ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿಗೆ ಅಣ್ಣಾವ್ರನ್ನ ಮನೆಗೆ ಬರಮಾಡಿಕೊಳ್ಳಿ

By * ರೀನಾ ಟಿಕೆ
|
Google Oneindia Kannada News

Gift Kannada clock with Rajkumar
'ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ...' ಈ ಹಾಡನ್ನು ಕನ್ನಡಿಗರ ಹೃದಯದಿಂದ ತೆಗೆದುಹಾಕಲು ಸಾಧ್ಯವೇ ಇಲ್ಲ. 'ಮುದ್ದಿನ ಮಾವ' ಚಿತ್ರದಲ್ಲಿ ಸಂತೋಷದ ಅಲೆಅಲೆಗಳನ್ನು ಎಬ್ಬಿಸುವ ಈ ಹಾಡಿಗೆ ಅಭಿನಯ ನೀಡಿದ್ದು ಎಸ್ ಪಿ ಬಾಲಸುಬ್ರಮಣ್ಯಂ. ಆದರೆ ಆ ಮಹಾನ್ ಗಾಯಕನಿಗೆ ದನಿ ನೀಡಿದ್ದು ಬೇರಾರೂ ಅಲ್ಲ ಅವರೇ ನಮ್ಮ ಅಣ್ಣಾವ್ರು.

ಟಿಕ್ ಟಿಕ್ ಟಿಕ್ ಟಿಕ್ ಅಂತ ಗಡಿಯಾರ ಹದಿನೆಂಟು ವರ್ಷಗಳ ಕಾಲ ಸಾಗಿ ಬಂದರೂ ಆ ಹಾಡು ಇನ್ನೂ ಹೃದಯದ ಗಡಿಯಾರದಲ್ಲಿ ಕೇಳಿಸುತ್ತಲೇ ಇದೆ. ಅದೇ ಅಣ್ಣಾವ್ರು, ಅದೇ ದೀಪಾವಳಿಯ ಹಾಡನ್ನು ನೆನಪಿಸುವಂತೆ ನಿಮ್ಮ ಮನೆಯ ಗೋಡೆಯನ್ನು ಅಲಂಕರಿಸುವಂತಿದ್ದರೆ? ವಾವ್ ಅಂತೀರಾ.

ಹಾಗಿದ್ದರೆ ಇಲ್ಲಿದೆ ನೋಡಿ, ಅಣ್ಣಾವ್ರು ರಾಜ್ ಕುಮಾರ್ ಅವರ ವಿಭಿನ್ನ ಭಂಗಿಯ ಭಾವಚಿತ್ರ ಹೊತ್ತ, ಕನ್ನಡ ಅಂಕಿಗಳುಳ್ಳ ಗಡಿಯಾರ ನಿಮ್ಮ ಮನೆಯ ಗೋಡೆ ಅಲಂಕಾರಕ್ಕಾಗಿ ಕಾದಿದೆ. ಈ ದೀಪಾವಳಿಗೆ ಕನ್ನಡದ ಮನಸುಗಳಿಗೆ ಇದಕ್ಕಿಂತ ಉತ್ತಮವಾದ ವಸ್ತು ಇನ್ನೊಂದು ಇರಲಾರದು.

ದೀಪಾವಳಿ ಹಬ್ಬದೂಟದ ತೇಗು ತೇಗಿ ಕೊಂಚ ವಿರಮಿಸುವ ಹೊತ್ತಿಗೆ ಕನ್ನಡ ರಾಜ್ಯೋತ್ಸವ ನಮ್ಮ ಮನೆ ಬಾಗಿಲನ್ನು ತಟ್ಟುತ್ತಿರುತ್ತದೆ. ಸುಸಂದರ್ಭ ಅಂದರೆ ಇದೇ ಅಲ್ವಾ? ಅಳಿಯತನಕ್ಕೆ ಬರುವ ಮಗಳು ಅಳಿಯನಿಗೆ ಜೇಬು ಖಾಲಿಯಾಗದಂತೆ ಉಡುಗೊರೆ ನೀಡಿ, ಮೇಲೆ ಈ ಕನ್ನಡ ಗಡಿಯಾರ ಇಟ್ಟುಕೊಟ್ಟರೆ ಮಗಳು ಅಳಿಯಂದಿರ ಮನಸು ಕೂಡ ಬೆಳಗೀತು.

ಈ ವಿನೂತನ, ಕನ್ನಡದ ಕಂಪನ್ನೂ ಸೂಸುವ ಗಡಿಯಾರವನ್ನು ಟೋಟಲ್ ಕನ್ನಡ.ಕಾಂ ಕನ್ನಡಿಗರಿಗಾಗಿ ತಂದಿದೆ. ಈ ಅಪೂರ್ವ ಅವಕಾಶವನ್ನು ಬಳಸಿಕೊಂಡು, ದೀಪಾವಳಿಯನ್ನು ಮರೆಯದ ಬೆಳಕಿನ ಹಬ್ಬವನ್ನಾಗಿಸಿಕೊಳ್ಳಿ.

English summary
Deepavali Deepavali Govinda Leelavali... No Kannadiga can forget this unforgettable song from Muddina Mava movie, sung by none other than Dr Rajkumar. Here is an opportunity to bring back the old memories by buying or gifting Kananda clock with Rajkumar photo imprinted. Have a wonderful Deepavali 2011.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X