ನಲ್ಲಿ ಇಲ್ಲವೂ ಇಲ್ಲ. ಪಾಲಿಗೆ ಬಂದಿದ್ದೇ ಪಂಚಾಮೃತ ಅಲ್ವೇನ್ರೀ. ದಯವಿಟ್ಟು ಹೀಗೆಲ್ಲ ಬರೆದಿದ್ದೇನೆಂದು ನನ್ನ ಹೆಂಡತಿಗೆ ತಿಳಿಸಬೇಡಿ, ಪ್ಲೀಸ್. ಅಂದ ಹಾಗೆ ನಿಮ್ಮ ಮೊದಲ ದೀಪಾವಳಿ ಹೇಗಿತ್ತು?

English summary
Diwali 2011 : My first Deepavali experience after marriage. The author explains how horrible was his first night in mother-in-laws house and the kind of gifts he got from them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X